• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ಚಂದ್ರನ ರಾಶಿಯಲ್ಲಿ ಕುಜ ಸಂಚಾರ: 6 ರಾಶಿಯವರಿಗೆ ಭೂಮಿ ಖರೀದಿ ಯೋಗ!

ಚಂದ್ರನ ರಾಶಿಯಲ್ಲಿ ಕುಜ ಸಂಚಾರ: 6 ರಾಶಿಯವರಿಗೆ ಭೂಮಿ ಖರೀದಿ ಯೋಗ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್‌ 18, 2026ರಂದು ಮಂಗಳ ಚಂದ್ರನ ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಪ್ರಭಾವದಿಂದ ಆರು ರಾಶಿಯವರ ಲಕ್‌ ಬದಲಾಗಲಿದೆ ಎನ್ನಲಾಗುತ್ತಿದೆ.

Reported ByYashaswini VEdited ByYashaswini V
Published: Sep 14, 2026, 04:14 PM IST|Updated: Sep 14, 2026, 04:16 PM IST
joinshare
ಚಂದ್ರನ ರಾಶಿಯಲ್ಲಿ ಕುಜ ಸಂಚಾರ: 6 ರಾಶಿಯವರಿಗೆ ಭೂಮಿ ಖರೀದಿ ಯೋಗ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಸೌರಮಂಡಲದಲ್ಲಿ ಎರಡನೇ ಅತ್ಯಂತ ದೊಡ್ಡ ಗ್ರಹವಾಗಿರು ಮಂಗಳ ಗ್ರಹವನ್ನು ಕೆಂಪು ಗ್ರಹ ಎಂತಲೂ ಕರೆಯಲಾಗುತ್ತದೆ. ಸೂರ್ಯನಿಂದ ನಾಲ್ಕನೇ ಸ್ಥಾನದಲ್ಲಿರುವ ಮಂಗಳ ಗ್ರಹವನ್ನು ಕುಜ ಗ್ರಹ ಎಂದೂ ಸಹ ಕರೆಯಲಾಗುತ್ತದೆ. ಮಂಗಳ ಗ್ರಹದ ಮೇಲ್ಮೈಯಲ್ಲಿ ಕಬ್ಬಿಣದ ಆಕ್ಸೈಡ್‌ ಇರುವ ಕಾರಣದಿಂದಾಗಿ ಇದು ಕೆಂಪು, ಕಿತ್ತಳೆ ಬಣ್ಣದಂತೆ ಗೋಚರಿಸುತ್ತದೆ. ಜ್ಯೋತಿಷ್ಯದದಲ್ಲಿ ಕಮಾಂಡರ್‌ ಗ್ರಹ ಅಥವಾ ಗ್ರಹಗಳ ಸೇನಾಧಿಪತಿ ಎಂತಲೂ ಕರೆಯಲಾಗುವ ಮಂಗಳ ಗ್ರಹಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಹಾಗಾಗಿ, ಮಂಗಳನ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ದ್ವಾದಶ ರಾಶಿಯವರ ಮೇಲೂ ಕಂಡು ಬರುತ್ತದೆ.

ಸೆಪ್ಟೆಂಬರ್‌ 2026ರಲ್ಲಿ ಮಂಗಳ ಸಂಚಾರ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭೂಮಿ, ಆಸ್ತಿ, ಅಧಿಕಾರ, ಆದಾಯ, ಧೈರ್ಯ, ಸಾಹಸಗಳ ಮೇಲೆ ಪರಿಣಾಮ ಬೀರುವ ಮಂಗಳನು ಇದೇ ಸೆಪ್ಟೆಂಬರ್‌ 18, 2026ರಂದು ಮನಸ್ಸಿನಕಾರಕ ಚಂದ್ರನ ಕರ್ಕಾಟಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ನವೆಂಬರ್‌ 12, 2026ರವರೆಗೂ ಕೂಡ ಕರ್ಕಾಟಕ ರಾಶಿಯಲ್ಲಿಯೇ ವಿರಾಜಮಾನನಾಗಲಿದ್ದಾನೆ.

ಮಂಗಳ ಗುರು ಯುತಿ:
ಸೆಪ್ಟೆಂಬರ್‌ 18, 2026ರಂದು ಕರ್ಕಾಟಕ ರಾಶಿಗೆ ಪ್ರವೇಶಿಸಲಿರುವ ಮಂಗಳ, ಅದೇ ರಾಶಿಯಲ್ಲಿ ಉಚ್ಚನಾಗಿರುವ ಗುರು ಗ್ರಹದೊಂದಿಗೆ ಸಂಯೋಗ ಹೊಂದಲಿದ್ದಾನೆ.

ಕರ್ಕಾಟಕ ರಾಶಿಯಲ್ಲಿ ಮಂಗಳ ಗೋಚಾರ ಪ್ರಭಾವ: 
ಕರ್ಕಾಟಕ ರಾಶಿಯನ್ನು ಮಂಗಳನ ದುರ್ಬಲ ರಾಶಿ ಎನ್ನಲಾಗುತ್ತದೆ. ಕರ್ಕಾಟಕ ರಾಶಿಯ ಅಧಿಪತಿ ರಾಶಿಯಾದ ಚಂದ್ರನೊಂದಿಗೆ ಮಂಗಳ ಸ್ನೇಹವನ್ನು ಹೊಂದಿದ್ದಾನೆ. ಈ ರೀತಿಯಾಗಿ ಚಂದ್ರನ ರಾಶಿಯಲ್ಲಿ ಮಂಗಳನ ಸಂಚಾರ, ಅದೇ ರಾಶಿಯಲ್ಲಿ ಗುರು ಮಂಗಳ ಯುತಿಯ ಪ್ರಭಾವ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಸೆಪ್ಟೆಂಬರ್ 18 ರಿಂದ ನವೆಂಬರ್ 12 ರವರೆಗೆ ಆರು ರಾಶಿಯವರ ಜೀವನದಲ್ಲಿ ಅದೃಷ್ಟ ಖುಲಾಯಿಸಲಿದ್ದು, ಅಪಾರ ಧನ ಸಂಪತ್ತು ಹರಿದು ಬರಲಿದೆ. ಭೂಮಿ ಖರೀದಿ ಯೋಗವೂ ಇದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...

ಮೇಷ ರಾಶಿ:
ಮೇಷ ರಾಶಿಯ ಜನರಿಗೆ ರಾಶಿಯಾಧಿಪತಿ ಆದ ಮಂಗಳ ನಾಲ್ಕನೇ ಮನೆಯಲ್ಲಿ ಎಂದರೆ ಈ ರಾಶಿಯವರ ಕೇಂದ್ರ ಸ್ಥಾನದಲ್ಲಿ ಸಂಚರಿಸಲಿದ್ದು, ಗುರುವಿನೊಂದಿಗೆ ಮೈತ್ರಿ ಏರ್ಪಡಲಿದೆ. ಇದರ ಪ್ರಭಾವದಿಂದಾಗಿ ಮೇಷ ರಾಶಿಯವರಿಗೆ ಜೀವನದಲ್ಲಿ ನಕಾರಾತ್ಮಕತೆ ದೂರವಾಗಿ ಪ್ರತಿ ಹೆಜ್ಜೆಯಲ್ಲೂ ಸಕಾರಾತ್ಮಕತೆ ಹೆಚ್ಚಾಗಲಿದೆ. ಪೂರ್ವಿಕರ ಆಸ್ತಿ ವಿವಾದಗಳು ಯಶಸ್ವಿಯಾಗಿ ಬಗೆಹರಿಯಲಿವೆ. ಭೂಮಿ ಖರೀದಿ ಬಗ್ಗೆ ಯೋಚಿಸುತ್ತಿರುವವರಿಗೆ ಲಾಭದಾಯಕವಾದ ಸಮಯ ಇದಾಗಿರಲಿದೆ. ಸ್ವಂತ ಮನೆ ನಿರ್ಮಿಸುವ ನಿಮ್ಮ ಕನಸು ಸಾಕಾರಗೊಳ್ಳಲಿದೆ. ವಿದೇಶ ವ್ಯವಹಾರಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಲಾಭದಾಯಕವಾದ ಸಮಯ. ನಿರುದ್ಯೋಗಿಗಳಿಗೆ ನೀವು ಬಯಸಿದ ಉದ್ಯೋಗ ಸಿಗುವ ನಿರೀಕ್ಷೆ ಇದೆ.

ಕರ್ಕಾಟಕ ರಾಶಿ:
ಸ್ವ ರಾಶಿಯಲ್ಲಿ ಮಂಗಳ ಸಂಚಾರದಿಂದ ಕರ್ಕಾಟಕ ರಾಶಿಯ ಜನರಿಗೆ ಸಾಕ್ಷಾತ್‌ ಲಕ್ಷ್ಮಿ ಅನುಗ್ರಹವಾಗಲಿದ್ದು ಅಪಾರ ಸಂಪತ್ತಿನ ಒಡೆಯರಾಗುವ ಲಕ್ಷಣಗಳಿವೆ. ಆಸ್ತಿ ವಿವಾದಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಕರಣಗಳಲ್ಲಿ ಜಯ ಸಾಧಿಸುವಿರಿ. ಸೂರಿಲ್ಲದವರಿಗೆ ಸೂರು, ಹೊಸ ಆಸ್ತಿ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಫಲಪ್ರದವಾದ ಸಮಯ. ಭೂಮಿ ಮೇಲಿನ ಹೂಡಿಕೆಯು ಭವಿಷ್ಯದಲ್ಲಿ ಉತ್ತಮ ಆದಾಯವನ್ನು ತಂದು ಕೊಡುವ ನಿರೀಕ್ಷೆ ಇದೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿವೆ. ಕುಟುಂಬದಲ್ಲಿ ಮದುವೆಯಂತಹ ಮಂಗಳ ಕಾರ್ಯಗಳು ಕೂಡ ಜರುಗುವ ಸೂಚನೆಗಳಿವೆ.

ತುಲಾ ರಾಶಿ: 
ತುಲಾ ರಾಶಿಯ ಜನರಿಗೆ ಹತ್ತನೇ ಮನೆಯಲ್ಲಿ ಕುಜ ಗ್ರಹ ಸಂಚರಿಸುವುದರಿಂದ ದೀರ್ಘ ಕಾಲದಿಂದ ಬಾಕಿ ಉಳಿದಿರುವ ನ್ಯಾಯಾಲಯ ಪ್ರಕರಣಗಳು ಅನುಕೂಲಕರ ರೀತಿಯಲ್ಲಿ ಬಗೆಹರಿಯಲಿವೆ. ಈ ಅವಧಿಯಲ್ಲಿ ಪಿತ್ರಾರ್ಜಿತ ಆಸ್ತಿಯಿಂದ ಅಪಾರ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಉದ್ಯೋಗಸ್ಥರಿಗೆ ಪ್ರಯೋಷನ್‌ ಸಾಧ್ಯತೆ ಇದ್ದು, ವ್ಯವಹಾರದಲ್ಲಿ ಹೊಸ ಎತ್ತರಕ್ಕೆ ಬೆಳೆಯುವ ಸೂಚನೆಗಳಿವೆ. ವ್ಯಾಪಾರ ವಿಸ್ತರಣೆಗೆ ಯೋಚಿಸುತ್ತಿರುವವರಿಗೂ ಸಹ ಇದು ಅನುಕೂಲಕರ ಸಮಯ ಎಂದು ಸಾಬೀತುಪಡಿಸಲಿದೆ.

ವೃಶ್ಚಿಕ ರಾಶಿ: 
ವೃಶ್ಚಿಕ ರಾಶಿಯವರಿಗೆ ರಾಶಿಯಾಧಿಪತಿಯಾದ ಮಂಗಳನು ಈ ರಾಶಿಯವರ ಅದೃಷ್ಟದ ಮನೆಗೆ ಪದಾರ್ಪಣೆ ಮಾಡುವುದರಿಂದ ಈ ಅವಧಿಯಲ್ಲಿ ಅಷ್ಟ ದಿಕ್ಕುಗಳಿಂದಲೂ ಇವರ ಲಕ್‌ ಬದಲಾಗಲಿದೆ. ಚಂದ್ರನ ರಾಶಿಯಲ್ಲಿ ಮಂಗಳ ಸಂಚಾರದ ಪ್ರಭಾವದಿಂದ ವೃಶ್ಚಿಕ ರಾಶಿಯವರಿಗೆ ವಿದೇಶ ವ್ಯವಹಾರದಲ್ಲಿ ಜಾಕ್‌ಪಾಟ್‌ ಎಂತಲೇ ಹೇಳಲಾಗುತ್ತಿದೆ. ಭೂಮಿ ಖರೀದಿ ಯೋಗವಿದೆ. ಹಿಂದೆ ಮಾಡಿರುವ ಹೂಡಿಕೆಗಳಲ್ಲಿ ಗಮನಾರ್ಹ ಲಾಭವನ್ನು ನಿರೀಕ್ಷಿಸಬಹುದಾಗಿದೆ. ನಿಮ್ಮ ಆದಾಯದ ಮೂಲಗಳು ವೃದ್ಧಿಯಾಗಲಿದ್ದು, ಸ್ವಂತ ಮನೆ ಯೋಗದ ಜೊತೆಗೆ ಐಷಾರಾಮಿ ವಾಹನ ಖರೀದಿಸುವ ಸುಯೋಗವೂ ಇದೆ. ಸಂಗಾತಿಯಿಂದ ಅಪಾರ ಪ್ರಮಾಣದ ಸಂಪತ್ತು ಹರಿದುಬರುವ ನಿರೀಕ್ಷೆ ಇದ್ದು ಇದು ನಿಮಗೆ ಒಂದು ರೀತಿಯಲ್ಲಿ ಸುವರ್ಣ ಯುಗ ಎಂತಲೇ ಹೇಳಬಹುದಾಗಿದೆ.

ಮಕರ ರಾಶಿ:
ಮಕರ ರಾಶಿಯವರಿಗೆ ನಾಲ್ಕನೇ ಮತ್ತು ಲಾಭದ ಅಧಿಪತಿಯಾದ ಮಂಗಳ ಗ್ರಹವು ಏಳನೇ ಮನೆಯಲ್ಲಿ ಉಚ್ಚ ಗುರುವಿನ ಜೊತೆ ಮೈತ್ರಿ ಹೊಂದುವುದರಿಂದ ಈ ಸಮಯವು ಭೂಮಿ ವ್ಯವಹಾರಕ್ಕೆ ಅತ್ಯಂತ ಶುಭ ಸಮಯ ಎಂದು ಸಾಬೀತುಪಡಿಸಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ವ್ಯವಹಾರಗಳಲ್ಲಿ ಪ್ರಗತಿ ಕಂಡು ಬರಲಿದ್ದು, ಆಸ್ತಿಯ ಮೌಲ್ಯ ಹೆಚ್ಚಾಗಲಿದೆ. ದಿಢೀರ್‌ ಧನಲಾಭದಿಂದ ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗುವ ನಿರೀಕ್ಷೆ ಇದೆ. ಷೇರು ವ್ಯವಹಾರಗಳಲ್ಲಿ ನೀವು ಭರ್ಜರಿ ಲಾಭವನ್ನು ಪಡೆಯುವ ನಿರೀಕ್ಷೆಯೂ ಇದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬಗೆಹರಿಯುವ ಸೂಚನೆಗಳಿವೆ.

ಮೀನ ರಾಶಿ
ಮೀನ ರಾಶಿಯವರಿಗೆ ಅತ್ಯಂತ ಮಂಗಳಕರ ಗ್ರಹ ಎಮದು ಪರಿಗಣಿಸಲಾಗುವ ಮಂಗಳ ಗ್ರಹವು ಐದನೇ ಮನೆಯಲ್ಲಿ ಗುರುವಿನೊಂದಿಗೆ ಸಂಯೋಗ ಹೊಂದುವುದರಿಂದ ಈ ಅವಧಿಯಲ್ಲಿ ಆಸ್ತಿ ಕೊಳ್ಳುವಿಕೆ ಮತ್ತು ಮಾರಾಟಕ್ಕೆ ಸಮಯ ಅತ್ಯಂತ ಅದೃಷ್ಟದ ಸಮಯ ಎನ್ನಲಾಗಿದೆ. ಸ್ವಂತ ಮನೆ ಖರೀದಿಸಲು ಪ್ರಯತ್ನಿಸುತ್ತಿರುವವರಿಗೆ ಸಮಯ ಉತ್ತಮವಾಗಿದ್ದು, ಸಂಪತ್ತು ವೇಗವಾಗಿ ಹೆಚ್ಚಳವಾಗಲಿದೆ. ಹೂಡಿಕೆ ಬಗ್ಗೆ ಯೋಚಿಸುತ್ತಿರುವವರಿಗೆ ಸಂಪತ್ತು ವೃದ್ಧಿಯಾಗಲಿದೆ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ. ನಿರುದ್ಯೋಗಿಗಳಿಗೆ ಒಳ್ಳೆಯ ಕಂಪನಿಯಿಂದ ಉದ್ಯೋಗದ ಆಫರ್‌ ಬರಬಹುದು. 

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Add Zee News as a Preferred Source
TAGS:
Grah Gochar