Indian Railways Free Travel 2026 : ಭಾರತೀಯ ಗಡಿಗಳನ್ನು ರಕ್ಷಿಸುವಲ್ಲಿ ಹಾಗೂ ದೇಶದ ಭದ್ರತೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅತ್ಯುನ್ನತ ಸಾಹಸ, ಶೌರ್ಯ ಪ್ರದರ್ಶಿಸಿದ ದೇಶದ ವೀರ ಯೋಧರು ಮತ್ತು ಅವರ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಕೊಡುಗೆಯೊಂದನ್ನು ಘೋಷಿಸಿದೆ.. ಯಾವುದು ಆ ಯೋಜನೆ, ಅದರ ಉದ್ದೇಶವೇನು.. ಅದರ ಪ್ರಯೋಜನಗಳೇನು..? ಈ ಕುರಿತ ಸಂಪೂರ್ಣ ವಿವರ ಮತ್ತು ಯೋಜನೆಗಳ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಹೌದು.. ಶೌರ್ಯ ಪ್ರಶಸ್ತಿ ಪುರಸ್ಕೃತರ ಸೇವೆಯನ್ನು ಸ್ಮರಿಸಿ, ಅವರನ್ನು ಅತ್ಯುನ್ನತ ಗೌರವದಿಂದ ಕಾಣುವ ಸತ್ಸಂಕಲ್ಪದೊಂದಿಗೆ ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ರೈಲ್ವೇ ಸಚಿವಾಲಯ ಜಂಟಿಯಾಗಿ ಭಾರತೀಯ ರೈಲ್ವೆಯಲ್ಲಿ ಉಚಿತ ಎಸಿ (AC) ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿವೆ. ಬರುವ ನವೆಂಬರ್ 1 ರಿಂದ ಈ ನೂತನ ನಿಯಮಗಳು ಹಾಗೂ ಸಂಪೂರ್ಣ ಡಿಜಿಟಲೀಕೃತ ವ್ಯವಸ್ಥೆಯು ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದೆ.. ಈ ಯೋಜನೆಯ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.
ಉಚಿತ ಎಸಿ ಪ್ರಯಾಣ ಯೋಜನೆ: ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?
ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಡಿ, ಭಾರತೀಯ ಭೂಸೇನೆ (Indian Army), ನೌಕಾಪಡೆ (Indian Navy) ಹಾಗೂ ವಾಯುಪಡೆಯ (Indian Air Force) ಶೌರ್ಯ ಪ್ರಶಸ್ತಿ (Gallantry Award) ಪುರಸ್ಕೃತ ಯೋಧರು ಭಾರತೀಯ ರೈಲ್ವೆಯ ಉನ್ನತ ದರ್ಜೆಯ ರೈಲುಗಳಲ್ಲಿ ಜೀವಿತಾವಧಿಯವರೆಗೆ ಉಚಿತವಾಗಿ ಪ್ರಯಾಣಿಸಬಹುದು.
ಈ ಯೋಜನೆಯಲ್ಲಿ ಲಭ್ಯವಿರುವ ರೈಲು ದರ್ಜೆಗಳು
ಪ್ರಥಮ ದರ್ಜೆ ಎಸಿ (1st AC)
ದ್ವಿತೀಯ ದರ್ಜೆ ಎಸಿ (2nd AC)
ಎಸಿ ಚೇರ್ ಕಾರ್ (AC Chair Car)
ಕುಟುಂಬದವರಿಗೂ ವಿಸ್ತರಿಸಿದ ಉಚಿತ ಸೌಲಭ್ಯ : ಈ ಯೋಜನೆಯು ಕೇವಲ ಪ್ರಶಸ್ತಿ ವಿಜೇತ ಯೋಧರಿಗೆ ಮಾತ್ರ ಸೀಮಿತವಾಗಿರದೆ, ಅವರ ಕುಟುಂಬದ ಭದ್ರತೆ ಮತ್ತು ಗೌರವವನ್ನೂ ಕಾಯುತ್ತದೆ
ಸಂಗಾತಿಗೆ ಜೀವಿತಾವಧಿ ಸೌಲಭ್ಯ: ಪ್ರಶಸ್ತಿ ವಿಜೇತ ಯೋಧರ ಪತ್ನಿ ಅಥವಾ ಪತಿಗೆ (ಸಂಗಾತಿ) ಸಹ ಅವರ ಜೀವಿತಾವಧಿಯವರೆಗೆ ಈ ಉಚಿತ ಪ್ರಯಾಣದ ಹಕ್ಕಿರುತ್ತದೆ.
ಹುತಾತ್ಮ ಯೋಧರ ಪತ್ನಿಗೆ ಆಸರೆ: ಶೌರ್ಯ ಪ್ರಶಸ್ತಿ ಪಡೆದ ಯೋಧರು ಮರಣಹೊಂದಿದರೆ, ಅವರ ಸಂಗಾತಿಯು ಮರುವಿವಾಹವಾಗದಿದ್ದರೆ, ಅವರ ಜೀವಿತಾವಧಿಯವರೆಗೆ ಈ ಉಚಿತ ರೈಲು ಪ್ರಯಾಣ ಸೌಲಭ್ಯ ಮುಂದುವರಿಯಲಿದೆ.
ಅವಿವಾಹಿತ ಹುತಾತ್ಮರ ಹೆತ್ತವರಿಗೆ ಗೌರವ : ಕಿರಿಯ ವಯಸ್ಸಿನಲ್ಲೇ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿ ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ ಪಡೆದ ಅವಿವಾಹಿತ ಸೈನಿಕರ ತ್ಯಾಗವನ್ನು ಸರ್ಕಾರ ವಿಶೇಷವಾಗಿ ಪರಿಗಣಿಸಿದೆ. ಇಂತಹ ಹುತಾತ್ಮ ಯೋಧರ ತಂದೆ ಮತ್ತು ತಾಯಿಯನ್ನು ಸಹ ಈ ಯೋಜನೆಯ ನೇರ ಫಲಾನುಭವಿಗಳನ್ನಾಗಿ ಸೇರಿಸಲಾಗಿದೆ.
ಸಂಪೂರ್ಣ ಡಿಜಿಟಲ್ ಹಾಗೂ ಕಾಗದರಹಿತ ವ್ಯವಸ್ಥೆ : ಫಲಾನುಭವಿಗಳು ಯಾವುದೇ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದಂತೆ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ರೈಲ್ವೆ ಸೇರಿ ಅತ್ಯಂತ ಪಾರದರ್ಶಕ ಹಾಗೂ ಸುಲಭವಾದ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸಿವೆ. ಈ ಕುರಿತ ಸಂಪೂರ್ಣ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.. ಗಮನಿಸಿ
ಇ-ಪ್ರಯಾಣ ಪಾಸ್ (E-Travel Pass): ಅರ್ಹ ಫಲಾನುಭವಿಗಳು ‘ಭಾರತೀಯ ರೈಲ್ವೆ ರಿಯಾಯಿತಿ ಕಾರ್ಡ್ ಪೋರ್ಟಲ್’ (Indian Railways Concession Card Portal - IRCCP)ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ದೃಢೀಕರಣ ಪ್ರಕ್ರಿಯೆ ಪೂರ್ಣಗೊಂಡು ಎಲೆಕ್ಟ್ರಾನಿಕ್ ಟ್ರಾವೆಲ್ ಪಾಸ್ ವಿತರಿಸಲಾಗುತ್ತದೆ.
ಮನೆಬಾಗಿಲಲ್ಲೇ ಟಿಕೆಟ್ ಬುಕಿಂಗ್: ನವೆಂಬರ್ 1 ರಿಂದ ಜಾರಿಗೆ ಬರುವ ಈ ಪೋರ್ಟಲ್ ಮೂಲಕ ಫಲಾನುಭವಿಗಳು ತಮ್ಮ ಮನೆಯಲ್ಲಿಯೇ ಕುಳಿತು, ಎಲೆಕ್ಟ್ರಾನಿಕ್ ಪಾಸ್ ಬಳಸಿ ಸುಲಭವಾಗಿ ಉಚಿತ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.
ಸಮಯ ಮತ್ತು ಶ್ರಮದ ಉಳಿತಾಯ: ಈ ಕಾಗದರಹಿತ (paperless) ವ್ಯವಸ್ಥೆಯು ಸಮಯವನ್ನು ಉಳಿಸುವುದಲ್ಲದೆ, ಮಧ್ಯವರ್ತಿಗಳ ಹಸ್ತಕ್ಷೇಪ, ದಲಾಲಿ ದಂದೆ ಹಾಗೂ ಅನಗತ್ಯ ವಿಳಂಬವನ್ನು ಸಂಪೂರ್ಣವಾಗಿ ತಡೆಯುತ್ತದೆ.
ಸೇನಾ ಪಡೆಗಳ ಮನೋಸ್ಥೈರ್ಯ ಹೆಚ್ಚಿಸುವ ಐತಿಹಾಸಿಕ ಹೆಜ್ಜೆ
ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ರಕ್ಷಣಾ ತಜ್ಞರು, ಹಿರಿಯ ಮಿಲಿಟರಿ ವಿಶ್ಲೇಷಕರು ಹಾಗೂ ಮಾಜಿ ಸೇನಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ಭದ್ರತೆಗಾಗಿ ಹಿಮಪಾತ, ಕೊರೆಯುವ ಚಳಿ, ಮರುಭೂಮಿಯ ಬಿಸಿಲು ಮತ್ತು ವಿಷಮ ಪರಿಸ್ಥಿತಿಗಳಲ್ಲಿ ಹಗಲಿರುಳು ಗಡಿ ಕಾಯುವ ಯೋಧರಿಗೆ ನೀಡಿದ ನಿಜವಾದ ರಾಷ್ಟ್ರೀಯ ಗೌರವ ಇದಾಗಿದೆ ಎಂದು ಬಣ್ಣಿಸಲಾಗಿದೆ.
ಪ್ರಸ್ತುತ ಕರ್ತವ್ಯದಲ್ಲಿರುವ ಸೈನಿಕರಲ್ಲಿ ಹಾಗೂ ನಿವೃತ್ತ ಯೋಧರಲ್ಲಿ ಈ ನಿರ್ಧಾರವು ಹೊಸ ಉತ್ಸಾಹ ಮತ್ತು ಮನೋಸ್ಥೈರ್ಯವನ್ನು ತುಂಬಿದೆ. ಗಡಿಯಲ್ಲಿ ಜೀವದ ಹೂರಣವನ್ನೇ ನೀಡಿ ಹೋರಾಡುವ ಯೋಧರ ಕುಟುಂಬಗಳಿಗೆ ಸಾಂತ್ವನ ಹಾಗೂ ನೆರವಾಗುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿದೆ. ಇಂತಹ ರಾಷ್ಟ್ರೀಯ ಸೌಲಭ್ಯಗಳು ದೇಶದ ಇಂದಿನ ಯುವಪೀಳಿಗೆಯಲ್ಲಿ ದೇಶಭಕ್ತಿಯನ್ನು ಹೆಚ್ಚಿಸಲು ಮತ್ತು ಭಾರತೀಯ ಸಶಸ್ತ್ರ ಪಡೆಗಳನ್ನು ಸೇರಿ ದೇಶಸೇವೆ ಮಾಡಲು ಹೆಚ್ಚಿನ ಸ್ಪೂರ್ತಿಯನ್ನು ನೀಡಲಿವೆ.
ಒಟ್ಟಾರೆಯಾಗಿ ಈ ಪ್ರಮುಖ ಯೋಜನೆಯ ನಿರ್ಣಯವು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನು ತ್ಯಾಗ ಮಾಡಲು ಹಿಂಜರಿಯದ ವೀರ ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಭಾರತ ಸರ್ಕಾರ ನೀಡಿದ ಅತ್ಯುನ್ನತ ಗೌರವ ಹಾಗೂ ಕೃತಜ್ಞತೆಯ ಸಂಕೇತವಾಗಿದೆ. ಡಿಜಿಟಲೀಕೃತ ವ್ಯವಸ್ಥೆಯ ಮೂಲಕ ಕಾಗದರಹಿತವಾಗಿ ಈ ಸೌಲಭ್ಯವನ್ನು ಒದಗಿಸುತ್ತಿರುವುದು ಯೋಧರಿಗೆ ಸುಲಭ ಹಾಗೂ ಗೌರವಯುತ ಸೇವೆ ಸಿಗುವಂತೆ ಮಾಡುತ್ತದೆ. ಇದು ಸಶಸ್ತ್ರ ಪಡೆಗಳ ಮನೋಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ, ದೇಶದ ಯುವಪೀಳಿಗೆಯಲ್ಲಿ ದೇಶಸೇವೆಯ ಕುರಿತು ಅಪಾರ ಸ್ಫೂರ್ತಿ ಮತ್ತು ದೇಶಭಕ್ತಿಯನ್ನು ತುಂಬುವಲ್ಲಿ ಬಹುಮುಖ್ಯ ಪಾತ್ರ ವಹಿಸಲಿದೆ.
ಇಂತಹ ಅಭೂತ ಪೂರ್ವ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ಯುವಕರು ಸೇನೆ ಸೇರಲು ಉತ್ಸಾಹ ತೋರುವುದಂತು ಖಂಡಿತ. ಅಲ್ಲದೆ, ಈ ರೀತಿಯ ಸೌಕರ್ಯಗಳು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಿ ದೇಶ ಸೇವೆಗೆಂದು ಕರುಳ ಕುಡಿಗಳನ್ನು ಮುಡಿಪಾಗಿಡುವ ಪೋಷಕರಿಗೆ ಇದು ಗೌರವಾರ್ಥವಾಗಿದೆ. ಇದೇ ರೀತಿಯಲ್ಲಿ ಮುಂದೆಯೂ ಹಲವಾರು ಯೋಜನೆಗೆಗಳು ದೇಶ ಕಾಯುವ ವೀರ ಯೋಧರಿಗೆ ಮತ್ತು ಅವರ ಕುಟುಂಬಕ್ಕೆ ನಿಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯವಹಿಸಿದರೆ ಉತ್ತಮ ಎನ್ನುವುದು ದೇಶವಾಸಿಗಳ ಮಾತು.