• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ODI ನಲ್ಲಿ ಮತ್ತೊಂದು ದ್ವಿಶತಕ, ಕ್ಯಾಪ್ಟನ್‌ ಗಿಲ್‌ ಬರೆದ ದಾಖಲೆಗಳು.. ಆದರೂ ರೋಹಿತ್‌ ಶರ್ಮಾ ಟಾಪ್

ODI ನಲ್ಲಿ ಮತ್ತೊಂದು ದ್ವಿಶತಕ, ಕ್ಯಾಪ್ಟನ್‌ ಗಿಲ್‌ ಬರೆದ ದಾಖಲೆಗಳು.. ಆದರೂ ರೋಹಿತ್‌ ಶರ್ಮಾ ಟಾಪ್

62 ಎಸೆತಗಳಲ್ಲಿ ಶತಕ ಪೂರೈಸಿದ್ದ ಶುಭ್‌ಮನ್ ಗಿಲ್‌ ಅವರು 117 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ. ಶುಭ್‌ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ದ್ವಿಶತಕವನ್ನು ದಾಖಲಿಸಿ ರೋಹಿತ್‌ ಶರ್ಮಾ ಅವರ ನಂತರದ ಸ್ಥಾನ ಪಡೆದರು.

Written ByBhimappa
Published: Oct 01, 2026, 09:27 AM IST|Updated: Oct 01, 2026, 09:39 AM IST
joinshare
ODI ನಲ್ಲಿ ಮತ್ತೊಂದು ದ್ವಿಶತಕ, ಕ್ಯಾಪ್ಟನ್‌ ಗಿಲ್‌ ಬರೆದ ದಾಖಲೆಗಳು.. ಆದರೂ ರೋಹಿತ್‌ ಶರ್ಮಾ ಟಾಪ್
Image Credit: Name shubman_gill_223

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Shubman Gill hits another double century in ODI: ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಟೀಮ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ‌ ಜಯಭೇರಿ ಬಾರಿಸಿತು. ಟೀಮ್‌ ಇಂಡಿಯಾದ ಕ್ಯಾಪ್ಟನ್‌ ಶುಭ್‌ಮನ್‌ ಗಿಲ್ ಅವರು ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದರಿಂದ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ, ಭಾರತಕ್ಕೆ ಬರೋಬ್ಬರಿ 406 ರನ್‌ಗಳ ಗುರಿಯನ್ನು ನೀಡಿತ್ತು. ಈ ಟಾರ್ಗೆಟ್‌ ಬೆನ್ನ ಹತ್ತಿದ್ದ ಟೀಮ್‌ ಇಂಡಿಯಾ 43.3 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗೆ ಗುರಿ ತಲುಪಿ ಹಲವು ದಾಖಲೆಗೆ ಕಾರಣವಾಯಿತು.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್‌ ಶುಭಮನ್ ಗಿಲ್ ಅವರು ದ್ವಿಶತಕ ಬಾರಿಸಿದರು. 62 ಎಸೆತಗಳಲ್ಲಿ ಶತಕ ಪೂರೈಸಿದ್ದ ಶುಭ್‌ಮನ್ ಗಿಲ್‌ ಅವರು 117 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದಾರೆ. ಶುಭ್‌ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ದ್ವಿಶತಕವನ್ನು ದಾಖಲಿಸಿ ರೋಹಿತ್‌ ಶರ್ಮಾ ಅವರ ನಂತರದ ಸ್ಥಾನ ಪಡೆದರು. ರೋಹಿತ್ ಶರ್ಮಾ ಅವರು ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕಗಳ ಬಾರಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶುಭ್‌ಮನ್‌ ಗಿಲ್ ಅವರು ಕೇವಲ 117 ಎಸೆತಗಳಲ್ಲಿ 200 ರನ್‌ಗಳ ಗಡಿ ದಾಟಿದರು. ಇದಕ್ಕೂ ಮೊದಲು 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗಿಲ್ 208 ರನ್‌ಗಳ ಇನ್ನಿಂಗ್ಸ್ ಆಡಿದರು. ಏಕದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶತಕ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕ್ಯಾಪ್ಟನ್‌ ಗಿಲ್‌ ಅವರು ಪಾತ್ರರಾಗಿದ್ದಾರೆ.

ರನ್ ಚೇಸ್‌ನಲ್ಲಿ 2ನೇ ದ್ವಿಶತಕ; ನಾಯಕ ಶುಭಮನ್ ಗಿಲ್ ಏಕದಿನ ಪಂದ್ಯವೊಂದರಲ್ಲಿ ರನ್ ಚೇಸ್‌ನಲ್ಲಿ ದ್ವಿಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ, ಭಾರತೀಯ ಕ್ರಿಕೆಟಿಗರು ಮೊದಲು ಬ್ಯಾಟಿಂಗ್ ಮಾಡುವಾಗ ದ್ವಿಶತಕಗಳು ದಾಖಲಾಗಿದ್ದವು. ಇದಕ್ಕೂ ಮೊದಲು, ಆಸ್ಟ್ರೇಲಿಯಾದ ಬಿಗ್‌ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಮಾತ್ರ ಏಕದಿನ ಪಂದ್ಯಗಳಲ್ಲಿ ಅದರಲ್ಲಿ ವಿಶ್ವಕಪ್‌ನ ಪಂದ್ಯದಲ್ಲಿ ರನ್ ಚೇಸಿಂಗ್‌ ಮಾಡುವಾಗ ದ್ವಿಶತಕ ಗಳಿಸಿದ್ದರು. 2023ರ ವಿಶ್ವಕಪ್‌ನಲ್ಲಿ ಅವರು ಅಫ್ಘಾನಿಸ್ತಾನ ವಿರುದ್ಧ 201 ರನ್ ಗಳಿಸಿದ್ದರು. ಈಗ ಗಿಲ್ ಅವರ ಹೆಸರೂ ಈ ಪಟ್ಟಿಗೆ ಸೇರ್ಪಡೆ ಆಗಿದೆ ಎನ್ನಬಹುದು.

ಏಕದಿನ ಪಂದ್ಯಗಳಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿ ಬ್ಯಾಟ್ಸ್‌ಮನ್‌ಗಳು

117 ಎಸೆತಗಳು– ಶುಭಮನ್ ಗಿಲ್ vs ವೆಸ್ಟ್ ಇಂಡೀಸ್, ಗುವಾಹಟಿ 2026
126 ಬಾಲ್‌ಗಳು - ಇಶಾನ್ ಕಿಶನ್ ವಿರುದ್ಧ ಬಾಂಗ್ಲಾದೇಶ, ಚಟ್ಟೋಗ್ರಾಮ್ 2022
128 ಎಸೆತಗಳು – ಗ್ಲೆನ್ ಮ್ಯಾಕ್ಸ್‌ವೆಲ್ vs ಅಫ್ಘಾನಿಸ್ತಾನ, ವಾಂಖೆಡೆ 2023
136 ಎಸೆತಗಳು - ಪಾತುಮ್ ನಿಸ್ಸಾಂಕ ವಿರುದ್ಧ ಅಫ್ಘಾನಿಸ್ತಾನ, ಪಲ್ಲೆಕೆಲೆ 2024
138 ಎಸೆತಗಳು – ಕ್ರಿಸ್ ಗೇಲ್ vs ಜಿಂಬಾಬ್ವೆ, ಕ್ಯಾನ್‌ಬೆರಾ 2015

ಏಕದಿನ ಪಂದ್ಯಗಳಲ್ಲಿ ರನ್ ಚೇಸಿಂಗ್ ಮಾಡುವಾಗ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯ ದಾಖಲೆಯನ್ನು ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಹೊಂದಿದ್ದರು. ಇಬ್ಬರೂ 183 ರನ್ ಗಳಿಸಿದ್ದರು. ಮಹೇಂದ್ರ ಸಿಂಗ್‌ ಧೋನಿ ಅವರು ಶ್ರೀಲಂಕಾ ವಿರುದ್ಧ ಮತ್ತು ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ವಿರುದ್ಧ ರನ್‌ ಗಳಿಸಿ ದಾಖಲೆ ಬರೆದಿದ್ದರು. ಆದರೆ ಈಗ ಈವೆಲ್ಲ ಅಳಿಸಿ ಹಾಕಿರುವ ಶುಭ್‌ಮನ್‌ ಗಿಲ್‌ ಅವರು ಏಕದಿನ ಪಂದ್ಯದಲ್ಲಿ ರನ್ ಚೇಸಿಂಗ್‌ನಲ್ಲಿ 223 ರನ್‌ಗಳನ್ನು ಬಾರಿಸಿ ಅಗ್ರಜನಾಗಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಟೀಮ್‌ ಇಂಡಿಯಾ 2-0 ದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇದು ವೆಸ್ಟ್‌ ಇಂಡೀಸ್‌ ತಂಡಕ್ಕೆ ದೊಡ್ಡ ನಷ್ಟವೇ ಎನ್ನಬಹುದು. ನಿನ್ನೆಯ ಪಂದ್ಯದಲ್ಲಿ ಬೃಹತ್‌ ರನ್‌ಗಳ ಟಾರ್ಗೆಟ್‌ ನೀಡಿದ್ದರಿಂದ ಗೆಲುವು ನಮ್ಮದೇ ಎಂದು ಅವರು ಭಾವಿಸಿದ್ದರು. ಆದರೆ ಇದನ್ನು ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಮತ್ತು ಶುಭ್‌ಮನ್‌ ಗಿಲ್‌ ಬ್ಯಾಟಿಂಗ್‌ ಬಲದಿಂದ ಭಾರತ ಅಮೋಘವಾದ ಗೆಲುವು ಪಡೆಯಿತು. 406 ರನ್‌ಗಳನ್ನು ಚೇಸಿಂಗ್‌ ಮಾಡಿರುವುದು ದೊಡ್ಡ ದಾಖಲೆಯೇ ಆಗಿದೆ. 
 

Add Zee News as a Preferred Source
TAGS:
Cricket