• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದೀಪಾವಳಿ 2026 ರಾಶಿ ಭವಿಷ್ಯ: ಲಕ್ಷ್ಮಿ ದೇವಿಯ ಕೃಪೆ ಯಾರಿಗೆ? ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು?

ದೀಪಾವಳಿ 2026 ರಾಶಿ ಭವಿಷ್ಯ: ಲಕ್ಷ್ಮಿ ದೇವಿಯ ಕೃಪೆ ಯಾರಿಗೆ? ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು?

ಇಂದು ಭಾನುವಾರ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಾಗಿದ್ದು, ಬೆಳಗ್ಗೆ 11:29ರವರೆಗೆ ಇರಲಿದೆ. ಇಂದು ದೀಪಾವಳಿ ಹಬ್ಬವನ್ನ ಆಚರಿಸಲಾಗುತ್ತದೆ. ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳಿಗೂ ದಿನವು ಸಾಮಾನ್ಯವಾಗಿ ಶುಭಕರವಾಗಿರಲಿದೆ. ಕೆಲವರಿಗೆ ಉದ್ಯೋಗ, ವ್ಯಾಪಾರ ಮತ್ತು ಆರ್ಥಿಕ ವಿಚಾರಗಳಲ್ಲಿ ಪ್ರಗತಿ ಕಂಡುಬಂದರೆ, ಇನ್ನು ಕೆಲವರು ಹಣಕಾಸಿನ ವ್ಯವಹಾರ, ಕಚೇರಿ ಕೆಲಸ ಹಾಗೂ ವಾದವಿವಾದಗಳ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಿದೆ. ಕುಟುಂಬ, ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿಯೂ ಹಲವು ರಾಶಿಯವರಿಗೆ ಸಂತಸದ ಕ್ಷಣಗಳು ಎದುರಾಗಲಿವೆ.

Written ByPuttaraj K Alur
Published: Nov 08, 2026, 07:17 IST|Updated: Nov 08, 2026, 07:30 IST
joinshare
ದೀಪಾವಳಿ 2026 ರಾಶಿ ಭವಿಷ್ಯ: ಲಕ್ಷ್ಮಿ ದೇವಿಯ ಕೃಪೆ ಯಾರಿಗೆ? ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು?
Image Credit: Deepavali Horoscope

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Deepavali Horoscope: ನವೆಂಬರ್ 8ರ ಭಾನುವಾರ ದೀಪಾವಳಿ ಹಬ್ಬದ ಸಂಭ್ರಮ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿ ಬೆಳಗ್ಗೆ 11:29ರವರೆಗೆ ಇರಲಿದ್ದು, ನಂತರ ಅಮಾವಾಸ್ಯೆ ತಿಥಿ ಆರಂಭವಾಗಲಿದೆ. ಇಂದು ಆಯುಷ್ಮಾನ್ ಯೋಗ ಬೆಳಗಿನ ಜಾವ 3:03ರವರೆಗೆ ಇರಲಿದ್ದು, ಸ್ವಾತಿ ನಕ್ಷತ್ರವು ನಾಳೆ ಬೆಳಗ್ಗೆ 7:24ರವರೆಗೆ ಇರಲಿದೆ. ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ಇಂದಿನ ಭವಿಷ್ಯ ಹೀಗಿದೆ ನೋಡಿ...

ಮೇಷ ರಾಶಿ: ಇಂದು ನಿಮಗೆ ಉತ್ತಮ ದಿನವಾಗಿರಲಿದೆ. ವ್ಯವಹಾರದಲ್ಲಿ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಲಾಭ ಸಿಗಬಹುದು. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾದರೂ ಸಂಜೆಯ ವೇಳೆಗೆ ಕೆಲಸಗಳು ಪೂರ್ಣಗೊಳ್ಳಲಿವೆ. ಮನೆಯಲ್ಲಿ ಅತಿಥಿಗಳ ಆಗಮನ ಸಂತಸ ತರಲಿದೆ. ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರಲಿದೆ.

- ಅದೃಷ್ಟ ಬಣ್ಣ: ಕೆನ್ನೇರಳೆ
- ಅದೃಷ್ಟ ಸಂಖ್ಯೆ: 9

ವೃಷಭ ರಾಶಿ: ಇಂದು ಜೀವನದಲ್ಲಿ ಹೊಸ ಸಂತೋಷಗಳು ಮೂಡಲಿವೆ. ಕೆಲಸದ ನಿಮಿತ್ತ ಕೈಗೊಳ್ಳುವ ಪ್ರಯಾಣ ಲಾಭದಾಯಕವಾಗಲಿದೆ. ಸಾಮಾಜಿಕ ಗೌರವ ಹೆಚ್ಚಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರಿಗೆ ಉತ್ತಮ ಗ್ರಾಹಕರು ದೊರೆಯುವ ಸಾಧ್ಯತೆ ಇದೆ.

- ಅದೃಷ್ಟ ಬಣ್ಣ: ಕಂದು
- ಅದೃಷ್ಟ ಸಂಖ್ಯೆ: 7

ಮಿಥುನ ರಾಶಿ: ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಸೂಕ್ತ ಸಲಹೆಗಳು ದೊರೆಯಲಿವೆ. ಹಳೆಯ ಸ್ನೇಹಿತರಿಂದ ಅನಿರೀಕ್ಷಿತ ಕರೆ ಬರಬಹುದು. ಕುಟುಂಬದವರು ಪ್ರಮುಖ ವಿಚಾರವೊಂದಕ್ಕೆ ಒಪ್ಪಿಗೆ ನೀಡಲಿದ್ದಾರೆ. ವ್ಯಾಪಾರ ವಿಸ್ತರಣೆಗೆ ಹೊಸ ಅವಕಾಶಗಳು ಸಿಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಬಹುದು.

- ಅದೃಷ್ಟ ಬಣ್ಣ: ಬೂದು
- ಅದೃಷ್ಟ ಸಂಖ್ಯೆ: 5

ಕರ್ಕಾಟಕ ರಾಶಿ: ಇಂದು ದಿನವಿಡೀ ಅದೃಷ್ಟ ನಿಮ್ಮ ಪರವಾಗಿರಲಿದೆ. ಅಪರಿಚಿತರಿಂದ ಸಿಗುವ ಸಹಾಯ ಸಂತಸ ತರಲಿದೆ. ಔಷಧಾಲಯ ನಡೆಸುವವರಿಗೆ ಉತ್ತಮ ಲಾಭ ದೊರೆಯಬಹುದು. ಖರ್ಚುಗಳನ್ನ ನಿಯಂತ್ರಿಸಲು ಯೋಜನೆ ರೂಪಿಸುವಿರಿ. ವೈವಾಹಿಕ ಜೀವನ ಸಂತೋಷದಿಂದ ಕೂಡಿರಲಿದೆ. ಸಂಗಾತಿಗಾಗಿ ಆಭರಣ ಖರೀದಿಸುವ ಸಾಧ್ಯತೆಯೂ ಇದೆ.

- ಅದೃಷ್ಟ ಬಣ್ಣ: ಕಂದು
- ಅದೃಷ್ಟ ಸಂಖ್ಯೆ: 1

ಸಿಂಹ ರಾಶಿ: ಇಂದು ಸಂತೋಷದ ದಿನವಾಗಿರಲಿದೆ. ಮಗನ ವೃತ್ತಿಜೀವನಕ್ಕೆ ಸಂಬಂಧಿಸಿದ ಶುಭ ಸುದ್ದಿ ಸಿಗಬಹುದು. ಉದ್ಯೋಗದಲ್ಲಿ ಹೊಸ ಹುದ್ದೆ ದೊರೆಯುವ ಸಾಧ್ಯತೆ ಇದೆ. ಪೋಷಕರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವಿರಿ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಪ್ರಗತಿಯ ಹೊಸ ಅವಕಾಶಗಳು ಸಿಗಲಿವೆ. ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಪ್ರೋತ್ಸಾಹ ದೊರೆಯಬಹುದು.

- ಅದೃಷ್ಟ ಬಣ್ಣ: ಹಳದಿ
- ಅದೃಷ್ಟ ಸಂಖ್ಯೆ: 3

ಕನ್ಯಾ ರಾಶಿ: ಇಂದು ಮಿಶ್ರ ಫಲಿತಾಂಶಗಳನ್ನ ಎದುರಿಸಬೇಕಾಗಬಹುದು. ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಪ್ರಗತಿಗೆ ಹಲವು ಮಾರ್ಗಗಳು ತೆರೆದುಕೊಳ್ಳಲಿವೆ. ಆದರೆ ಕಚೇರಿ ಕೆಲಸಗಳನ್ನ ಎಚ್ಚರಿಕೆಯಿಂದ ನಿರ್ವಹಿಸಬೇಕು. ವಾದವಿವಾದಗಳಿಂದ ದೂರವಿರುವುದು ಉತ್ತಮ. ಮಕ್ಕಳು ಓದಿನ ಕಡೆ ಹೆಚ್ಚಿನ ಗಮನ ನೀಡಬೇಕು.

- ಅದೃಷ್ಟ ಬಣ್ಣ: ಕೆನ್ನೇರಳೆ
- ಅದೃಷ್ಟ ಸಂಖ್ಯೆ: 2

ತುಲಾ ರಾಶಿ: ಇಂದು ಸಕಾರಾತ್ಮಕ ದಿನವಾಗಿರಲಿದೆ. ವ್ಯಾಪಾರವನ್ನ ವಿಸ್ತರಿಸಲು ಹೆಚ್ಚಿನ ಶ್ರಮ ಅಗತ್ಯವಾಗಬಹುದು. ಹಣಕಾಸಿನ ವಹಿವಾಟಿನಲ್ಲಿ ನಿರ್ಲಕ್ಷ್ಯ ಮಾಡಬಾರದು. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಹೊಸ ಬದಲಾವಣೆಗಳು ಕಂಡುಬರಬಹುದು. ಹಿರಿಯರ ನೆರವಿನಿಂದ ಕೌಟುಂಬಿಕ ಸಮಸ್ಯೆಯೊಂದು ಬಗೆಹರಿಯಲಿದೆ.

- ಅದೃಷ್ಟ ಬಣ್ಣ: ಕೆಂಪು
- ಅದೃಷ್ಟ ಸಂಖ್ಯೆ: 2

ವೃಶ್ಚಿಕ ರಾಶಿ: ಪ್ರೀತಿಪಾತ್ರರಿಂದ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಮನೆಯ ಕೆಲಸಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಸಂಗಾತಿಯೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವಿರಿ. ಕಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ತಡವಾಗಿ ಕೆಲಸ ಮಾಡಬೇಕಾಗಬಹುದು. ಖರ್ಚು ಕಡಿಮೆಯಾಗಿ ಉಳಿತಾಯ ಉತ್ತಮವಾಗಿರಲಿದೆ. ಹೊಸ ಯೋಜನೆಗಳಿಗೆ ಮೇಲಧಿಕಾರಿಗಳ ಬೆಂಬಲ ಸಿಗಲಿದೆ.

- ಅದೃಷ್ಟ ಬಣ್ಣ: ಕಿತ್ತಳೆ
- ಅದೃಷ್ಟ ಸಂಖ್ಯೆ: 7

ಧನು ರಾಶಿ: ಇಂದು ವಿಶೇಷ ದಿನವಾಗಿರಲಿದೆ. ಕಷ್ಟಕರ ಕೆಲಸಗಳನ್ನೂ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಿರಿ. ವಿದೇಶ ಪ್ರವಾಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಸಿಗಬಹುದು. ಪ್ರೀತಿಪಾತ್ರರ ಸಹಾಯದಿಂದ ಪ್ರಮುಖ ಕೆಲಸಗಳು ನೆರವೇರಲಿವೆ. ವಿದ್ಯಾರ್ಥಿಗಳು ಕಾಲೇಜಿನ ಯೋಜನೆಗಳನ್ನ ಪೂರ್ಣಗೊಳಿಸಿ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ.

- ಅದೃಷ್ಟ ಬಣ್ಣ: ಗುಲಾಬಿ
- ಅದೃಷ್ಟ ಸಂಖ್ಯೆ: 7

ಮಕರ ರಾಶಿ: ಇಂದು ಯಶಸ್ಸಿನ ದಿನವಾಗಿರಲಿದೆ. ಕಚೇರಿಯಲ್ಲಿ ಹೊಸ ಯೋಜನೆಯಲ್ಲಿ ಕೆಲಸ ಮಾಡಿ ಯಶಸ್ಸು ಸಾಧಿಸುವಿರಿ. ವ್ಯಾಪಾರದಲ್ಲಿ ಜವಾಬ್ದಾರಿಗಳನ್ನ ನಿರ್ವಹಿಸಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ವಿರೋಧಿಗಳಿಂದ ಸವಾಲು ಎದುರಾಗುವ ಸಾಧ್ಯತೆ ಇದೆ. ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಮಹತ್ವದ ಹುದ್ದೆ ದೊರೆಯಬಹುದು. ಯೋಜನೆಯೊಂದನ್ನ ಪೂರ್ಣಗೊಳಿಸುವಿರಿ.

- ಅದೃಷ್ಟ ಬಣ್ಣ: ಗೋಲ್ಡನ್
- ಅದೃಷ್ಟ ಸಂಖ್ಯೆ: 9

ಕುಂಭ ರಾಶಿ: ಇಂದು ಅನುಕೂಲಕರ ದಿನವಾಗಿರಲಿದೆ. ದೂರವಾಣಿ ಅಥವಾ ಇತರ ಸಂಪರ್ಕ ಮಾಧ್ಯಮಗಳ ಮೂಲಕ ಶುಭ ಸುದ್ದಿ ಸಿಗಬಹುದು. ಮಕ್ಕಳಿಂದಲೂ ಸಂತಸದ ವಿಚಾರ ತಿಳಿಯಬಹುದು. ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪನಿಯಿಂದ ಉದ್ಯೋಗದ ಆಫರ್ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಬೆಳವಣಿಗೆ ಕಂಡುಬರಬಹುದು. ಸಂಗಾತಿಯೊಂದಿಗೆ ಸಿನಿಮಾ ವೀಕ್ಷಿಸುವ ಯೋಜನೆ ರೂಪಿಸುವಿರಿ.

- ಅದೃಷ್ಟ ಬಣ್ಣ: ಬಿಳಿ
- ಅದೃಷ್ಟ ಸಂಖ್ಯೆ: 7

ಮೀನ ರಾಶಿ: ಇಂದು ಉತ್ತಮ ದಿನವಾಗಿರಲಿದೆ. ಸ್ನೇಹಿತರೊಬ್ಬರು ನಿಮ್ಮಿಂದ ಹಣಕಾಸಿನ ನೆರವು ಕೇಳಬಹುದು. ಕಳೆದ ಕೆಲವು ವರ್ಷಗಳ ವೃತ್ತಿ ಮತ್ತು ವೈಯಕ್ತಿಕ ಪ್ರಯತ್ನಗಳಿಗೆ ಪ್ರತಿಫಲ ದೊರೆಯುವ ಸಾಧ್ಯತೆ ಇದೆ. ಮಹತ್ವದ ಯಶಸ್ಸು ಸಾಧಿಸಬಹುದು. ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಧ್ಯಾನವು ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ.

- ಅದೃಷ್ಟ ಬಣ್ಣ: ಕಂದು
- ಅದೃಷ್ಟ ಸಂಖ್ಯೆ: 8

(ಸೂಚನೆ: ಈ ರಾಶಿ ಭವಿಷ್ಯವು ಮೂಲ ಲೇಖನದಲ್ಲಿರುವ ಜ್ಯೋತಿಷ್ಯ ಮುನ್ಸೂಚನೆಗಳನ್ನು ಆಧರಿಸಿದೆ. ಇದನ್ನ ZeeNewsKannada ದೃಢಪಡಿಸುವುದಿಲ್ಲ.)

Add Zee News as a Preferred Source
TAGS:
Astro Tips
Kannada News