Ind vs Wi; ಏಕದಿನ ಪಂದ್ಯಕ್ಕೂ ಮೊದಲೇ ಬಿಗ್ ಶಾಕ್.. ಆಟಗಾರರ ಸಂಬಳ ಶೇ. 25 ರಷ್ಟು ಕಟ್
ದೇಶೀಯ ಆಟಗಾರರ ಒಪ್ಪಂದದ ಅವಧಿ ಏಳು ತಿಂಗಳಿಗೆ ಇಳಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಆಟಗಾರರ ಒಪ್ಪಂದವು 1 ವರ್ಷ ಆಗಿದೆ. ಇದು ಮಾತ್ರವಲ್ಲದೆ, ಪುರುಷರ ಸೂಪರ್ 50 ಟೂರ್ನಮೆಂಟ್ ಮತ್ತು ಮಹಿಳಾ ಟಿ20 ಬ್ಲೇಜ್ ಅನ್ನು ಕೂಡ ನಿಲ್ಲಿಸಲಾಗಿದೆ.
Ind vs Wi ODI, West Indies players salaries: ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 27 ರ ಭಾನುವಾರ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಮತ್ತು ಅಂತಿಮ ಏಕದಿನ ಪಂದ್ಯ ಅಕ್ಟೋಬರ್ 3 ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಈ ಏಕದಿನ ಸರಣಿಗೂ ಮೊದಲೇ ವೆಸ್ಟ್ ಇಂಡೀಸ್ ತಂಡದ ಬ್ಯಾಡ್ ನ್ಯೂಸ್‌ವೊಂದು ಬಹಿರಂಗಗೊಂಡಿದೆ. ಆರ್ಥಿಕ ಬಿಕ್ಕಟ್ಟಿನಿಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ತನ್ನ ತಂಡದ ಆಟಗಾರರ ಕೇಂದ್ರ ಒಪ್ಪಂದದ ವೇತನದಲ್ಲಿ ಶೇಕಡಾ 25 ರಷ್ಟು ಸಂಬಳ ಕಡಿತ ಮಾಡುವುದಾಗಿ ತಿಳಿಸಿದೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 27 ಅಂದರೆ ನಾಳೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದಕ್ಕಿಂತ ಮೊದಲೇ ವೆಸ್ಟ್ ಇಂಡೀಸ್ ಆಟಗಾರರ ಸಂಬಳದಲ್ಲಿ ಶೇಕಡಾ 25 ರಷ್ಟು ಸಂಬಳ ಕಡಿತ ಮಾಡುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ. ದೇಶೀಯ ಆಟಗಾರರ ಒಪ್ಪಂದದ ಅವಧಿಯನ್ನು ಏಳು ತಿಂಗಳುಗಳಿಗೆ ಇಳಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಆಟಗಾರರ ಒಪ್ಪಂದವು 12 ತಿಂಗಳು ಅಂದರೆ 1 ಆಗಿದೆ. ಇದು ಮಾತ್ರವಲ್ಲದೆ, ಪುರುಷರ ಸೂಪರ್ 50 ಟೂರ್ನಮೆಂಟ್ ಮತ್ತು ಮಹಿಳಾ ಟಿ 20 ಬ್ಲೇಜ್ ಅನ್ನು ಕೂಡ ನಿಲ್ಲಿಸಲಾಗಿದೆ. ಮುಂದೆ ಆಗುವ ಖರ್ಚು ಅನ್ನು ಉಳಿಸಲು ಹೀಗೆ ಮಾಡಲಾಗುತ್ತಿದೆ. ತಂಡ ಎದುರಿಸುತ್ತಿರುವ ಆರ್ಥಿಕ ಮತ್ತು ಇತರ ಸವಾಲುಗಳನ್ನು ಎದುರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ ಎನ್ನಲಾಗಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಈ ಮೊದಲಿನಿಂದಲೂ ಕೆಲವೊಮ್ಮೆ ಹೊರ ಬಂದಿದೆ. ಅದರಂತೆ ಈ ಸಲವೂ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ವೆಸ್ಟ್ ಇಂಡೀಸ್ ಆಟಗಾರರ ಸಂಘ ಮತ್ತು ಆಟಗಾರರ ಸಹಕಾರದ ಮನೋಭಾವವನ್ನು ನಾವು ಪ್ರಶಂಸಿಸುತ್ತೇವೆ ಎಂದು CWI ಮುಖ್ಯ ಕಾರ್ಯನಿರ್ವಾಹಕ ಕ್ರಿಸ್ ಡೆಹ್ರಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಇದು ಸೂಕ್ತ ಪರಿಸ್ಥಿತಿಯಲ್ಲದಿದ್ದರೂ ಆರ್ಥಿಕ ಸ್ಥಿರತೆಯತ್ತ ಇದು ಅಗತ್ಯವಾದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ. ದೇಶೀಯ ಪಂದ್ಯಾವಳಿಗಳಿಗೆ ಪ್ರಯಾಣ ಮತ್ತು ಹೋಟೆಲ್‌ಗಳ ವೆಚ್ಚವು ಮಂಡಳಿಯ ಮೇಲಿನ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿದೆ. ಐಸಿಸಿಯಿಂದ ಅನುಮೋದಿಸಲಾದ 16 ಮಿಲಿಯನ್ ಯುಎಸ್ ಡಾಲರ್ ಅಥವಾ 153 ಕೋಟಿ ರೂಪಾಯಿ ಸಾಲವನ್ನು ಪಡೆಯಲು ಕ್ರಿಕೆಟ್ ವೆಸ್ಟ್ ಇಂಡೀಸ್ ಕೆಲವು ಗುರಿಗಳನ್ನು ಪೂರೈಸಬೇಕಾಗುತ್ತದೆ ಎಂದು ಹೇಳಲಾಗಿದೆ.
ವಾಸ್ತವವಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಕಳೆದ 15 ವರ್ಷಗಳಲ್ಲಿ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ 80 ಮಿಲಿಯನ್ ಯುಎಸ್ ಡಾಲರ್‌ಗಳಿಗೂ ಹೆಚ್ಚು ಖರ್ಚು ಮಾಡಿದೆ. ಆದರೆ ಆ ವಿಮಾನಯಾನ ಸಂಸ್ಥೆಗಳಿಂದ ಯಾವುದೇ ಪ್ರಾಯೋಜಕತ್ವವನ್ನು ಪಡೆಯಲಿಲ್ಲ. ಈ ಒತ್ತಡ ಮತ್ತು ಅದು ಉಂಟುಮಾಡಿದ ಭಾರಿ ಆರ್ಥಿಕ ನಷ್ಟದಿಂದ ಉಂಟಾದ ತಕ್ಷಣದ ನಗದು ಕೊರತೆಯನ್ನು ನಾವು ಎದುರಿಸಬೇಕಾಗಿದೆ ಎಂದು ಹೆಡರಿಂಗ್ ಹೇಳಿದ್ದಾರೆ.
ಅಮಾನತುಗೊಂಡ ಪಂದ್ಯಾವಳಿಯನ್ನು ಬದಲಿಸಲು 2028ರ LA ಒಲಿಂಪಿಕ್ಸ್‌ಗೆ ತಂಡವನ್ನು ಆಯ್ಕೆ ಮಾಡಲು CWI ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಆದರೆ ಅಮೆರಿಕದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ವೆಸ್ಟ್ ಇಂಡೀಸ್ ಒಂದು ತಂಡವಾಗಿ ಆಡಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ದೇಶವು ಪ್ರತ್ಯೇಕವಾಗಿ ಭಾಗವಹಿಸಬೇಕಾಗುತ್ತದೆ.
ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ ಪಂದ್ಯ: ಭಾನುವಾರ, ಸೆಪ್ಟೆಂಬರ್ 27, ತಿರುವನಂತಪುರಂ
ಎರಡನೇ ಏಕದಿನ ಪಂದ್ಯ: ಬುಧವಾರ, ಸೆಪ್ಟೆಂಬರ್ 30, ಗುವಾಹಟಿ
ಮೂರನೇ ಏಕದಿನ ಪಂದ್ಯ, ಶನಿವಾರ, ಅಕ್ಟೋಬರ್ 3, ಹೊಸ ಚಂಡೀಗಢ