ಯೂನಿವರ್ಸ್ ಬಾಸ್ ಎಂದೇ ಖ್ಯಾತಿ ಆಗಿರುವ ಕ್ರಿಸ್ ಗೇಲ್ ಅವರ ಬ್ಯಾಟಿಂಗ್ ಮುಂದೆ ವಿಶ್ವದ ಬೌಲರ್‌ಗಳು ಶರಣಾಗಲೇಬೇಕು. ದೈತ್ಯ ಬ್ಯಾಟರ್ ಆಗಿರುವ ಕ್ರಿಸ್ ಗೇಲ್ ಅವರು ಬಾರಿಸುವ ಒಂದೊಂದು ಬೌಂಡರಿ, ಸಿಕ್ಸರ್‌ಗೆ ಗ್ಯಾಲರಿಯಲ್ಲಿರೋ ಫ್ಯಾನ್ಸ್ ಚೀಯರ್ ಅಪ್ ಬೇರೆ ಲೆವೆಲ್‌ನಲ್ಲಿ ಇರುತ್ತದೆ. ಕ್ರಿಸ್ ಗೇಲ್ ಅವರ ಲೈಫ್ ಸ್ಟೈಲ್ ಕೂಡ ಸಾಕಷ್ಟು ಸುದ್ದಿ ಆಗುತ್ತಿರುತ್ತವೆ. ಇತ್ತೀಚೆಗೆ ಕ್ರಿಸ್ ಗೇಲ್ ಅವರ ಮನೆಯ ಫೋಟೋಗಳು ವೈರಲ್ ಆಗಿದ್ದು ಈ ಫೋಟೋಗಳು ಕ್ರಿಸ್ ಗೇಲ್ ಬಗ್ಗೆ ಬೇರೆಯದ್ದನ್ನೇ ಹೇಳುತ್ತಿವೆ. ಕ್ರಿಸ್ ಗೇಲ್ ಮೈದಾನದಲ್ಲಿ ಹೇಗೆ ಆಡುತ್ತಾರೋ ಅದೇ ರೀತಿ ತಮ್ಮ ಲೈಫ್ ಸ್ಟೈಲ್ ಅನ್ನು ಅಷ್ಟೇ ಕಲರ್‌ಫುಲ್ ಆಗಿ ಎಂಜಾಯ್ ಮಾಡುತ್ತಾರೆ.
ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟರ್ ಕ್ರಿಸ್ ಗೇಲ್ ಅವರು ಕ್ರಿಕೆಟ್‌ನಿಂದಲೇ ಸಾಕಷ್ಟು ಆದಾಯ ಗಳಿಸಿ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ಬ್ಯುಸಿನೆಸ್ ಕಡೆಗೂ ಹೆಚ್ಚು ಗಮನ ಕೊಡುವ ಕ್ರಿಸ್ ಗೇಲ್ ಕೆಲವು ಸಂಸ್ಥೆಗಳ ಜೊತೆ ಪಾಲುದಾರಿಕೆಯನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಐಷಾರಾಮಿ ಬದುಕು ಸಾಗಿಸುವ ಕ್ರಿಸ್ ಗೇಲ್ ಕಲ್ಪನೆಗೂ ಮೀರಿದ್ದು ಮಾಡಿದ್ದು ಇದೆ. ಜಮೈಕಾದಲ್ಲಿ ಕ್ರಿಸ್ ಗೇಲ್ ಅವರು ಐಷಾರಾಮಿ ಬಂಗಲೆಯೊಂದನ್ನು ಖರೀದಿ ಮಾಡಿದ್ದರು. ಈಗ ಈ ಐಷಾರಾಮಿ ಬಂಗಲೆಯನ್ನು ಏನು ಮಾಡಿದ್ದಾರೆ ಗೊತ್ತಾ?.
ಜಮೈಕಾದಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಕ್ರಿಸ್ ಗೇಲ್ ಅವರು ವಿಶೇಷವಾದದ್ದನ್ನು ಮಾಡಿದ್ದಾರೆ. ಏನು ಮಾಡಿದ್ದಾರೆ ಎಂದರೆ ಇದನ್ನು ಕೇಳುವವರು ಬಿಗ್ ಶಾಕ್ ಆಗುತ್ತಾರೆ. ಕ್ರಿಸ್ ಗೇಲ್ ಅವರು ತಮ್ಮ ಮನೆಯನ್ನೇ ನೈಟ್ ಕ್ಲಬ್ ಆಗಿ ಬದಲಾವಣೆ ಮಾಡಿದ್ದಾರೆ. ವೈರಲ್ ಅಗಿರುವ ಫೋಟೋಗಳು ಕ್ರಿಸ್ ಗೇಲ್ ಅವರ ಬೆಡ್‌ರೂಮ್ ಸೇರಿದಂತೆ ಸ್ಟ್ರಿಪ್ ಕ್ಲಬ್‌ನಂತಹ ಸೆಟಪ್ ಅನ್ನು ಮಾಡಿದ್ದಾರೆ. ನಡುವೆಯೊಂದು ಕಂಬ ಇದ್ದು ಡ್ಯಾನ್ಸ್ ಮಾಡಲು ಅತ್ಯುತ್ತಮವಾದ ಸ್ಟೇಜ್‌ನಂತೆ ಇದೆ.
ಕ್ರಿಸ್ ಗೇಲ್ ಅವರ ಮನೆ ಅರಮನೆಗಿಂತ ಏನು ಕಡಿಮೆ ಇಲ್ಲ. ಅದಕ್ಕಾಗಿಯೇ ಮೆನೆಯೊಳಗೆ ದೊಡ್ಡ ಮಟ್ಟದಲ್ಲಿ ನೈಟ್‌ಕ್ಲಬ್ ಅನ್ನು ಜೊತೆಗೆ ಡ್ಯಾನ್ಸ್ ಆಡುವ ಸ್ಥಳವನ್ನು ನಿರ್ಮಿಸಿಕೊಂಡಿದ್ದಾರೆ. ಮನೆ ತುಂಬಾ ಐಷಾರಾಮಿಯಾಗಿದ್ದು ಇದಕ್ಕಿಂತ ಅದ್ಧೂರಿಯಾಗಿ ನೈಟ್ ಕ್ಲಬ್ ಅನ್ನು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾದ ಚರ್ಚೆ ವಿಷಯ ಎಂದರೆ ಪೋಲ್ ಡ್ಯಾನ್ಸ್ ಪ್ಲಾಟ್‌ಫಾರ್ಮ್ ಕೂಡ ಇದೆ. ಪಾರ್ಟಿ ಮಾಡಲು ಹಾಗೂ ಗೆಳೆಯ, ಗೆಳತಿಯರೊಂದಿಗೆ ಪಾರ್ಟಿ ಮಾಡಲು ಕ್ರಿಸ್ ಗೇಲ್ ಖುಷಿ ಪಡುತ್ತಾರೆ. ಹೀಗಾಗಿಯೇ ಮನೆಯಲ್ಲಿ ಪೋಲ್ ಡ್ಯಾನ್ಸ್ ಪ್ಲಾಟ್‌ಫಾರ್ಮ್ ಅನ್ನು ಮನೆಯಲ್ಲಿ ಮಾಡಿಬಿಟ್ಟಿದ್ದಾರೆ.
ಕ್ರಿಸ್ ಗೇಲ್ ಅವರ ಲೈಫ್‌ಸ್ಟೈಲ್ ಇತರೆ ಕ್ರಿಕೆಟರ್‌ಗಳಿಗಿಂತ ತುಂಬಾ ವಿಭಿನ್ನವಾಗಿದೆ. ಕ್ಲಬ್ ಲೇಸರ್ ಲೈಟ್ಸ್, ಡಿಜೆ ಸೆಟಪ್ ಮತ್ತು ದುಬಾರಿ ಮದ್ಯದಿಂದ ಸಂಪೂರ್ಣವಾಗಿ ಅವರ ನೈಟ್‌ಕ್ಲಬ್ ಇರುತ್ತದೆ. ಜಮೈಕಾದ ಅಂದವನ್ನು ಕ್ರಿಸ್ ಗೇಲ್ ಅವರ ಮನೆಯೊಳಗೆ ನೋಡಬಹುದು ಅಂತೆ. ಅಂಷ್ಟೊಂದು ಸುಂದರವಾಗಿ ಮನೆಯನ್ನು ಶೃಂಗಾರ ಮಾಡಿಸಿದ್ದಾರೆ. ಗೇಲ್ ಅವರು ಇಂತಹ ಸುದ್ದಿಗಳಿಂದ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಗೇಲ್ ಅವರ ಅಧಿಕೃತವಾದ ಸಾಮಾಜಿಕ ಜಾಲತಾಣಕ್ಕೆ ಭೇಟಿ ನೀಡಿದರೆ ಸಾಕು ಅವರ ಐಷಾರಾಮಿ ಲೈಫ್‌ಸ್ಟೈಲ್ ಹೇಗಿದೆ, ಎಷ್ಟೊಂದು ಎಂಜಾಯ್ ಮಾಡುತ್ತಾರೆ ಎನ್ನುವುದು ನಿಮಗೂ ತಿಳಿಯುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಆಗಿರಲಿ ಅಥವಾ ಇಂಟರ್‌ನ್ಯಾಷನಲ್ ಕ್ರಿಕೆಟ್ ಆಗಿರಲಿ ಆ ಸಮಯದಲ್ಲಿ ಕ್ರಿಸ್ ಗೇಲ್ ಅವರು ಮದ್ಯರಾತ್ರಿವರೆಗೂ ಪಾರ್ಟಿಗಳಲ್ಲೇ ಇರುತ್ತಿದ್ದರಂತೆ. ಕ್ರಿಸ್ ಗೇಲ್ ಜೊತೆ ಇದ್ರೆ ಪಾರ್ಟಿ ಜೊತೆಯಲ್ಲಿದ್ದಂತೆ. ಗೇಲ್ ವಿದೇಶಿ ಮಾಡೆಲ್‌ಗಳ ಜೊತೆ ಹೋಟೆಲ್, ಪಬ್‌ಗಳಲ್ಲಿ ಡ್ಯಾನ್ಸ್ ಮಾಡುವುದು ಈಗಾಗಲೇ ನೀವು ನೋಡಿರಬಹುದು. ಒಮ್ಮೆ ಸಂದರ್ಶನವೊಂದರಲ್ಲಿ ಮಹಿಳಾ ಪತ್ರಕರ್ತೆಗೆ ನಾಚಿಕೆ ಬೇಡ ಮಗು ಎಂದಿದ್ದು ಸಾಕಷ್ಟು ಚರ್ಚೆ ಆಗಿತ್ತು. ಇದರಿಂದ ಗೇಲ್ ಅವರು ಗಂಭೀರವಾದ ಪರಿಣಾಮಗಳನ್ನು ಎದುರಿಸಿದ್ದರು ಎಂದು ಹೇಳಲಾಗುತ್ತದೆ.
ಪೂಲ್ ಪಾರ್ಟಿ ಮಾಡುವುದರಲ್ಲೂ ಕ್ರಿಸ್ ಗೇಲ್ ಎತ್ತಿದ ಕೈ. ದಿನಪೂರ್ತಿ ಪಾರ್ಟಿ ಮೂಡ್‌ನಲ್ಲಿಯೇ ಕ್ರಿಸ್ ಗೇಲ್ ಇರುತ್ತಾರೆ ಎಂದರೆ ಅವರ ಜೀವನ ಹೇಗಿರಬಹುದು ಎನ್ನುವುದು ನಿಮ್ಮ ಯೋಚನೆ ಆಗಿರಬಹುದು. ಗೇಲ್ ಅವರು ಅವಾಗವಗ ಭಾರೀ ಬೆಲೆಗಳಳ್ಳು ಐಷಾರಾಮಿ ಕಾರುಗಳು, ಖಾಸಗಿ ಜೆಟ್‌ಗಳು ಹಾಗೂ ಬಿಕಿನಿ ಮಾಡೆಲ್‌ಗಳೊಂದಿಗೆ ಪೂಲ್ ಪಾರ್ಟಿಗಳನ್ನೂ ಮಾಡಿರುವ ಫೋಟೋಗಳು, ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ನೀವು ನೋಡಬಹುದು. ಈ ಫೋಟೋಗಳಿಂದಲೇ ತಿಳಿಯುತ್ತದೆ. ಕ್ರಿಸ್ ಗೇಲ್ ಅವರ ಲೈಫ್ ಸ್ಟೈಲ್ ಹೇಗಿರುತ್ತದೆ ಅಂತ ಅಲ್ವಾ. ಇದು ಅಲ್ಲದೇ ಆಗಾಗ ವೆಸ್ಟ್ ಇಂಡೀಸ್‌ನ ಸಂಪ್ರದಾಯಿಕ ಹಬ್ಬಗಳಲ್ಲಿ ರೋಡ್‌ಗಳಲ್ಲಿ ಹೋಗುತ್ತ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಎಷ್ಟೇ ಟೀಕೆಗಳು ಬಂದರೂ, ಜನರು ನಿರಂತರವಾಗಿ ಅವರ ಬಗ್ಗೆ ವದಂತಿಗಳು ಹಬ್ಬಿಸಿದರೂ ಕ್ರಿಸ್ ಗೇಲ್ ಅವರು ಎಂದಿಗೂ ತಲೆಕೆಡಿಸಿಕೊಂಡಿಲ್ಲ. ತಮ್ಮ ಪಾರ್ಟಿ, ಪೂಲ್ ಪಾರ್ಟಿ, ಡ್ಯಾನ್ಸ್ ಸೇರಿದಂತೆ ಎಲ್ಲವನ್ನು ಫುಲ್ ಎಂಜಾಯ್ ಮಾಡುತ್ತಿರುತ್ತಾರೆ. ಎಷ್ಟೋ ಅಭಿಮಾನಿಗಳು ಅವರ ವೈಯಕ್ತಿಕ ಲೈಫ್‌ಸ್ಟೈಲ್ ಅನ್ನು ಒಪ್ಪಿಕೊಂಡಿದ್ದಾರೆ. ಅವರ ಜೀವನ ಅವರು ಅಂದುಕೊಂಡಂತೆ ಇರುತ್ತಾರೆ. ಬೇರೆಯವರಿಗೆ ಏನು ಎಂದು ಪ್ರಶ್ನೆ ಮಾಡಿದವರು ಇದ್ದಾರೆ. ಕೆಲ ಕ್ರಿಕೆಟ್ ವಿಮರ್ಶಕರು ಕ್ರಿಸ್ ಗೇಲ್ ಅವರು ಸಂಪ್ರದಾಯವನ್ನು ಪಾಲಿಸುತ್ತಿಲ್ಲ ಎಂದು ಹೇಳಿದ್ದು ಇದೆ. ಕ್ರಿಕೆಟ್ ಜಗತ್ತಿನಲ್ಲಿ ಮಹತ್ತರ ಸಾಧನೆಗಳನ್ನು ಮಾಡಿರುವ ಕ್ರಿಸ್ ಗೇಲ್ ಮೈದಾನ ಹೊರಗಿನ ಅವರ ಕಲರ್‌ಫುಲ್ ಲೈಫ್ ಕೆಲವೊಮ್ಮೆ ವಿವಾದಕ್ಕೆ ಎಳೆಯಾಗಿದ್ದು ಇದೆ.
ಕ್ರಿಸ್ ಗೇಲ್ ಅವರ ಅಂತರಾಷ್ಟ್ರೀಯ ದಾಖಲೆಗಳು; ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲೂ ಶತಕಗಳನ್ನು ಬಾರಿಸಿದ್ದಾರೆ. ಒಂದು ರೀತಿಯಲ್ಲಿ ಮೂರು ಸ್ವರೂಪಗಳಲ್ಲಿ ಶತಕಗಳ ವೀರ ಎಂದು ಕ್ರಿಸ್ ಗೇಲ್ ಅವರನ್ನು ಕರೆಯಬಹುದು. ವೆಸ್ಟ್ ಇಂಡೀಸ್ ತಂಡದ ಪರವಾಗಿ ಬ್ಯಾಟ್ ಬೀಸುತ್ತಿದ್ದ ಈ ದೈತ್ಯ ಬ್ಯಾಟರ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ್ದಾರೆ. ವೇಗವಾಗಿ ಬ್ಯಾಟ್ ಬೀಸುವ ಇವರು ಟೆಸ್ಟ್ ಕ್ರಿಕೆಟ್‌ನಲ್ಲೂ ತ್ರಿಶತಕ ಬಾರಿಸಿದ್ದು ಅಚ್ಚರಿಯೇ ಸರಿ. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಏಕದಿನ ದ್ವಿಶತಕ ಬಾರಿಸಿದ ಕೀರ್ತಿ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ಇದಾದ ಮೇಲೆ ವಿಶ್ವದ ಬೇರೆ ಬೇರೆ ಬ್ಯಾಟರ್‌ಗಳು ಒಡಿಐನಲ್ಲಿ ದ್ವಿಶತಕ ಸಿಡಿಸಿದ್ದಾರೆ. ಇನ್ನು ಕ್ರಿಸ್ ಗೇಲ್ ಅವರು ಅಂತರಾಷ್ಟ್ರೀಯ T20 ಕ್ರಿಕೆಟ್‌ನಲ್ಲೂ ಶತಕ ಬಾರಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಆರ್‌ಸಿಬಿ ಪರವಾಗಿ ಆಡುವಾಗ ಕ್ರಿಸ್ ಗೇಲ್ ಅವರು 175 ರನ್‌ಗಳನ್ನು ಬಾರಿಸಿ ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ಇದುವರೆಗೂ ಯಾರು ಟಚ್ ಕೂಡ ಮಾಡಿಲ್ಲ.