• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಐಪಿಎಲ್‌ನಲ್ಲಿ ₹40 ಕೋಟಿ ಡಿಮ್ಯಾಂಡ್! ಯಾರು ಆ ಇಬ್ಬರು ಸ್ಟಾರ್ ಆಟಗಾರರು?

ಐಪಿಎಲ್‌ನಲ್ಲಿ ₹40 ಕೋಟಿ ಡಿಮ್ಯಾಂಡ್! ಯಾರು ಆ ಇಬ್ಬರು ಸ್ಟಾರ್ ಆಟಗಾರರು?

ಐಪಿಎಲ್‌ನಲ್ಲಿ ತಂಡದಲ್ಲಿ ಉಳಿಯಲು ಭಾರತದ ಇಬ್ಬರು ಸ್ಟಾರ್ ಆಟಗಾರರು ತಲಾ ₹40 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾರ ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಕೇಳಿಬರುತ್ತಿವೆ. ಆದರೆ ಬೇಡಿಕೆ ಇಟ್ಟಿರುವ ಇಬ್ಬರು ಆಟಗಾರರು ಯಾರು ಎಂಬುದು ಇನ್ನೂ ಅಧಿಕೃತವಾಗಿ ಬಹಿರಂಗವಾಗಿಲ್ಲ. ಫ್ರಾಂಚೈಸಿಗಳು ಬೇಡಿಕೆಗೆ ಒಪ್ಪದಿದ್ದರೆ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳುವ ಸಾಧ್ಯತೆಯೂ ಇದೆ.

Written ByPuttaraj K Alur
Published: Nov 07, 2026, 10:39 IST|Updated: Nov 07, 2026, 10:54 IST
joinshare
ಐಪಿಎಲ್‌ನಲ್ಲಿ ₹40 ಕೋಟಿ ಡಿಮ್ಯಾಂಡ್! ಯಾರು ಆ ಇಬ್ಬರು ಸ್ಟಾರ್ ಆಟಗಾರರು?
Image Credit: IPL Mega Auction

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

IPL 2027 Mega Auction: ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2027) ನಲ್ಲಿ ಆಟಗಾರರ ಸಂಭಾವನೆ ವಿಚಾರ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಭಾರತದ ಇಬ್ಬರು ಪ್ರಮುಖ ಆಟಗಾರರು ತಮ್ಮನ್ನು ತಂಡದಲ್ಲಿ ಉಳಿಸಿಕೊಳ್ಳಲು ಬರೋಬ್ಬರಿ 40 ಕೋಟಿ ರೂಪಾಯಿ ನೀಡಬೇಕೆಂದು ಫ್ರಾಂಚೈಸಿಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಐಪಿಎಲ್ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಆಟಗಾರರ ಬೇಡಿಕೆ ಈಡೇರಿಸಲು ಫ್ರಾಂಚೈಸಿಗಳು ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬ ಪ್ರಶ್ನೆ ಎದುರಾಗಿದೆ.

ವರದಿಯ ಪ್ರಕಾರ, ಕನಿಷ್ಠ ಇಬ್ಬರು ಪ್ರಮುಖ ಆಟಗಾರರು ತಮ್ಮ ಹಾಲಿ ತಂಡಗಳಲ್ಲಿ ಮುಂದುವರಿಯಬೇಕಾದರೆ ತಲಾ 40 ಕೋಟಿ ರೂಪಾಯಿ ಸಂಭಾವನೆ ನೀಡಬೇಕೆಂದು ತಿಳಿಸಿದ್ದಾರಂತೆ. ಈ ಮೊತ್ತಕ್ಕೆ ಒಪ್ಪಿಗೆ ದೊರೆಯದಿದ್ದರೆ ತಂಡದ ರಿಟೆನ್ಷನ್ ಒಪ್ಪಂದವನ್ನ ತಿರಸ್ಕರಿಸಿ ಮುಕ್ತ ಹರಾಜಿನಲ್ಲಿ ಭಾಗವಹಿಸುವುದಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಇಬ್ಬರು ಆಟಗಾರರ ಹೆಸರುಗಳನ್ನ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. 

ಯಾರು ಆ ಇಬ್ಬರು ಆಟಗಾರರು?

40 ಕೋಟಿ ರೂಪಾಯಿ ಬೇಡಿಕೆ ಇಟ್ಟಿರುವ ಆಟಗಾರರು ಯಾರು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಐಪಿಎಲ್ ವಲಯದಲ್ಲಿ ಐವರು ಪ್ರಮುಖ ಭಾರತೀಯ ಆಟಗಾರರ ಹೆಸರುಗಳು ಚರ್ಚೆಗೆ ಬಂದಿವೆ. ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರ ಹೆಸರುಗಳು ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಕೇಳಿಬರುತ್ತಿವೆ. ಈ ಐವರಲ್ಲಿ ಯಾರಾದರೂ ಇಬ್ಬರು 40 ಕೋಟಿ ರೂಪಾಯಿ ಬೇಡಿಕೆ ಇಟ್ಟಿರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಇವರಲ್ಲಿ ಯಾರೇ ಆ ಬೇಡಿಕೆ ಇಟ್ಟಿದ್ದಾರೆ ಎಂಬುದಕ್ಕೆ ಅಧಿಕೃತ ದೃಢೀಕರಣವಿಲ್ಲ. ಹೀಗಾಗಿ ಸದ್ಯಕ್ಕೆ ಈ ಹೆಸರುಗಳನ್ನ ಸಂಭಾವ್ಯ ಅಭ್ಯರ್ಥಿಗಳೆಂದಷ್ಟೇ ಪರಿಗಣಿಸಲಾಗುತ್ತಿದೆ.

ಐವರು ಆಟಗಾರರ ಹೆಸರುಗಳೇಕೆ ಚರ್ಚೆಯಲ್ಲಿವೆ?

ಈ ಐವರು ಆಟಗಾರರ ಹೆಸರುಗಳು ಕೇಳಿಬರಲು ಅವರ ಪ್ರಸ್ತುತ ಸಂಭಾವನೆ, ತಂಡದಲ್ಲಿನ ಸ್ಥಾನಮಾನ ಹಾಗೂ ನಾಯಕತ್ವದ ಜವಾಬ್ದಾರಿಗಳು ಪ್ರಮುಖ ಕಾರಣಗಳಾಗಿವೆ.

ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಅಯ್ಯರ್ ಪ್ರಸ್ತುತ ₹26.75 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಹಿಂದೆ ಕೆಕೆಆರ್ ತಂಡಕ್ಕೆ ನಾಯಕತ್ವ ನೀಡಿ ಪ್ರಶಸ್ತಿ ಗೆಲ್ಲಿಸಿದ್ದ ಅನುಭವವೂ ಅವರಿಗಿದೆ.

ಹಾರ್ದಿಕ್ ಪಾಂಡ್ಯ: ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪ್ರಸ್ತುತ ₹16.35 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಭಾರತದ ಪ್ರಮುಖ ಟಿ20 ಆಲ್‌ರೌಂಡರ್ ಆಗಿರುವುದರಿಂದ ಅವರ ಹೆಸರು ಚರ್ಚೆಯಲ್ಲಿದೆ.

ಜಸ್‌ಪ್ರೀತ್ ಬುಮ್ರಾ: ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಬುಮ್ರಾ ₹18 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಪಂದ್ಯದ ಫಲಿತಾಂಶ ಬದಲಿಸುವ ಸಾಮರ್ಥ್ಯ ಹೊಂದಿರುವ ಆಟಗಾರ ಎಂಬ ಕಾರಣಕ್ಕೆ ಅವರ ಹೆಸರೂ ಕೇಳಿಬರುತ್ತಿದೆ.

ಶುಭ್‌ಮನ್ ಗಿಲ್: ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿರುವ ಗಿಲ್ ₹16.50 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ತಂಡದ ಭವಿಷ್ಯದ ನಾಯಕತ್ವದ ದೃಷ್ಟಿಯಿಂದಲೂ ಅವರ ಹೆಸರು ಚರ್ಚೆಯಾಗುತ್ತಿದೆ.

ಅಭಿಷೇಕ್ ಶರ್ಮಾ: ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಅಭಿಷೇಕ್ ₹14 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ಅವರ ಹೆಸರೂ ಸಂಭಾವ್ಯ ಪಟ್ಟಿಯಲ್ಲಿದೆ.

ಈ ಐವರಲ್ಲಿ ಇಬ್ಬರು ಆಟಗಾರರು 40 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂಬುದು ಸದ್ಯದ ಚರ್ಚೆಯಾಗಿದೆ. ಆದರೆ ವರದಿಯಲ್ಲಿ ಕನಿಷ್ಠ ಒಬ್ಬ ಆಟಗಾರನ ಬೇಡಿಕೆ ನಾಯಕತ್ವದ ಜವಾಬ್ದಾರಿಗೂ ಸಂಬಂಧಿಸಿದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಕೇವಲ ಸಂಭಾವನೆಯಷ್ಟೇ ಅಲ್ಲದೆ ತಂಡದ ನಾಯಕತ್ವದ ವಿಚಾರವೂ ಈ ಒಪ್ಪಂದದಲ್ಲಿ ಪ್ರಮುಖವಾಗಿರಬಹುದು.

ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಹರಾಜಿನಲ್ಲಿ ಪಡೆದಿದ್ದ ಮೊತ್ತವೆಷ್ಟು?

ಈ ಹಿಂದೆಯೂ ಕೆಲವು ಪ್ರಮುಖ ಆಟಗಾರರು ತಮ್ಮ ಹಾಲಿ ತಂಡಗಳ ರಿಟೆನ್ಷನ್ ಪ್ರಸ್ತಾಪವನ್ನ ಒಪ್ಪಿಕೊಳ್ಳದೆ ಹರಾಜಿನ ಮೂಲಕ ಹೆಚ್ಚಿನ ಸಂಭಾವನೆ ಪಡೆದಿದ್ದರು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಅವರನ್ನ ಲಖನೌ ಸೂಪರ್ ಜೈಂಟ್ಸ್ ತಂಡ ₹27 ಕೋಟಿಗೆ ಖರೀದಿಸಿತ್ತು. ಶ್ರೇಯಸ್ ಅಯ್ಯರ್ ಅವರನ್ನ ಪಂಜಾಬ್ ಕಿಂಗ್ಸ್ ₹26.75 ಕೋಟಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಈ ಹಿಂದೆ ನಡೆದ ಹರಾಜಿನ ಮೊತ್ತಗಳೇ ಈಗಿನ ಆಟಗಾರರ ಬೇಡಿಕೆಗಳ ಚರ್ಚೆಗೆ ಒಂದು ಹಿನ್ನೆಲೆಯಾಗಿದೆ. ಹರಾಜಿನಲ್ಲಿ ಹಲವು ಫ್ರಾಂಚೈಸಿಗಳು ಬಿಡ್ ಮಾಡುವ ಅವಕಾಶ ಇರುವುದರಿಂದ, ತಮ್ಮ ಮಾರುಕಟ್ಟೆ ಮೌಲ್ಯಕ್ಕೆ ತಕ್ಕ ಸಂಭಾವನೆ ಪಡೆಯಬಹುದು ಎಂಬ ನಿರೀಕ್ಷೆ ಆಟಗಾರರಲ್ಲಿರಬಹುದು ಎಂದು ಹೇಳಲಾಗಿದೆ.

ತಂಡಗಳ ಪರ್ಸ್ ₹150 ಕೋಟಿಗೆ ಏರಿಕೆಯಾಗುತ್ತಾ?

ಐಪಿಎಲ್ ಮೆಗಾ ಹರಾಜಿನ ವೇಳೆಗೆ ಪ್ರತಿ ಫ್ರಾಂಚೈಸಿಯ ಆಟಗಾರರ ಖರೀದಿ ಮೊತ್ತದ ಮಿತಿ ಸುಮಾರು ₹150 ಕೋಟಿಗೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಿದೆ. ಆದರೆ ಈ ಮೊತ್ತ ಇನ್ನೂ ಅಧಿಕೃತವಾಗಿ ನಿರ್ಧಾರವಾಗಿಲ್ಲ. ಪ್ರಸ್ತುತ ಸೀಸನ್‌ಗೆ ತಂಡಗಳ ಪರ್ಸ್ ₹130 ಕೋಟಿಯಾಗಿದೆ. ಒಂದು ವೇಳೆ ₹150 ಕೋಟಿ ಪರ್ಸ್ ನಿಗದಿಯಾದರೆ, ಒಬ್ಬ ಆಟಗಾರನಿಗೆ ₹40 ಕೋಟಿ ನೀಡುವುದು ತಂಡದ ಒಟ್ಟು ಬಜೆಟ್‌ನ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚು ಮೊತ್ತವಾಗುತ್ತದೆ. ಇದರಿಂದ ಉಳಿದ ಆಟಗಾರರನ್ನ ಖರೀದಿಸಲು ಫ್ರಾಂಚೈಸಿಗಳ ಬಳಿ ಕಡಿಮೆ ಹಣ ಉಳಿಯಬಹುದು. ವಿಶೇಷವಾಗಿ ಹಲವು ಪ್ರಮುಖ ಆಟಗಾರರನ್ನ ಉಳಿಸಿಕೊಳ್ಳಲು ಬಯಸುವ ತಂಡಗಳಿಗೆ ಇದು ಹಣಕಾಸಿನ ಸವಾಲಾಗುವ ಸಾಧ್ಯತೆಯಿದೆ.

ಫ್ರಾಂಚೈಸಿಗಳ ಮುಂದಿರುವ ಸವಾಲು

ಒಬ್ಬ ಆಟಗಾರನಿಗೆ ₹40 ಕೋಟಿ ನೀಡುವ ನಿರ್ಧಾರ ಕೈಗೊಂಡರೆ, ತಂಡದ ಉಳಿದ ಆಟಗಾರರ ಆಯ್ಕೆ ಮತ್ತು ಬಜೆಟ್ ಹಂಚಿಕೆಯಲ್ಲಿ ಬದಲಾವಣೆ ಮಾಡಬೇಕಾಗಬಹುದು. ಹೀಗಾಗಿ ಸ್ಟಾರ್ ಆಟಗಾರರನ್ನ ಉಳಿಸಿಕೊಳ್ಳುವುದರ ಜೊತೆಗೆ ಇಡೀ ತಂಡವನ್ನ ಸಮತೋಲನದಿಂದ ರೂಪಿಸುವ ಸವಾಲು ಫ್ರಾಂಚೈಸಿಗಳ ಮುಂದಿದೆ. ಸದ್ಯಕ್ಕೆ ಇಬ್ಬರು ಆಟಗಾರರ ಹೆಸರುಗಳು ಬಹಿರಂಗವಾಗಿಲ್ಲ. ಅವರ ಬೇಡಿಕೆಗಳಿಗೆ ಫ್ರಾಂಚೈಸಿಗಳು ಒಪ್ಪಿಗೆ ನೀಡುತ್ತವೆಯೇ ಅಥವಾ ಆಟಗಾರರು ಮೆಗಾ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಾರೆಯೇ ಎಂಬುದು ಮುಂದಿನ ಬೆಳವಣಿಗೆಗಳಿಂದ ಸ್ಪಷ್ಟವಾಗಬೇಕಿದೆ.

Add Zee News as a Preferred Source
TAGS:
Cricket
Sports
Kannada News