• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /RCBಗೆ ಒಂದು ಗುಡ್‌ನ್ಯೂಸ್‌, ಇನ್ನೊಂದು ಬ್ಯಾಡ್‌ ನ್ಯೂಸ್‌.. ಹಾಲಿ ಚಾಂಪಿಯನ್‌ ತಂಡದ ಮುಂದಿನ ಪ್ಲಾನ್‌?

RCBಗೆ ಒಂದು ಗುಡ್‌ನ್ಯೂಸ್‌, ಇನ್ನೊಂದು ಬ್ಯಾಡ್‌ ನ್ಯೂಸ್‌.. ಹಾಲಿ ಚಾಂಪಿಯನ್‌ ತಂಡದ ಮುಂದಿನ ಪ್ಲಾನ್‌?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡದ ವಿದೇಶಿ ಆಟಗಾರ್ತಿ ಗ್ರೇಸ್‌ ಹ್ಯಾರಿಸ್‌, ಲಿನ್ಸೆ ಸ್ಮಿತ್‌, ಡಿ ಹೇಮಲತಾ ಮತ್ತು ಗೌತಮಿ ನಾಯಕ್‌ ಅವರನ್ನು ಬಿಡುಗಡೆ ಮಾಡಲಾಗಿದೆ.

Written ByBhimappa
Published: Sep 28, 2026, 05:38 PM IST|Updated: Sep 28, 2026, 05:52 PM IST
joinshare
RCBಗೆ ಒಂದು ಗುಡ್‌ನ್ಯೂಸ್‌, ಇನ್ನೊಂದು ಬ್ಯಾಡ್‌ ನ್ಯೂಸ್‌.. ಹಾಲಿ ಚಾಂಪಿಯನ್‌ ತಂಡದ ಮುಂದಿನ ಪ್ಲಾನ್‌?
Image Credit: RCBW

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

RCB release Grace Harris, Linsey Smith: ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಅಥವಾ ಡಬ್ಲುಪಿಎಲ್‌ನ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯೂ ಹಾರ್ಡ್‌ ಹಿಟ್ಟರ್‌ ಆಗಿದ್ದ ಗ್ರೇಸ್‌ ಹ್ಯಾರಿಸ್‌ Grace Harris ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಡಬ್ಲುಪಿಎಲ್‌ 2027ರ ಆಕ್ಷನ್‌ಗೂ ಮೊದಲೇ ಆರ್‌ಸಿಬಿ ಫ್ರಾಂಚೈಸಿ ಬಿಗ್‌ ಶಾಟ್‌ಗಳನ್ನು ಹೊಡೆಯುವಂತಹ ಆಟಗಾರ್ತಿಯನ್ನು ರಿಲೀಸ್‌ ಮಾಡಿ ಅಚ್ಚರಿ ಮೂಡಿಸಿದೆ. ಕೇವಲ ಆಸ್ಟ್ರೇಲಿಯಾದ ಆಟಗಾರ್ತಿ ಗ್ರೇಸ್‌ ಹ್ಯಾರಿಸ್‌ ಮಾತ್ರವಲ್ಲ ಇವರ ಜೊತೆಗೆ ಇನ್ನು ಮೂವರು ಆಟಗಾರ್ತಿಯರನ್ನು ಆರ್‌ಸಿಬಿ ಫ್ರಾಂಚೈಸಿಯೂ ತಂಡದಿಂದ ಬಿಡುಗಡೆ ಮಾಡಿದೆ.

2026 ಡಬ್ಲುಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಬ್ಯಾಟ್‌ ಬೀಸಿದ್ದ ಆಸ್ಟ್ರೇಲಿಯಾದ ಆಟಗಾರ್ತಿ ಗ್ರೇಸ್‌ ಹ್ಯಾರಿಸ್‌ ಅವರು ಅಮೋಘವಾದ ಬ್ಯಾಟಿಂಗ್‌ ಮಾಡಿದ್ದರು. ಲೀಗ್‌ನಲ್ಲಿ ಎರಡು ಬಾರಿ ಯುಪಿ ವಾರಿಯರ್ಸ್‌ ವಿರುದ್ಧವೇ ಭರ್ಜರಿ ಬ್ಯಾಟಿಂಗ್‌ ಮಾಡಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಆರ್‌ಸಿಬಿ ವುಮೆನ್ಸ್‌ ತಂಡ ಎರಡನೇ ಬಾರಿಗೆ ಟ್ರೋಫಿ ಎತ್ತಿ ಹಿಡಿಯಲು ಒಂದು ರೀತಿಯಲ್ಲಿ ಗ್ರೇಸ್‌ ಹ್ಯಾರಿಸ್‌ ಕೂಡ ಒಂದು ರೀತಿಯಲ್ಲಿ ಕಾರಣ ಎನ್ನಬಹುದು. ಆದರೆ 2027 ಡಬ್ಲುಪಿಎಲ್‌ ಸೀಸನ್‌ನ ಆಕ್ಷನ್‌ಗೂ ಮೊದಲೇ ಆರ್‌ಸಿಬಿ ಫ್ರಾಂಚೈಸಿಯೂ ಅವರನ್ನು ರಿಲೀಸ್‌ ಮಾಡಿದೆ. ಗ್ರೇಸ್‌ ಹ್ಯಾರಿಸ್‌ ಜೊತೆ ಹೊರ ಹೋಗುವ ಇನ್ನು ಮೂವರು ಆಟಗಾರ್ತಿಯರು ಎಂದರೆ..

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡದ ಇನ್ನೊಬ್ಬ ವಿದೇಶಿ ಆಟಗಾರ್ತಿ ಲಿನ್ಸೆ ಸ್ಮಿತ್‌, ಡಿ ಹೇಮಲತಾ ಮತ್ತು ಗೌತಮಿ ನಾಯಕ್‌ ಅವರನ್ನು ಬಿಡುಗಡೆ ಮಾಡಲಾಗಿದೆ. 2027 ಡಬ್ಲುಪಿಎಲ್‌ ಸೀಸನ್‌ನ ಆಕ್ಷನ್‌ಗೂ ಮುನ್ನವೇ ಈ ನಾಲ್ವರು ಆಟಗಾರರನ್ನು ತಂಡದಿಂದ ರಿಲೀಸ್‌ ಮಾಡಲಾಗಿದೆ.          

ಆರ್‌ಸಿಬಿ ಮಹಿಳಾ ತಂಡಕ್ಕೆ ಇನ್ನೊಂದು ಗುಡ್‌ನ್ಯೂಸ್‌ ಎಂದರೆ, ಆಸ್ಟ್ರೇಲಿಯಾದ ಲೆಜೆಂಡ್ರಿ ಕ್ರಿಕೆಟ್‌ ಆಟಗಾರ್ತಿ, ಆಲ್‌ರೌಂಡರ್‌ ಎಲ್ಲೀಸ್‌ ಪೆರ್ರಿ ಅವರು ವಾಪಸ್‌ ಆಗುತ್ತಿದ್ದಾರೆ. ಈಗಾಗಲೇ ತಂಡಕ್ಕೆ ಅಧಿಕೃತವಾದ ಮಾಹಿತಿ ಲಭ್ಯವಾದ ಬೆನ್ನಲ್ಲೇ ಈ ವಿಷ್ಯವನ್ನು ಶೇರ್‌ ಮಾಡಲಾಗಿದೆ. ಕಳೆದ ಸೀಸನ್‌ನಲ್ಲಿ ಎಲ್ಲೀಸ್‌ ಪೆರ್ರಿ ಅವರು ಆಡಿರಲಿಲ್ಲ. ಆದರೂ ಆರ್‌ಸಿಬಿ ವುಮೆನ್ಸ್‌ ಟೀಮ್‌ ಟ್ರೋಫಿಗೆ ಮುತ್ತಿಟ್ಟಿತ್ತು. ಎಲ್ಲೀಸ್‌ ಪೆರ್ರಿ ಅವರು ವೈಯಕ್ತಿಕವಾದ ಕಾರಣ ನೀಡಿ 2026 ಡಬ್ಲುಪಿಎಲ್‌ಗೆ ಹಾಜರಾಗಿರಲಿಲ್ಲ. ಎಲ್ಲೀಸ್‌ ಪೆರ್ರಿ ಅವರು 2027 ಡಬ್ಲುಪಿಎಲ್‌ನಲ್ಲಿ ತಂಡದ ಪರವಾಗಿ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಆರ್‌ಸಿಬಿ ಫ್ರಾಂಚೈಸಿಯೇ ಅಧಿಕೃತವಾಗಿ ಮಾಹಿತಿ ನೀಡಿದೆ ಎಂದು ಹೇಳಲಾಗುತ್ತಿದೆ.   

2026 ಡಬ್ಲುಪಿಎಲ್ RCBW ಫೈನಲ್‌ ಪಂದ್ಯ; ಡೆಲ್ಲಿ ಕ್ಯಾಪಿಟಲ್ಸ್‌ ವುಮೆನ್ಸ್‌ ತಂಡದ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವುಮೆನ್ಸ್ ತಂಡ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿ 2ನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು. ಈ ಮಹತ್ವದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರು ಅರ್ಧಶತಕ ಬಾರಿಸಿದರೆ, ಸ್ಮೃತಿ ಮಂಧಾನ ಜೊತೆಗೆ ಜಾರ್ಜಿಯಾ ವೊಲ್‌ ಅವರು 79 ರನ್‌ ಸಿಡಿಸಿ ತಂಡಕ್ಕೆ ನೆರವಾದರು. ಓಪನಿಂಗ್‌ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮೂಡಿ ಬಂದ ಅದ್ಭುತವಾದ ಬ್ಯಾಟಿಂಗ್‌ ಬಲದಿಂದ ಆರ್‌ಸಿಬಿ ಫೈನಲ್‌ನಲ್ಲಿ ಜಯಭೇರಿ ಬಾರಿಸಿತ್ತು.

ವಡೋದರಾದ ಕೊಟಂಬಿಯ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಕ್ಯಾಪ್ಟನ್‌ ಸ್ಮೃತಿ ಮಂಧಾನ ಅವರು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಡೆಲ್ಲಿ ತಂಡದ ಪರವಾಗಿ ಓಪನರ್‌ಗಳಾಗಿ ಬ್ಯಾಟಿಂಗ್‌ಗೆ ಅಗಮಿಸಿದ ಲಿಜೆಲ್ ಲೀ 37 ರನ್‌ ಗಳಿಸಿದರೆ, ಶಫಾಲಿ ವರ್ಮಾ 20 ರನ್‌ ಗಳಿಸಿ ಔಟಾದರು. ಲಾರಾ ವೋಲ್ವಾರ್ಡ್ Laura Wolvaardt 44, ಜೆಮಿಮಾ ರೋಡ್ರಿಗಸ್‌ 57 ಮತ್ತು ಚಿನೆಲ್ಲೆ ಹೆನ್ರಿ 35 ರನ್‌ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವುಮೆನ್ಸ್‌ ಟೀಮ್ 20‌ ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 204 ರನ್‌ಗಳ ಬೃಹತ್‌ ಗುರಿಯನ್ನು ನೀಡಿತ್ತು.

ಈ ಗುರಿ ಬೆನ್ನತ್ತಿದ್ದ ಆರ್‌ಸಿಬಿ ಆಟಗಾರ್ತಿಯರು ಗೆಲ್ಲುವುದು ಅಸಾಮಾನ್ಯ ಎಂದು ಹೇಳಲಾಗುತ್ತಿತ್ತು. ಆದರೆ ನಾಯಕಿ ಸ್ಮೃತಿ ಮಂಧಾನ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಮಾಡಿ 87 ರನ್ ಬಾರಿಸಿದರೆ, ಜಾರ್ಜಿಯಾ ವೊಲ್‌ ಅವರ 79 ರನ್‌ಗಳು ತಂಡಕ್ಕೆ ಭಾರೀ ಮೆರುಗು ತಂದಿತು. ಗೆಲುವಿನ ಹೊಸ ಭರವಸೆ ಮೂಡಿಸಿತು. ಬಲಿಷ್ಠ ಬ್ಯಾಟಿಂಗ್‌ ಮಾಡುವ ಮೂಲಕ ತಂಡದ ಗೆಲುವಿಗೆ ಕಾರಣರಾದರು ಎನ್ನಬಹುದು. ಈ ಇಬ್ಬರು ಔಟ್‌ ಆದ ಬಳಿಕ ಪಂದ್ಯದ ಕೊನೆಯಲ್ಲಿ ನಾಡಿನ್ ಡಿ ಕ್ಲರ್ಕ್ ಮತ್ತು ರಾಧ ಯಾದವ್‌ ಅವರ ಬ್ಯಾಟಿಂಗ್‌ನಿಂದ ಆರ್‌ಸಿಬಿ ಗೆಲುವಿನ ದಡ ಸೇರಿತು. ಕೊನೆಗ 19.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 204 ರನ್‌ ಗಳಿಸಿ ಗೆಲುವು ಪಡೆಯಿತು. 

Add Zee News as a Preferred Source
TAGS:
RCB