SOCIAL MEDIA

Newsletter

PARTNER SITES
Select Language Select State

ಸ್ವಂತ ಮನೆ ಕನಸು ನನಸು, ಮಕ್ಕಳ ಮದುವೆ : ಇಂದು ಈ ರಾಶಿಯವರಿಗೆ ಸಿಗಲಿದೆ ಯಶಸ್ಸು ಮತ್ತು ಖುಷಿಯ ಸುದ್ದಿ

October 20 Horoscope : ವಾರದ ಪ್ರಮುಖ ದಿನವಾದ ಇಂದು (ಮಂಗಳವಾರ, ಅಕ್ಟೋಬರ್ 20, 2026) ಮೇಷದಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳ ಜಾತಕ ಫಲ ಹೇಗಿದೆ? ಯಾವ ರಾಶಿಯವರಿಗೆ ಆರ್ಥಿಕ ಲಾಭ ಸಿಗಲಿದೆ ಮತ್ತು ಯಾರು ಎಚ್ಚರಿಕೆಯಿಂದ ಇರಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ...

Written By Krishna NK
Published: Oct 20, 2026, 06:12 AM IST | Updated: Oct 20, 2026, 07:43 AM IST
Image Credit: today astrology
Join

Today Horoscope : ಮಂಗಳವಾರ ಅಕ್ಟೋಬರ್ 20-2026 ರಾಶಿಫಲದ ಪ್ರಕಾರ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಗಳ ಫಲಿತಾಂಶಗಳು ಹೇಗಿವೆ.. ಇಂದಿನ ದಿನ ಯಾರಿಗೆ ಶುಭ ಮತ್ತು ಅಶುಭವನ್ನು ತರಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ..  

ಮೇಷ ರಾಶಿ
ಇಂದು ಸಾಲದ ಸಮಸ್ಯೆಗಳು ನಿಮ್ಮಲ್ಲಿ ಮಾನಸಿಕ ಒತ್ತಡವನ್ನು ಹೆಚ್ಚಿಸಲಿವೆ. ಆಧ್ಯಾತ್ಮಿಕ ಚಿಂತನೆಗಳು ಮೂಡಲಿದ್ದು, ಆದಾಯವು ವಿರಳವಾಗಿರಲಿದೆ. ಕಚೇರಿಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಅನಾವಶ್ಯಕ ಸಮಸ್ಯೆಗಳು ಎದುರಾಗಬಹುದು. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿಷಯಕ್ಕೂ ವಾದ-ವಿವಾದಗಳು ಉಂಟಾಗುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಫಲ ಸಿಗುವುದಿಲ್ಲ.

ವೃಷಭ ರಾಶಿ
ದಿನದ ಆರಂಭವು ಉತ್ಸಾಹದಿಂದ ಕೂಡಿರಲಿದೆ. ಇಂದು ನೀವು ಹೊಸ ವಾಹನ ಖರೀದಿಸುವ ಯೋಗವಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ವೇಗ ಹಾಗೂ ಯಶಸ್ಸು ಸಿಗಲಿದೆ. ಕೆಲಸದಲ್ಲಿ ಎದುರಾದ ಅಡೆತಡೆಗಳನ್ನು ನಿವಾರಿಸಿ ಸಮಯಕ್ಕೆ ಸರಿಯಾಗಿ ಕಾರ್ಯ ಮುಗಿಸುವಿರಿ. ಒಡಹುಟ್ಟಿದವರಿಂದ ಶುಭ ಸುದ್ದಿ ಸಿಗಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣಲಿದ್ದಾರೆ. ಆದಾಗ್ಯೂ, ನಿಮ್ಮ ಆರೋಗ್ಯದ ಬಗ್ಗೆ ಅಲ್ಪ ಕಾಳಜಿ ವಹಿಸುವುದು ಅಗತ್ಯ.

ಮಿಥುನ ರಾಶಿ
ಧಾರ್ಮಿಕ ಹಾಗೂ ದೈವಿಕ ಸೇವಾ ಚಟುವಟಿಕೆಗಳಲ್ಲಿ ಹೆಚ್ಚು ಒಲವು ತೋರಲಿದ್ದೀರಿ. ಆದರೆ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗಲಿದ್ದು, ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿನ್ನಡೆಯಾಗಲಿದೆ. ಹೊಸ ವ್ಯವಹಾರ ಆರಂಭಿಸಲು ಮುಂದಾಗಿದ್ದರೆ ಸ್ವಲ್ಪ ತಡೆಯುವುದು ಒಳಿತು. ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿಗಳಿಂದಾಗಿ ವಿಶ್ರಾಂತಿ ಸಿಗದೆ ಹೈರಾಣಾಗುವಿರಿ. ಮನೆಯಲ್ಲಿ ಮತ್ತು ಸುತ್ತಮುತ್ತ ಅಸ್ತವ್ಯಸ್ತ ವಾತಾವರಣವಿರಲಿದೆ.

ಕರ್ಕಾಟಕ ರಾಶಿ
ವ್ಯವಹಾರದಲ್ಲಿ ನೀವು ಬಯಸಿದ ಗುರಿಯನ್ನು ಸಾಧಿಸುವಿರಿ ಮತ್ತು ಹೊಸ ವಿಷಯಗಳ ಬಗ್ಗೆ ಗಮನ ಹರಿಸುತ್ತೀರಿ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಆದಾಯದ ಮೂಲಗಳು ವೃದ್ಧಿಸುವುದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಬಾಲ್ಯದ ಸ್ನೇಹಿತರ ಸಕಾಲಿಕ ಸಹಾಯದಿಂದ ನಿಮ್ಮ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ.

ಸಿಂಹ ರಾಶಿ
ಇತರರ ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ಬಾಲ್ಯದ ಸ್ನೇಹಿತರೊಂದಿಗೆ ಸೇರಿ ದೇವಸ್ಥಾನಗಳಿಗೆ ಭೇಟಿ ನೀಡುವ ಯೋಗವಿದೆ. ವ್ಯವಹಾರದಲ್ಲಿ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಇದು ನಷ್ಟಕ್ಕೆ ದಾರಿ ಮಾಡಿಕೊಡಬಹುದು. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಟೀಕೆಗಳನ್ನು ಎದುರಿಸಬೇಕಾಗಬಹುದು. ಆದಾಯಕ್ಕಿಂತ ಖರ್ಚು-ವೆಚ್ಚಗಳು ಹೆಚ್ಚಾಗುವ ದಿನವಿದು.

ಕನ್ಯಾ ರಾಶಿ
ಹೊಸ ಯೋಜನೆಗಳಿಗೆ ಇಂದು ಚಾಲನೆ ನೀಡಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಹಳೆಯ ಸಾಲಗಳನ್ನು ತೀರಿಸುವ ಮಾರ್ಗ ಗೋಚರಿಸಲಿದೆ. ಪ್ರಮುಖ ವಿಷಯಗಳಲ್ಲಿ ಆಪ್ತರ ಸಲಹೆಗಳು ಸಹಕಾರಿಯಾಗಲಿವೆ. ಸ್ನೇಹಿತರೊಂದಿಗೆ ದೂರ ಪ್ರಯಾಣ ಬೆಳೆಸುವ ಸಂಭವವಿದೆ. ವ್ಯಾಪಾರ ವಿಸ್ತರಣೆಗೆ ಹೊಸ ಹೂಡಿಕೆಗಳು ದೊರೆಯಲಿದ್ದು, ವೃತ್ತಿಜೀವನದಲ್ಲಿ ನಿರೀಕ್ಷಿತ ಪ್ರಗತಿ ಕಾಣುವಿರಿ.

ತುಲಾ ರಾಶಿ
ಕಚೇರಿಯಲ್ಲಿ ಎಲ್ಲರೊಂದಿಗೂ ಸೌಜನ್ಯದಿಂದ ವರ್ತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ಕೈಗೊಂಡ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ನಿಮ್ಮದಾಗುತ್ತದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಎದುರಾಗಿದ್ದ ತೊಡಕುಗಳು ನಿವಾರಣೆಯಾಗಿ ಉತ್ತಮ ಲಾಭ ಸಿಗಲಿದೆ. ಬಹಳ ದಿನಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದ ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ. ವಿದ್ಯಾರ್ಥಿಗಳು ಹೊಸ ಹುರುಪಿನಿಂದ ಮುನ್ನಡೆಯುತ್ತಾರೆ.

ವೃಶ್ಚಿಕ ರಾಶಿ
ವೃತ್ತಿ ಮತ್ತು ವ್ಯವಹಾರದಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳು ಉಂಟಾಗಬಹುದು. ಕಚೇರಿಯಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಆರ್ಥಿಕ ವಿಷಯಗಳು ನಿಮ್ಮನ್ನು ನಿರುತ್ಸಾಹಗೊಳಿಸಬಹುದು. ತಂದೆಯ ಕಡೆಯ ಸಂಬಂಧಿಕರೊಂದಿಗೆ ಮಾತುಕತೆಯಲ್ಲಿ ಎಚ್ಚರಿಕೆ ಇರಲಿ, ವಾದಗಳು ಏಳಬಹುದು. ಆರೋಗ್ಯದ ಕಡೆ ನಿರ್ಲಕ್ಷ್ಯ ತೋರುವುದು ಒಳ್ಳೆಯದಲ್ಲ.

ಧನು ರಾಶಿ
ವ್ಯಾಪಾರ-ವ್ಯವಹಾರದಲ್ಲಿ ನೀವು ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಅಪೇಕ್ಷಿತ ಫಲ ಸಿಗುವುದು ಕಷ್ಟ. ನಿರುದ್ಯೋಗಿಗಳ ಪ್ರಯತ್ನಗಳಿಗೆ ಆರಂಭಿಕ ಹಂತದಲ್ಲಿ ನಿರಾಶೆಯಾಗಬಹುದು. ಇಂದು ದೂರದ ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಇತರರ ಗೋಜಿಗೆ ಹೋಗದಿರಿ. ವೃತ್ತಿಜೀವನವು ಎಂದಿನಂತೆ ಸಾಮಾನ್ಯವಾಗಿ ಮುಂದುವರಿಯಲಿದೆ. ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ.

ಮಕರ ರಾಶಿ
ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ. ಮನೆಯಲ್ಲಿ ಮಕ್ಕಳ ಮದುವೆಗೆ ಸಂಬಂಧಿಸಿದ ಪ್ರಮುಖ ಮಾತುಕತೆಗಳು ನಡೆಯಬಹುದು. ಸ್ವಂತ ಮನೆ ನಿರ್ಮಾಣದ ಕೆಲಸಗಳು ಚುರುಕುಗೊಳ್ಳಲಿವೆ. ಸಮಾಜದಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗಲಿದೆ. ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವಿರಿ. ಪ್ರಮುಖ ವಿವಾದಾತ್ಮಕ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಕುಂಭ ರಾಶಿ
ಹಣಕಾಸಿನ ಪರಿಸ್ಥಿತಿ ಅತ್ಯಂತ ಆಶಾದಾಯಕವಾಗಿರುತ್ತದೆ. ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಸ್ನೇಹಿತರಿಂದ ಆಹ್ವಾನ ಬರಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಆಪ್ತ ಸ್ನೇಹಿತರ ಬೆಂಬಲದಿಂದ ಪ್ರಮುಖ ಕೆಲಸಗಳು ಸುಲಭವಾಗಿ ಈಡೇರಲಿವೆ. ಹೊಸ ಮನೆ ನಿರ್ಮಾಣದ ಕನಸು ನನಸಾಗುವ ಹಂತಕ್ಕೆ ಬರಲಿದೆ.

ಮೀನ ರಾಶಿ
ಕೆಲಸ ಕಾರ್ಯಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗುವುದು ಸಹಜ. ಆರ್ಥಿಕ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗಲಿವೆ. ನೀವು ಕೈಗೊಳ್ಳುವ ಪ್ರತಿ ಕೆಲಸಕ್ಕೂ ಹೆಚ್ಚಿನ ಶ್ರಮ ಅಗತ್ಯವಿರುತ್ತದೆ. ಹೊಸ ಹೂಡಿಕೆಗಳ ಬಗ್ಗೆ ಯೋಚಿಸುತ್ತಿದ್ದರೆ ಮತ್ತೊಮ್ಮೆ ಮರುಪರಿಶೀಲಿಸಿ. ಮಕ್ಕಳ ವಿದ್ಯಾಭ್ಯಾಸದ ವಿಚಾರವಾಗಿ ಮನಸ್ಸಿಗೆ ಸ್ವಲ್ಪ ಬೇಸರವಾಗಬಹುದು. ಯಾರೊಂದಿಗೂ ಮಾತನಾಡುವಾಗ ಆತುರ ಪಡಬೇಡಿ, ಪ್ರಮುಖ ನಿರ್ಧಾರಗಳನ್ನು ಇಂದಿಗೆ ಮುಂದೂಡುವುದು ಒಳ್ಳೆಯದು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES