SOCIAL MEDIA

Newsletter

PARTNER SITES
Select Language Select State

RCB ಪರ ಮೊದಲ ಸೆಂಚುರಿ ಸಿಡಿಸಿದ್ದು ಯಾರು ಗೊತ್ತಾ? ಈ ಕನ್ನಡಿಗನೇ ಆ ದಾಖಲೆ ವೀರ!

who was the first player to score century against RCB: RCB ಪರ ಮೊದಲ ಸೆಂಚುರಿ ಸಿಡಿಸಿದ್ದು ಯಾರು ಎಂದು ತಿಳಿಯಲು ಈ ಸ್ಟೋರಿ ಓದಿ,

Written By Ramya. R. Gowda
Published: Nov 23, 2026, 17:12 IST | Updated: Nov 23, 2026, 17:26 IST
Join

who was the first player to score century against RCB: ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿಶೇಷ ಸ್ಥಾನವಿದೆ. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಸೇರಿದಂತೆ ಹಲವು ದಿಗ್ಗಜ ಆಟಗಾರರು ಆರ್‌ಸಿಬಿ ಪರ ಆಡಿದ್ದಾರೆ. ಆದರೆ ಆರ್‌ಸಿಬಿ ತಂಡದ ಪರ ಮೊದಲ ಶತಕ ಸಿಡಿಸಿದ ಕೀರ್ತಿ ಮಾತ್ರ ಕನ್ನಡಿಗ ಮನೀಶ್ ಪಾಂಡೆಗೆ ಸಲ್ಲುತ್ತದೆ. 2009ರ ಐಪಿಎಲ್‌ನಲ್ಲಿ ಈ ಕನ್ನಡಿಗ ಬ್ಯಾಟ್‌ನಿಂದ ಸಿಡಿದ ಶತಕ ಇಂದಿಗೂ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ವಿಶೇಷ ನೆನಪು. ಹಾಗಾದರೆ ಆ ಐತಿಹಾಸಿಕ ಇನ್ನಿಂಗ್ಸ್ ಹೇಗಿತ್ತು? ನೋಡೋಣ ಈ ವಿಶೇಷ ವರದಿ.

ಐಪಿಎಲ್ ಅಂಗಳದಲ್ಲಿ ಆರ್‌ಸಿಬಿ ಅಂದ್ರೆ ಮೊದಲು ನೆನಪಾಗೋದು ವಿರಾಟ್ ಕೊಹ್ಲಿ.. ಕ್ರಿಸ್ ಗೇಲ್.. ಎಬಿ ಡಿವಿಲಿಯರ್ಸ್.. ಆದರೆ ಈ ದಿಗ್ಗಜರಿಗೂ ಮುನ್ನ ಆರ್‌ಸಿಬಿ ಪರ ಶತಕದ ಖಾತೆ ತೆರೆದಿದ್ದು ಮಾತ್ರ ನಮ್ಮ ಕನ್ನಡಿಗ ಮನೀಶ್ ಪಾಂಡೆ.

ಹೌದು.. 2009ರ ಐಪಿಎಲ್ ಟೂರ್ನಿ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಆವೃತ್ತಿಯ ಐಪಿಎಲ್‌ನಲ್ಲಿ ಮನೀಶ್ ಪಾಂಡೆ ಹೊಸ ಇತಿಹಾಸ ಬರೆದಿದ್ದರು. ಡೆಕ್ಕನ್ ಚಾರ್ಜರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಮನೀಶ್, ಎದುರಾಳಿ ಬೌಲರ್‌ಗಳ ಬೆವರಿಳಿಸಿದ್ದರು.ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಮನೀಶ್ ಪಾಂಡೆ, ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ರನ್ ಮಳೆ ಸುರಿಸಿದ್ದರು. ಕೇವಲ 67 ಎಸೆತಗಳಲ್ಲಿ ಅಜೇಯ 114 ರನ್ ಸಿಡಿಸಿ ಮಿಂಚಿದ್ದರು. ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿದ್ದವು.

ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಮನೀಶ್ ತಮ್ಮದಾಗಿಸಿಕೊಂಡಿದ್ದರು. ಅಷ್ಟೇ ಅಲ್ಲ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮೊದಲ ಶತಕ ದಾಖಲಿಸಿದ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದರು.

ಮನೀಶ್ ಪಾಂಡೆ ಅವರ ಈ ಅಮೋಘ ಇನ್ನಿಂಗ್ಸ್ ನೆರವಿನಿಂದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತ್ತು. ಬಳಿಕ ಎದುರಾಳಿ ಡೆಕ್ಕನ್ ಚಾರ್ಜರ್ಸ್ ತಂಡವನ್ನು 82 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಆರ್‌ಸಿಬಿ 88 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.

ಅಂದು ಮನೀಶ್ ಬಾರಿಸಿದ ಆ ಶತಕ ಕೇವಲ ವೈಯಕ್ತಿಕ ಸಾಧನೆಯಾಗಿರಲಿಲ್ಲ. ಆರ್‌ಸಿಬಿ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ ಇನ್ನಿಂಗ್ಸ್ ಆಗಿತ್ತು.ಮುಂದೆ ಆರ್‌ಸಿಬಿ ಪರ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಸೇರಿದಂತೆ ಅನೇಕ ಆಟಗಾರರು ಶತಕಗಳ ಸುರಿಮಳೆಗೈದರು. ಆದರೆ ಈ ಸೆಂಚುರಿಗಳ ಇತಿಹಾಸಕ್ಕೆ ಮೊದಲ ಮುನ್ನುಡಿ ಬರೆದಿದ್ದು ಮಾತ್ರ ಮನೀಶ್ ಪಾಂಡೆ.

ಕನ್ನಡಿಗನೊಬ್ಬ ಆರ್‌ಸಿಬಿ ಇತಿಹಾಸದಲ್ಲಿ ಬರೆದ ಈ ದಾಖಲೆ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.ಒಟ್ಟಿನಲ್ಲಿ ಆರ್‌ಸಿಬಿ ಇತಿಹಾಸದಲ್ಲಿ ಮೊದಲ ಸೆಂಚುರಿ ಅಂದಾಕ್ಷಣ ನೆನಪಾಗುವ ಹೆಸರು ಮನೀಶ್ ಪಾಂಡೆ. ಕನ್ನಡಿಗನ ಈ ಐತಿಹಾಸಿಕ ಸಾಧನೆಗೆ ಹ್ಯಾಟ್ಸ್‌ಆಫ್ ಹೇಳಲೇಬೇಕು.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES