• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ಗೋವರ್ಧನ ಪೂಜೆ ಹೇಗೆ ಪ್ರಾರಂಭವಾಯಿತು? ಶ್ರೀಕೃಷ್ಣನಿಗೆ ಸಂಬಂಧಿಸಿದ ಈ ಪವಿತ್ರ ಪೌರಾಣಿಕ ಕಥೆ ಇಲ್ಲಿದೆ

ಗೋವರ್ಧನ ಪೂಜೆ ಹೇಗೆ ಪ್ರಾರಂಭವಾಯಿತು? ಶ್ರೀಕೃಷ್ಣನಿಗೆ ಸಂಬಂಧಿಸಿದ ಈ ಪವಿತ್ರ ಪೌರಾಣಿಕ ಕಥೆ ಇಲ್ಲಿದೆ

ಗೋವರ್ಧನ ಪೂಜೆಯು ಶ್ರೀಕೃಷ್ಣನ ಪೌರಾಣಿಕ ಲೀಲೆಯನ್ನ ಸ್ಮರಿಸುವ ಹಬ್ಬವಾಗಿದೆ. ಇಂದ್ರನ ಅಹಂಕಾರಕ್ಕೆ ತಿರುಗೇಟು ನೀಡಲು ಶ್ರೀಕೃಷ್ಣನು ಗೋವರ್ಧನ ಪರ್ವತವನ್ನ ತನ್ನ ಕಿರುಬೆರಳಿನಲ್ಲಿ ಎತ್ತಿ, ಏಳು ದಿನಗಳ ಕಾಲ ಸುರಿದ ಭಾರೀ ಮಳೆಯಿಂದ ಗೋಕುಲದ ಜನರು ಮತ್ತು ಜಾನುವಾರುಗಳನ್ನ ರಕ್ಷಿಸಿದನು ಎಂಬುದು ಪೌರಾಣಿಕ ಕಥೆ. ಈ ಘಟನೆಯ ಸ್ಮರಣಾರ್ಥ ಪ್ರತಿವರ್ಷ ಗೋವರ್ಧನ ಪೂಜೆ ಆಚರಿಸಲಾಗುತ್ತದೆ. ಈ ದಿನ ಗೋವರ್ಧನ ಪರ್ವತದ ಆಕೃತಿ ನಿರ್ಮಿಸಿ ಪೂಜೆ ಸಲ್ಲಿಸುವುದು, 56 ಬಗೆಯ ಭಕ್ಷ್ಯಗಳನ್ನ ನೈವೇದ್ಯ ಅರ್ಪಿಸುವುದು ಸೇರಿದಂತೆ ಹಲವು ಸಂಪ್ರದಾಯಗಳಿವೆ.

Written ByPuttaraj K Alur
Published: Nov 10, 2026, 07:26 IST|Updated: Nov 10, 2026, 07:38 IST
joinshare
ಗೋವರ್ಧನ ಪೂಜೆ ಹೇಗೆ ಪ್ರಾರಂಭವಾಯಿತು? ಶ್ರೀಕೃಷ್ಣನಿಗೆ ಸಂಬಂಧಿಸಿದ ಈ ಪವಿತ್ರ ಪೌರಾಣಿಕ ಕಥೆ ಇಲ್ಲಿದೆ
Image Credit: Govardhan Puja

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Govardhan Puja: ಗೋವರ್ಧನ ಪೂಜೆಯ ಹಿಂದೆ ಶ್ರೀಕೃಷ್ಣನ ಬಾಲಲೀಲೆಗೆ ಸಂಬಂಧಿಸಿದ ಪ್ರಸಿದ್ಧ ಪೌರಾಣಿಕ ಕಥೆಯಿದೆ. ದ್ವಾಪರ ಯುಗದಲ್ಲಿ ಗೋಕುಲದ ಜನರು ಮಳೆ ಮತ್ತು ಉತ್ತಮ ಫಸಲಿನ ಆಶಯದಿಂದ ಮಳೆ ದೇವರಾದ ಇಂದ್ರನನ್ನ ಪೂಜಿಸುತ್ತಿದ್ದರು. ಆದರೆ ಶ್ರೀಕೃಷ್ಣನು ಪ್ರಕೃತಿ, ಗೋವುಗಳು ಮತ್ತು ಗೋವರ್ಧನ ಪರ್ವತವೇ ತಮ್ಮ ಜೀವನಾಧಾರ ಎಂದು ತಿಳಿಸಿ, ಅವುಗಳನ್ನ ಗೌರವಿಸುವಂತೆ ಜನರಿಗೆ ಸಲಹೆ ನೀಡಿದನು. ಇದರಿಂದ ಕೋಪಗೊಂಡ ಇಂದ್ರನು ಗೋಕುಲದ ಮೇಲೆ ಏಳು ದಿನಗಳ ಕಾಲ ಭಾರೀ ಮಳೆ ಸುರಿಸಿದನು. ಆಗ ಶ್ರೀಕೃಷ್ಣನು ಗೋವರ್ಧನ ಪರ್ವತವನ್ನ ತನ್ನ ಕಿರುಬೆರಳಿನಲ್ಲಿ ಎತ್ತಿ, ಗೋಕುಲದ ಜನರು ಮತ್ತು ಅವರ ಜಾನುವಾರುಗಳಿಗೆ ಆಶ್ರಯ ನೀಡಿದನು. ಈ ಘಟನೆಯ ಸ್ಮರಣೆಯಲ್ಲಿಯೇ ಗೋವರ್ಧನ ಪೂಜೆ ಆಚರಣೆಗೆ ಬಂದಿದೆ ಎಂಬುದು ಧಾರ್ಮಿಕ ನಂಬಿಕೆ.

ಗೋವರ್ಧನ ಪೂಜೆಯ ಪೌರಾಣಿಕ ಹಿನ್ನೆಲೆ  

ಧಾರ್ಮಿಕ ನಂಬಿಕೆಗಳ ಪ್ರಕಾರ, ದ್ವಾಪರ ಯುಗದಲ್ಲಿ ದೀಪಾವಳಿಯ ಮರುದಿನ ಗೋಕುಲದಲ್ಲಿ ಇಂದ್ರ ದೇವನಿಗೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯವಿತ್ತು. ಮಳೆ ಸಮೃದ್ಧಿಯಾಗಿ ಸುರಿಯಬೇಕು ಮತ್ತು ಬೆಳೆ ಉತ್ತಮವಾಗಿ ಬರಬೇಕು ಎಂಬ ಉದ್ದೇಶದಿಂದ ಗೋಕುಲದ ಜನರು ಇಂದ್ರನನ್ನ ಆರಾಧಿಸುತ್ತಿದ್ದರು. ಈ ಸಂಪ್ರದಾಯದಂತೆ ಪ್ರತಿವರ್ಷ ಇಂದ್ರನಿಗೆ ಭವ್ಯ ಪೂಜೆ ನಡೆಯುತ್ತಿತ್ತು.

ಆದರೆ ಒಂದು ಸಂದರ್ಭದಲ್ಲಿ ಶ್ರೀಕೃಷ್ಣನು ಗೋಕುಲದ ಜನರಿಗೆ ಇಂದ್ರನ ಬದಲಾಗಿ ಗೋವರ್ಧನ ಪರ್ವತವನ್ನ ಪೂಜಿಸುವಂತೆ ತಿಳಿಸಿದನು. ಗೋವರ್ಧನ ಪರ್ವತ, ಮರಗಳು, ಪ್ರಕೃತಿ ಮತ್ತು ಗೋವುಗಳು ತಮ್ಮ ಜೀವನ ಹಾಗೂ ಜೀವನೋಪಾಯಕ್ಕೆ ಆಧಾರವಾಗಿವೆ ಎಂದು ವಿವರಿಸಿದನು. ಪ್ರಕೃತಿಯಿಂದ ದೊರೆಯುವ ಸಂಪನ್ಮೂಲಗಳ ಮಹತ್ವವನ್ನ ಅರಿತು ಅವುಗಳಿಗೆ ಕೃತಜ್ಞತೆ ಸಲ್ಲಿಸಬೇಕು ಎಂಬ ಸಂದೇಶವನ್ನ ನೀಡಿದನು.

ಶ್ರೀಕೃಷ್ಣನ ಮಾತಿನಿಂದ ಪ್ರಭಾವಿತರಾದ ಗೋಕುಲದ ಜನರು ಇಂದ್ರನ ಪೂಜೆಯನ್ನ ಬಿಟ್ಟು ಗೋವರ್ಧನ ಪರ್ವತದ ಆರಾಧನೆ ಆರಂಭಿಸಿದರು. ಇದರಿಂದ ದೇವರಾಜ ಇಂದ್ರನು ತೀವ್ರವಾಗಿ ಕೋಪಗೊಂಡನು. ತನ್ನನ್ನ ಪೂಜಿಸದೆ ಗೋವರ್ಧನ ಪರ್ವತವನ್ನ ಆರಾಧಿಸುತ್ತಿರುವುದು ಅವಮಾನವೆಂದು ಭಾವಿಸಿದನು. ತನ್ನ ಶಕ್ತಿಯನ್ನ ತೋರಿಸಲು ಗೋಕುಲದ ಮೇಲೆ ಭಾರೀ ಮಳೆ ಸುರಿಸುವಂತೆ ಮಾಡಿದನು.

ನಿರಂತರವಾಗಿ ಸುರಿದ ಮಳೆಯಿಂದ ಇಡೀ ಗೋಕುಲದ ಪ್ರದೇಶವೇ ಜಲಾವೃತವಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಮನೆಗಳು, ಜನರು ಮತ್ತು ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದವು. ಮಳೆ ನಿಲ್ಲುವ ಲಕ್ಷಣ ಕಾಣದಿದ್ದರಿಂದ ಗೋಕುಲದ ಜನರು ಭಯಭೀತರಾದರು. ಈ ಸಂದರ್ಭದಲ್ಲಿ ಶ್ರೀಕೃಷ್ಣನು ಎಲ್ಲರನ್ನೂ ರಕ್ಷಿಸಲು ಮುಂದಾದನು.

ತನ್ನ ಕಿರುಬೆರಳಿನ ಮೇಲೆ ಬೃಹತ್ ಗೋವರ್ಧನ ಪರ್ವತವನ್ನೇ ಎತ್ತಿ ಹಿಡಿದನು. ಪರ್ವತದ ಕೆಳಗೆ ಗೋಕುಲದ ಜನರು ತಮ್ಮ ಜಾನುವಾರುಗಳೊಂದಿಗೆ ಆಶ್ರಯ ಪಡೆದರು. ಏಳು ದಿನಗಳ ಕಾಲ ನಿರಂತರ ಮಳೆ ಸುರಿದರೂ ಪರ್ವತದ ಕೆಳಗೆ ಆಶ್ರಯ ಪಡೆದಿದ್ದವರಿಗೆ ಯಾವುದೇ ಅಪಾಯವಾಗಲಿಲ್ಲ ಎಂಬುದು ಪೌರಾಣಿಕ ಕಥೆಯಲ್ಲಿನ ಪ್ರಮುಖ ಘಟನೆಯಾಗಿದೆ.

ಶ್ರೀಕೃಷ್ಣನ ಶಕ್ತಿಯನ್ನ ಕಂಡು ಇಂದ್ರನ ಅಹಂಕಾರಕ್ಕೆ ಪೆಟ್ಟು ಬಿದ್ದಿತು. ತನ್ನ ತಪ್ಪಿನ ಅರಿವಾದ ಬಳಿಕ ಮಳೆಯನ್ನ ನಿಲ್ಲಿಸಿ, ಶ್ರೀಕೃಷ್ಣನ ಬಳಿ ಕ್ಷಮೆ ಕೋರಿದನು. ಈ ಘಟನೆಯ ನಂತರ ಗೋಕುಲದ ಜನರು ಕಾರ್ತಿಕ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಗೋವರ್ಧನ ಪರ್ವತವನ್ನ ಪೂಜಿಸುವ ಸಂಪ್ರದಾಯವನ್ನ ಆರಂಭಿಸಿದರು ಎಂದು ಧಾರ್ಮಿಕ ನಂಬಿಕೆ ತಿಳಿಸುತ್ತದೆ.

ಗೋವರ್ಧನ ಪೂಜೆಯ ಆಚರಣೆಗಳು

ಗೋವರ್ಧನ ಪೂಜೆಯ ದಿನ ಮನೆಯ ಮಹಿಳೆಯರು ಸಗಣಿಯಿಂದ ಗೋವರ್ಧನ ಪರ್ವತದ ಆಕೃತಿಯನ್ನ ನಿರ್ಮಿಸಿ ಪೂಜಿಸುವ ಸಂಪ್ರದಾಯವಿದೆ. ಆ ಆಕೃತಿಗೆ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಮಾಡಲಾಗುತ್ತದೆ. ಶ್ರೀಕೃಷ್ಣನಿಗೆ 56 ಬಗೆಯ ಭಕ್ಷ್ಯಗಳ ನೈವೇದ್ಯ ಅರ್ಪಿಸುವ ಪದ್ಧತಿಯೂ ಇದೆ. ಸಂಜೆ ಸಮಯದಲ್ಲಿ ದೀಪದಾನ ಮಾಡಲಾಗುತ್ತದೆ. ಭಾರತದಲ್ಲಿ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಪೂಜೆಯ ವಿಧಾನ ಮತ್ತು ಸಂಪ್ರದಾಯಗಳಲ್ಲಿ ಬದಲಾವಣೆಗಳಿರಬಹುದು.

ಒಟ್ನಲ್ಲಿ ಗೋವರ್ಧನ ಪೂಜೆಯು ಶ್ರೀಕೃಷ್ಣನು ಗೋಕುಲದ ಜನರನ್ನ ಇಂದ್ರನ ಕೋಪದಿಂದ ರಕ್ಷಿಸಿದ ಪೌರಾಣಿಕ ಘಟನೆಯನ್ನ ನೆನಪಿಸುವ ಹಬ್ಬವಾಗಿದೆ. ಈ ಹಬ್ಬದ ಆಚರಣೆಯಲ್ಲಿ ಗೋವರ್ಧನ ಪರ್ವತ, ಪ್ರಕೃತಿ ಮತ್ತು ಗೋವಿನ ಆರಾಧನೆಗೆ ವಿಶೇಷ ಸ್ಥಾನವಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)

Add Zee News as a Preferred Source
TAGS:
Astro Tips
Kannada News