SOCIAL MEDIA

Newsletter

PARTNER SITES
Select Language Select State

ಸ್ಟಾರ್‌ ಆಟಗಾರ್ತಿ ಹರ್ಮನ್‌ ಪ್ರೀತ್ ಕೌರ್ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ!

Harmanpreet Kaur Net Worth: ಕ್ರಿಕೆಟ್‌ನ ಜನಪ್ರಿಯ ತಾರೆ ಹರ್ಮನ್‌ಪ್ರೀತ್ ಕೌರ್ ಎಷ್ಟು ಕೋಟಿ ಆಸ್ತಿ ಹೊಂದಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ ಫುಲ್‌ ಡಿಟೇಲ್ಸ್‌...

Written By Chetana Devarmani
Published: Oct 06, 2026, 10:56 PM IST | Updated: Oct 06, 2026, 11:06 PM IST
Join

Harmanpreet Kaur Net Worth: ಭಾರತೀಯ ಮಹಿಳಾ ಕ್ರಿಕೆಟ್‌ನ ಜನಪ್ರಿಯ ತಾರೆ ಹರ್ಮನ್‌ ಪ್ರೀತ್ ಕೌರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಾಯಕತ್ವದ ಜವಾಬ್ದಾರಿಯಿಂದ ಹಿಂದೆ ಸರಿದಿರುವ ಅವರು, ಆಟಗಾರ್ತಿಯಾಗಿ ಮುಂದುವರಿಯಲಿದ್ದಾರೆ. ಇದರ ಬೆನ್ನಲ್ಲೇ ಅವರ ನಿವ್ವಳ ಆಸ್ತಿ, ಸಂಭಾವನೆ ಹಾಗೂ ಜೀವನಶೈಲಿಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಲಭ್ಯವಿರುವ ಮಾಧ್ಯಮ ವರದಿಗಳು ಮತ್ತು ಅಂದಾಜುಗಳ ಪ್ರಕಾರ, ಹರ್ಮನ್‌ ಪ್ರೀತ್ ಕೌರ್ ಅವರ ನಿವ್ವಳ ಆಸ್ತಿ ಸುಮಾರು ₹23 ರಿಂದ ₹25 ಕೋಟಿ ಇರಬಹುದು. ಆದರೆ ಇದು ಅಧಿಕೃತವಾಗಿ ಘೋಷಿಸಲಾದ ಮೊತ್ತವಲ್ಲ. ಅವರ ಖಾಸಗಿ ಹೂಡಿಕೆಗಳು, ಆಸ್ತಿಗಳು ಮತ್ತು ಉಳಿತಾಯದ ಸಂಪೂರ್ಣ ವಿವರಗಳು ಸಾರ್ವಜನಿಕವಾಗಿ ಲಭ್ಯವಿಲ್ಲ.

ಭಾರತದ ಮಹಿಳಾ ಕ್ರಕೆಟ್‌ ತಂಡದ ಸ್ಟಾರ್‌ ಆಟಗಾರ್ತಿ ಆಗಿರುವ ಹರ್ಮನ್‌ ಪ್ರೀತ್ ಅವರ ಆದಾಯದ ಪ್ರಮುಖ ಮೂಲ ಬಿಸಿಸಿಐ ಕೇಂದ್ರ ಗುತ್ತಿಗೆ ಆಗಿದೆ ಎಂಬುದನ್ನುಗಮನಿಸಬೇಕು. ಆದರೆ ಇದರ ಜೊತೆ ಬೇರೆ ಮೂಗಳಿಂದಲೂ ಅವರು ಆದಾಯ ಗಳಿಸುತ್ತಾರೆ.

 ಗ್ರೇಡ್-A ಆಟಗಾರ್ತಿಯಾಗಿರುವ ಅವಧಿಯಲ್ಲಿ ಹರ್ಮನ್‌ ಪ್ರೀತ್ ಕೌರ್ ವಾರ್ಷಿಕ ₹50 ಲಕ್ಷ ರಿಟೈನರ್‌ ಫೀ ಪಡೆಯುತ್ತಾರೆ. ಇದಲ್ಲದೆ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪ್ರತ್ಯೇಕ ಪಂದ್ಯ ಶುಲ್ಕವೂ ದೊರೆಯುತ್ತದೆ. ಟೆಸ್ಟ್‌ಗೆ ₹15 ಲಕ್ಷ, ಏಕದಿನ ಪಂದ್ಯಕ್ಕೆ ₹6 ಲಕ್ಷ ಮತ್ತು ಟಿ20 ಪಂದ್ಯಕ್ಕೆ ₹3 ಲಕ್ಷ ಪಂದ್ಯ ಶುಲ್ಕವನ್ನು ಹರ್ಮನ್‌ ಪ್ರೀತ ಕೌರ್‌ ಪಡೆಯುತ್ತಾರೆ. ಮಹಿಳಾ ಪ್ರೀಮಿಯರ್ ಲೀಗ್ ಕೂಡ ಅವರ ಆದಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. WPLನ ಮೊದಲ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಹರ್ಮನ್‌ಪ್ರೀತ್ ಕೌರ್ ಅವರನ್ನು ₹1.80 ಕೋಟಿ ನೀಡಿ ಖರೀದಿಸಿತ್ತು. ತಂಡದ ನಾಯಕಿಯಾಗಿ ಅವರು ಮುಂಬೈ ಇಂಡಿಯನ್ಸ್‌ಗೆ ಯಶಸ್ಸು ತಂದುಕೊಟ್ಟಿದ್ದಾರೆ.

ವಿದೇಶಿ ಲೀಗ್‌ಗಳಲ್ಲೂ ಹರ್ಮನ್‌ ಪ್ರೀತ್ ತಮ್ಮ ಛಾಪು ಮೂಡಿಸಿದ್ದಾರೆ. ಆಸ್ಟ್ರೇಲಿಯಾದ ಮಹಿಳಾ ಬಿಗ್ ಬ್ಯಾಷ್ ಲೀಗ್ ಸೇರಿದಂತೆ ವಿದೇಶಿ ಟಿ20 ಟೂರ್ನಿಗಳಲ್ಲಿ ಹರ್ಮನ್‌ ಪ್ರೀತ್ ಕೌರ್ ಅವರು ಆಡಿದ್ದಾರೆ. ಇದರಿಂದ ಸಂಭಾವನೆಯ ಜೊತೆಗೆ ಅವರ ಅಂತಾರಾಷ್ಟ್ರೀಯ ಬ್ರ್ಯಾಂಡ್ ಮೌಲ್ಯವೂ ಹೆಚ್ಚಾಗಿದೆ. ಕ್ರಿಕೆಟ್ ಹೊರತಾಗಿಯೂ ಜಾಹೀರಾತುಗಳು ಅವರ ಆದಾಯದ ಮತ್ತೊಂದು ಪ್ರಮುಖ ಮೂಲ‌ ಆಗಿದೆ ಎಂದು ತಿಳಿದುಬಂದಿದೆ. Nike, Boost ಮತ್ತು CEAT ಸೇರಿದಂತೆ ಹಲವು ಬ್ರ್ಯಾಂಡ್‌ ಗಳೊಂದಿಗೆ ಹರ್ಮನ್‌ ಪ್ರೀತ್ ಕೌರ್ ಅವರು ಪ್ರಚಾರ ಒಪ್ಪಂದಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

2017‌ ರ ವಿಶ್ವಕಪ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ ಅಜೇಯ 171 ರನ್‌ ಗಳ ಐತಿಹಾಸಿಕ ಇನ್ನಿಂಗ್ಸ್ ಹರ್ಮನ್‌ ಪ್ರೀತ್ ಕೌರ್ ಅವರನ್ನು ಜಾಗತಿಕ ಕ್ರಿಕೆಟ್‌‌ ನಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಪಡೆಯುವಂತೆ ಮಾಡಿತು. ಅಲ್ಲದೇ ವಿಶ್ವ ದರ್ಜೆ ಕ್ರಿಕೆಟ್‌ನಲ್ಲಿ ಹರ್ಮನ್‌ ಪ್ರೀತ್‌ ಹೆಸರು ಚರ್ಚೆಗೆ ಗ್ರಾಸವಾಯಿತು. 2025 ರಲ್ಲಿ ಅವರ ನಾಯಕತ್ವದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಗೆದ್ದಿದ್ದು‌ ಹರ್ಮನ್‌ ಪ್ರೀತ್‌ ಅವರ ವೃತ್ತಿಜೀವನದ ಮತ್ತೊಂದು ದೊಡ್ಡ ಸಾಧನೆಯಾಗಿದೆ. ಹೀಗಾಗಿ ಹರ್ಮನ್‌ ಪ್ರೀತ್ ಕೌರ್ ಅವರ ₹23–25 ಕೋಟಿ ಅಂದಾಜಿನ ಆಸ್ತಿ ಹಲವು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್, WPL, ವಿದೇಶಿ ಲೀಗ್‌ ಗಳು ಮತ್ತು ಜಾಹೀರಾತುಗಳಿಂದ ನಿರ್ಮಿಸಿರುವ ಆರ್ಥಿಕ ಯಶಸ್ಸಿನ ಪ್ರತಿಬಿಂಬವಾಗಿದೆ. 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES