• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ಪುಷ್ಯ ನಕ್ಷತ್ರದಲ್ಲಿ ಮಂಗಳ ಗೋಚಾರ: 4 ರಾಶಿಯ ಜನರಿಗೆ ಜಾಕ್‌ಪಾಟ್‌, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

ಪುಷ್ಯ ನಕ್ಷತ್ರದಲ್ಲಿ ಮಂಗಳ ಗೋಚಾರ: 4 ರಾಶಿಯ ಜನರಿಗೆ ಜಾಕ್‌ಪಾಟ್‌, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

ಜ್ಯೋತಿಷ್ಯದಲ್ಲಿ ಮಂಗಳನನ್ನು ಗ್ರಹಗಳ ಕಮಾಂಡರ್‌ ಎಂದು ಪರಿಗಣಿಸಲಾಗುತ್ತದೆ. ಮಂಗಳ ಶೀಘ್ರದಲ್ಲೇ ನಕ್ಷತ್ರಗಳ ರಾಜ ಪುಷ್ಯ ನಕ್ಷತ್ರಕ್ಕೆ ಕಾಲಿಡಲಿದ್ದಾನೆ.

Written ByYashaswini V
Published: Sep 22, 2026, 09:31 AM IST|Updated: Sep 22, 2026, 09:34 AM IST
joinshare
ಪುಷ್ಯ ನಕ್ಷತ್ರದಲ್ಲಿ ಮಂಗಳ ಗೋಚಾರ: 4 ರಾಶಿಯ ಜನರಿಗೆ ಜಾಕ್‌ಪಾಟ್‌, ಸುಖದ ಸುಪ್ಪತ್ತಿಗೆಯಲ್ಲೇ ಜೀವನ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಂಗಳ ನಕ್ಷತ್ರ ಪರಿವರ್ತನೆ: ಜ್ಯೋತಿಷ್ಯದಲ್ಲಿ ನವಗ್ರಹಗಳ ಸೇನಾಧಿಪತಿ ಎನ್ನಲಾಗುವ ಮಂಗಳನ್ನು ಶಕ್ತಿ, ಧೈರ್ಯ, ಶೌರ್ಯ, ಭೂಮಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಕೆಂಪು ಗ್ರಹ, ಅಂಗಾರಕ ಎಂತಲೂ ಬಣ್ಣಿಸಲಾಗುವ ಮಂಗಳ ಗ್ರಹ ಇದೇ ಸೆಪ್ಟೆಂಬರ್‌ 24, 2026ರ ಗುರುವಾರದ ದಿನ ಪುನರ್ವಸು ನಕ್ಷತ್ರವನ್ನು ತೊರೆದು ನಕ್ಷತ್ರ ಪುಂಜಗಳ ಅಧಿಪತಿ ಪುಷ್ಯ ನಕ್ಷತ್ರಕ್ಕೆ ಕಾಲಿಡಲಿದ್ದು ಅಕ್ಟೋಬರ್‌ 17, 2026ರವರೆಗೂ ಅದೇ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ.

ನಕ್ಷತ್ರಗಳ ಅಧಿಪತಿ ಪುಷ್ಯ ನಕ್ಷತ್ರದಲ್ಲಿ ಮಂಗಳ ಗೋಚಾರ:
27 ನಕ್ಷತ್ರ ಪುಂಜಗಳಲ್ಲಿ ಪುಷ್ಯ ನಕ್ಷತ್ರವನ್ನು ನಕ್ಷತ್ರಗಳ ರಾಜ ಎಂದು ಹೇಳಲಾಗುತ್ತದೆ. ಅಲ್ಲದೆ, ಇದನ್ನು ಶುಭ ನಕ್ಷತ್ರಗಳಲ್ಲಿ ಒಂದು ಎಂತಲೂ ಪರಿಗಣಿಸಲಾಗಿದೆ. ಪುಷ್ಯ ನಕ್ಷತ್ರದ ಅಧಿಪತಿ ಗ್ರಹ ನ್ಯಾಯದ ದೇವರು ಶನಿ ಮಹಾತ್ಮ ಆದರೆ, ಪುಷ್ಯ ನಕ್ಷತ್ರದ ದೇವತೆ ಗುರು ಬೃಹಸ್ಪತಿ ಆಗಿದೆ.

ಗುರು, ಶನಿ, ಮಂಗಳ ಯುತಿ:
ಪುಷ್ಯ ನಕ್ಷತ್ರದಲ್ಲಿ ಮಂಗಳನ ಉಪಸ್ಥಿತಿಯಿಂದ ಶನಿಯ ಶಿಸ್ತು, ಗುರುವಿನ ಜ್ಞಾನದೊಂದಿಗೆ ಕುಜ ಸಂಯೋಗವನ್ನು ಸೃಷ್ಟಿಸುತ್ತದೆ. ಈ ರೀತಿಯಾಗಿ ಮಂಗಳ, ಶನಿ ಮತ್ತು ಗುರು ಗ್ರಹಗಳ ವಿಶಿಷ್ಟ ಸಂಯೋಜನೆಯ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಅವಧಿಯಲ್ಲಿ ನಾಲ್ಕು ರಾಶಿಯ ಜನರ ಜೀವನದಲ್ಲಿ ಅಷ್ಟ ದಿಕ್ಕುಗಳಿಂದಲೂ ಅದೃಷ್ಟ ಕೈ ಹಿಡಿಯಲಿದ್ದು ಸಂಪತ್ತಿನ ಸುರಿಮಳೆಯೇ ಸುರಿಯಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮೇಷ ರಾಶಿ:
ಮೇಷ ರಾಶಿಯವರಿಗೆ ಅದೃಷ್ಟದ ಮನೆಯಲ್ಲಿ ಮಂಗಳ ಸಂಚಾರವು ಜೀವನದಲ್ಲಿ ಸುಖ, ಸಂತೋಷ, ಶೌರ್ಯ, ಸಂಪತ್ತನ್ನು ಹೆಚ್ಚಿಸಲಿದೆ. ಈ ಸಮಯವು ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದ್ದು, ವ್ಯವಹಾರದಲ್ಲಿ ತ್ವರಿತ ನಿರ್ಧಾರಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ಹೊಸ ವಾಹನ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಆನಂದದಾಯಕ ಸಮಯ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಹಣದ ಉತ್ತಮ ಹರಿವಿನಿಂದಾಗಿ ಧನ ಸಂಪತ್ತು ಹೆಚ್ಚಾಗುವ ಸುವರ್ಣ ಅವಧಿ ಇದಾಗಿರಲಿದೆ.

ಕರ್ಕಾಟಕ ರಾಶಿ: 
ನಕ್ಷತ್ರಗಳ ಅಧಿಪತಿ ಪುಷ್ಯ ನಕ್ಷತ್ರದಲ್ಲಿ ಮಂಗಳ ಗೋಚಾರ ಫಲವಾಗಿ ಕರ್ಕಾಟಕ ರಾಶಿಯವರಿಗೆ ಮಾನಸಿಕ ಶಕ್ತಿ, ಸಾಮರ್ಥ್ಯ ಹೆಚ್ಚಾಗಲಿದೆ. ಶುಭ ಸ್ಥಾನದಲ್ಲಿರುವ ಅಂಗಾರಕ ಈ ಅವಧಿಯಲ್ಲಿ ವೃತ್ತಿ, ವ್ಯವಹಾರದಲ್ಲಿ ಇದ್ದ ಅಡೆತಡೆಗಳನ್ನು ನಿವಾರಿಸಲಿದ್ದಾನೆ. ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಪಡೆಯುವ ಅವಕಾಶಗಳಿವೆ. ಈ ಅವಧಿಯಲ್ಲಿ ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವಗಳು ಹೆಚ್ಚಾಗಲಿವೆ. ಸ್ವಂತ ಮನೆ ಕೊಳ್ಳಲು ಯೋಚಿಸುತ್ತಿರುವವರಿಗೆ ಅದೃಷ್ಟ ಕೈ ಹಿಡಿಯಲಿದೆ. ಕುಟುಂಬದಲ್ಲಿ ಹಣಕಾಸಿಗೆ ಯಾವುದೇ ತೊಂದರೆ ಇರುವುದಿಲ್ಲ. ರಾಜವೈಭೋಗವನ್ನು ಅನುಭವಿಸುವ ರಾಜಯೋಗ ನಿಮ್ಮದಾಗಲಿದೆ.

ವೃಶ್ಚಿಕ ರಾಶಿ:
ರಾಶಿಯಾಧಿಪತಿ ಮಂಗಳ ಶುಭ ಸ್ಥಾನದಲ್ಲಿ ಸಂಚರಿಸುವುದರಿಂದ ವೃಶ್ಚಿಕ ರಾಶಿಯ ಜನರಿಗೆ ಈ ಸಮಯದಲ್ಲಿ ಅಷ್ಟ ದಿಕ್ಕುಗಳಿಂದಲೂ ಅದೃಷ್ಟ ಕೈ ಹಿಡಿಯಲಿದೆ. ಅದೃಷ್ಟದ ಬಲದಿಂದ ದೀರ್ಘ ಸಮಯದಿಂದ ನೀವು ಪ್ರಯತ್ನಿಸುತ್ತಿದ್ದ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲವನ್ನು ನಿರೀಕ್ಷಿಸಬಹುದಾಗಿದೆ. ಸರ್ಕಾರಿ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶಗಳಿವೆ. ನಿರುದ್ಯೋಗಿಗಳಿಗೆ ನೀವು ಊಹಿಸಿರುವುದಕ್ಕಿಂತ ಉತ್ತಮ ಜಾಗದಲ್ಲಿ ಕೆಲಸದ ಆಫರ್‌ ಸಿಗಬಹುದು. ಸ್ವಂತ ವ್ಯವಹಾರ ಮಾಡಲು ಯೋಚಿಸುತ್ತಿರುವವರಿಗೆ ಪ್ರಗತಿಯ ಹಾದಿ ಗೋಚರಿಸಲಿದೆ. ಹಣಕಾಸಿನ ದೃಷ್ಟಿಯಿಂದಲೂ ಸಮಯ ಅತ್ಯುತ್ತಮವಾಗಿದ್ದು, ಭರ್ಜರಿ ಜಾಕ್‌ಪಾಟ್‌ ಎಂತಲೇ ಹೇಳಬಹುದು. ನಿಮ್ಮ ಕನಸುಗಳೆಲ್ಲಾ ನನಸಾಗುವ ಪರ್ವಕಾಲ ಇದಾಗಿದ್ದು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ನಡೆಸುವಿರಿ.

ಮೀನ ರಾಶಿ:
ಪುಷ್ಯ ನಕ್ಷತ್ರದ ದೇವತೆ ಗುರು. ಗುರು ಮೀನ ರಾಶಿಯ ಅಧಿಪತಿಯೂ ಆಗಿರುವುದರಿಂದ ಇದೀಗ ಪುಷ್ಯ ನಕ್ಷತ್ರಕ್ಕೆ ಮಂಗಳ ಸಂಚಾರವು ಮೀನ ರಾಶಿಯ ಜನರಿಗೆ ಜೀವನದಲ್ಲಿ ಕಷ್ಟಗಳನ್ನು ನಿವಾರಿಸಿ ಉತ್ತಮ ಶುಭ ಫಲಗಳನ್ನು ಹೆಚ್ಚಿಸಲಿದ್ದಾನೆ. ಈ ಸಮಯದಲ್ಲಿ ಆದಾಯದ ಹರಿವು ಹೆಚ್ಚಾಗಲಿದ್ದು ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಸಿಗಲಿದೆ. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಭವಿಷ್ಯಕ್ಕಾಗಿ ಉತ್ತಮ ಹಣವನ್ನು ಕಲೆಹಾಕುವ ಅವಕಾಶಗಳನ್ನು ಪಡೆಯುವಿರಿ. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಆದಾಯ ಗಳಿಸುವ ನಿರೀಕ್ಷೆಗಳಿವೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:
Rajayoga
Lucky Zodiac Signs
Astro Tips