Asian Games 2026, Team India Women won the gold medal; 2026 ಏಷ್ಯನ್ ಕ್ರೀಡಾಕೂಟದಲ್ಲಿ ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಭರ್ಜರಿ ಜಯ ಭಾರಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಈ ಮೂಲಕ ಜಪಾನ್‌ನಲ್ಲಿರುವ ಭಾರತದ ಕ್ರೀಡಾಪಟುಗಳ ಪೈಕಿ ಮೊಟ್ಟ ಮೊದಲ ಚಿನ್ನದ ಪದಕವನ್ನು ದೇಶಕ್ಕೆ ಹರ್ಮನ್‌ಪ್ರೀತ್ ಕೌರ್ ಪಡೆ ನೀಡಿದಂತೆ ಆಗಿದೆ. ಕಳೆದ ಎರಡು ದಿನಗಳಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಭಾರತದ ಅಥ್ಲಿಟಿಕ್ಸ್‌ಗಳು ಯಾರೋಬ್ಬರು ಚಿನ್ನದ ಪದಕಕ್ಕೆ ಕೊರೊಳೊಡ್ಡಿರಲಿಲ್ಲ. ಆದರೆ ಇದೀಗ ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಟೀಮ್ ಇಂಡಿಯಾ ವುಮೆನ್ಸ್ ಗೋಲ್ಡ್ ಮೆಡೆಲ್‌ಗೆ ಗೆದ್ದುಕೊಂಡಿದೆ.
ನಿಸ್ಸೀನ್‌ನ ಕೊರೊಗಿ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ 2026 ಏಷ್ಯನ್ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವುಮೆನ್ಸ್ ಮತ್ತು ಶ್ರೀಲಂಕಾದ ವುಮೆನ್ಸ್ ತಂಡದ ನಡುವೆ ದೊಡ್ಡ ಹೋರಾಟ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ವುಮೆನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಓಪನರ್‌ಗಳಾಗಿ ಕ್ರೀಸ್‌ಗೆ ಆಗಮಿಸಿದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅಮೋಘವಾದ ಪಾರ್ಟನರ್‌ಶಿಪ್‌ನಲ್ಲಿ ದೊಡ್ಡ ಮೊತ್ತದ ರನ್‌ಗಳನ್ನು ಕಲೆ ಹಾಕಿದರು.
ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಭರ್ಜರಿ ಬ್ಯಾಟಿಂಗ್‌ನಿಂದ ಟೀಮ್ ಇಂಡಿಯಾಗೆ 99 ರನ್‌ಗಳ ಕೊಡುಗೆ ನೀಡಿದರು. ಈ ವೇಳೆ ಬ್ಯಾಟಿಂಗ್ ಮಾಡುವಾಗ ಶಫಾಲಿ ವರ್ಮಾ ಅವರು 48 ರನ್‌ಗೆ ಔಟಾದರು. ಕೇವಲ ಎರಡು ರನ್‌ಗಳಿಂದ ಅರ್ಧಶತಕವನ್ನು ಮಿಸ್ ಮಾಡಿಕೊಂಡರು. ಇನ್ನೊಂದೆಡೆ ಬಿರುಸಿನ ಆಟ ಮುಂದುವರೆಸಿದ ಸ್ಮೃತಿ ಮಂಧಾನ ಅವರು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಶ್ರೀಲಂಕಾ ವಿರುದ್ಧ ಕೇವಲ 45 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಬ್ಯೂಟಿಫುಲ್ ಸಿಕ್ಸರ್‌ಗಳ ಸಮೇತ 79 ರನ್ ಸಿಡಿಸಿ ತಂಡಕ್ಕೆ ದೊಡ್ಡ ಕಾಣಿಕೆ ನೀಡಿದರು.
ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು 19 ರನ್ ಗಳಿಸಿ ಪೆವಿಲಿಯನ್‌ಗೆ ನಡೆದರು. ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ವೈಫಲ್ಯ ಅನುಭವಿಸಿದರು. ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಶ್ರೀಲಂಕಾ ಬೌಲರ್‌ಗಳಿಗೆ ಮನಬಂದಂತೆ ಚಚ್ಚಿದರು. ಕೇವಲ 22 ಎಸೆತಗಳನ್ನು ಎದುರಿಸಿದ ರಿಚಾ ಘೋಷ್ ಅವರು, 6 ಬೌಂಡರಿ ಮತ್ತು 3 ಸಿಕ್ಸರ್‌ಗಳಿಂದ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಓವರ್ ಮುಗಿದಿದ್ದರಿಂದ ಅರ್ಧಶತಕ ಗಳಿಸಲು ಆಗಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 217 ರನ್‌ಗಳ ಟಾರ್ಗೆಟ್ ಅನ್ನು ಶ್ರೀಲಂಕಾಗೆ ನೀಡಿತ್ತು.
217 ರನ್‌ಗಳ ಗುರಿಯನ್ನು ಬೆನ್ನು ಹತ್ತಿದ್ದ ಶ್ರೀಲಂಕಾ ಬೇಗನೇ ತಮ್ಮ ಆತ್ಮವಿಶ್ವಾಸ ಕಳೆದುಕೊಂಡರು ಎಂದು ಹೇಳಬಹುದು. ಏಕೆಂದರೆ ಟೀಮ್ ಇಂಡಿಯಾದ ಬೌಲರ್‌ಗಳ ಮುಂದೆ ಶ್ರೀಲಂಕಾ ಆಟಗಾರ್ತಿಯರು ಹಾಗೇ ಬ್ಯಾಟಿಂಗ್ ಮಾಡಲು ಬಂದು ಹೀಗೆ ಔಟ್ ಆಗಿ ಹೋಗುತ್ತಿದ್ದರು. ನಾಯಕಿ ಚಾಮರಿ ಅಥಪಥಥ್ ಅವರು 29, ಇಮೇಶಾ ದುಲಾನಿ 3, ಕೌಶಾನಿ ನುತ್ಯಾಂಗಯನ್ 14, ಕವೀಶಾ 11 ರನ್ ಬಿಟ್ಟರೇ ಉಳಿದವರು ಯಾರು 3 ರನ್‌ಗಳ ಗಡಿ ಕೂಡ ದಾಟಲಿಲ್ಲ.
ಇದರಿಂದ ಅರ್ಥ ಆಗುತ್ತೆ ಶ್ರೀಲಂಕಾ ಆಟಗಾರ್ತಿಯರು ಯಾವ ರೀತಿ ಬ್ಯಾಟಿಂಗ್ ಮಾಡಿದರು ಅಂತ. ಬ್ಯಾಟಿಂಗ್ ಮಾಡಲು ಹರಸಾಹಸ ಪಟ್ಟ ಶ್ರೀಲಂಕಾ ಬ್ಯಾಟರ್ಸ್ ಅಂತಿಮವಾಗಿ 15.4 ಓವರ್‌ಗಳಲ್ಲಿ ಕೇವಲ 69 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದ ಟೀಮ್ ಇಂಡಿಯಾ ಬರೋಬ್ಬರಿ 147 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿತು. ಭಾರತದ ಪರವಾಗಿ ಶಫಾಲಿ ವರ್ಮಾ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಪ್ರಮುಖವಾದ ಎರಡು ವಿಕೆಟ್ ಕಬಳಿಸಿ ತಂಡಕ್ಕೆ ನೆರವಾದರು. ದೀಪ್ತಿ ಶರ್ಮಾ ಎಂದಿನಂತೆ ತಮ್ಮ ಬೌಲಿಂಗ್ ಕೈಚಳಕ ತೋರಿ ಭರ್ಜರಿಯಾಗಿ 3 ವಿಕೆಟ್‌ಗಳನ್ನು ಪಡೆದರು. ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು 2 ವಿಕೆಟ್ ಕಬಳಿಸಿದರೆ, ಶ್ರೀಚರಣಿ ಕೂಡ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಏಷ್ಯನ್ ಗೇಮ್ಸ್‌ನಲ್ಲಿ ಇದೊಂದು ಐತಿಹಾಸಿಕ ಸಾಧನೆ ಆಗಿದೆ. ಕಳೆದ ಎರಡು ದಿನಗಳಿಂದ ಟೀಮ್ ಇಂಡಿಯಾ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್‌ನಲ್ಲಿ ಪ್ರದರ್ಶನ ನೀಡಿದರು ಗೋಲ್ಡ್ ಮೆಡೆಲ್ ಗೆಲ್ಲುವುದಕ್ಕೆ ಆಗಿರಲಿಲ್ಲ. ಆದರೆ ಇದೀಗ ಭಾರತದ ಮಹಿಳಾ ಕ್ರಿಕೆಟ್ ತಂಡ ಗೋಲ್ಡ್ ಮೆಡೆಲ್‌ಗೆ ಕೊರೊಳೊಡ್ಡಿರವುದು ಐತಿಹಾಸಿಕ ಸಾಧನೆಯೇ ಸರಿ. ಈ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ವಿಭಾಗದಲ್ಲಿ ಟೀಮ್ ಇಂಡಿಯಾ ವುಮೆನ್ಸ್ ಚಿನ್ನದ ಪದಕ ಪಡೆದರೆ, ರನ್ನರ್ ಅಪ್ ಆಗಿರುವ ಶ್ರೀಲಂಕಾ ತಂಡವೂ ಸಿಲ್ವರ್ ಮೆಡೆಲ್‌ಗೆ ಕೊರೊಳೊಡ್ಡಿದೆ. ಇನ್ನು ಪಾಕಿಸ್ತಾನದ ಮಹಿಳಾ ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದು ಕಂಚು ಪಡೆದುಕೊಂಡಿದೆ.