ಕೇವಲ 53 ಎಸೆತಗಳಲ್ಲಿ 204 ರನ್‌ಗಳ ಸಿಡಿಲಬ್ಬರ! 28 ಸಿಕ್ಸರ್ ಸಿಡಿಸಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!
ಯುಎಇ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ಕೇವಲ 14.2 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿದೆ. ದೋಹಾದಲ್ಲಿ ನಡೆದ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸಿ ಮಿಂಚಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ 28 ಸಿಕ್ಸರ್ ಹಾಗೂ 7 ಬೌಂಡರಿಗಳು ಸೇರಿವೆ. ಇದಕ್ಕೂ ಮೊದಲು ಯುಎಇ ಪರ ಹರಪ್ರೀತ್ ಸಿಂಗ್ ಭಾಟಿಯಾ 144 ಎಸೆತಗಳಲ್ಲಿ 130 ರನ್ ಗಳಿಸಿದ್ದು, ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತ್ತು.
Vaibhav Sooryavanshi: ಕ್ರಿಕೆಟ್ ಮೈದಾನದಲ್ಲಿ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಯುಎಇ ವಿರುದ್ಧದ ಪಂದ್ಯದಲ್ಲಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸುವ ಮೂಲಕ ಭಾರತ ಎ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಅವರ ಈ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 28 ಸಿಕ್ಸರ್‌ಗಳು ಹಾಗೂ 7 ಬೌಂಡರಿಗಳು ಸೇರಿವೆ. ವಂಡರ್ ಕಿಡ್ ಸ್ಫೋಟಕ ಬ್ಯಾಟಿಂಗ್ ಹೊಡೆತಕ್ಕೆ ಯುಎಇ ಬೌಲರ್‌ಗಳು ತಬ್ಬಿಬ್ಬು ಆಗಿದ್ದಾರೆ. ಎದುರಿಸಿದ ಪ್ರತಿಯೊಂದು ಎಸೆತವನ್ನೂ ಬೌಂಡರಿ ಗೆರೆ ದಾಟಿಸಿದ ವೈಭವ್ ಆಟಕ್ಕೆ ಯುಎಇ ಬೌಲರ್‌ಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ದೋಹಾದ ಸೈನ್ಸ್ ಅಂಡ್ ಟೆಕ್ನಾಲಜಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಯುಎಇ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತ್ತು. ಈ ಗುರಿಯನ್ನ ಬೆನ್ನಟ್ಟಿದ ಭಾರತ ಎ ತಂಡ ವೈಭವ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ 14.2 ಓವರ್‌ಗಳಲ್ಲೇ 3 ವಿಕೆಟ್ ಕಳೆದುಕೊಂಡು 254 ರನ್ ಗಳಿಸಿ ಗೆಲುವಿನ ಗಡಿ ತಲುಪಿತು.
53 ಎಸೆತಗಳಲ್ಲಿ 204 ರನ್‌ಗಳ ಸ್ಫೋಟಕ ಆಟ!
ಭಾರತ ಎ ತಂಡದ ಪರ ಆರಂಭಿಕ ಬ್ಯಾಟಿಂಗ್‌ಗೆ ಇಳಿದ ವೈಭವ್ ಸೂರ್ಯವಂಶಿ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾದರು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು, ಮೈದಾನದ ಮೂಲೆಮೂಲೆಗೂ ಚೆಂಡನ್ನ ಅಟ್ಟಿದರು. ಕೇವಲ 53 ಎಸೆತಗಳನ್ನ ಎದುರಿಸಿದ ವೈಭವ್ 204 ರನ್ ಗಳಿಸಿ ಗಮನ ಸೆಳೆದರು. 384.91 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಅವರ ಇನ್ನಿಂಗ್ಸ್‌ನಲ್ಲಿ 28 ಭರ್ಜರಿ ಸಿಕ್ಸರ್‌ಗಳು ಮತ್ತು 7 ಬೌಂಡರಿಗಳು ದಾಖಲಾಗಿವೆ. ಅಂದರೆ ಕೇವಲ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕವೇ ಅವರು 196 ರನ್ ಕಲೆಹಾಕಿದ್ದಾರೆ. ಇಷ್ಟು ಕಡಿಮೆ ಎಸೆತಗಳಲ್ಲಿ ದ್ವಿಶತಕದ ಗಡಿ ದಾಟಿದ ಅವರ ಬ್ಯಾಟಿಂಗ್ ಪ್ರದರ್ಶನ ಪಂದ್ಯಕ್ಕೆ ವಿಶೇಷ ಮೆರುಗು ನೀಡಿದೆ.
204 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ ವೈಭವ್ ಹೊಸ ದಾಖಲೆ ನಿರ್ಮಿಸಿದರು. ಕಿರಿ ವಯಸ್ಸಿನ ಆಟಗಾರನೊಬ್ಬ ಕೇವಲ 53 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಅಕ್ಷರಶಃ ಅಬ್ಬರಿಸಿದರು. ಈ ಒಂದೇ ಒಂದು ಇನ್ನಿಂಗ್ಸ್ ಮೂಲಕ ವೈಭವ್ ಅನೇಕ ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವೈಭವ್ ಸ್ಫೋಟಕ ಆಟವನ್ನ ಕಂಡು ಯುಎಇ ಬೌಲರ್‌ಗಳು ಬೆಚ್ಚಿಬಿದ್ದಿದ್ದಾರೆ. ಹಾಕಿದ ಪ್ರತಿಯೊಂದು ಎಸೆತವನ್ನೂ ಸಿಕ್ಸರ್‌ಗೆ ಅಟ್ಟುತ್ತಿದ್ದ ಅವರ ಬ್ಯಾಟಿಂಗ್‌ಗೆ ಎದುರಾಳಿ ತಂಡದ ಬೌಲರ್‌ಗಳು ಸುಸ್ತಾಗಿದ್ದರು. ಕೆಲವು ಬೌಲರ್‌ಗಳಂತೂ ಯೋಚಿಸಿ ಯೋಚಿಸಿ ಬೌಲಿಂಗ್ ಮಾಡುತ್ತಿದ್ದು ಕಂಡುಬಂತು. ಅಬ್ಬರ ಬ್ಯಾಟಿಂಗ್ ಮೂಲಕ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟ ವೈಭವ್, ಬಸಿಲ್ ಹಮೀದ್ ಬೌಲಿಂಗ್‌ನಲ್ಲಿ ಆರ್ಯಾಂಶ್ ಶರ್ಮಾ ಅವರಿಗೆ ಕ್ಯಾಚ್ ನೀಡಿ ಔಟಾದರು.
ಯುಎಇ ಪರ ಹರಪ್ರೀತ್ ಸಿಂಗ್ ಭಾಟಿಯಾ ಶತಕ
ಇದಕ್ಕೂ ಮೊದಲು ಟಾಸ್ ಗೆದ್ದ ಯುಎಇ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. ತಂಡದ ಪರ ಹರಪ್ರೀತ್ ಸಿಂಗ್ ಭಾಟಿಯಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಶತಕ ದಾಖಲಿಸಿದರು. 144 ಎಸೆತಗಳನ್ನ ಎದುರಿಸಿದ ಅವರು 130 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಹರಪ್ರೀತ್ ಅವರ ಇನ್ನಿಂಗ್ಸ್ ಯುಎಇ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರಿಗೆ ಉತ್ತಮ ಸಾಥ್ ನೀಡಿದ ಬಸಿಲ್ ಹಮೀದ್ ಅಜೇಯ 36 ರನ್ ಗಳಿಸಿದರು. ಮುಹಮ್ಮದ್ ಶಹದಾದ್ 28 ರನ್ ಹಾಗೂ ಎಥಾನ್ ಡಿಸೋಜಾ 25 ರನ್ ಗಳಿಸಿ ತಂಡದ ಮೊತ್ತಕ್ಕೆ ಕೊಡುಗೆ ನೀಡಿದರು. ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರಮಾಣದ ರನ್ ಹರಿದುಬರದ ಕಾರಣ ಯುಎಇ ತಂಡ 249 ರನ್‌ಗಳಿಗೆ ಸೀಮಿತವಾಯಿತು.
14.2 ಓವರ್‌ಗಳಲ್ಲೇ ಗುರಿ ಮುಟ್ಟಿದ ಭಾರತ ಎ
250 ರನ್‌ಗಳ ಗುರಿಯೊಂದಿಗೆ ಕಣಕ್ಕಿಳಿದ ಭಾರತ ಎ ತಂಡಕ್ಕೆ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಅಭಿಷೇಕ್ ಶರ್ಮಾ 5 ಎಸೆತಗಳಲ್ಲಿ 12 ರನ್ ಗಳಿಸಿ ಇಬ್ರಾರ್ ಅಹ್ಮದ್ ಬೌಲಿಂಗ್‌ನಲ್ಲಿ LBW ಆದರು. ಪ್ರಭ್‌ಸಿಮ್ರನ್ ಸಿಂಗ್ 4 ಎಸೆತಗಳಲ್ಲಿ 3 ರನ್ ಗಳಿಸಿ ಜಾಹಿದ್ ಅಲಿ ಬೌಲಿಂಗ್‌ನಲ್ಲಿ ಔಟಾದರು. ಇನ್ನೊಂದೆಡೆ ವೈಭವ್ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದರು. ರಿಂಕು ಸಿಂಗ್ ಕೂಡ ಉತ್ತಮ ಕೊಡುಗೆ ನೀಡಿದರು. ಅವರು 19 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗುಳಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿವೆ.
ಹೀಗೆ ಭಾರತ ಎ ತಂಡ ಕೇವಲ 14.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಯುಎಇ ನೀಡಿದ್ದ ಗುರಿಯನ್ನ ತಲುಪಿತು. ಒಟ್ನಲ್ಲಿ ಯುಎಇ ಪರ ಹರಪ್ರೀತ್ ಸಿಂಗ್ ಭಾಟಿಯಾ 130 ರನ್‌ಗಳ ಶತಕದ ಮೂಲಕ ಗಮನ ಸೆಳೆದರೆ, ಭಾರತ ಎ ತಂಡದ ಪರ ವೈಭವ್ ಸೂರ್ಯವಂಶಿ 204 ರನ್‌ಗಳ ಸ್ಫೋಟಕ ಇನ್ನಿಂಗ್ಸ್‌ನಿಂದ ಪಂದ್ಯದ ಪ್ರಮುಖ ಆಕರ್ಷಣೆಯಾದರು. 28 ಸಿಕ್ಸರ್‌ಗಳೊಂದಿಗೆ ಅವರು ಆಡಿದ ಈ ಅಬ್ಬರದ ಆಟವೇ ಪಂದ್ಯದ ಹೈಲೈಟ್ ಆಗಿದೆ.