50 ಲಕ್ಷ ಲಂಚ ಪಡೆಯುವಾಗ ತಹಶಿಲ್ದಾರ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ. 50 ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ತಹಶಿಲ್ದಾರ್ ಲೋಕಾ ಬಲೆಗೆ ಸಿಲುಕಿರುವ ತಹಶಿಲ್ದಾರ್ ಅನ್ನು ಧಾರವಾಡ ತಹಶಿಲ್ದಾರ್ ಸಚ್ಚಿದಾನಂದ ಕುಚನೂರ್ ಎಂದು ಗುರುತಿಸಲಾಗಿದ್ದು, ಭೂಮಿ ಅ ಖರಾಬ್ ತೆಗೆಯಲು ಮುದೋಳ್ ಮೂಲದ ಡೆವಲಪರ್ ಬಳಿ ಒಂದು ಕೋಟಿ ಭೇಡಿಕೆ ಇಟ್ಟಿದ್ದಾರೆ. ಮೂದೋಳ್ ಮೂಲದ ಪರಮೇಶ್ವರ ಅಂಗಡಿ ಎಂಬಾತನ ಬಳಿ ಭೇಡಿಕೆ ಇಟ್ಟಿದ್ದ ತಹಶಿಲ್ದಾರ್ ಮುಂಗಡವಾಗಿ 50 ಲಕ್ಷ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ಜಮೀನು ಖರೀದಿಸಿರೋ ಡೆವಲಪರ್, ಜಮೀನಿನಲ್ಲಿನ ಅ ಖರಾಬ್ ತೆಗೆದು ಡೆವಲಪ್ಮೆಂಟ್ ಮಾಡಲು ಮುಂದಾಗಿದ್ದ ಡೆವಲಪರ್ ನಿಂದ ತಹಶಿಲ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಕುರಿತ ಖಚಿತ