SOCIAL MEDIA

Newsletter

PARTNER SITES
Select Language Select State

Ind vs Pak: ವೈಭವ್ ಸೂರ್ಯವಂಶಿ ತಲೆಗೆ ಬಡಿದ ವಿಪ್ರಜ್ ನಿಗಮ್ ಕಾಲು! ವಿಡಿಯೋ ನೋಡಿ

ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ವೈಭವ್ ಸೂರ್ಯವಂಶಿ ಮತ್ತು ವಿಪ್ರಜ್ ನಿಗಮ್ ಡಿ*ಕ್ಕಿಯಾಗಿದ್ದಾರೆ. ಬೌಂಡರಿ ತಡೆಯುವ ಪ್ರಯತ್ನದಲ್ಲಿ ವಿಪ್ರಜ್ ನಿಗಮ್ ಅವರ ಕಾಲು ವೈಭವ್ ತಲೆಗೆ ಬಡಿದಿದ್ದು, ಅವರು ನೋವಿನಿಂದ ಮೈದಾನದಲ್ಲಿ ಕುಳಿತರು. ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡ ವೈಭವ್ ಮತ್ತೆ ಫೀಲ್ಡಿಂಗ್ ಮುಂದುವರಿಸಿದ್ದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.

Written By Puttaraj K Alur
Published: Nov 22, 2026, 19:48 IST | Updated: Nov 22, 2026, 19:59 IST
Image Credit: Vaibhav Sooryavanshi
Join

India vs Pakistan: ದೋಹಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಬೌಂಡರಿ ತಡೆಯುವ ಪ್ರಯತ್ನದಲ್ಲಿ ಭಾರತದ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ವಿಪ್ರಜ್ ನಿಗಮ್ ಪರಸ್ಪರ ಡಿ*ಕ್ಕಿ ಹೊಡೆದಿದ್ದಾರೆ. ಈ ವೇಳೆ ವಿಪ್ರಜ್ ನಿಗಮ್ ಅವರ ಕಾಲು ವೈಭವ್ ಸೂರ್ಯವಂಶಿ ಅವರ ತಲೆಗೆ ಬಡಿದಿದ್ದು, ಕೆಲಕಾಲ ಮೈದಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ವೈಭವ್ ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡು ಮತ್ತೆ ಫೀಲ್ಡಿಂಗ್ ಮುಂದುವರಿಸಿದ್ದಾರೆ.

ಬೌಂಡರಿ ಲೈನ್ ಬಳಿ ನಡೆದ ಘಟನೆ

ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಎ ತಂಡದ ನಾಯಕ ಅಬ್ದುಲ್ ಸಮದ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಪಾಕಿಸ್ತಾನದ ಪರ ಆರಂಭಿಕ ಆಟಗಾರ ಶಮೀಲ್ ಹುಸೇನ್ ಉತ್ತಮ ಆರಂಭ ನೀಡುವ ಪ್ರಯತ್ನದಲ್ಲಿದ್ದರು. ಮತ್ತೊಂದು ತುದಿಯಲ್ಲಿ ಮಾಜ್ ಸದಾಕತ್ ಬ್ಯಾಟಿಂಗ್ ಮಾಡುತ್ತಿದ್ದರು. ಪಾಕಿಸ್ತಾನದ ಇನ್ನಿಂಗ್ಸ್‌ನ ಮೂರನೇ ಓವರ್‌ನ ಐದನೇ ಎಸೆತದಲ್ಲಿ ಈ ಘಟನೆ ಸಂಭವಿಸಿದೆ. ಭಾರತದ ವೇಗದ ಬೌಲರ್ ಹರ್ಷಿತ್ ರಾಣಾ ಎಸೆದ ಚೆಂಡನ್ನ ಮಾಜ್ ಸದಾಕತ್ ಆನ್‌ಸೈಡ್‌ನತ್ತ ಬಲವಾಗಿ ಹೊಡೆದರು. ಚೆಂಡು ಸ್ಕ್ವೇರ್ ಲೆಗ್ ಮೇಲಿನಿಂದ ವೇಗವಾಗಿ ಬೌಂಡರಿ ಕಡೆಗೆ ಸಾಗುತ್ತಿತ್ತು.

ಈ ವೇಳೆ ಚೆಂಡನ್ನ ತಡೆಯಲು ಸ್ಕ್ವೇರ್ ಲೆಗ್ ಮತ್ತು ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್ ಭಾಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೈಭವ್ ಸೂರ್ಯವಂಶಿ ಹಾಗೂ ವಿಪ್ರಜ್ ನಿಗಮ್ ಇಬ್ಬರೂ ವೇಗವಾಗಿ ಓಡಿದರು. ಬೌಂಡರಿ ಗೆರೆ ದಾಟುವ ಹಂತದಲ್ಲಿದ್ದ ಚೆಂಡನ್ನ ತಡೆಯಲು ವಿಪ್ರಜ್ ನಿಗಮ್ ಡೈವ್ ಹೊಡೆದರು. ಇದೇ ಸಂದರ್ಭದಲ್ಲಿ ಅವರ ಕಾಲು ನೇರವಾಗಿ ಓಡಿ ಬರುತ್ತಿದ್ದ ವೈಭವ್ ಸೂರ್ಯವಂಶಿ ಅವರ ತಲೆಗೆ ಬಡಿದಿದೆ. ಇಬ್ಬರೂ ಆಟಗಾರರು ವೇಗವಾಗಿ ಓಡಿ ಬಂದಿದ್ದರಿಂದ ಡಿ*ಕ್ಕಿಯ ರಭಸ ಹೆಚ್ಚಾಗಿತ್ತು. ಮೈದಾನದಲ್ಲಿ ಈ ದೃಶ್ಯ ಕಂಡ ಆಟಗಾರರು ಮತ್ತು ಅಭಿಮಾನಿಗಳು ಕೆಲಕಾಲ ಆತಂಕಕ್ಕೊಳಗಾದರು.

ನೋವಿನಿಂದ ಮೈದಾನದಲ್ಲೇ ಕುಳಿತ ವೈಭವ್

 

 ಡಿ*ಕ್ಕಿಯ ಪರಿಣಾಮ 15 ವರ್ಷದ ವೈಭವ್ ಸೂರ್ಯವಂಶಿ ತಕ್ಷಣವೇ ನೋವಿನಿಂದ ಮೈದಾನದಲ್ಲೇ ಕುಳಿತುಕೊಂಡರು. ಅವರು ತಮ್ಮ ಭುಜವನ್ನ ಹಿಡಿದುಕೊಂಡು ಕುಳಿತಿದ್ದರಿಂದ ಗಾಯದ ತೀವ್ರತೆ ಕುರಿತು ಆತಂಕ ಮೂಡಿತು. ಯುವ ಆಟಗಾರನಿಗೆ ಗಂಭೀರ ಗಾಯವಾಗಿರಬಹುದೇ ಎಂಬ ಭೀತಿ ಭಾರತೀಯ ತಂಡದ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ವೈಭವ್ ಚೇತರಿಸಿಕೊಂಡಿದ್ದು ಸಮಾಧಾನ ತಂದಿತು. ಬಳಿಕ ಅವರು ಮತ್ತೆ ಫೀಲ್ಡಿಂಗ್ ಮುಂದುವರಿಸಿದರು. ಮೈದಾನದಲ್ಲಿ ಅವರು ಆರೋಗ್ಯವಾಗಿಯೇ ಕಾಣಿಸಿಕೊಂಡರು. ಆರಂಭದಲ್ಲಿ ಆತಂಕ ಮೂಡಿಸಿದ್ದ ಈ ಘಟನೆ ಕೊನೆಗೆ ವೈಭವ್ ಆಟ ಮುಂದುವರಿಸುವುದರೊಂದಿಗೆ ತಾತ್ಕಾಲಿಕವಾಗಿ ನಿರಾಳತೆ ತಂದಿತು.

 

ಯುವ ಆಟಗಾರರ ಮೇಲೆ ಎಲ್ಲರ ಗಮನ

ವೈಭವ್ ಸೂರ್ಯವಂಶಿ ಈಗಾಗಲೇ ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿರುವ ಯುವ ಆಟಗಾರ. ಇಂತಹ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನಡೆದ ಈ ಡಿ*ಕ್ಕಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಮತ್ತೊಂದೆಡೆ, ವಿಪ್ರಜ್ ನಿಗಮ್ ಕೂಡ ಬೌಂಡರಿ ತಡೆಯುವ ಪ್ರಯತ್ನದಲ್ಲಿದ್ದಾಗ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ಕ್ರಿಕೆಟ್ ಮೈದಾನದಲ್ಲಿ ವೇಗವಾಗಿ ಸಾಗುವ ಚೆಂಡನ್ನ ತಡೆಯಲು ಫೀಲ್ಡರ್‌ಗಳು ಕ್ಷಣಾರ್ಧದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಕೆಲವೊಮ್ಮೆ ಒಂದೇ ಚೆಂಡನ್ನ ತಡೆಯಲು ಇಬ್ಬರು ಆಟಗಾರರು ಒಂದೇ ದಿಕ್ಕಿನಲ್ಲಿ ಓಡುವ ಸಂದರ್ಭಗಳೂ ಎದುರಾಗುತ್ತವೆ. ಈ ಪಂದ್ಯದಲ್ಲಿಯೂ ಅದೇ ರೀತಿಯ ಪರಿಸ್ಥಿತಿಯಲ್ಲಿ ಇಬ್ಬರು ಆಟಗಾರರು ಡಿಕ್ಕಿಯಾಗಿದ್ದಾರೆ. ಒಟ್ನಲ್ಲಿ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯದಲ್ಲಿ ನಡೆದ ಈ ಘಟನೆ ಕೆಲಕಾಲ ಆತಂಕ ಸೃಷ್ಟಿಸಿತು. ವೈಭವ್ ಸೂರ್ಯವಂಶಿ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಮರಳಿದ್ದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES