• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಭಾರತ ತಂಡದ ಆಟದ ಶೈಲಿಯನ್ನೇ ಬದಲಿಸಿದ ವಿರಾಟ್ ಕೊಹ್ಲಿ: ಫಾಫ್ ಡು ಪ್ಲೆಸಿಸ್ ಮೆಚ್ಚುಗೆ

ಭಾರತ ತಂಡದ ಆಟದ ಶೈಲಿಯನ್ನೇ ಬದಲಿಸಿದ ವಿರಾಟ್ ಕೊಹ್ಲಿ: ಫಾಫ್ ಡು ಪ್ಲೆಸಿಸ್ ಮೆಚ್ಚುಗೆ

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರಾದ ಫಾಫ್ ಡು ಪ್ಲೆಸಿಸ್ ಮತ್ತು ಡೇಲ್ ಸ್ಟೇನ್, ವಿರಾಟ್ ಕೊಹ್ಲಿ ನಾಯಕತ್ವದಿಂದ ಭಾರತ ತಂಡದಲ್ಲಿ ಬಂದ ಬದಲಾವಣೆಗಳನ್ನ ಮೆಚ್ಚಿಕೊಂಡಿದ್ದಾರೆ. ವಿಶೇಷವಾಗಿ 2018ರ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಭಾರತೀಯ ಆಟಗಾರರು ತೋರಿದ ಧೈರ್ಯ, ಹೋರಾಟದ ಮನೋಭಾವ ಮತ್ತು ಫಿಟ್ನೆಸ್ ಸಂಸ್ಕೃತಿಯ ಬಗ್ಗೆ ಅವರು ಮಾತನಾಡಿದ್ದಾರೆ.

Written ByPuttaraj K Alur
Published: Nov 16, 2026, 18:47 IST|Updated: Nov 16, 2026, 19:00 IST
joinshare
ಭಾರತ ತಂಡದ ಆಟದ ಶೈಲಿಯನ್ನೇ ಬದಲಿಸಿದ ವಿರಾಟ್ ಕೊಹ್ಲಿ: ಫಾಫ್ ಡು ಪ್ಲೆಸಿಸ್ ಮೆಚ್ಚುಗೆ
Image Credit: Faf du Plessis

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Faf du Plessis on Virat Kohli: ಭಾರತ ಕ್ರಿಕೆಟ್ ತಂಡವನ್ನ ಹಿಂದೆಂದಿಗಿಂತಲೂ ಹೆಚ್ಚು ಕಠಿಣ ಹಾಗೂ ಬಲಿಷ್ಠ ತಂಡವನ್ನಾಗಿ ರೂಪಿಸುವಲ್ಲಿ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗರಾದ ಫಾಫ್ ಡು ಪ್ಲೆಸಿಸ್ ಮತ್ತು ಡೇಲ್ ಸ್ಟೇನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡದ ಆಟದ ಶೈಲಿ, ಫಿಟ್ನೆಸ್ ಮತ್ತು ಹೋರಾಟದ ಮನೋಭಾವದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ನಡೆದ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯವನ್ನ ನೆನಪಿಸಿಕೊಂಡು ಕೊಹ್ಲಿಯ ನಾಯಕತ್ವದ ಗುಣಗಳನ್ನ ಪ್ರಶಂಸಿಸಿದ್ದಾರೆ.

ತಂಡದ ಮನೋಭಾವವನ್ನೇ ಬದಲಿಸಿದ ಕೊಹ್ಲಿ

ಕ್ರಿಕ್‌ಇನ್ಫೋದಲ್ಲಿ ಪ್ರಸಾರವಾದ ‘ಕ್ರಿಕೆಟರ್ಸ್ ಆನ್ ಕ್ರಿಕೆಟರ್ಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಫಾಫ್ ಡು ಪ್ಲೆಸಿಸ್, 2018ರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಅನುಭವವನ್ನ ಹಂಚಿಕೊಂಡಿದ್ದಾರೆ. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಿಂದ ಭಾರತೀಯ ತಂಡ ಹೆಚ್ಚು ಕಠಿಣ ಹಾಗೂ ಬಲಿಷ್ಠವಾಗಿ ರೂಪುಗೊಂಡಿರುವುದನ್ನ ತಾವು ಸ್ಪಷ್ಟವಾಗಿ ಗಮನಿಸಿದ್ದಾಗಿ ತಿಳಿಸಿದ್ದಾರೆ.

ವಿಶೇಷವಾಗಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೆಸ್ಟ್ ಪಂದ್ಯವು ತಮ್ಮ ನೆನಪಿನಲ್ಲಿ ಉಳಿದಿದೆ ಎಂದು ಫಾಫ್ ಹೇಳಿದ್ದಾರೆ. ಆ ಪಂದ್ಯದಲ್ಲಿ ಭಾರತೀಯ ಆಟಗಾರರು ತೋರಿದ ಧೈರ್ಯ ಮತ್ತು ಹೋರಾಟದ ಮನೋಭಾವವು ತಂಡದ ಬದಲಾದ ಸ್ವರೂಪವನ್ನ ತೋರಿಸಿತ್ತು. ಕೊಹ್ಲಿ ನಾಯಕತ್ವದ ಪ್ರಭಾವ ತಂಡದ ಆಟಗಾರರ ವರ್ತನೆ ಮತ್ತು ಮೈದಾನದಲ್ಲಿನ ಪ್ರದರ್ಶನದಲ್ಲೂ ಕಾಣಿಸಿಕೊಂಡಿತ್ತು ಎಂಬುದು ಅವರ ಅಭಿಪ್ರಾಯ.

ಪಿಚ್ ಕಠಿಣವಾಗಿದ್ದರೂ ದೂರು ನೀಡದ ಭಾರತೀಯ ಆಟಗಾರರು

2018ರ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್, ಆ ಪಂದ್ಯದಲ್ಲಿ ಪಿಚ್‌ನ ಸ್ವರೂಪ ಅತ್ಯಂತ ಕಠಿಣವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಚೆಂಡು ಪಿಚ್‌ನಿಂದ ವೇಗವಾಗಿ ಪುಟಿದು ಬ್ಯಾಟರ್‌ಗಳ ದೇಹ ಹಾಗೂ ಕೈಗವಸುಗಳಿಗೆ ಬಡಿಯುತ್ತಿತ್ತು. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಡೀನ್ ಎಲ್ಗರ್ ಅವರ ತಲೆಗೆ ಕೂಡ ಚೆಂಡು ಬಡಿದಿತ್ತು. ಭಾರತೀಯ ಬ್ಯಾಟರ್‌ಗಳಿಗೂ ಹಲವು ಬಾರಿ ಚೆಂಡು ಬಡಿದಿದ್ದರೂ ಅವರು ಅಂಪೈರ್‌ಗಳ ಬಳಿ ಯಾವುದೇ ದೂರು ನೀಡಿರಲಿಲ್ಲವೆಂದು ಸ್ಟೇನ್ ವಿವರಿಸಿದ್ದಾರೆ.

ಪಂದ್ಯದಲ್ಲಿ ಭಾರತ ತಂಡ ಮುನ್ನಡೆಯಲ್ಲಿದ್ದ ಕಾರಣ ಆಟಗಾರರು ತಮ್ಮ ಗಮನವನ್ನ ಗೆಲುವಿನತ್ತ ಕೇಂದ್ರೀಕರಿಸಿದ್ದರು ಎಂಬುದನ್ನ ಅವರು ಉಲ್ಲೇಖಿಸಿದ್ದಾರೆ. ಆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಪಿಚ್ ಅಪಾಯಕಾರಿಯಾಗಿದೆ ಎಂದು ಅಂಪೈರ್‌ಗಳ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದರು. ಆದರೆ ಭಾರತೀಯ ಆಟಗಾರರು ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಪಂದ್ಯವನ್ನ ಮುಂದುವರಿಸಿದ್ದರು. ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದ ತಂಡಗಳಲ್ಲಿ ತಾವು ಕಂಡ ಅತ್ಯಂತ ಕಠಿಣ ಮನೋಭಾವದ ಭಾರತೀಯ ತಂಡ ಅದಾಗಿತ್ತು ಎಂದು ಸ್ಟೇನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದಲ್ಲಿ ಫಿಟ್ನೆಸ್ ಸಂಸ್ಕೃತಿ ಬೆಳೆಸಿದ ವಿರಾಟ್

ವಿರಾಟ್ ಕೊಹ್ಲಿಯ ನಾಯಕತ್ವದ ಮತ್ತೊಂದು ಪ್ರಮುಖ ಕೊಡುಗೆಯೆಂದರೆ ತಂಡದಲ್ಲಿ ಫಿಟ್ನೆಸ್‌ಗೆ ಹೆಚ್ಚಿನ ಆದ್ಯತೆ ನೀಡಿದ್ದು ಎಂದು ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ಭಾರತೀಯ ತಂಡದ ದೈಹಿಕ ಸಾಮರ್ಥ್ಯ ಮತ್ತು ಆಟಗಾರರ ಸಿದ್ಧತೆಯಲ್ಲಿ ಬದಲಾವಣೆ ತರಲು ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಅವರ ಅಭಿಪ್ರಾಯ.

ಈ ವಿಚಾರಕ್ಕೆ ಡೇಲ್ ಸ್ಟೇನ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಕೊಹ್ಲಿಯನ್ನ ಮೊದಲ ಬಾರಿ ಭೇಟಿಯಾದಾಗ ಅವರು ಯುವ ಆಟಗಾರನಾಗಿದ್ದರು. ಆದರೆ ನಂತರದ ವರ್ಷಗಳಲ್ಲಿ ಫಿಟ್ನೆಸ್ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ಸ್ಟೇನ್ ಹೇಳಿದ್ದಾರೆ. ಕೊಹ್ಲಿಯಿಂದ ಪ್ರೇರಣೆ ಪಡೆದ ಇತರ ಆಟಗಾರರೂ ಅದೇ ರೀತಿಯ ಫಿಟ್ನೆಸ್ ಶಿಸ್ತನ್ನ ಅನುಸರಿಸಲು ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯ ನಾಯಕತ್ವದ ದಾಖಲೆ

ವಿರಾಟ್ ಕೊಹ್ಲಿ 2014ರಿಂದ 2022ರವರೆಗೆ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಅವರು ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದು, 40 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. 17 ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ. ಈ ಸಾಧನೆಯೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಯನ್ನ ಕೊಹ್ಲಿ ಹೊಂದಿದ್ದಾರೆ.

ಒಟ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡದ ಹೋರಾಟದ ಮನೋಭಾವ, ಫಿಟ್ನೆಸ್ ಮತ್ತು ವಿದೇಶಿ ನೆಲದಲ್ಲಿ ಆಡುವ ಶೈಲಿಯಲ್ಲಿ ಬದಲಾವಣೆ ಕಂಡುಬಂದಿದೆ ಎಂದು ಫಾಫ್ ಡು ಪ್ಲೆಸಿಸ್ ಹಾಗೂ ಡೇಲ್ ಸ್ಟೇನ್ ತಮ್ಮ ಅನುಭವದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2018ರ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯವನ್ನ ಉಲ್ಲೇಖಿಸಿರುವ ಈ ಇಬ್ಬರು ಮಾಜಿ ದಕ್ಷಿಣ ಆಫ್ರಿಕಾ ಆಟಗಾರರು, ಭಾರತೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯ ನಾಯಕತ್ವದ ಪ್ರಭಾವವನ್ನ ಮತ್ತೊಮ್ಮೆ ನೆನಪಿಸಿದ್ದಾರೆ.

Add Zee News as a Preferred Source
TAGS:
Cricket
Sports
Kannada News