SOCIAL MEDIA

Newsletter

PARTNER SITES
Select Language Select State

ಸಂಜು, ಶ್ರೇಯಸ್‌ ಅಯ್ಯರ್‌ ಅಲ್ಲ.. ವಿರಾಟ್‌ ಕೊಹ್ಲಿ 3ನೇ ಬ್ಯಾಟಿಂಗ್‌ ಸ್ಲಾಟ್‌ಗೆ ಬೆಸ್ಟ್ ಬ್ಯಾಟ್ಸ್‌ಮನ್‌‌ ಆಯ್ಕೆ

ತಿಲಕ್ ವರ್ಮಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಮುಂದಿನ ಭವಿಷ್ಯದ ನಂಬರ್-3 ಬ್ಯಾಟ್ಸ್‌ಮನ್ ಆಗಬಹುದು. ವಿರಾಟ್ ಕೊಹ್ಲಿ ನಿವೃತ್ತಿ ಬಳಿಕ ಭಾರತ ತಂಡ ಎಡಗೈ ಬ್ಯಾಟ್ಸ್‌ಮನ್ ಸ್ಥಾನದಿಂದ ಲಾಭ ಪಡೆಯಬಹುದು

Written By Bhimappa
Published: Oct 04, 2026, 05:59 PM IST | Updated: Oct 04, 2026, 06:04 PM IST
Image Credit: Virat_Kohli_100
Join

Wasim Jaffer picks Tilak Verma: ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಅವರು ಭವಿಷ್ಯದಲ್ಲಿ ಭಾರತದ ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ ಅವರ 3ನೇ ಸ್ಥಾನ ತುಂಬಬಹುದಾದ ಬ್ಯಾಟ್ಸ್‌ಮನ್‌ ಯಾರೆಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ 18 ವರ್ಷಗಳಿಂದ ಭಾರತೀಯ ಏಕದಿನ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ನಿರಂತರವಾಗಿ ತಮ್ಮ ಬ್ಯಾಟಿಂಗ್‌ ಬಲದಿಂದ ತಂಡಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇಲ್ಲಿಯವರೆಗೆ 317 ಏಕದಿನ ಪಂದ್ಯಗಳಲ್ಲಿ 58.78 ಸರಾಸರಿಯಲ್ಲಿ ಬ್ಯಾಟ್‌ ಬೀಸಿರುವ ವಿರಾಟ್‌ ಕೊಹ್ಲಿ ಅವರು ಏಕದಿನ ಪಂದ್ಯಗಳಲ್ಲಿ 15,109 ರನ್ ಗಳಿಸಿದ್ದಾರೆ. ಇದರಲ್ಲಿ 55 ಶತಕಗಳು ಮತ್ತು 79 ಅರ್ಧಶತಕಗಳನ್ನು ಕಿಂಗ್‌ ಕೊಹ್ಲಿ ಅವರ ಖಾತೆಯಲ್ಲಿವೆ. ಹಾಗಾದರೆ ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ಸ್ಲಾಟ್‌ಗೆ ಯಾರು ಸರಿಯಾಗಿ ಹೊಂದುತ್ತಾರೆ.

ಭಾರತದ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ಸ್ಥಾನವನ್ನು ಭವಿಷ್ಯದಲ್ಲಿ ತುಂಬಬಲ್ಲ ಆಟಗಾರ ಎಂದರೆ ಅದು ತಿಲಕ್ ವರ್ಮಾ ಎಂದು ವಾಸಿಂ ಜಾಫರ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ತಿಲಕ್ ವರ್ಮಾ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಮುಂದಿನ ಭವಿಷ್ಯದ ನಂಬರ್-3 ಬ್ಯಾಟ್ಸ್‌ಮನ್ ಆಗಬಹುದು. ವಿರಾಟ್ ಕೊಹ್ಲಿ ನಿವೃತ್ತಿ ಬಳಿಕ ಭಾರತ ತಂಡ ಎಡಗೈ ಬ್ಯಾಟ್ಸ್‌ಮನ್ ಸ್ಥಾನದಿಂದ ಲಾಭ ಪಡೆಯಬಹುದು ಎಂದು ಜಾಫರ್ ಹೇಳಿದ್ದಾರೆ.

ತಿಲಕ್ ವರ್ಮಾ ವಿಭಿನ್ನ ಬ್ಯಾಟಿಂಗ್ ಸ್ಥಾನಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪಾಕಿಸ್ತಾನ ವಿರುದ್ಧದ 2026ರ ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ತಿಲಕ್‌ ವರ್ಮಾ 22 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದ ನಂತರ ವಾಸಿಂ ಜಾಫರ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಪಾಕಿಸ್ತಾನದ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ನಿಜವಾಗಲೂ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಟೀಮ್‌ ಇಂಡಿಯಾ ಅಪಾಯದಲ್ಲಿತ್ತು. ಈ ವೇಳೆ ತಂಡದ ರನ್‌ಗಳ ಗತಿಯನ್ನೇ ಬದಲಾಯಿಸಿದ್ದು ತಿಲಕ್‌ ವರ್ಮಾ ಅವರ ವೇಗದ ಅರ್ಧಶತಕ ಎನ್ನಬಹುದು.

ಟೀಮ್‌ ಇಂಡಿಯಾದ ನಂಬರ್ 3 ಬ್ಯಾಟ್ಸ್‌ಮನ್‌ ಆಯ್ಕೆ

ತಿಲಕ್ ವರ್ಮಾ ಅವರ ವಿಭಿನ್ನ ಸ್ಥಾನಗಳಲ್ಲಿ ಆಡುವ ಸಾಮರ್ಥ್ಯವನ್ನು ನೋಡುವುದು ಅದ್ಭುತವಾಗಿದೆ. ತಿಲಕ್‌ ವರ್ಮಾ ಅವರು ಹಿಂದೆ 3 ನೇ ಸ್ಥಾನದಲ್ಲಿ ಶತಕ ಗಳಿಸಿರುವುದು ಇದೆ. ಈಗ ಅವರು 5 ಮತ್ತು 6ನೇ ಸ್ಥಾನಕ್ಕೆ ಚೆನ್ನಾಗಿ ಹೊಂದಿಕೊಂಡು ಆಡುತ್ತಿದ್ದಾರೆ. ಇದು ಅದ್ಭುತವಾದ ಪ್ರದರ್ಶನವಾಗಿದೆ. 2027ರ ವಿಶ್ವಕಪ್‌ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡವನ್ನು ತೊರೆಯಲಿದ್ದಾರೆ. ಸ್ಪಷ್ಟವಾಗಿ, ರೋಹಿತ್ ಶರ್ಮಾ ಅವರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಬಹುದು ಆಗಿದೆ. ಆದರೆ ವಿರಾಟ್ ಕೊಹ್ಲಿ ಅವರ ಬದಲಿಗೆ ಎಡಗೈ ಬ್ಯಾಟ್ಸ್‌ಮನ್ ಬರುತ್ತಾರೆ ಎಂದು ನಾನು ಭಾವಿಸುತ್ತೇನೆ. ಅದು ತಿಲಕ್ ವರ್ಮಾ ಆಗಿರಬಹುದು ಎಂದು ವಾಸಿಂ ಜಾಫರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ತಿಲಕ್ ವರ್ಮಾ ಮೂರು ಸ್ವರೂಪಗಳಲ್ಲಿ ಅತ್ಯುತ್ತಮ ಆಟಗಾರ

ದುಲೀಪ್ ಟ್ರೋಫಿಯಲ್ಲಿ ತಿಲಕ್ ವರ್ಮಾ ಹೇಗೆ ಸ್ಕೋರ್ ಗಳಿಸಿದರು ಎಂಬುದನ್ನು ಎಲ್ಲರಿಗೂ ಗೊತ್ತಿರುವ ಮಾಹಿತಿ. ತಿಲಕ್‌ ವರ್ಮಾ ಅವರ ಪ್ರಥಮ ದರ್ಜೆ ಸರಾಸರಿ ಸುಮಾರು 55 ಆಗಿತ್ತು. ಆದ್ದರಿಂದ, ಅವರು ಮೂರು ಸ್ವರೂಪಗಳಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ತಿಲಕ್ ವರ್ಮಾ ಅವರ ಚುರುಕಾದ ಅರ್ಧಶತಕವು 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 212 ರನ್‌ಗಳ ಟಾರ್ಗೆಟ್‌ ನೀಡಲು ಸಹಾಯ ಮಾಡಿತು. ಟೀಮ್ ಇಂಡಿಯಾ ಪಾಕಿಸ್ತಾನವನ್ನು 6 ವಿಕೆಟ್‌ಗೆ 192 ರನ್‌ಗೆ ಸೀಮಿತಗೊಳಿಸಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿತು. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆರಂಭದಲ್ಲಿ ಸುಂಟರಗಾಳಿ ಬ್ಯಾಟಿಂಗ್‌ ಮಾಡಿದರೆ, ಕೊನೆಯಲ್ಲಿ ತಿಲಕ್‌ ವರ್ಮಾ ತಮ್ಮ ಬ್ಯಾಟಿಂಗ್‌ ಮೂಲಕ ಪಾಕ್‌ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದರು ಎನ್ನಬಹುದು.

ಅಭಿಷೇಕ್ ಶರ್ಮಾ ಬಗ್ಗೆ ವಾಸಿಂ ಜಾಫರ್‌ ಏನಂದರು?

ಅಭಿಷೇಕ್ ಶರ್ಮಾ ಒಬ್ಬ ಬ್ಯಾಟ್ಸ್‌ಮನ್ ಆಗಿ ಹೇಗೆ ಪ್ರಬುದ್ಧರಾಗಿದ್ದಾರೆ ಎಂಬುದರ ಬಗ್ಗೆಯೂ ವಾಸಿಂ ಜಾಫರ್ ಮಾತನಾಡಿ, ಅಭಿಷೇಕ್ ಶರ್ಮಾ ಆರಂಭದಿಂದಲೇ ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಾರೆ. ಆದರೆ ಈಗ 26 ವರ್ಷದ ಆಟಗಾರ ತಮ್ಮ ಆಟದ ವಿಧಾನವು ಸರಿಯಾಗಿಲ್ಲ ಎಂದುಕೊಂಡಿರಬಹುದು. ಆದ್ದರಿಂದ ಅಭಿಷೇಕ್‌ ಶರ್ಮಾ ಅವರು ತಮ್ಮ ಆಟದಲ್ಲಿ ಕೆಲ ಬದಲಾವಣೆ ಮಾಡಿಕೊಂಡರಬಹುದು. ಅಭಿಷೇಕ್ ಶರ್ಮಾ ಈಗ ಸ್ವಲ್ಪ ಪ್ರಬುದ್ಧರಾಗಿದ್ದಾರೆಂದು ತೋರುತ್ತದೆ. ಈ ಸ್ವರೂಪದಲ್ಲಿ ಹೆಚ್ಚು ಸಮಯವಿಲ್ಲದಿದ್ದರೂ ಅವರು ತಮ್ಮ ಸಮಯವನ್ನು ತೆಗೆದುಕೊಳ್ಳುತ್ತಾರೆ. ಮೊದಲು, ಅವರು ಮೊದಲ ಎಸೆತದಲ್ಲೇ ಸಿಕ್ಸ್ ಹೊಡೆಯಲು ಪ್ರಯತ್ನಿಸುತ್ತಿದ್ದರು. ಈಗ ಆ ವಿಧಾನವು ತಪ್ಪು ಎಂದು ಅವರಿಗೆ ಅರಿವಾಗಿರಬಹುದು ಎಂದು ವಾಸಿಂ ಜಾಫರ್ ಹೇಳಿದ್ದಾರೆ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES