SOCIAL MEDIA

Newsletter

PARTNER SITES
Select Language Select State

ನಿಮ್ಮ ಆಯ್ಕೆಯ ಹುಡುಗ ಹೇಗಿರಬೇಕು.. ಪ್ರಿಯಕರನಾದರೂ ಈ ಕ್ವಾಲಿಟಿಗಳನ್ನ ಒಮ್ಮೆ ಚೆಕ್‌ ಮಾಡಿ

ನಿಮಗೆ ಗೆಳೆಯನಾದ ಹುಡುಗ. ಅದೇ ಯುವಕ ನಿಮಗೆ ಗಂಡನಾದಾಗ ಪರಿಸ್ಥಿತಿ ಬೇರೆಯೇ ಆಗುತ್ತದೆ. ಸಂಬಂಧದಲ್ಲಿ ಒಳ್ಳೆಯ ಸಮಯ ಕಳೆದ ನಂತರ, ಯುವಕನೊಬ್ಬ ತನ್ನ ಇಡೀ ಜೀವನ ಹೀಗೆಯೇ ಇರುತ್ತದೆ ಎಂದು ಭಾವಿಸುತ್ತಾನೆ.

Written By Bhimappa
Published: Oct 04, 2026, 01:34 PM IST | Updated: Oct 04, 2026, 01:39 PM IST
Image Credit: love_boy_girl
Join

boy friend reality check: ಇಂದಿನ ಕಾಲದಲ್ಲಿ ಯುವಕ ಮತ್ತು ಯುವತಿ ಮದುವೆಗೆ ಮೊದಲೇ ಪರಸ್ಪರ ಸಂಬಂಧದಲ್ಲಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವು ವರ್ಷಗಳ ಸಂಬಂಧದ ನಂತರ ಇಬ್ಬರೂ ಮದುವೆ ಆಗಬೇಕೆ ಅಥವಾ ಬೇಡವೇ ಎಂದು ಯೋಚನೆಗೆ ಇಳಿಯುತ್ತಾರೆ. ಸಾಮಾನ್ಯವಾಗಿ, ಎಲ್ಲ ಕಡೆಯೂ ಯುವಕರು ಮದುವೆಗೆ ಉತ್ಸುಕರಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲ ದಿನಗಳ ಸಂಬಂಧದ ನಂತರ ಗೆಳೆಯ ಮದುವೆಗೆ ಸಿದ್ಧತೆ ಮಾಡಿಕೊಂಡರೆ, ಅವನೊಂದಿಗೆ ನೀವು ಮುಂದುವರಿಯುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಪ್ರತಿ ಹುಡುಗಿಯೂ ತನ್ನ ಗೆಳೆಯ ಅಥವಾ ಪ್ರಿಯಕರನ ಕುರಿತು ವಾಸ್ತವತೆ ಅಥವಾ ರಿಯಾಲಿಟಿ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಗೆಳೆಯ ಇದ್ದಾಗ ಪರಿಸ್ಥಿತಿ ಬೇರೆಯೇ ಆಗಿರುತ್ತದೆ. ಅದೇ ಯುವಕ ನಿಮಗೆ ಗಂಡನಾದಾಗ ಪರಿಸ್ಥಿತಿ ಬೇರೆಯೇ ಆಗುತ್ತದೆ. ಸಂಬಂಧದಲ್ಲಿ ಒಳ್ಳೆಯ ಸಮಯ ಕಳೆದ ನಂತರ, ಯುವಕನೊಬ್ಬ ತನ್ನ ಇಡೀ ಜೀವನ ಹೀಗೆಯೇ ಇರುತ್ತದೆ ಎಂದು ಭಾವಿಸುತ್ತಾನೆ. ಆದರೆ ಮದುವೆಯ ನಂತರದ ಜವಾಬ್ದಾರಿಗಳು ಎಲ್ಲವನ್ನೂ ಬದಲಾಯಿಸಬೇಕಾಗುತ್ತದೆ. ಅದಕ್ಕಾಗಿಯೇ ಗೆಳೆಯನ ಜೊತೆ ಸಂಬಂಧದ ನಂತರ ಬಳಿಕ ಮದುವೆಯ ಪ್ರಸ್ತಾಪ ಮಾಡಿದರೆ, ಸಂಬಂಧದಲ್ಲಿ ಮುಂದುವರಿಯುವ ಮೊದಲು ಈ ರೀತಿಯ ರಿಯಾಲಿಟಿ ಚೆಕ್ ಮಾಡುವುದು ಉತ್ತಮ.

ರಿಯಾಲಿಟಿ ಚೆಕ್ ಎಂದರೆ ನಿಮ್ಮ ಗೆಳೆಯನ ಮೇಲೆ ಕಣ್ಣಿಡುವುದು ಎಂದಲ್ಲ. ಆದರೆ ಮದುವೆಗೆ ತಯಾರಿ ನಡೆಸುತ್ತಿರುವ ಯುವಕನಿಗೆ ಮದುವೆಯಂತಹ ಮಹತ್ವದ ಜವಾಬ್ದಾರಿಗೆ ಅವನು ನಿಜವಾಗಿಯೂ ಸಿದ್ಧನಾಗಿದ್ದಾನೋ ಇಲ್ಲವೋ ಎಂದು ಕಂಡುಹಿಡಿಯಲು ಕೆಲವು ಪ್ರಶ್ನೆಗಳನ್ನು ಕೇಳಿ. ಏಕೆಂದರೆ ಮದುವೆಯು ಜೀವನದುದ್ದಕ್ಕೂ ನಿರ್ವಹಿಸಬೇಕಾದ ಸಂಬಂಧವಾಗಿದೆ. ಸಂಬಂಧದ ಸಮಯದಲ್ಲಿ ಯಾವುದೇ ಜವಾಬ್ದಾರಿ ಇರುವುದಿಲ್ಲ. ಆದರೆ ಮದುವೆಯಾದಾಗ, ಜವಾಬ್ದಾರಿ ಹೆಚ್ಚಾಗುತ್ತದೆ. ಈ ವಿಷಯದ ಬಗ್ಗೆ ಮಾತನಾಡುವ ಮೂಲಕ ಗೆಳೆಯ ಅಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧನಾಗಿದ್ದಾನೋ ಇಲ್ಲವೋ ಎಂಬುದನ್ನು ನೀವು ಖಚಿತ ಪಡಿಸಿಕೊಳ್ಳಬಹುದು.

ಮದುವೆಯ ಬಗ್ಗೆ ಆಲೋಚನೆಗಳು; ಗೆಳೆಯ ಮದುವೆ ಮಾಡಿಕೊಳ್ಳೋಣ ಎಂದ ಮೇಲೆ ಮೊದಲು ಅವನೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಅವನ ಆಲೋಚನೆಗಳನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ಹುಡುಗಿ ಮತ್ತು ಹುಡುಗ ಮದುವೆಯ ನಂತರ ವಿಭಿನ್ನ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಮದುವೆಯ ನಂತರ ಗೆಳೆಯ ತನ್ನ ಹೆಂಡತಿಯಿಂದ ಏನನ್ನು ನಿರೀಕ್ಷಿಸುತ್ತಾನೆ ಎಂಬುದನ್ನು ಕಂಡುಕೊಳ್ಳಬೇಕು. ನಿಮ್ಮ ಸ್ವಂತ ನಿರೀಕ್ಷೆಗಳು ಮತ್ತು ಆಸೆಗಳನ್ನು ಅವನಿಗೆ ವಿವರವಾಗಿ ವಿವರಿಸಿ. ಮದುವೆಯ ನಂತರ ಯಾವುದೇ ವ್ಯತ್ಯಾಸ ಆಗದಂತೆ, ಮದುವೆಗೆ ಮೊದಲು ಎಲ್ಲವನ್ನೂ ಇಬ್ಬರು ಸ್ಪಷ್ಟಪಡಿಸಬೇಕು.

ವಿವಾಹ ಜವಾಬ್ದಾರಿಗಳ ಚರ್ಚೆ; ಮದುವೆಗೆ ಮೊದಲು, ಯಾವುದೇ ಯುವಕನಿಗೆ ಮನೆಯಲ್ಲಿ ಯಾವುದೇ ಜವಾಬ್ದಾರಿಗಳು ಇರಲ್ಲ. ಆದರೆ ಮದುವೆಯ ನಂತರ ಅವನಿಗೆ ತನ್ನ ಹೆಂಡತಿ ಮತ್ತು ಕುಟುಂಬದ ಜವಾಬ್ದಾರಿಗಳು ಹೆಗಲೇರುತ್ತವೆ. ಗೆಳೆಯ ಮದುವೆಯ ಪ್ರಸ್ತಾಪ ಮಾಡಿದಾಗ ಮದುವೆಯ ನಂತರದ ಜವಾಬ್ದಾರಿಗಳಿಗೆ ಅವನು ಎಷ್ಟು ಸಿದ್ಧನಿದ್ದಾನೆ ಎಂಬುದನ್ನು ಮಾತನಾಡಿ. ಅದರಲ್ಲಿ ಪ್ರಮುಖವಾದದ್ದು ಆರ್ಥಿಕ ವೆಚ್ಚ ಅಥವಾ ಹಣ ಖರ್ಚು ಆಗುವುದು. ಒಂಟಿಯಾಗಿದ್ದಾಗ ಅಥವಾ ಬ್ಯಾಚುರಲ್ ಜೀವನದಲ್ಲಿ ಯುವಕ ತನ್ನ ಬಗ್ಗೆ ಮಾತ್ರ ಯೋಚಿಸಿರುತ್ತಾನೆ. ಆದರೆ ಮದುವೆಯ ನಂತರ ಅವನು ಇನ್ನೊಬ್ಬರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಗೆಳೆಯ ಅದಕ್ಕೆ ಸಿದ್ಧನಿದ್ದಾನೋ, ಇಲ್ಲವೋ ಎಂಬುದನ್ನು ನೀವು ಕಂಡುಕೊಳ್ಳುವುದು ಒಳ್ಳೆಯದು.

ನೀವು ಕೆಲಸ ಮಾಡುತ್ತಿದ್ದರೆ ಮತ್ತು ನಿಮ್ಮದೇ ಆದ ವೃತ್ತಿಜೀವನವನ್ನು ಹೊಂದಿದ್ದರೆ, ನಿಮ್ಮ ಗೆಳೆಯನೊಂದಿಗೆ ನಿಮ್ಮ ವೃತ್ತಿಜೀವನದ ಬಗ್ಗೆ ಚರ್ಚಿಸಿ. ಮದುವೆಯ ಬಳಿಕ ಹುಡುಗಿ ತನ್ನ ಮನೆಯ ಮೇಲೆ ಮಾತ್ರ ಗಮನಹರಿಸಬೇಕು. ಹುಡುಗಿ ತನ್ನ ವೃತ್ತಿಜೀವನದ ಮೇಲೆ ಗಮನಹರಿಸಬೇಕು ಎಂದು ಯುವಕ ಭಾವಿಸುವುದು ಸಾಮಾನ್ಯ. ಇಂತಹ ವೇಳೆ ವೃತ್ತಿಜೀವನದ ಬಗ್ಗೆ ವ್ಯತ್ಯಾಸಗಳು ಉಂಟಾಗುತ್ತವೆ. ಇದು ಮನೆಯ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ಮದುವೆಗೆ ಮೊದಲು ನಿಮ್ಮ ಕೆಲಸ ಅಥವಾ ವ್ಯವಹಾರವನ್ನು ಸ್ಪಷ್ಟವಾಗಿ ಒಬ್ಬರಿಗೊಬ್ಬರು ಹೇಳಿಕೊಳ್ಳಿ.

ಮದುವೆಯ ನಂತರ ಜೀವನದಲ್ಲಿ ಆಗುವ ಬದಲಾವಣೆಗಳ ಕುರಿತು ಚರ್ಚೆ ಮಾಡಿ; ಮದುವೆಯ ನಂತರ ಹುಡುಗಿಗೆ ಎಲ್ಲವೂ ಬದಲಾಗುತ್ತದೆ ಎಂದು ಎಲ್ಲರೂ ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ ಅದು ಹಾಗಲ್ಲ. ಮದುವೆಯ ನಂತರ ಯುವಕನು ತನ್ನ ಕುಟುಂಬದೊಂದಿಗೆ ತನ್ನದೇ ಆದ ಮನೆಯಲ್ಲಿ ವಾಸಿಸಬಹುದಾದರೂ, ಅವನ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಮದುವೆಯ ನಂತರದ ಬದಲಾವಣೆಗಳು ಮತ್ತು ಬದಲಾದ ಸಂಬಂಧಗಳ ಬಗ್ಗೆ ಯುವಕ ಏನು ಯೋಚಿಸುತ್ತಾನೆ ಎಂಬುದನ್ನು ಕಂಡುಕೊಳ್ಳಬೇಕು. ಅಲ್ಲದೆ, ಅವನು ತನ್ನ ಹೆಂಡತಿ ಮತ್ತು ಕುಟುಂಬದ ನಡುವೆ ಸಾಮರಸ್ಯವನ್ನು ಕಂಡುಕೊಳ್ಳುತ್ತಾನಾ ಎಂಬುದನ್ನು ಚರ್ಚಿಸಿ. ಮದುವೆಯ ನಂತರ ಯಾವುದೇ ವಿಷಯದ ಬಗ್ಗೆ ಮನೆಯಲ್ಲಿ ಯಾವುದೇ ಸಮಸ್ಯೆ, ಜಗಳ ಆಗದಂತೆ ಮುಂಜಾಗೃತೆ ತೆಗೆದುಕೊಳ್ಳಿ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES