Vastu Shastra: ಮಳೆಗಾಲ ಅಥವಾ ಚಳಿಗಾಲದ ಸಮಯದಲ್ಲಿ ಮನೆಯ ಸುತ್ತಮುತ್ತ ಕಪ್ಪೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಅವು ಮನೆಯೊಳಗೂ ಪ್ರವೇಶಿಸುತ್ತವೆ. ಹೀಗೆ ಅನಿರೀಕ್ಷಿತವಾಗಿ ಮನೆಗೆ ಕಪ್ಪೆ ಬಂದಾಗ ಕೆಲವರು ಅದನ್ನ ಕಂಡು ಭಯಪಡುತ್ತಾರೆ. ಇನ್ನು ಕೆಲವರಿಗೆ ಇದು ಶುಭ ಸೂಚನೆಯೋ ಅಥವಾ ಅಶುಭವೋ ಎಂಬ ಗೊಂದಲ ಮೂಡುತ್ತದೆ. ಆದರೆ ಹಿಂದೂ ಪುರಾಣಗಳು ಮತ್ತು ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಮನೆಗೆ ಕಪ್ಪೆ ಪ್ರವೇಶಿಸುವುದನ್ನ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಕಪ್ಪೆಯು ಸಕಾರಾತ್ಮಕ ಶಕ್ತಿ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಪ್ರಗತಿಯ ಸಂಕೇತವಾಗಿದೆ. ಮನೆಯೊಳಗೆ ಕಪ್ಪೆ ಕಾಣಿಸಿಕೊಳ್ಳುವುದು ಕುಟುಂಬದಲ್ಲಿ ಒಳ್ಳೆಯ ಬದಲಾವಣೆಗಳು ಸಂಭವಿಸುವ ಸೂಚನೆ ಎಂದು ವಾಸ್ತು ವಿದ್ವಾಂಸರು ಹೇಳುತ್ತಾರೆ. ಗರುಡ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿಯೂ ಮನೆಗೆ ಕಪ್ಪೆ ಬರುವುದರ ಕುರಿತು ಉಲ್ಲೇಖವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪುರಾಣ ಮತ್ತು ವಾಸ್ತು ಶಾಸ್ತ್ರದಲ್ಲಿ ಕಪ್ಪೆಯ ಮಹತ್ವ
ಹಿಂದೂ ಧರ್ಮದ ಪ್ರಮುಖ ಗ್ರಂಥಗಳೆಂದು ಪರಿಗಣಿಸಲಾಗುವ ಗರುಡ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಕಪ್ಪೆಯ ಆಗಮನದ ಕುರಿತು ಉಲ್ಲೇಖಿಸಲಾಗಿದೆ. ವಾಸ್ತು ನಂಬಿಕೆಗಳ ಪ್ರಕಾರ, ಕಪ್ಪೆ ಮನೆಯೊಳಗೆ ಪ್ರವೇಶಿಸುವುದು ಶುಭ ಸೂಚನೆಯಾಗಿದೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಕಪ್ಪೆಯನ್ನ ಶಕ್ತಿ ಮತ್ತು ಸಮೃದ್ಧಿಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ.
ಮನೆಯೊಳಗೆ ಕಪ್ಪೆ ಕಾಣಿಸಿಕೊಳ್ಳುವುದನ್ನ ಮುಂಬರುವ ದಿನಗಳಲ್ಲಿ ಜೀವನದಲ್ಲಿ ಉತ್ತಮ ಬದಲಾವಣೆಗಳು ಸಂಭವಿಸುವ ಮುನ್ಸೂಚನೆ ಎಂದು ಹೇಳಲಾಗುತ್ತದೆ. ಇದು ಕೇವಲ ಭೌತಿಕ ಸುಖ-ಸಮೃದ್ಧಿಗೆ ಮಾತ್ರ ಸೀಮಿತವಾಗದೆ, ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿಯೊಂದಿಗೂ ಸಂಬಂಧ ಹೊಂದಿದೆ ಎಂಬ ನಂಬಿಕೆಯಿದೆ. ಅಲ್ಲದೆ ಕಪ್ಪೆಯ ಆಗಮನದಿಂದ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಮನೆಯ ಮುಖ್ಯ ದ್ವಾರದಲ್ಲಿ ಕಪ್ಪೆ ಕಂಡರೆ ಏನರ್ಥ?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಕಪ್ಪೆ ಕಾಣಿಸಿಕೊಳ್ಳುವುದನ್ನ ವಿಶೇಷ ಶುಭ ಸೂಚನೆಯೆಂದು ಪರಿಗಣಿಸಲಾಗುತ್ತದೆ. ಇದು ತಾಯಿ ಲಕ್ಷ್ಮಿದೇವಿಯ ಆಗಮನದ ಸಂಕೇತ ಎಂಬ ನಂಬಿಕೆಯಿದೆ. ಇಂತಹ ಸಂದರ್ಭವು ಮನೆಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನ ತರುತ್ತದೆ ಎಂದು ಹೇಳಲಾಗುತ್ತದೆ. ಮುಖ್ಯ ದ್ವಾರದಲ್ಲಿ ಕಪ್ಪೆ ಕಾಣಿಸಿಕೊಂಡರೆ ಕುಟುಂಬದ ಆದಾಯದ ಮೂಲಗಳು ಹೆಚ್ಚಾಗಬಹುದು ಎಂಬ ನಂಬಿಕೆಯೂ ಇದೆ. ಅಷ್ಟೇ ಅಲ್ಲದೆ ಮನೆಯ ಸದಸ್ಯರು ಕೈಗೆತ್ತಿಕೊಳ್ಳುವ ಕೆಲಸಗಳಲ್ಲಿ ಯಶಸ್ಸು ಮತ್ತು ಅಭಿವೃದ್ಧಿ ದೊರೆಯುವ ಸೂಚನೆ ಎಂದು ವಾಸ್ತು ನಂಬಿಕೆಗಳು ತಿಳಿಸುತ್ತವೆ. ಹೀಗಾಗಿ ಮನೆಯ ಪ್ರವೇಶದ್ವಾರದಲ್ಲಿ ಕಪ್ಪೆ ಕಂಡರೆ ಅದನ್ನ ಶುಭ ಸಂಕೇತವಾಗಿ ನೋಡಲಾಗುತ್ತದೆ.
ಅಡುಗೆಮನೆಯಲ್ಲಿ ಕಪ್ಪೆ ಕಾಣಿಸಿಕೊಂಡರೆ ಅನ್ನ-ಧನದ ಕೊರತೆಯಿಲ್ಲವಂತೆ!
ಮನೆಯ ಇತರ ಸ್ಥಳಗಳಿಗಿಂತ ಅಡುಗೆಮನೆಯಲ್ಲಿ ಕಪ್ಪೆ ಕಾಣಿಸಿಕೊಳ್ಳುವುದನ್ನ ಇನ್ನಷ್ಟು ಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ನಂಬಿಕೆಗಳ ಪ್ರಕಾರ, ಅಡುಗೆಮನೆಯಲ್ಲಿ ಕಪ್ಪೆ ಕಾಣಿಸಿಕೊಂಡರೆ ಆ ಮನೆಯಲ್ಲಿ ಆಹಾರ ಮತ್ತು ಹಣದ ಕೊರತೆ ಎದುರಾಗುವುದಿಲ್ಲ ಎಂಬ ಅರ್ಥವಿದೆ. ಅಂದರೆ ಕುಟುಂಬದಲ್ಲಿ ಅನ್ನ-ಧನ ಸಮೃದ್ಧಿ ನೆಲೆಸಿರುತ್ತದೆ ಎಂಬ ನಂಬಿಕೆ ಇದಾಗಿದೆ. ಮನೆಯೊಳಗೆ ಕಪ್ಪೆ ಪ್ರವೇಶಿಸಿದಾಗ ಅದನ್ನ ಕಂಡು ಭಯಪಡುವ ಅಥವಾ ಆತಂಕಪಡುವ ಅಗತ್ಯವಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಕಪ್ಪೆಯ ಆಗಮನವು ಕುಟುಂಬಕ್ಕೆ ಆಧ್ಯಾತ್ಮಿಕ ದೃಷ್ಟಿಯಿಂದಲೂ ಶುಭ ಫಲಗಳನ್ನ ನೀಡುತ್ತದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಕಪ್ಪೆಗೆ ತೊಂದರೆ ನೀಡಬಾರದು
ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಕಪ್ಪೆ ಬರುವುದು ಶುಭ ಸೂಚನೆ ಎಂಬ ನಂಬಿಕೆಯಿದ್ದರೂ, ಆ ಜೀವಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಕಪ್ಪೆ ಮನೆಯೊಳಗೆ ಬಂದರೆ ಅದನ್ನ ನೋಯಿಸದೆ, ಸುರಕ್ಷಿತವಾಗಿ ಮನೆಯ ಹೊರಗೆ ಬಿಡುವುದು ಉತ್ತಮವೆಂದು ಸಲಹೆ ನೀಡಲಾಗಿದೆ. ಒಟ್ನಲ್ಲಿ ಮನೆಗೆ ಕಪ್ಪೆ ಪ್ರವೇಶಿಸುವುದನ್ನ ವಾಸ್ತು ಮತ್ತು ಪುರಾಣಗಳ ನಂಬಿಕೆಗಳಲ್ಲಿ ಸಕಾರಾತ್ಮಕ ಶಕ್ತಿ, ಲಕ್ಷ್ಮಿದೇವಿಯ ಆಗಮನ, ಸುಖ-ಸಮೃದ್ಧಿ ಹಾಗೂ ಆಧ್ಯಾತ್ಮಿಕ ಪ್ರಗತಿಯ ಸಂಕೇತವಾಗಿ ಪರಿಗಣಿಸಲಾಗಿದೆ. ಮುಖ್ಯ ದ್ವಾರದಲ್ಲಿ ಕಪ್ಪೆ ಕಂಡರೆ ಸಮೃದ್ಧಿಯ ಸೂಚನೆ, ಅಡುಗೆಮನೆಯಲ್ಲಿ ಕಂಡರೆ ಅನ್ನ-ಧನದ ಕೊರತೆಯಿಲ್ಲವೆಂಬ ನಂಬಿಕೆ ಇದೆ. ಆದರೆ ಕಪ್ಪೆಗೆ ಯಾವುದೇ ಹಾನಿ ಮಾಡದೆ ಸುರಕ್ಷಿತವಾಗಿ ಹೊರಗೆ ಬಿಡುವುದು ಮುಖ್ಯವೆಂದು ತಿಳಿಸಲಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)