SOCIAL MEDIA

Newsletter

PARTNER SITES
Select Language Select State

ಸಂಸದೆನ ಮದುವೆ ಆಗ್ತಿರೋ ಸ್ಟಾರ್‌ ಕ್ರಿಕೆಟರ್‌.. ಟೀಮ್‌ ಇಂಡಿಯಾದ ರಿಂಕು ಸಿಂಗ್‌ ವಿವಾಹ ಯಾವಾಗ?

ಮದುವೆಯನ್ನು ಈ ಮೊದಲು ಜೂನ್ 2026ಕ್ಕೆ ನಿಗದಿಪಡಿಸಲಾಗಿತ್ತು. ಅಂದರೆ ಈಗಲೇ ಮದುವೆಯಾಗಿ ಮೂರು ತಿಂಗಳುಗಳು ಆಗುತ್ತಿದ್ದವು. ಆದರೆ ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

Reported By Bhimappa Written By Bhimappa
Published: Sep 17, 2026, 10:06 AM IST | Updated: Sep 17, 2026, 10:16 AM IST
Image Credit: File Photo
Join

ಟೀಮ್‌ ಇಂಡಿಯಾದ ಸ್ಟಾರ್ ಲೆಫ್ಟ್‌ಹ್ಯಾಂಡ್‌ ಬ್ಯಾಟರ್ ರಿಂಕು ಸಿಂಗ್‌ ಅವರು ಕ್ರಿಕೆಟ್‌ನಲ್ಲಿ ಮಹತ್ತರ ಸಾಧನೆ ಮಾಡಿ ತಮ್ಮನ್ನು ತಾವು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಿಂಕು ಸಿಂಗ್‌ ಅವರ ವಿಶೇಷತೆ ಎಂದರೆ ತಂಡ ಎಂತಹದ್ದೇ ಪರಿಸ್ಥಿತಿಯಲ್ಲಿ ತನ್ನ ಲೆಫ್ಟ್‌ಹ್ಯಾಂಡ್‌ ಬ್ಯಾಟಿಂಗ್‌ ಮೂಲಕ ಗೆಲುವಿನ ದಡಕ್ಕೆ ಕೊಂಡೊಯ್ಯುವ ಫಿನಿಶರ್‌ ಆಗಿದ್ದಾರೆ. ಟೀಮ್‌ ಇಂಡಿಯಾದಲ್ಲಿ ಅತ್ಯುತ್ತಮ ಫಿನಿಶರ್‌ ಎಂಬುದು ಈಗಾಗಲೇ ಹಲವಾರು ಟೂರ್ನಮೆಂಟ್‌ಗಳಲ್ಲಿ ರಿಂಕು ಸಿಂಗ್‌ ತೋರಿಸಿ ಕೊಟ್ಟಿದ್ದಾರೆ. ರಿಂಕು ಸಿಂಗ್‌ ಮೈದಾನದಲ್ಲಿ ಬಲಿಷ್ಠವಾದ ಬ್ಯಾಟಿಂಗ್‌ ಮಾಡಿದರೆ ಮ್ಯಾಚ್‌ ಒಂದು ಸೈಡ್‌ ಆಗುವುದು ಪಕ್ಕಾ. ತೀರ ಕೆಳಮಟ್ಟದಿಂದ ಬೆಳೆದ ರಿಂಕು ಸಿಂಗ್‌ ಇವತ್ತು ಅತ್ಯುನ್ನತ ಸ್ಥಾನ ತಲುಪಿ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಓದು ತಲೆಗೆ ಹೋಗದ ವಯಸ್ಸಿನಲ್ಲಿ ಕ್ರಿಕೆಟ್‌ನಿಂದಲೇ ಜೀವನ ಕಂಡುಕೊಂಡ ಭಾರತದ ಯುವ ಪ್ರತಿಭೆ ಜೀವನ ಈ ಮೊದಲು ಸಾಕಷ್ಟು ಏಳುಬೀಳುಗಳಿಂದ ಕೂಡಿತ್ತು. ಸದ್ಯ ರಿಂಕು ಸಿಂಗ್‌ ಅವರು ಭಾರತದ ಲೋಕಸಭಾ ಸಂಸದೆಯ ಕೈಹಿಡಿಯುತ್ತಿರುವುದು ಈಗಾಗಲೇ ನಿಮಗೆಲ್ಲ ಗೊತ್ತಿರುವ ಸಂಗತಿಯೇ. ಆದರೆ ಮದುವೆ ದಿನಾಂಕ ಮಾತ್ರ ಘೋಷಣೆ ಆಗಿರಲಿಲ್ಲ. ಇದೀಗ ಈ ಮದುವೆ ದಿನಾಂಕ ಕೂಡ ಘೋಷಣೆ ಆಗಿದ್ದು ರಿಂಕು ಸಿಂಗ್‌ಗೆ ಸಂತಸ ತಂದಿದೆ.

ಉತ್ತರ ಪ್ರದೇಶದ ಮಚ್ಲಿಶಹರ್‌ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಮತ್ತು ಸ್ಟಾರ್‌ ಕ್ರಿಕೆಟರ್‌ ರಿಂಕು ಸಿಂಗ್‌ ಅವರು ವಿವಾಹ ಆಗಲಿದ್ದಾರೆ. ಈ ಜೋಡಿ ಜೂನ್ 2025 ರಲ್ಲಿ ಸಂಭ್ರಮದಿಂದಲೇ ದೊಡ್ಡದಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ನಿಶ್ಚಿತಾರ್ಥ ಮುಗಿದು ಒಂದು ವರ್ಷಕ್ಕೂ ಹೆಚ್ಚಿನ ಸಮಯದ ನಂತರ ಇದೀಗ ಸಂಸದೆ ಪ್ರಿಯಾ ಸರೋಜ್ ಮತ್ತು ಸ್ಟಾರ್‌ ಕ್ರಿಕೆಟರ್‌ ರಿಂಕು ಅವರ ವಿವಾಹದ ದಿನಾಂಕ ಘೋಷಣೆ ಆಗಿದೆ. ಮದುವೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ವಿವಾಹದ ದಿನಾಂಕ ಮತ್ತು ಸ್ಥಳ ನಿರ್ಧಾರವಾಗುತ್ತಿದ್ದಂತೆ ಎರಡೂ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿದೆ. ರಿಂಕು ಸಿಂಗ್‌ ಅವರ ಹೊಸ ಜೀವನದ ಕನಸಿನಲ್ಲಿದ್ದು ಕ್ರಿಕೆಟ್‌ ವೃತ್ತಿ ಜೀವನದ ಜೊತೆ ಇನ್ನೇನು ಕೆಲ ತಿಂಗಳ ಬಳಿಕ ವೈವಾಹಿಕ ಜೀವನವು ಮುನ್ನಡೆಯಲಿದೆ.

ಟೀಮ್‌ ಇಂಡಿಯಾದ ಆಟಗಾರ ರಿಂಕು ಸಿಂಗ್‌ ಮತ್ತು ಪ್ರಿಯಾ ಸರೋಜ್‌ ಅವರು ಇದೇ ವರ್ಷ ಡಿಸೆಂಬರ್ 4 ರಂದು ಉತ್ತರ ಪ್ರದೇಶದ ಲಕ್ನೋ ನಗರದಲ್ಲಿರುವ ರಾಮದಾ ಹೋಟೆಲ್‌ನಲ್ಲಿ ಗ್ರ್ಯಾಂಡ್‌ ಆಗಿ ವಿವಾಹ ಆಗಲಿದ್ದಾರೆ. ಇದಕ್ಕೂ ಮೊದಲು ಅಂದರೆ ಕಳೆದ ವರ್ಷ ಜೂನ್ 2025 ರಲ್ಲಿ ಲಕ್ನೋದ ಸೆಂಟ್ರಮ್ ಹೋಟೆಲ್‌ನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ನಿಶ್ಚಿತಾರ್ಥ ಸಂಭ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು, ಆಪ್ತರು, ರಾಜಕೀಯ ಗಣ್ಯರು, ರಿಂಕು ಸ್ನೇಹಿತರು ಪಾಲ್ಗೊಂಡಿದ್ದರು. ಈಗ ಮದುವೆ ದಿನಾಂಕ ಘೋಷಣೆ ಆಗಿದ್ದರಿಂದ ಭಾರೀ ಸಿದ್ಧತೆಗಳು ಎರಡು ಕುಟುಂಬದಲ್ಲಿಯೂ ನಡೆಯುತ್ತಿವೆ. ಇತ್ತೀಚೆಗೆ, ರಿಂಕು ಸಿಂಗ್ ಅವರು ಉತ್ತರ ಪ್ರದೇಶದ ಪ್ರತಿಷ್ಠಿತ ಯುಪಿ ಟಿ20 ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೇ ವಿಶೇಷ ಎಂದರೆ ರಿಂಕು ಸಿಂಗ್‌ ನಾಯಕ್ವರದ ಮೀರತ್ ಮಾವೆರಿಕ್ಸ್ ತಂಡ ಫೈನಲ್‌ನಲ್ಲಿ ಜಯಭೇರಿ ಬಾರಿಸಿ ಚಾಂಪಿಯನ್ ಆಯಿತು. ಇದು ರಿಂಕು ಸಿಂಗ್‌ ಅವರ ಕ್ರಿಕೆಟ್‌ ವೃತ್ತಿ ಜೀವನದ ಹೊಸ ಸಾಧನೆ ಆಗಿದೆ.

ಸದ್ಯ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗೆ ರಿಂಕು ಸಿಂಗ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇದು ಅಲ್ಲದೇ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಮ್‌ ಇಂಡಿಯಾದ ಆಟಗಾರರ ಹೆಸರನ್ನು ಘೋಷಣೆ ಮಾಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ರಿಂಕು ಹೆಸರು ಇಲ್ಲ. ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಟೀಮ್‌ ಇಂಡಿಯಾದ ಆಟಗಾರರ ಹೆಸರನ್ನು ಅನೌನ್ಸ್‌ ಮಾಡಲಾಗಿದೆ. ಏಷ್ಯನ್ ಗೇಮ್ಸ್‌ಗೂ ರಿಂಕು ಸಿಂಗ್‌ಗೆ ಅವಕಾಶ ನೀಡಲಾಗಿಲ್ಲ.  

ರಿಂಕು ಸಿಂಗ್‌ ಮತ್ತು ಪ್ರಿಯಾ ಸರೋಜ್‌ ಅವರ ಮದುವೆ ಈಗಾಗಲೇ ನಡೆದು ಹೋಗಬೇಕಿತ್ತು. ಅದರಂತೆ ಮದುವೆಯನ್ನು ಈ ಮೊದಲು ಜೂನ್ 2026ಕ್ಕೆ ನಿಗದಿಪಡಿಸಲಾಗಿತ್ತು. ಅಂದರೆ ಈಗಲೇ ಮದುವೆಯಾಗಿ ಮೂರು ತಿಂಗಳುಗಳು ಆಗುತ್ತಿದ್ದವು. ಆದರೆ ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅವರು ಆಸ್ಪತ್ರೆಯಲ್ಲಿ ನಿಧನರಾದ ನಂತರ ಮದುವೆಯನ್ನು ಮುಂದೂಡಬೇಕಾಯಿತು. ತಂದೆಯೂ ರಿಂಕು ಸಿಂಗ್‌ ಅವರ ಮದುವೆಯನ್ನು ನೋಡಲು ಬಯಸಿದ್ದರು. ಆದರೆ ಬಹುಶಃ ವಿಧಿ ಬೇರೆಯದ್ದೇ ಬರೆದಿತ್ತು ಅನಿಸುತ್ತದೆ. ತಂದೆ ಖಾನ್‌ಚಂದ್ ಸಿಂಗ್ ಅವರು ಮದುವೆಗೂ ಮೊದಲೇ ನಿಧನರಾದರು. ರಿಂಕು ಸಿಂಗ್‌ ಅವರ ತಂದೆಯ ಮರಣದ ನಂತರ ಎರಡೂ ಕುಟುಂಬಗಳು ಮದುವೆಯ ದಿನಾಂಕವನ್ನು ಮುಂದೂಡಿದವು.

ಮದುವೆಗೆ ಬರುವ ಅತಿಥಿಗಳ ಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲವಾದರೂ, ದೇಶಾದ್ಯಂತದ ಅನೇಕ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯವಾಗಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಫ್ರಾಂಚೈಸಿಯ ಸಹ ಮಾಲೀಕ ಶಾರುಖ್ ಖಾನ್ ಅವರು ಕೂಡ ಹಾಜರಿರುವ ಸಾಧ್ಯತೆಯಿದೆ. ಏಕೆಂದರೆ ಶಾರುಖ್ ಖಾನ್ ಈ ಹಿಂದೆ ರಿಂಕು ಸಿಂಗ್ ಅವರಿಗೆ ಮದುವೆಗೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ. ಇದನ್ನು ನಿಜ ಮಾಡಬೇಕು ಎಂದರೆ ಬಾಲಿವುಡ್‌ ಸ್ಟಾರ್‌ ಶಾರುಕ್‌ ಖಾನ್‌ ಅವರು ರಿಂಕು ಸಿಂಗ್‌ ಮದುವೆ ಬರಲೇಬೇಕು ಅಲ್ವಾ?. ರಿಂಕು ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿದ್ದರಿಂದ ಐಪಿಎಲ್ 2024 ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಸಾಧ್ಯವಾಯಿತು.

ಸಂಸದೆ ಪ್ರಿಯಾ ಸರೋಜ್ 2024ರಲ್ಲಿ ಮೊದಲ ಬಾರಿಗೆ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದ ಮಚ್ಲಿಷಹರ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಿ ಅಭೂತ ಪೂರ್ವ ಗೆಲುವು ಸಾಧಿಸಿದ್ದರು. ಇಬ್ಬರಿಗೂ ಪರಿಚಯವಾಗಿರುವುದು ಒಂದು ವಿಶೇಷ ದಿನ ಎನ್ನಬಹುದು. ಮದುವೆಗೂ ಮೊದಲೇ ಈ ಇಬ್ಬರ ನಡುವೆ ಪ್ರೇಮಕಥೆ ಶುರುವಾಗಿತ್ತು. ಅಂದರೆ ವರನ ಹುಡುಕಾಟದಲ್ಲಿ ಇರುವಾಗ ರಿಂಕು ಸಿಂಗ್‌ ಅವರ ಹೆಸರು ಪ್ರಸ್ತಾಪ ಆಗಿ ಮುಂದೆ ಮದುವೆವರೆಗೂ ಮಾತುಕತೆಗಳು ಬೆಳೆದು ಬಂದಿವೆ. ಸಮಾಜವಾದಿ ಪಕ್ಷದ ಸಂಸದೆ ಆಗಿರುವ ಪ್ರಿಯಾ ಸರೋಜ್ ಅವರು ರಾಜಕೀಯದಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದಾರೆ. ಇತ್ತ ರಿಂಕು ಸಿಂಗ್ ಅವರು ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರದರ್ಶನ ಮುಂದುವರೆಸಿದ್ದಾರೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES