SOCIAL MEDIA

Newsletter

PARTNER SITES
Select Language Select State

ಶುಭ್‌ಮನ್‌ ಗಿಲ್‌ಗೆ ಏನಾಯಿತು, ಟೀಮ್‌ ಇಂಡಿಯಾದ ODI ಗೆ ಹೊಸ ಕ್ಯಾಪ್ಟನ್‌.. ಯಾರಿಗೆ ಚಾನ್ಸ್‌?

ಕ್ಯಾಪ್ಟನ್‌ ಶುಭಮನ್ ಗಿಲ್ ಅವರು ಹೆಚ್ಚಿನ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ. ಗಿಲ್‌ ಏಕದಿನ ಮತ್ತು ಟೆಸ್ಟ್ ನಾಯಕರಾಗಿದ್ದು, ಎರಡೂ ಸ್ವರೂಪಗಳಲ್ಲಿ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ.

Written By Bhimappa
Published: Sep 21, 2026, 09:02 PM IST | Updated: Sep 21, 2026, 09:05 PM IST
Image Credit: File Photo
Join

India vs New Zealand: ಟೀಮ್‌ ಇಂಡಿಯಾವು ಈ ವರ್ಷದ ಅಕ್ಟೋಬರ್ ಮತ್ತು ಡಿಸೆಂಬರ್‌ವರೆಗೆ ಒಟ್ಟು 5 T20I, 5 ODI ಮತ್ತು 2 ಟೆಸ್ಟ್ ಪಂದ್ಯಗಳ ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದ ಸಮಯದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಈ ವೇಳಾಪಟ್ಟಿಯಿಂದ ಕೆಲವು ಆಟಗಾರರು ತೊಂದರೆಗಳನ್ನು ಎದುರಿಸಬಹುದು. ಏಕದಿನ ಮತ್ತು ಟೆಸ್ಟ್ ಸರಣಿ ನಡುವೆ ಕೇವಲ ನಾಲ್ಕೇ ನಾಲ್ಕು ದಿನಗಳ ಅಂತರವಿದೆ. ಇದರಿಂದ ಟೀಮ್‌ ಇಂಡಿಯಾದ ಅಭ್ಯಾಸಕ್ಕೆ ಸಮಯ ಸಿಗುವುದಿಲ್ಲ. ಏಕದಿನ ಮತ್ತು ಟೆಸ್ಟ್ ಎರಡನ್ನೂ ಆಡುವ ಕೆಲವು ಆಟಗಾರರು ತಂಡದಲ್ಲಿದ್ದಾರೆ. ಈ ಆಟಗಾರರಿಗೆ, ನ್ಯೂಜಿಲೆಂಡ್ ಪ್ರವಾಸವು ಅಗ್ನಿ ಪರೀಕ್ಷೆ ಆಗುವುದಂತೂ ಖಚಿತ.

ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಮೇಲೆ ಟೀಮ್‌ ಇಂಡಿಯಾ ಸಂಪೂರ್ಣವಾಗಿ ಗಮನ ಹರಿಸುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮೇಲೂ ಟೀಮ್‌ ಇಂಡಿಯಾ ಕಣ್ಣಿಟ್ಟಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕದಲ್ಲಿ ಭಾರತ ತಂಡವು ಅಂತಹ ಸ್ಥಾನವೇನು ಪಡೆದುಕೊಂಡಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಭರವಸೆಯನ್ನು ಜೀವಂತವಾಗಿಡಲು, ಟೀಮ್‌ ಇಂಡಿಯಾ ಎಷ್ಟೇ ಕಷ್ಟವಾದರೂ ನ್ಯೂಜಿಲೆಂಡ್ ವಿರುದ್ಧದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯೂ ಏಕದಿನ ಸರಣಿಗಿಂತ ಹೆಚ್ಚು..ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.

ಈ ಮಹತ್ವದ ಸರಣಿಯ ಸಮಯದಲ್ಲಿ ಕ್ಯಾಪ್ಟನ್‌ ಶುಭಮನ್ ಗಿಲ್ ಅವರು ಹೆಚ್ಚಿನ ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ. ಗಿಲ್‌ ಏಕದಿನ ಮತ್ತು ಟೆಸ್ಟ್ ನಾಯಕರಾಗಿದ್ದು, ಎರಡೂ ಸ್ವರೂಪಗಳಲ್ಲಿ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ. ವಿದೇಶದಲ್ಲಿ ಟೆಸ್ಟ್ ಸರಣಿಗೆ ಮುನ್ನ ತಯಾರಿಯ ಮಹತ್ವವನ್ನು ಶುಭಮನ್ ಆಗಾಗ್ಗೆ ಒತ್ತಿ ಹೇಳುತ್ತಲೇ ಬಂದಿದ್ದಾರೆ. ಗಿಲ್‌ ಅವರು ನ್ಯೂಜಿಲೆಂಡ್ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳನ್ನು ಬಿಟ್ಟು ಟೆಸ್ಟ್ ಸರಣಿಗೆ ತಯಾರಿ ನಡೆಸುವತ್ತ ಗಮನ ಹರಿಸಲಿದ್ದಾರೆ ಎನ್ನಲಾಗಿದೆ.

ಶುಭಮನ್ ಗಿಲ್‌ ನಾನು ಒಬ್ಬಂಟಿಯಲ್ಲ. ನನ್ನೊಂದಿಗೆ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್‌ ಕೃಷ್ಣ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಕೂಡ ಇರಲಿದ್ದಾರೆ. ಈ ಎಲ್ಲ ಆಟಗಾರರು ಟೆಸ್ಟ್‌ ಪಂದ್ಯಗಳಿಗೆ ತಯಾರಿ ನಡೆಸಲು ಕೊನೆಯ ಎರಡು ಏಕದಿನ ಪಂದ್ಯಗಳನ್ನು ಬಿಡುವ ಸಾಧ್ಯತೆಯಿದೆ ಎಂದಿದ್ದಾರೆ. ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಟೀಮ್‌ ಇಂಡಿಯಾದ ಒಡಿಐ ನಾಯಕ ಯಾರು ಆಗುತ್ತಾರೆ?.  

ಟಿ20 ತಂಡದ ನಾಯಕ ಆಗಿರುವ ಶ್ರೇಯಸ್ ಅಯ್ಯರ್ ಅವರು ಟೀಮ್‌ ಇಂಡಿಯಾದ ಏಕದಿನ ತಂಡದ ಉಪನಾಯಕ ಸ್ಥಾನ ಕೂಢ ತುಂಬಿದ್ದಾರೆ. ಟೆಸ್ಟ್ ತಯಾರಿಯಿಂದಾಗಿ ಶುಭ್‌ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡರೆ, ಅವರ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು. ಭಾರತದ ಇಬ್ಬರು ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಶ್ರೇಯಸ್‌ ಅಯ್ಯರ್‌ಗೆ ಈ ಸಂದರ್ಭದಲ್ಲಿ ಸಹಾಯ ಮಾಡಬಹುದು ಎನ್ನಲಾಗುತ್ತಿದೆ.

ದೊಡ್ಡ ಪ್ರಶ್ನೆಯೆಂದರೆ ಇಷ್ಟೊಂದು ಕೋಲಾಹಲಕ್ಕೆ ಕಾರಣವಾದ ಇಂತಹ ವೇಳಾಪಟ್ಟಿಯನ್ನು ಏಕೆ ಮಾಡಲಾಯಿತು?, ಟೀಮ್‌ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದ ಸಮಯದಲ್ಲಿ ಮೊದಲು ಏಕದಿನ ಸರಣಿಯನ್ನು ಮತ್ತು ನಂತರ ಟಿ20ಐ ಪಂದ್ಯಗಳನ್ನು ಆಡಿದ್ದರೆ, ಈ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ. ಟಿ20ಐ ತಂಡದಲ್ಲಿ ಏಕದಿನ ಮತ್ತು ಟೆಸ್ಟ್ ಎರಡನ್ನೂ ಆಡುವ ಆಟಗಾರರು ಬಹಳ ಕಡಿಮೆ ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಮೊದಲು ಏಕದಿನ ಸರಣಿಯನ್ನು ಆಡಿದ ಆಟಗಾರರಿಗೆ ಟೆಸ್ಟ್‌ಗಳಿಗೆ ತಯಾರಿ ನಡೆಸಲು ಸಾಕಷ್ಟು ಸಮಯ ಸಿಗುತ್ತಿತ್ತು. ಎಲ್ಲೋ, ಬಿಸಿಸಿಐ ಈ ತಪ್ಪನ್ನು ಮಾಡಿದೆ ಎಂದು ಹೇಳಲಾಗುತ್ತಿದೆ.

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES