• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /Ind vs Wi; ಏಕದಿನ ಪಂದ್ಯಕ್ಕೂ ಮೊದಲೇ ಬಿಗ್‌ ಶಾಕ್..‌ ಆಟಗಾರರ ಸಂಬಳ ಶೇ. 25 ರಷ್ಟು ಕಟ್‌

Ind vs Wi; ಏಕದಿನ ಪಂದ್ಯಕ್ಕೂ ಮೊದಲೇ ಬಿಗ್‌ ಶಾಕ್..‌ ಆಟಗಾರರ ಸಂಬಳ ಶೇ. 25 ರಷ್ಟು ಕಟ್‌

ದೇಶೀಯ ಆಟಗಾರರ ಒಪ್ಪಂದದ ಅವಧಿ ಏಳು ತಿಂಗಳಿಗೆ ಇಳಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಆಟಗಾರರ ಒಪ್ಪಂದವು 1 ವರ್ಷ ಆಗಿದೆ. ಇದು ಮಾತ್ರವಲ್ಲದೆ, ಪುರುಷರ ಸೂಪರ್ 50 ಟೂರ್ನಮೆಂಟ್ ಮತ್ತು ಮಹಿಳಾ ಟಿ20 ಬ್ಲೇಜ್ ಅನ್ನು ಕೂಡ ನಿಲ್ಲಿಸಲಾಗಿದೆ.

Written ByBhimappa
Published: Sep 26, 2026, 06:32 PM IST|Updated: Sep 26, 2026, 06:36 PM IST
joinshare
Ind vs Wi; ಏಕದಿನ ಪಂದ್ಯಕ್ಕೂ ಮೊದಲೇ ಬಿಗ್‌ ಶಾಕ್..‌ ಆಟಗಾರರ ಸಂಬಳ ಶೇ. 25 ರಷ್ಟು ಕಟ್‌
Image Credit: Ind_vs_Wi_ODI

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Ind vs Wi ODI, West Indies players salaries: ಟೀಮ್‌ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ಮೊದಲ ಪಂದ್ಯ ಸೆಪ್ಟೆಂಬರ್ 27 ರ ಭಾನುವಾರ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 30 ರಂದು ಗುವಾಹಟಿಯಲ್ಲಿ ಮತ್ತು ಅಂತಿಮ ಏಕದಿನ ಪಂದ್ಯ ಅಕ್ಟೋಬರ್ 3 ರಂದು ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಈ ಏಕದಿನ ಸರಣಿಗೂ ಮೊದಲೇ ವೆಸ್ಟ್ ಇಂಡೀಸ್ ತಂಡದ ಬ್ಯಾಡ್‌ ನ್ಯೂಸ್‌ವೊಂದು ಬಹಿರಂಗಗೊಂಡಿದೆ. ಆರ್ಥಿಕ ಬಿಕ್ಕಟ್ಟಿನಿಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ತನ್ನ ತಂಡದ ಆಟಗಾರರ ಕೇಂದ್ರ ಒಪ್ಪಂದದ ವೇತನದಲ್ಲಿ ಶೇಕಡಾ 25 ರಷ್ಟು ಸಂಬಳ ಕಡಿತ ಮಾಡುವುದಾಗಿ ತಿಳಿಸಿದೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್ 27 ಅಂದರೆ ನಾಳೆ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದಕ್ಕಿಂತ ಮೊದಲೇ ವೆಸ್ಟ್‌ ಇಂಡೀಸ್‌ ಆಟಗಾರರ ಸಂಬಳದಲ್ಲಿ ಶೇಕಡಾ 25 ರಷ್ಟು ಸಂಬಳ ಕಡಿತ ಮಾಡುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ. ದೇಶೀಯ ಆಟಗಾರರ ಒಪ್ಪಂದದ ಅವಧಿಯನ್ನು ಏಳು ತಿಂಗಳುಗಳಿಗೆ ಇಳಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ಆಟಗಾರರ ಒಪ್ಪಂದವು 12 ತಿಂಗಳು ಅಂದರೆ 1 ಆಗಿದೆ. ಇದು ಮಾತ್ರವಲ್ಲದೆ, ಪುರುಷರ ಸೂಪರ್ 50 ಟೂರ್ನಮೆಂಟ್ ಮತ್ತು ಮಹಿಳಾ ಟಿ 20 ಬ್ಲೇಜ್ ಅನ್ನು ಕೂಡ ನಿಲ್ಲಿಸಲಾಗಿದೆ. ಮುಂದೆ ಆಗುವ ಖರ್ಚು ಅನ್ನು ಉಳಿಸಲು ಹೀಗೆ ಮಾಡಲಾಗುತ್ತಿದೆ. ತಂಡ ಎದುರಿಸುತ್ತಿರುವ ಆರ್ಥಿಕ ಮತ್ತು ಇತರ ಸವಾಲುಗಳನ್ನು ಎದುರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ ಎನ್ನಲಾಗಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಈ ಮೊದಲಿನಿಂದಲೂ ಕೆಲವೊಮ್ಮೆ ಹೊರ ಬಂದಿದೆ. ಅದರಂತೆ ಈ ಸಲವೂ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ವೆಸ್ಟ್ ಇಂಡೀಸ್ ಆಟಗಾರರ ಸಂಘ ಮತ್ತು ಆಟಗಾರರ ಸಹಕಾರದ ಮನೋಭಾವವನ್ನು ನಾವು ಪ್ರಶಂಸಿಸುತ್ತೇವೆ ಎಂದು CWI ಮುಖ್ಯ ಕಾರ್ಯನಿರ್ವಾಹಕ ಕ್ರಿಸ್ ಡೆಹ್ರಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಇದು ಸೂಕ್ತ ಪರಿಸ್ಥಿತಿಯಲ್ಲದಿದ್ದರೂ ಆರ್ಥಿಕ ಸ್ಥಿರತೆಯತ್ತ ಇದು ಅಗತ್ಯವಾದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ. ದೇಶೀಯ ಪಂದ್ಯಾವಳಿಗಳಿಗೆ ಪ್ರಯಾಣ ಮತ್ತು ಹೋಟೆಲ್‌ಗಳ ವೆಚ್ಚವು ಮಂಡಳಿಯ ಮೇಲಿನ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿದೆ. ಐಸಿಸಿಯಿಂದ ಅನುಮೋದಿಸಲಾದ 16 ಮಿಲಿಯನ್ ಯುಎಸ್ ಡಾಲರ್ ಅಥವಾ 153 ಕೋಟಿ ರೂಪಾಯಿ ಸಾಲವನ್ನು ಪಡೆಯಲು ಕ್ರಿಕೆಟ್ ವೆಸ್ಟ್ ಇಂಡೀಸ್ ಕೆಲವು ಗುರಿಗಳನ್ನು ಪೂರೈಸಬೇಕಾಗುತ್ತದೆ ಎಂದು ಹೇಳಲಾಗಿದೆ.

ವಾಸ್ತವವಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್ ಕಳೆದ 15 ವರ್ಷಗಳಲ್ಲಿ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ 80 ಮಿಲಿಯನ್ ಯುಎಸ್ ಡಾಲರ್‌ಗಳಿಗೂ ಹೆಚ್ಚು ಖರ್ಚು ಮಾಡಿದೆ. ಆದರೆ ಆ ವಿಮಾನಯಾನ ಸಂಸ್ಥೆಗಳಿಂದ ಯಾವುದೇ ಪ್ರಾಯೋಜಕತ್ವವನ್ನು ಪಡೆಯಲಿಲ್ಲ. ಈ ಒತ್ತಡ ಮತ್ತು ಅದು ಉಂಟುಮಾಡಿದ ಭಾರಿ ಆರ್ಥಿಕ ನಷ್ಟದಿಂದ ಉಂಟಾದ ತಕ್ಷಣದ ನಗದು ಕೊರತೆಯನ್ನು ನಾವು ಎದುರಿಸಬೇಕಾಗಿದೆ ಎಂದು ಹೆಡರಿಂಗ್ ಹೇಳಿದ್ದಾರೆ.

ಅಮಾನತುಗೊಂಡ ಪಂದ್ಯಾವಳಿಯನ್ನು ಬದಲಿಸಲು 2028ರ LA ಒಲಿಂಪಿಕ್ಸ್‌ಗೆ ತಂಡವನ್ನು ಆಯ್ಕೆ ಮಾಡಲು CWI ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಆದರೆ ಅಮೆರಿಕದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ವೆಸ್ಟ್ ಇಂಡೀಸ್ ಒಂದು ತಂಡವಾಗಿ ಆಡಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಂದು ದೇಶವು ಪ್ರತ್ಯೇಕವಾಗಿ ಭಾಗವಹಿಸಬೇಕಾಗುತ್ತದೆ.

ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ

ಮೊದಲ ಏಕದಿನ ಪಂದ್ಯ: ಭಾನುವಾರ, ಸೆಪ್ಟೆಂಬರ್ 27, ತಿರುವನಂತಪುರಂ
ಎರಡನೇ ಏಕದಿನ ಪಂದ್ಯ: ಬುಧವಾರ, ಸೆಪ್ಟೆಂಬರ್ 30, ಗುವಾಹಟಿ
ಮೂರನೇ ಏಕದಿನ ಪಂದ್ಯ, ಶನಿವಾರ, ಅಕ್ಟೋಬರ್ 3, ಹೊಸ ಚಂಡೀಗಢ 

Add Zee News as a Preferred Source
TAGS:
Cricket