SOCIAL MEDIA

Newsletter

PARTNER SITES
Select Language Select State

ವಿರಾಟ್ ಕೊಹ್ಲಿ ಮ್ಯಾಜಿಕ್!.. ₹18 ಲಕ್ಷ ಸಾಲ.. ಮುಚ್ಚುವ ಅಂಚಿನಲ್ಲಿದ್ದ ರೆಸ್ಟೋರೆಂಟ್! ಒಂದೇ ಆರ್ಡರ್‌ನಿಂದ ₹2 ಕೋಟಿಗೆ ಜಿಗಿದ ‘Delhi Se’ ಕಥೆ

Virat kohli chole bhature : ಮುಂಬೈನಲ್ಲೊಂದು ಪುಟ್ಟ ಚೋಲೆ ಭಟೂರಿ ರೆಸ್ಟೋರೆಂಟ್‌ ಒಂದೆಡೆ ₹18 ಲಕ್ಷ ಸಾಲ.. ಮತ್ತೊಂದೆಡೆ ಕುಸಿದ ವ್ಯಾಪಾರ.. ರೆಸ್ಟೋರೆಂಟ್ ಮುಚ್ಚಿ ಸಾಲ ತೀರಿಸೋಣ ಅಂತ ಮಾಲೀಕರು ಯೋಚನೆ ಮಾಡ್ತಿದ್ದಾಗಲೇ, ಒಂದು ಆರ್ಡರ್‌ ಇಡೀ ಕಥೆಯನ್ನೇ ಬದಲಿಸಿಬಿಟ್ಟಿದೆ.

Written By Ramya. R. Gowda
Published: Sep 27, 2026, 12:42 PM IST | Updated: Sep 27, 2026, 12:47 PM IST
Join

ಮುಂಬೈನಲ್ಲೊಂದು ಪುಟ್ಟ ಚೋಲೆ ಭಟೂರಿ ರೆಸ್ಟೋರೆಂಟ್‌ ಒಂದೆಡೆ ₹18 ಲಕ್ಷ ಸಾಲ.. ಮತ್ತೊಂದೆಡೆ ಕುಸಿದ ವ್ಯಾಪಾರ.. ರೆಸ್ಟೋರೆಂಟ್ ಮುಚ್ಚಿ ಸಾಲ ತೀರಿಸೋಣ ಅಂತ ಮಾಲೀಕರು ಯೋಚನೆ ಮಾಡ್ತಿದ್ದಾಗಲೇ, ಒಂದು ಆರ್ಡರ್‌ ಇಡೀ ಕಥೆಯನ್ನೇ ಬದಲಿಸಿಬಿಟ್ಟಿದೆ.

ಹೌದು.. ವಿರಾಟ್ ಕೊಹ್ಲಿ ಕುಟುಂಬಕ್ಕೆ ಹೋದ ಚೋಲೆ ಭಟೂರಿ ಆರ್ಡರ್‌.. ಅನುಷ್ಕಾ ಶರ್ಮಾ ಮಾಡಿದ ಒಂದೇ ಒಂದು Instagram ಪೋಸ್ಟ್‌.. ಇಂದು ಆ ಪುಟ್ಟ ರೆಸ್ಟೋರೆಂಟ್‌ನ ಮಾಸಿಕ ವಹಿವಾಟನ್ನು ಬರೋಬ್ಬರಿ ₹2 ಕೋಟಿಗೆ ತಂದು ನಿಲ್ಲಿಸಿದೆ. ಹಾಗಾದ್ರೆ ಅಸಲಿಗೆ ನಡೆದಿದ್ದೇನು? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ.

ಸಾಲದ ಸುಳಿಯಲ್ಲಿ ‘Delhi Se’
ಮುಂಬೈನ ಚೆಂಬೂರ್‌ನಲ್ಲಿದ್ದ ‘Delhi Se’ ಚೋಲೆ ಭಟೂರಿ ಮಾರಾಟ ಮಾಡುತ್ತಿದ್ದ ಪುಟ್ಟ ರೆಸ್ಟೋರೆಂಟ್‌. ಜಸ್ಪಾಲ್ ಸಿಂಗ್ ಖಲ್ಸಾ ಮತ್ತು ಮಹೀಂದರ್ ಸಿಂಗ್ ಖಲ್ಸಾ ಸಹೋದರರು ನಡೆಸುತ್ತಿದ್ದ ಈ ಉದ್ಯಮಕ್ಕೆ 2022ರಲ್ಲಿ ಬರೋಬ್ಬರಿ ₹18 ಲಕ್ಷ ಸಾಲ ಇತ್ತು.ಮಾರಾಟವೂ ನಿರೀಕ್ಷೆಯಂತೆ ಇರಲಿಲ್ಲ. ಹೀಗಾಗಿ ರೆಸ್ಟೋರೆಂಟ್ ಮುಚ್ಚಿ, ಉಳಿದ ಸಾಲ ತೀರಿಸುವ ಬಗ್ಗೆ ಸಹೋದರರು ಯೋಚನೆ ಮಾಡುತ್ತಿದ್ದರು.


ಕಾಮಿಡಿಯನ್ ಪೋಸ್ಟ್‌ನಿಂದ ಮೊದಲ ತಿರುವು
ಆದ್ರೆ ಇದೇ ಸಂದರ್ಭದಲ್ಲಿ ಒಂದು Instagram ಪೋಸ್ಟ್ ‘Delhi Se’ಗೆ ಹೊಸ ಭರವಸೆ ನೀಡಿತು.2022ರ ಸೆಪ್ಟೆಂಬರ್‌ನಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಅಭಿಷೇಕ್ ಉಪಮನ್ಯು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು.ಅಲ್ಲಿನ ಚೋಲೆ ಭಟೂರಿ ರುಚಿ ಮೆಚ್ಚಿದ ಅವರು Instagramನಲ್ಲಿ ರೆಸ್ಟೋರೆಂಟ್‌ ಅನ್ನು ಶಿಫಾರಸು ಮಾಡಿದರು.ಈ ಪೋಸ್ಟ್ ಬಳಿಕ ‘Delhi Se’ಗೆ ಗ್ರಾಹಕರ ಸಂಖ್ಯೆ ನಿಧಾನವಾಗಿ ಹೆಚ್ಚಾಗತೊಡಗಿತು.

ವಿರಾಟ್ ಕೊಹ್ಲಿ ಕುಟುಂಬದ ಆರ್ಡರ್
ಆದ್ರೆ ಅಸಲಿ ಟ್ವಿಸ್ಟ್ ಇಲ್ಲೇ ಶುರುವಾಯ್ತು ಈ Instagram ಪೋಸ್ಟ್ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಗಮನಕ್ಕೂ ಬಂತು.ಮುಂಬೈನಲ್ಲಿ ವಿರಾಟ್ ಕೊಹ್ಲಿಗೆ ದೆಹಲಿ ಶೈಲಿಯ ಚೋಲೆ ಭಟೂರಿ ಸಿಗುತ್ತದೆಯೇ ಎಂದು ಹುಡುಕುತ್ತಿದ್ದ ಅನುಷ್ಕಾ, ‘Delhi Se’ಯಿಂದ ಎರಡು ಪ್ಲೇಟ್ ಚೋಲೆ ಭಟೂರಿ ಆರ್ಡರ್ ಮಾಡಿದರುಆ ಆರ್ಡರ್ ಜುಹುವಿನಲ್ಲಿದ್ದ ಕೊಹ್ಲಿ ಅವರ ಮನೆಗೆ ತಲುಪಿತ್ತು.

ಒಂದೇ ಪೋಸ್ಟ್.. ಜನಸಾಗರ!
2022ರ ಅಕ್ಟೋಬರ್ 5ರಂದು ಅನುಷ್ಕಾ ಶರ್ಮಾ ‘Delhi Se" ಯ ಚೋಲೆ ಭಟೂರಿಯನ್ನು Instagramನಲ್ಲಿ ಮೆಚ್ಚಿಕೊಂಡು ಪೋಸ್ಟ್ ಮಾಡಿದರು.ಆ ಪೋಸ್ಟ್ ವೈರಲ್ ಆಗುತ್ತಿದ್ದಂತೆ ರೆಸ್ಟೋರೆಂಟ್ ಮುಂದೆ ಗ್ರಾಹಕರ ದಂಡೇ ಹರಿದುಬಂತು ಎಂದು ಮಾಲೀಕರು ಹೇಳಿದ್ದಾರೆ. ಕೇವಲ ಅರ್ಧ ಗಂಟೆಯಲ್ಲೇ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದರು ಎನ್ನಲಾಗಿದೆ.. ಬೇಡಿಕೆ ಎಷ್ಟರಮಟ್ಟಿಗೆ ಹೆಚ್ಚಾಯ್ತು ಅಂದ್ರೆ.. ಒಬ್ಬೊಬ್ಬರು 6ರಿಂದ 10 ಪ್ಲೇಟ್‌ಗಳವರೆಗೆ ಆರ್ಡರ್ ಮಾಡ್ತಿದ್ದರು. ಕೆಲವರು ಕೇವಲ ಎರಡು-ಮೂರು ಪ್ಲೇಟ್‌ ಚೋಲೆ ಭಟೂರಿಗಾಗಿ ಎರಡು ಗಂಟೆಗೂ ಹೆಚ್ಚು ಕಾಯಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

250 ಚದರ ಅಡಿಯಿಂದ 4 ಔಟ್‌ಲೆಟ್‌
ಒಂದು ಕಾಲದಲ್ಲಿ ಕೇವಲ 250 ಚದರ ಅಡಿ ಜಾಗ..ಮೂರು ಟೇಬಲ್‌.. ಒಂಬತ್ತು ಆಸನವಾಗಿದೆ. ಅಷ್ಟೇ‘Delhi Se’ಯ ಸಾಮ್ರಾಜ್ಯವಾಗಿದೆ. ಆದ್ರೆ ಇಂದು ಕಥೆ ಬದಲಾಗಿದೆ ಚೆಂಬೂರ್‌ನಿಂದ ಮುಲುಂಡ್‌.. ಅಂಧೇರಿ ವೆಸ್ಟ್‌ನಿಂದ ವಾಶಿವರೆಗೆ ಒಟ್ಟು ನಾಲ್ಕು ಔಟ್‌ಲೆಟ್‌ಗಳಿಗೆ ‘Delhi Se’ ವಿಸ್ತರಿಸಿದೆ.ಮಾಲೀಕರ ಪ್ರಕಾರ, ಪ್ರತಿದಿನ 3,000ಕ್ಕೂ ಹೆಚ್ಚು ಪ್ಲೇಟ್ ಚೋಲೆ ಭಟೂರಿ ಮಾರಾಟವಾಗುತ್ತಿದೆ.

₹1.5 ಲಕ್ಷದಿಂದ ₹2 ಕೋಟಿ!
ಇನ್ನು ಈ ಕಥೆಯಲ್ಲಿನ ಅಚ್ಚರಿಯ ಅಂಕಿ ಇಲ್ಲಿದೆ 2022ರಲ್ಲಿ ತಿಂಗಳಿಗೆ ಸುಮಾರು ₹1ರಿಂದ ₹1.5 ಲಕ್ಷ ಇದ್ದ ಮಾರಾಟ..ಈಗ ಬರೋಬ್ಬರಿ ₹2 ಕೋಟಿಗೆ ಏರಿಕೆಯಾಗಿದೆ ಎಂದು ಮಾಲೀಕರು ಹೇಳಿದ್ದಾರೆ.
ಅಂದ್ರೆ.. ಮುಚ್ಚುವ ಅಂಚಿನಲ್ಲಿದ್ದ ಪುಟ್ಟ ರೆಸ್ಟೋರೆಂಟ್‌ ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಉದ್ಯಮವಾಗಿ ಬೆಳೆದಿದೆ.

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES