ತಿರುಪತಿ–ವಿಜಯಪುರ ವಿಶೇಷ ರೈಲು: ವೇಳಾಪಟ್ಟಿ ಪ್ರಕಟ, ಕರ್ನಾಟಕದ ಹಲವು ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ!
ದುರ್ಗಾ ಪೂಜೆ ಹಾಗೂ ನವರಾತ್ರಿ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ತಿರುಪತಿ–ವಿಜಯಪುರ ನಡುವೆ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಅಕ್ಟೋಬರ್ 4ರಿಂದ 25ರವರೆಗೆ ಪ್ರತಿ ಭಾನುವಾರ ಈ ರೈಲು ಸಂಚರಿಸಲಿದ್ದು, ಎರಡೂ ದಿಕ್ಕುಗಳಲ್ಲಿ ತಲಾ ನಾಲ್ಕು ಟ್ರಿಪ್‌ಗಳನ್ನ ನಿರ್ವಹಿಸಲಿದೆ. ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಬದಾಮಿ ಹಾಗೂ ಬಾಗಲಕೋಟೆ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಪ್ರಯಾಣಿಕರು ಟಿಕೆಟ್ ಮತ್ತು ವೇಳಾಪಟ್ಟಿಯನ್ನ ಅಧಿಕೃತ ರೈಲ್ವೆ ಮೂಲಗಳಲ್ಲಿ ಪರಿಶೀಲಿಸಬಹುದು.
Tirupati Vijayapura Special Train 2026: ದುರ್ಗಾ ಪೂಜೆ ಹಾಗೂ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನ ನಿಯಂತ್ರಿಸಲು ರೈಲ್ವೆ ಇಲಾಖೆ ತಿರುಪತಿ ಮತ್ತು ವಿಜಯಪುರ ನಡುವೆ ವಿಶೇಷ ರೈಲುಗಳನ್ನ ಓಡಿಸಲು ನಿರ್ಧರಿಸಿದೆ. ಅಕ್ಟೋಬರ್ 4ರಿಂದ 25ರವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿದ್ದು, ಎರಡೂ ದಿಕ್ಕುಗಳಲ್ಲಿ ತಲಾ ನಾಲ್ಕು ಟ್ರಿಪ್‌ಗಳನ್ನ ನಿರ್ವಹಿಸಲಿವೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಪ್ರಮುಖ ನಗರಗಳು ಹಾಗೂ ಪಟ್ಟಣಗಳನ್ನ ಸಂಪರ್ಕಿಸುವ ಈ ರೈಲು ಸೇವೆಯಿಂದ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ತಿರುಪತಿ–ವಿಜಯಪುರ ರೈಲಿನ ವೇಳಾಪಟ್ಟಿ ಇಲ್ಲಿದೆ
ರೈಲು ಸಂಖ್ಯೆ 07419 ತಿರುಪತಿ–ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 4ರಿಂದ 25ರವರೆಗೆ ಪ್ರತಿ ಭಾನುವಾರ ಸಂಚರಿಸಲಿದೆ. ಈ ರೈಲು ತಿರುಪತಿಯಿಂದ ಬೆಳಗ್ಗೆ 8:15ಕ್ಕೆ ಹೊರಟು, ಅದೇ ದಿನ ರಾತ್ರಿ 10:25ಕ್ಕೆ ವಿಜಯಪುರ ತಲುಪಲಿದೆ.
ಇನ್ನೊಂದೆಡೆ ರೈಲು ಸಂಖ್ಯೆ 07420 ವಿಜಯಪುರ–ತಿರುಪತಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಪ್ರತಿ ಭಾನುವಾರ ರಾತ್ರಿ 11:35ಕ್ಕೆ ವಿಜಯಪುರದಿಂದ ಹೊರಡಲಿದೆ. ಮರುದಿನ ಸೋಮವಾರ ಮಧ್ಯಾಹ್ನ 2:15ಕ್ಕೆ ತಿರುಪತಿ ತಲುಪಲಿದೆ. ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಈ ವಿಶೇಷ ಸೇವೆಯನ್ನ ಪರಿಚಯಿಸಲಾಗಿದೆ.
ಯಾವೆಲ್ಲ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ?
ತಿರುಪತಿ ಮತ್ತು ವಿಜಯಪುರ ನಡುವೆ ಸಂಚರಿಸುವ ಈ ವಿಶೇಷ ರೈಲು ಆಂಧ್ರಪ್ರದೇಶ ಹಾಗೂ ಕರ್ನಾಟಕದ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆ ರೂಪಿಸಿಕೊಳ್ಳಲು ಈ ನಿಲ್ದಾಣಗಳ ವಿವರ ಸಹಕಾರಿಯಾಗಲಿದೆ.
ರೈಲು ನಿಲುಗಡೆ ಹೊಂದಲಿರುವ ಪ್ರಮುಖ ನಿಲ್ದಾಣಗಳು:
* ರೇಣಿಗುಂಟ
* ಕೋಡೂರು
* ರಾಜಂಪೇಟೆ
* ಕಡಪ
* ಯರ್ರಗುಂಟ್ಲ
* ತಾಡಿಪತ್ರಿ
* ಗುತ್ತಿ
* ಗುಂತಕಲ್
* ಬಳ್ಳಾರಿ
* ತೋರಣಗಲ್ಲು
* ಹೊಸಪೇಟೆ
* ಕೊಪ್ಪಳ
* ಗದಗ
* ಹೊಳೆ ಆಲೂರು
* ಬದಾಮಿ
* ಬಾಗಲಕೋಟೆ
* ಆಲಮಟ್ಟಿ
* ಬಸವನ ಬಾಗೇವಾಡಿ ರೋಡ್.
ಈ ನಿಲ್ದಾಣಗಳ ಮೂಲಕ ಸಂಚರಿಸುವುದರಿಂದ ವಿಜಯಪುರದ ಜೊತೆಗೆ ಬಾಗಲಕೋಟೆ, ಬದಾಮಿ, ಗದಗ, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ಭಾಗದ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ತಿರುಪತಿಗೆ ತೆರಳುವ ಭಕ್ತರು ಹಾಗೂ ಹಬ್ಬದ ಸಂದರ್ಭದಲ್ಲಿ ಊರಿಗೆ ಪ್ರಯಾಣಿಸುವವರು ಈ ರೈಲು ಸೇವೆಯನ್ನ ಬಳಸಿಕೊಳ್ಳಬಹುದು.