SOCIAL MEDIA

Newsletter

PARTNER SITES
Select Language Select State

Ind vs Wi; ‌ಭಾರತದ ವಿರುದ್ಧ ಮೂವರು ಬ್ಯಾಟರ್ಸ್‌ ಸೆಂಚುರಿ.. ಕೆರಿಬಿಯನ್‌ ಟೀಮ್ ಬಿಗ್‌ ಟಾರ್ಗೆಟ್‌ ಸೆಟ್‌

ವೆಸ್ಟ್‌ ಇಂಡೀಸ್‌ ತಂಡದ ಓಪನರ್‌ ಜಾನ್‌ ಕಾಂಪ್ಬೆಲ್‌, ನಾಯಕ ಕಮ್‌ ವಿಕೆಟ್‌ ಕೀಪರ್‌ ಸಾಯಿ ಹೋಪ್‌ ಮತ್ತು ಅಮೀರ್‌ ಜಂಗೂ ಶತಕ ಸಿಡಿಸಿ ಇಶೇಷ ದಾಖಲೆಗೆ ಕಾರಣರಾಗಿದ್ದಾರೆ.

Written By Bhimappa
Published: Sep 30, 2026, 06:43 PM IST | Updated: Sep 30, 2026, 06:52 PM IST
Image Credit: Ind_vs_Wi_ODI
Join

West Indies set target of 406 runs for Team India: ಟೀಮ್‌ ಇಂಡಿಯಾ ವಿರುದ್ಧ ವೆಸ್ಟ್‌ ಇಂಡೀಸ್‌ ತಂಡದ ಓಪನರ್‌ ಜಾನ್‌ ಕಾಂಪ್ಬೆಲ್‌, ನಾಯಕ ಕಮ್‌ ವಿಕೆಟ್‌ ಕೀಪರ್‌ ಸಾಯಿ ಹೋಪ್‌ ಮತ್ತು ಅಮೀರ್‌ ಜಂಗೂ ಶತಕ ಸಿಡಿಸಿ ಇಶೇಷ ದಾಖಲೆಗೆ ಕಾರಣರಾಗಿದ್ದಾರೆ. ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಕೆರಿಬಿಯನ್‌ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಸತಕ ಬಾರಿಸೋ ಮೂಲಕ ಐತಿಹಾಸಿಕ ದಾಖಲೆಗೆ ಕಾರಣರಾಗಿದ್ದಾರೆ. ಇದರ ಜೊತೆಗೆ ಬೃಹತ್‌ ರನ್‌ಗಳ ಟಾರ್ಗೆಟ್‌ ಅನ್ನು ಟೀಮ್‌ ಇಂಡಿಯಾಗೆ ವೆಸ್ಟ್‌ ಇಂಡೀಸ್‌ ತಂಡ ನೀಡಿದೆ. ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 406 ರನ್‌ಗಳ ಟಾರ್ಗೆಟ್‌ ಅನ್ನು ಟೀಮ್‌ ಇಂಡಿಯಾಗೆ ಸೆಟ್ ಮಾಡಿದೆ.

ಅಸ್ಸಾಂ ಗುವಾಹಟಿಯ ಬರ್ಸಪುರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್‌ ಇಂಡಿಯಾದ ಕ್ಯಾಪ್ಟನ್‌ ಶುಭ್‌ಮನ್‌ ಗಿಲ್‌ ಅವರು ಮೊದಲ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಎದುರಾಳಿ ವೆಸ್ಟ್‌ ಇಂಡೀಸ್‌ ಅನ್ನು ಬ್ಯಾಟಿಂಗ್‌ಗೆ ಆಹ್ವಾನ ಮಾಡಿದರು. ಓಪನರ್‌ಗಳಾಗಿ ಕ್ರೀಸ್‌ಗೆ ಆಗಮಿಸಿದ ಜಾನ್‌ ಕ್ಯಾಪ್ಬೆಲ್‌ ಮತ್ತು ಕೀಸಿ ಕಾರ್ಟಿ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳುತ್ತಿದ್ದರು. ಈ ವೇಳೆ ಕೀಸಿ ಕಾರ್ಟಿ ಅವರು ಪ್ರಸಿದ್ಧ್‌ ಕೃಷ್ಣ ಅವರ ಬೌಲಿಂಗ್‌ನಲ್ಲಿ ಕೇವಲ 9 ರನ್‌ಗೆ ಔಟಾದರು.

ಆದರೆ ಇನ್ನೊಂದೆಡೆ ಬ್ಯಾಟಿಂಗ್‌ ಮಾಡುತ್ತಿದ್ದ ಜಾನ್‌ ಕ್ಯಾಪ್ಬೆಲ್‌ ಅವರಿಗೆ ನಾಯಕ ಮತ್ತು ವಿಕೆಟ್‌ ಕೀಪರ್‌ ಆದಂತಹ ಸಾಯಿ ಹೋಪ್‌ ಅವರು ಜೋಡಿಯಾದರು. ಈ ಇಬ್ಬರು ಸೇರಿ ಟೀಮ್‌ ಇಂಡಿಯಾ ಬೌಲರ್‌ಗಳಿಗೆ ಸರಿಯಾಗಿ ಬೆಂಡೆತ್ತಿದರು. ಬಂದ ಬಾಲ್‌ ಅನ್ನು ಬಂದಾಗೆ ಬೌಂಡರಿಗೆ ಕಳುಹಿಸುತ್ತಿದ್ದರು. ಇದರಲ್ಲಿ ಜಾನ್‌ ಕ್ಯಾಪ್ಬೆಲ್‌ ಅವರು ಬ್ಯಾಟಿಂಗ್‌ ಆರ್ಭಟ ಜೋರಾಗಿತ್ತು. ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ ಎಂದರೆ ಜಾನ್‌ ಕ್ಯಾಂಪ್‌ಬೆಲ್‌ ಬ್ಯಾಟಿಂಗ್‌ ಆರ್ಭಟ ಹೇಗಿತ್ತು ಎಂಬುದು ನಿಮಗೆ ಅರ್ಥವಾಗಬೇಕು. ಪಂದ್ಯದಲ್ಲಿ 68 ಎಸೆತಗಳನ್ನು ಎದುರಿಸಿದ ಜಾನ್‌ ಕ್ಯಾಂಪ್ಬೆಲ್‌ ಅವರು 9 ಬೌಂಡರಿಗಳನ್ನು ಮತ್ತು 5 ಅಮೋಘವಾದ ಬಿಗ್‌ ಸಿಕ್ಸರ್‌ಗಳಿಂದ 101 ರನ್‌ ಗಳಿಸಿ ಔಟಾದರು.

ಜಾನ್‌ ಕ್ಯಾಂಪ್ಬೆಲ್‌ ಔಟ್‌ ಆಗಿದ್ದಾರೆ ಎಂದು ನೆಮ್ಮದಿ ನಿಟ್ಟುಸಿರು ಬಿಡುತ್ತಿದ್ದಂತೆ ಸಾಯಿ ಹೋಪ್‌ ಬ್ಯಾಟಿಂಗ್‌ ಅಬ್ಬರ ಶುರುವಾಯಿತು. ಇದು ಭಾರತದ ಬೌಲರ್‌ಗಳಿಗೆ ಇನ್ನಷ್ಟು ಕಠಿಣ ಎನಿಸಿತು. ಕ್ಯಾಪ್ಟನ್‌ ಸಾಯಿ ಹೋಪ್‌ 94 ಎಸೆತಗಳನ್ನು ಎದುರಿಸಿ ಇದರಲ್ಲಿ 8 ಮನಮೋಹಕವಾದ ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಳಿಂದ 104 ರನ್‌ ಚಚ್ಚಿದರು. ಸಾಯಿ ಹೋಪ್‌ ಬ್ಯಾಟಿಂಗ್‌ ವೇಳೆ ಇನ್ನಷ್ಟು ರನ್‌ ವೇಗ ಪಡೆಯಿತು. 104 ರನ್‌ ಗಳಿಸಿ ಆಡುವಾಗ ಕುಲ್‌ದೀಪ್‌ ಯಾದವ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ಕೊಟ್ಟು ಕ್ರೀಸ್‌ನಿಂದ ನಿರ್ಗಮಿಸಿದರು.

ಈ ಇಬ್ಬರು ಔಟಾದರು ಎನ್ನುವಷ್ಟರಲ್ಲಿ ಅವಾಗಲೇ ಕ್ರೀಸ್‌ನಲ್ಲಿ ಅಮೀರ್‌ ಜಂಗೂ ತನ್ನ ರಣಾರ್ಭಟ ಶುರು ಮಾಡಿ ಬಿಟ್ಟಿದ್ದನು. ಬೌಲರ್‌ಗಳ ಮೇಲೆ ದಂಡೆತ್ತಿ ಬಂದ ಜಂಗೂ ಮೈದಾನದ ಮೂಲೆ ಮೂಲೆಗೂ ಬಾಲ್‌ ಕಳಿಹಿಸಿದರು. ಅಮೀರ್‌ ಜಂಗೂ ಸ್ಪೆಷಲ್‌ ಎಂದರೆ ಈ ಹಿಂದೆ ಸೆಂಚುರಿ ಬಾರಿಸಿದ ಇಬ್ಬರಿಗಿಂತಲೂ ಅಧಿಕ ರನ್‌ಗಳನ್ನು ಹೊಡೆದರು. ಶತಕ ಬಾರಿಸಿದ ಅಮೀರ್‌ ಜಂಗೂ 148.05 ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದರು. ಪಂದ್ಯದಲ್ಲಿ ಒಟ್ಟು 77 ಎಸೆತಗಳನ್ನು ಆಡಿದ ಅಮೀರ್‌ ಜಂಗೂ 13 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಮೇತ 114 ರನ್‌ಗಳನ್ನು ಗಳಿಸಿದರು. ಈ ಮೂವರ ಸೆಂಚುರಿಗಳ ಆಟದಿಂದ ವೆಸ್ಟ್‌ ಇಂಡೀಸ್‌ ತಂಡ ಬೃಹತ್‌ ಮೊತ್ತದತ್ತ ಮುನ್ನುಗ್ಗಿತು. ಕಳೆದ ಪಂದ್ಯದಲ್ಲಿ 296 ರನ್‌ ಬಾರಿಸಿದ್ದ ಇವರು ಈ ಪಂದ್ಯದಲ್ಲಿ ಬರೋಬ್ಬರಿ 405 ರನ್‌ಗಳನ್ನು ಗಳಿಸಿ ದೊಡ್ಡ ಸವಾಲನ್ನು ಟೀಮ್‌ ಇಂಡಿಯಾ ಮುಂದೆ ಇಟ್ಟಿದ್ದಾರೆ.

ಈ ಹಿಂದೆ 2015 ರಲ್ಲಿ ಟೀಮ್‌ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಏಕದಿನದ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಶತಕಗಳನ್ನು ಬಾರಿಸಿ ದಾಖಲೆ ಬರೆದಿದ್ದರು. ಇದಾದ ಮೇಲೆ ಇದೀಗ ವೆಸ್ಟ್‌ ಇಂಡೀಸ್‌ ತಂಡದ ಮೂವರು ಬ್ಯಾಟರ್‌ಗಳು ಭಾರತದ ವಿರುದ್ಧ ಶತಕಗಳನ್ನು ಗಳಿಸಿದ್ದಾರೆ. ಇದೊಂದು ಐತಿಹಾಸಿಕ ದಾಖಲೆ ಆಗಿದೆ. ಭಾರತದ ವಿರುದ್ಧ ಆಡಿದ ಏಕದಿನ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ವೆಸ್ಟ್‌ ಇಂಡೀಸ್‌ ವಿಶೇಷವಾದ ದಾಖಲೆಯನ್ನು ಬರೆದಿದೆ. ಇನ್ನು ಭಾರತದ ವಿರುದ್ಧದ ವೆಸ್ಟ್‌ ಇಂಡೀಸ್‌ ಪರವಾಗಿ ಅತಿ ವೇಗದ ಶತಕ ಬಾರಿಸಿದ ಮೊದಲ ಬ್ಯಾಟರ್‌ ಜಾನ್‌ ಕ್ಯಾಪ್ಬೆಲ್‌ ಆಗಿದ್ದಾರೆ. ಜಾನ್‌ ಕ್ಯಾಪ್ಬೆಲ್‌ 65 ಎಸೆತಗಳಲ್ಲಿ ಶತಕ ಬಾರಿಸಿದರೆ ಅಮೀರ್‌ ಜಂಗೂ 70 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದಾರೆ. ಇದರ ಜೊತೆಗೆ ಭಾರತ ತಂಡದ ಬೌಲರ್‌ ಗುರ್ನೂರ್‌ ಬ್ರಾರ್‌ 96 ರನ್‌ಗಳನ್ನು ನೀಡಿ ಅತ್ಯಂತ ದುಬಾರಿ ಬೌಲರ್‌ ಎನಿಸಿಕೊಂಡಿದ್ದಾರೆ.

ಭಾರತದ ವಿರುದ್ಧ ಅತ್ಯಧಿಕ ರನ್‌ ಗಳಿಸಿದ ತಂಡ

2015 ರಲ್ಲಿ ವಾಂಖೆಡೆಯಲ್ಲಿ ದಕ್ಷಿಣ ಆಫ್ರಿಕಾ 438
2009 ರಲ್ಲಿ ರಾಜ್‌ಕೋಟ್‌ನಲ್ಲಿ ಶ್ರೀಲಂಕಾ 411
2026 ರಲ್ಲಿ ಗುವಾಹಟಿಯಲ್ಲಿ ವೆಸ್ಟ್‌ ಇಂಡೀಸ್‌ 405
2020 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ 389 
2026 ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ 387 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES