• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ಮೊಣಕಾಲು ನೋವಿನಿಂದ ಜೀವನ ನರಕವಾಗಿದೆಯೇ..? ಇಲ್ಲಿದೆ ನೋಡಿ ಶಾಶ್ವತ ಪರಿಹಾರ

ಮೊಣಕಾಲು ನೋವಿನಿಂದ ಜೀವನ ನರಕವಾಗಿದೆಯೇ..? ಇಲ್ಲಿದೆ ನೋಡಿ ಶಾಶ್ವತ ಪರಿಹಾರ

ಪ್ರತಿನಿತ್ಯ ನಮ್ಮನ್ನು ಕಾಡುವ ಮೊಣಕಾಲು ನೋವಿಗೆ ನಿಜವಾದ ಕಾರಣಗಳೇನು? ಶಸ್ತ್ರಚಿಕಿತ್ಸೆಯಿಲ್ಲದೆ ಈ ನೋವಿನಿಂದ ಮುಕ್ತಿ ಪಡೆಯಲು ವೈದ್ಯರು ನೀಡುವ ಮುಖ್ಯ ಸಲಹೆಗಳೇನು? ನೋವು ನಿವಾರಣೆಗೆ ನಾವು ಮಾಡುತ್ತಿರುವ ಕೆಲವು ಸಣ್ಣ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Reported ByKrishna NKEdited ByKrishna NK
Published: Sep 29, 2026, 09:43 PM IST|Updated: Sep 29, 2026, 09:51 PM IST
joinshare
ಮೊಣಕಾಲು ನೋವಿನಿಂದ ಜೀವನ ನರಕವಾಗಿದೆಯೇ..? ಇಲ್ಲಿದೆ ನೋಡಿ ಶಾಶ್ವತ ಪರಿಹಾರ
Image Credit: health tips

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Knee pain remedy in Kannada : ಅತಿಯಾದ ಮೊಣಕಾಲು ನೋವಿನಿಂದ ಬಳಲುತ್ತಿದ್ದೀರಾ? ದೈನಂದಿನ ಕೆಲಸಗಳನ್ನು ಮಾಡಲು ತೊಂದರೆಯಾಗುತ್ತಿದೆಯೇ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ. ಇತ್ತೀಚಿನ ದಿನಗಳಲ್ಲಿ ಮೊಣಕಾಲು ನೋವು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆದರೆ, ನಾವು ಮಾಡುವ ಕೆಲವು ದಿನನಿತ್ಯದ ತಪ್ಪುಗಳನ್ನು ಗುರುತಿಸಿ ಸರಿಪಡಿಸಿಕೊಂಡರೆ, ಶಸ್ತ್ರಚಿಕಿತ್ಸೆಯ ಅಗತ್ಯವೇ ಇಲ್ಲದೆ ಮೊಣಕಾಲು ನೋವಿನಿಂದ ಮುಕ್ತಿ ಪಡೆಯಬಹುದು ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ತೂಕ ಕಾಪಾಡಿಕೊಳ್ಳಿ: ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕ ಇರುವುದು ಬಹಳ ಮುಖ್ಯ. ಉದಾಹರಣೆಗೆ, 5 ಅಡಿ 5 ಇಂಚು ಎತ್ತರವಿರುವ ವ್ಯಕ್ತಿಗೆ 57 ಕೆಜಿ ತೂಕ ಸೂಕ್ತ. ಹೆಚ್ಚುವರಿಯಾಗಿ 10, 20 ಅಥವಾ 50 ಕೆಜಿ ತೂಕ ಹೊರುವುದು ಮೊಣಕಾಲುಗಳ ಮೇಲೆ ಅತಿಯಾದ ಒತ್ತಡವನ್ನುಂಟು ಮಾಡುತ್ತದೆ. ಇದರಿಂದ ಕೀಲುಗಳು ಬೇಗನೆ ಸವೆಯುತ್ತವೆ. ಅತಿಯಾದ ತೂಕವಿದ್ದರೆ ಮುಂದಿನ ದಿನಗಳಲ್ಲಿ 'ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ' (Knee Replacement) ಮಾಡುವುದಕ್ಕೂ ತೊಂದರೆಯಾಗಬಹುದು.

ಪೌಷ್ಟಿಕಾಂಶಗಳ ಕೊರತೆ ನಿರ್ಲಕ್ಷಿಸಬೇಡಿ: ವಯಸ್ಕರಿಗೆ ದಿನಕ್ಕೆ ಕನಿಷ್ಠ 450 ಮಿಲಿಗ್ರಾಂ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ದೇಹವು ಈ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಮಿನ್ 'ಡಿ' ಅತ್ಯಗತ್ಯ. ಎಳ್ಳು, ಪಾಲಕ್, ಮೆಂತ್ಯದಂತಹ ಹಸಿರು ಸೊಪ್ಪುಗಳಲ್ಲಿ ಹಾಲಿಗಿಂತ 3 ರಿಂದ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ ಇರುತ್ತದೆ. ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮೂಳೆಗಳನ್ನು ಬಲಪಡಿಸಬಹುದು.

ನೋವು ನಿವಾರಕ ಮಾತ್ರೆಗಳ (Painkillers) ಬಳಕೆ ಕಡಿಮೆ ಮಾಡಿ: ನೋವು ನಿವಾರಕಗಳು ನೋವಿನ ಸಂಕೇತಗಳನ್ನು ಮೆದುಳಿಗೆ ತಲುಪದಂತೆ ತಡೆಯುತ್ತವೆಯೇ ವಿನಃ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸುವುದಿಲ್ಲ. ಇವುಗಳ ಅತಿಯಾದ ಬಳಕೆಯಿಂದ ಮೂತ್ರಪಿಂಡ (Kidney) ಹಾನಿ, ಹೊಟ್ಟೆಯ ಹುಣ್ಣು ಮತ್ತು ಯಕೃತ್ತಿನ (Liver) ತೊಂದರೆಗಳು ಎದುರಾಗಬಹುದು.

ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಿ: ಮೊಣಕಾಲು ನೋವಿಗೆ ಕುಂಬಳಕಾಯಿ, ಬದನೆಕಾಯಿ ಅಥವಾ ಆಲೂಗಡ್ಡೆ ಕಾರಣ ಎಂಬುದು ಕೇವಲ ತಪ್ಪು ಕಲ್ಪನೆ. ನಿಜವಾದ ಶತ್ರು ಅಡುಗೆಯಲ್ಲಿ ಬಳಸುವ ಅತಿಯಾದ ಉಪ್ಪು. ದೇಹ ಸೇರುವ ಹೆಚ್ಚುವರಿ ಸೋಡಿಯಂ, ಕೀಲುಗಳಲ್ಲಿ ಹರಳುಗಳಾಗಿ ರೂಪುಗೊಂಡು 'ಕಾರ್ಟಿಲೇಜ್' (Cartilage) ಅಂಗಾಂಶವನ್ನು ನಾಶಪಡಿಸುತ್ತದೆ. ಆದ್ದರಿಂದ ಅಡುಗೆಯಲ್ಲಿ ಉಪ್ಪಿನ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಒಳಿತು.

ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರವೇ ಹೊರತು, ಇದು ವೈದ್ಯಕೀಯ ಅಥವಾ ವೃತ್ತಿಪರ ಆರೋಗ್ಯ ಸಲಹೆಯಲ್ಲ. ಯಾವುದೇ ಆಹಾರಕ್ರಮದ ಬದಲಾವಣೆ, ಕೀಲು ನೋವಿನ ಚಿಕಿತ್ಸೆ ಅಥವಾ ಔಷಧಗಳ ಬಳಕೆಯನ್ನು ಮುಂದುವರಿಸುವ/ನಿಲ್ಲಿಸುವ ಮೊದಲು ದಯವಿಟ್ಟು ಅರ್ಹ ವೈದ್ಯರು ಅಥವಾ ಆರೋಗ್ಯ ತಜ್ಞರ ಸಲಹೆಯನ್ನು ಪಡೆಯಿರಿ.

Add Zee News as a Preferred Source
TAGS:
Kannada News