• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /ರೈಲಿನಲ್ಲಿ ಕನ್ಫರ್ಮ್‌ ಟಿಕೆಟ್‌ ಪಡೆಯಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ

ರೈಲಿನಲ್ಲಿ ಕನ್ಫರ್ಮ್‌ ಟಿಕೆಟ್‌ ಪಡೆಯಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ

ಆರಾಮದಾಯಕ ಪ್ರಯಾಣಕ್ಕೆ ಹೆಸರುವಾಸಿ ಆಗಿರುವ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದೀರಾ? ಹಾಗಿದ್ದರೆ, ಭಾರತೀಯ ರೈಲ್ವೆಯ ರಿಸರ್ವೇಷನ್‌ ನಿಯಮಗಳ ಬಗ್ಗೆ ತಿಳಿಯುವುದು ತುಂಬಾ ಮುಖ್ಯ. ಆಗಷ್ಟೇ ನೀವು ಕನ್ಫರ್ಮ್‌ ಟ್ರೈನ್‌ ಟಿಕೆಟ್‌ ಪಡೆಯಬಹುದಾಗಿದೆ.

Reported ByYashaswini VEdited ByYashaswini V
Published: Sep 12, 2026, 06:30 PM IST|Updated: Sep 12, 2026, 06:33 PM IST
joinshare
ರೈಲಿನಲ್ಲಿ ಕನ್ಫರ್ಮ್‌ ಟಿಕೆಟ್‌ ಪಡೆಯಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಭಾರತೀಯ ರೈಲ್ವೆಯಲ್ಲಿ ದೂರದ ಊರುಗಳಿಗೆ ಪ್ರಯಾಣಿಸಲು ಯೋಜಿಸುತ್ತಿರುವವರಿಗೆ ʼಕನ್ಫರ್ಮ್‌ ಟ್ರೈನ್‌ ಟಿಕೆಟ್‌ʼ ಪಡೆಯುವುದು ಸವಾಲಿನ ಕೆಲಸವಾಗಿದೆ. ಅದರಲ್ಲೂ, ಹಬ್ಬ ಹಾಗೂ ಸಾಲು ಸಾಲು ರಜಾ ದಿನಗಳ ಸಂದರ್ಭದಲ್ಲಿ ಊರಿಗೆ ಹೋಗಲು ಪ್ಲಾನ್‌ ಮಾಡುತ್ತಿರುವವರಿಗೆ ಭಾರತೀಯ ರೈಲು ಟಿಕೆಟ್‌ಗಳನ್ನು ಬುಕ್‌ ಮಾಡುವುದು ನಿಜಕ್ಕೂ ದೊಡ್ಡ ತಲೆನೋವು. ಆದರೆ, ಇತ್ತೀಚಿನ ಭಾರತೀಯ ರೈಲ್ವೆ ಮೀಸಲಾತಿ ನಿಯಮಗಳ ಬಗ್ಗೆ ತಿಳಿದರೆ ನೀವು ಸುಲಭವಾಗಿ ದೃಢೀಕೃತ ಟ್ರೈನ್‌ ಟಿಕೆಟ್‌ ಪಡೆಯಲು ಸಹಾಯಕವಾಗಲಿದೆ.

ಹೌದು, ಭಾರತೀಯ ರೈಲ್ವೆ ಮತ್ತು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಎಲ್ಲಾ ಪ್ರಯಾಣಿಕರಿಗೂ ಟಿಕೆಟ್‌ ಬುಕಿಂಗ್‌ ಅನ್ನು ನ್ಯಾಯಯುತ ಮತ್ತು ಪಾರದರ್ಶಕವಾಗಿಸಲು ಕಳೆದ ವರ್ಷದಿಂದ ಟ್ರೈನ್‌ ಟಿಕೆಟ್‌ ಮೀಸಲಾತಿ ನಿಯಮಗಳ ಮಾನದಂಡಗಳನ್ನು ಪರಿಷ್ಕರಿಸಿದೆ. ಇವುಗಳನ್ನು ಅನುಸರಿಸಿ ಮುಂಗಡ ಟಿಕೆಟ್‌ ಬುಕಿಂಗ್ ಮಾಡುವುದರಿಂದ ʼಕನ್ಫರ್ಮ್‌ ಟ್ರೈನ್‌ ಟಿಕೆಟ್‌ʼ ಪಡೆಯಬಹುದಾಗಿದೆ.

60 ದಿನಗಳ ಮುಂಗಡ ಬುಕಿಂಗ್‌ ನಿಯಮ:
ಭಾರತೀಯ ರೈಲ್ವೆ ಪರಿಷ್ಕೃತ ಮುಂಗಡ ಕಾಯ್ದಿರಿಸುವಿಕೆ ನಿಯಮಗಳ ಅಡಿಯಲ್ಲಿ, ಟಿಕೆಟ್‌ಗಳನ್ನು ಸಾಮಾನ್ಯವಾಗಿ ಪ್ರಯಾಣದ 60 ದಿನಗಳ ಮುನ್ನ ಎಂದರೆ ಎರಡು ತಿಂಗಳುಗಳ ಮೊದಲೇ ಬುಕಿಂಗ್‌ ಮಾಡುವ ಆಯ್ಕೆಯನ್ನು ನೀಡುತ್ತದೆ.

ಎರಡು ತಿಂಗಳ ಮೊದಲೇ ರೈಲು ಟಿಕೆಟ್‌ ಕಾಯ್ದಿರಿಸುವುದರ ಪ್ರಯೋಜನ ಏನು?
ಸಾಮಾನ್ಯವಾಗಿ ದೂರದ ಊರುಗಳಿಗೆ‌ ಹೋಗಲು ಬಯಸುವವರು ಮೊದಲೇ ಟಿಕೆಟ್‌ ಕಾಯ್ದಿರಿಸುವುದರಿಂದ ಕನ್ಫರ್ಮ್‌ ಟಿಕೆಟ್‌ ಲಭ್ಯತೆ ಕಡಿಮೆ ಇರುತ್ತದೆ. ಅದರಲ್ಲೂ, ಹಬ್ಬ ಅಥವಾ ರಜಾ ದಿನಗಳ ಸಮಯದಲ್ಲಿ ಪ್ರಯಾಣಿಸುವವರ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಿರುವುದರಿಂದ ಬೇಡಿಕೆಯೂ ಅಧಿಕವಾಗಿಯೇ ಇರುತ್ತದೆ. ಹಾಗಾಗಿ, ಈ ಅವಧಿಯಲ್ಲಿ ದೃಢೀಕೃತ ಟಿಕೆಟ್‌ ಸಿಗುವ ಸಾಧ್ಯತೆ ಇನ್ನೂ ಕಡಿಮೆ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಟು ಭಾರತೀಯ ರೈಲ್ವೆಯು 60 ದಿನಗಳ ಮುಂಚೆಯೇ ಟ್ರೈನ್‌ ಟಿಕೆಟ್‌ ಬುಕಿಂಗ್‌ಗೆ ಅವಕಾಶವನ್ನು ಒದಗಿಸುತ್ತದೆ. ಇದರಿಂದ ದೃಢೀಕೃತ ಸೀಟು ಸಿಗುವ ಅವಕಾಶಗಳು ಶೇ. 100 ರಷ್ಟು ಇರಲಿದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಭಾರತೀಯ ರೈಲ್ವೆಯ ಈ ಪರಿಷ್ಕೃತ ನಿಯಮದ ಪ್ರಯೋಜನ ಪಡೆಯುವ ಮೂಲಕ ಪ್ರಯಾಣಿಕರು ತಮ್ಮ ಆಯ್ಕೆಯ ಕ್ಲಾಸ್‌ ( 1AC, 2AC, 3AC, ಸ್ಲೀಪರ್‌ ಕೋಚ್)‌ ಸೀಟನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ಸಹ ಹೊಂದಿರುತ್ತಾರೆ.  

ರೈಲು ಟಿಕೆಟ್ ಬುಕ್ ಮಾಡಲು ತುಂಬಾ ಸುಲಭವಾದ ಮಾರ್ಗ:-
ನೀವೂ ಸಹ ಊರಿಗೆ ಹೋಗಲು ಅಥವಾ ಪ್ರಯಾಣಕ್ಕೆ ಯೋಜಿಸುತ್ತಿದ್ದರೆ ಕೆಲವೇ ಕೆಲವು ಹಂತಗಳನ್ನು ಬಳಸಿ ಭಾರತೀಯ ರೈಲ್ವೆಯಲ್ಲಿ ಕನ್ಫರ್ಮ್‌ ಟಿಕೆಟ್‌ ಪಡೆಯಬಹುದು. ಆದರೆ, ಇದಕ್ಕಾಗಿ ನೀವು ಮುಂಗಡ ಟಿಕೆಟ್‌ ಕಾಯ್ದಿರಿಸಲು ಐಆರ್‌ಸಿಟಿಸಿ ಖಾತೆ ಹೊಂದಿರುವುದು ಅಗತ್ಯವಾಗಿದೆ. ರೈಲು ಟಿಕೆಟ್ ಬುಕ್‌ ಮಾಡುವ ಹಂತ-ಹಂತದ ಪ್ರಕ್ರಿಯೆ ಈ ಕೆಳಗಿನಂತಿದೆ...

ಹಂತ - 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಮೊದಲು ಭಾರತೀಯ ರೈಲ್ವೆಯ ಅಧಿಕೃತ IRCTC ವೆಬ್‌ಸೈಟ್‌ ಅಥವಾ IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಅನ್ನು ತೆರೆಯಿರಿ. ನಿಮ್ಮ ಮೊಬೈಲ್‌ ನಂಬರ್‌ ಅಥವಾ ಬಳಕೆದಾರರ ಐಡಿ ಮತ್ತು ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ. 

ಹಂತ - 2: ಪ್ರಯಾಣ ಎಲ್ಲಿಂದ ಎಲ್ಲಿಗೆ ಎಂಬುದನ್ನು ಆರಿಸಿ
ನೀವು ಲಾಗಿನ್‌ ಆದ ಬಳಿಕ ನಿಮ್ಮ ಪ್ರಯಾಣ ಎಲ್ಲಿಂದ ಎಲ್ಲಿಯವರೆಗೆ ಎಂಬ ಆಯ್ಕೆಗಳನ್ನು ಆರಿಸಿ. ಮೊದಲಿಗೆ ನೀವು ಪ್ರಯಾಣ ಆರಂಭಿಸುವ ನಿಲ್ದಾಣವನ್ನು (From) ನಮೂದಿಸಿ, ಬಳಿಕ ಗಮ್ಯಸ್ಥಾನವನ್ನು (To) ನಮೂದಿಸಿ. 
ಉದಾಹರಣೆಗೆ ನೀವು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರೆ From ಜಾಗದಲ್ಲಿ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣ ಎಂತಲೂ ಹಾಗೂ To ಜಾಗದಲ್ಲಿ ನವ ದೆಹಲಿ (New Delhi) ಎಂಬ ಆಯ್ಕೆಯನ್ನು ಆರಿಸಿ.  

ಹಂತ - 3: ಪ್ರಯಾಣದ ದಿನಾಂಕ ಸೆಲೆಕ್ಟ್‌ ಮಾಡಿ
ಮುಂದಿನ ಪುಟದಲ್ಲಿ ನೀವು ಯಾವ ದಿನಾಂಕದಂದು ಪ್ರಯಾಣಿಸಲು ಬಯಸುವಿರೋ ಆ ದಿನಾಂಕವನ್ನು ಆರಿಸಿ. ಭಾರತೀಯ ರೈಲ್ವೆಯ ಸಾಮಾನ್ಯ ಮುಂಗಡ ಕಾಯ್ದಿರಿಸುವಿಕೆ ನಿಯಮಗಳ ಅಡಿಯಲ್ಲಿ, ಪ್ರಯಾಣದ ದಿನಾಂಕಕ್ಕಿಂತ 60 ದಿನಗಳ ಮೊದಲು ನೀವು ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಹಬ್ಬದ ಸಮಯದಲ್ಲಿ ಪ್ರಯಾಣಿಸಲು ಯೋಜಿಸುವತ್ತಿದ್ದರೆ ಸ್ವಲ್ಪ ಮೊದಲೇ ಹೊರಡುವಂತೆ ದಿನಾಂಕವನ್ನು ಆಯ್ಕೆ ಮಾಡುವುದು ಉತ್ತಮವಾಗಿದೆ.

ಹಂತ - 4: ನೀವು ಪ್ರಯಾಣಿಸಬೇಕಿರುವ ಮಾರ್ಗದ ರೈಲುಗಳನ್ನು ಚೆಕ್‌ ಮಾಡಿ
ನೀವು ಪ್ರಯಾಣಿಸಬೇಕಿರುವ ಮಾರ್ಗದಲ್ಲಿ ಸಂಚರಿಸುವ ರೈಲುಗಳು, ಸಮಯ ಪರಿಶೀಲಿಸಿ ನಿಮಗೆ ಹೊರಡಲು ಅನುಕೂಲಕರವಾದ ರೈಲನ್ನು ಆರಿಸಿ ರೈಲ್ವೆ ಪಟ್ಟಿಯನ್ನು ಚೆಕ್‌ ಮಾಡಿ. ರೈಲುಗಳನ್ನು ಸರ್ಚ್‌ ಮಾಡಿ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಅದರಲ್ಲಿ ರೈಲಿನ ಹೆಸರು, ಟ್ರೈನ್‌ ನಂಬರ್‌, ನಿರ್ಗಮನ ಸಮಯ ಮತ್ತು ವಿವಿಧ ವರ್ಗಗಳ ಸೀಟುಗಳ ಲಭ್ಯತೆಯನ್ನು ಪರಿಶೀಲಿಸಿ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಟ್ರೈನ್‌ ಆಯ್ಕೆ ಮಾಡಿ ಇದರಲ್ಲಿ ನಿಮಗೆ ಸೂಕ್ತವಾದ ಆಸನವನ್ನು ಎಂದರೆ ಸ್ಲೀಪರ್, 3AC, 2AC, ಮತ್ತು CC ನಂತಹ ಆಯ್ಕೆಗಳಲ್ಲಿ ನಿಮಗೆ ಸೂಕ್ತವಾದ ಆಸನಗಳನ್ನು ಆಯ್ಕೆ ಮಾಡಿಕೊಳ್ಳಿ.

ಹಂತ - 5: ಪ್ರಯಾಣಿಕರ ವಿವರಗಳನ್ನು ನಮೂದಿಸಿ
ನೀವು ಪ್ರಯಾಣಿಸಬೇಕಿರುವ ರೈಲು ಹಾಗೂ ವರ್ಗವನ್ನು ಆಯ್ಕೆ ಮಾಡಿದ ಬಳಿಕ ನೀವು ಎಷ್ಟು ಜನ ಪ್ರಯಾಣಿಸುತ್ತೀರಿ. ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಸೇರಿದಂತೆ ಇತರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಗಮನಾರ್ಹನವಾಗಿ ಒಂದು ರೈಲ್ವೆ ಟಿಕೆಟ್‌ನಲ್ಲಿ ಗರಿಷ್ಠ ಆರು ಪ್ರಯಾಣಿಕರಿಗೆ ಬುಕಿಂಗ್‌ ಮಾಡಲಾಗುತ್ತದೆ. ಪ್ರಯಾಣಿಕರ ಮಾಹಿತಿ ಭರ್ತಿ ಮಾಡಿದ ಬಳಿಕ ಬುಕಿಂಗ್‌ ವಿವರಗಳನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸಿ. ನಿಖರವಾಗಿ ಹೇಳುವುದಾದರೆ, ಟ್ರೈನ್‌ ಟಿಕೆಟ್‌ ಬುಕಿಂಗ್‌ ಯಾವ ದಿನಾಂಕಕ್ಕೆ ಮಾಡಲಾಗಿದೆ. ಪ್ರಯಾಣದ ಸಮಯ, ರೈಲು ಸಂಖ್ಯೆ, ಬೋರ್ಡಿಂಗ್‌ ನಿಲ್ದಾಣ, ಗಮ್ಯಸ್ಥಾನ ಮತ್ತು ಪ್ರಯಾಣಿಕರ ಎಲ್ಲಾ ಮಾಹಿತಿಯನ್ನು ಸರಿಯಾಗಿ ಚೆಕ್‌ ಮಾಡಿದ ಬಳಿಕ ಮುಂದಿನ ಹಂತಕ್ಕೆ ಹೋಗಿ.

ಹಂತ - 6: ಪೇಮೆಂಟ್‌ ಮಾಡಿ
ಮುಂಗಡ ಟ್ರೈನ್‌ ಟಿಕೆಟ್‌ ಬುಕಿಂಗ್‌ಗಾಗಿ ಮಾಹಿತಿಗಳನ್ನು ಪರಿಶೀಲಿಸಿ ಮುಂದಿನ ಆಯ್ಕೆ ಆರಿಸಿದ ನಂತರ ಪೇಮೆಂಟ್‌ ಪುಟಕ್ಕೆ ಹೋಗುತ್ತೀರಿ. ಇದರಲ್ಲಿ ಐಆರ್‌ಸಿಟಿಸಿ (IRCTC) ಇಂಟರ್ನೆಟ್ ಟಿಕೆಟ್ ಬುಕಿಂಗ್ ಮತ್ತು ಆನ್‌ಲೈನ್ ಪಾವತಿಯನ್ನು ನೀಡುತ್ತದೆ. ಲಭ್ಯವಿರುವ ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಆನ್‌ಲೈನ್‌ ಬ್ಯಾಂಕಿಂಗ್‌, ಯುಪಿಐ ಪಾವತಿ ಹೀಗೆ ಇರುವ ಪಾವತಿ ಆಯ್ಕೆಗಳಲ್ಲಿ ನಿಮ್ಮ ಅನುಕೂಲಕರ ಪೇಮೆಂಟ್‌ ವಿಧಾನವನ್ನು ಆರಿಸಿ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. 
ಬಳಿಕ ನೀವು ನಿಮ್ಮ ಟಿಕೆಟ್‌ ಬುಕಿಂಗ್‌ ಪಿಎನ್‌ಆರ್‌ (PNR) ನಂಬರ್‌ ಅನ್ನು ಸ್ವೀಕರಿಸುತ್ತೀರಿ. ಪಿಎನ್‌ಆರ್‌ ನಂಬರ್‌ ಅನ್ನು ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುತ್ತದೆ. ಆದಾಗ್ಯೂ, ನೀವು ಅದರ ಒಂದು ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವುದು ಒಳ್ಳೆಯದು.

ಈ ರೀತಿಯಾಗಿ ನೀವು ನಿಮ್ಮ ಪ್ರಯಾಣವನ್ನು ಮೊದಲೇ ಯೋಜಿಸಿ ಮುಂಚಿತವಾಗಿಯೇ ಮುಂಗಡ ಟ್ರೈನ್‌ ಟಿಕೆಟ್‌ ಬುಕಿಂಗ್‌ ಮಾಡುವುದರಿಂದ ಇದು ದೃಢೀಕೃತ ಟಿಕೆಟ್‌ ಪಡೆಯಲು ನಿಮಗೆ ಸಹಕಾರಿ ಆಗಲಿದೆ.

Add Zee News as a Preferred Source
TAGS:
Indian Railways