Neeru Dhanda wins India first individual gold medal: 2026 ಏಷ್ಯನ್ ಗೇಮ್ಸ್‌ನ ಮಹಿಳೆಯರ ಟ್ರ್ಯಾಪ್ ಶೂಟಿಂಗ್ Trap Shooting ಸ್ಪರ್ಧೆಯಲ್ಲಿ ನೀರೂ ದಂಡಾ ಅವರು ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ. ಸ್ಪರ್ಧೆಯ ಅಂತಿಮ ಹಂತದಲ್ಲಿ ಅಭೂತಪೂರ್ವ ಪರ್ಫಾಮೆನ್ಸ್ ನೀಡುವ ಮೂಲಕ ನೀರೂ ದಂಡಾ ಅವರು ಗೋಲ್ಡ್ ಮೆಡೆಲ್‌ಗೆ ಕೊರೊಳೊಡ್ಡಿದ್ದಾರೆ. ಭಾರತದ ಇನ್ನೊಂದು ವಿಶೇಷ ಎಂದರೆ ಏಷ್ಯನ್ ಗೇಮ್ಸ್ ಆರಂಭವಾಗಿ 10 ದಿನಗಳು ಕಳೆದರು ಯಾವೊಬ್ಬ ಸ್ಪರ್ಧಿಯೂ ವೈಯಕ್ತಿಕವಾಗಿ ಚಿನ್ನದ ಪದಕವನ್ನು ಗೆದ್ದುಕೊಟ್ಟಿರಲಿಲ್ಲ. ಬರೋಬ್ಬರಿ 10 ದಿನಗಳ ಬಳಿಕ ನೀರೂ ದಂಡಾ ಅವರು ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ವೈಯಕ್ತಿಕ ಬಂಗಾರದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ ಎನ್ನಬಹುದು.
ನೀರೂ ದಂಡಾ ಅವರು ಅದ್ಭುತವಾದ ಪರ್ಫಾಮೆನ್ಸ್ ನೀಡಿದರು. ಎದುರಾಳಿಗಳಿಗಿಂತ ಉತ್ತಮವಾದ ಪ್ರದರ್ಶನ ನೀಡಿದ್ದರಿಂದ ಪದಕ ಒಲಿದು ಬಂದಿದೆ. ಅಂದರೆ ಫೈನಲ್‌ನಲ್ಲಿ ಒಟ್ಟು 30 ಶಾಟ್‌ಗಳನ್ನು ಮಾಡಿದ ನೀರೂ ದಂಡಾ ಅವರು, ಕೇವಲ ಎರಡು ಶಾಟ್‌ಗಳನ್ನು ಮಾತ್ರ ಮಿಸ್ ಮಾಡಿದ್ದು ಉಳಿದ 28 ಶಾಟ್‌ಗಳನ್ನು ಯಶಸ್ವಿಯಾಗಿ ಶೂಟ್ ಮಾಡಿರುವುದು ವಿಶೇಷವಾಗಿತ್ತು. ನೀರೂ ದಂಡಾ ಅವರು 28/30 ಶಾಟ್ ಮಾಡಿ ಏಷ್ಯನ್ ಗೇಮ್ಸ್‌ನಲ್ಲಿ ದಾಖಲೆ ಮಾಡಿದರು.
ಏಷ್ಯನ್ ಗೇಮ್ಸ್‌ನಲ್ಲಿ ನೀರೂ ದಂಡಾ ಅವರು ಗೋಲ್ಡ್ ಗೆದ್ದು ಕೊಟ್ಟಿದ್ದರಿಂದ ಒಟ್ಟು 6 ಪದಕಗಳು ಭಾರತದ ಬಳಿ ಇವೆ. ಇನ್ನು ನೀರೂ ದಂಡಾ ನಂತರದ ಸ್ಥಾನವನ್ನು ಚೀನಾದ ಸನ್ ಯುಂಗೊಂಗ್ Sun Yungong ಅವರು ಪಡೆದಿದ್ದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಕುಬೈತ್‌ನ ಹಜರ್ ಅಬ್ದಲ್ಮಲಿಕ್ Hajar Abdulmalik ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಭಾರತದ 26 ವರ್ಷದ ಯುವತಿ ನೀರೂ ದಂಡಾ ಅವರು ಅರ್ಹತಾ ಸುತ್ತಿನಲ್ಲಿ ಕತಾರ್‌ನ ರೇ ಬಾಸಿಲ್ ಜೊತೆಗೆ 118 ಹಿಟ್‌ಗಳೊಂದಿಗೆ ಜಂಟಿಯಾಗಿ ಪ್ರಥಮ ಸ್ಥಾನ ಪಡೆದ ಬಳಿಕ ಪ್ರಾರಂಭದಿಂದಲೇ ಸ್ಪರ್ಧೆಯಲ್ಲಿ ಪ್ರಬಲವಾದ ಪೈಪೋಟಿ ಏರ್ಪಟ್ಟಿತ್ತು.
ಭೂಖಂಡದ ಈವೆಂಟ್‌ನಲ್ಲಿ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದಂತಹ ಮೊಟ್ಟ ಮೊದಲ ಭಾರತೀಯ ಸ್ಪರ್ಧಿ ನೀರೂ ದಂಡಾ ಆಗಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಈ ಹಿಂದೆ ಭಾರತದ ಯಾವುದೇ ಮಹಿಳಾ ಸ್ಪರ್ಧಿ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರಲಿಲ್ಲ. ಆದರೆ ಈಗ ನೀರೂ ದಂಡಾ ಅವರು ಈ ಸಾಧನೆಯನ್ನು ಮಾಡಿ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕವಾದ ದಾಖಲೆಗೆ ಕಾರಣರಾಗಿದ್ದಾರೆ.
ಸದ್ಯ ಏಷ್ಯನ್ ಗೇಮ್ಸ್‌ನಲ್ಲಿ ಇರುವ ಭಾರತದ ಕ್ರೀಡಾಪಟುಗಳು ಅದ್ಭುತವಾದ ಪ್ರದರ್ಶನ ನೀಡುತ್ತಿದ್ದು ಉತ್ತಮ ಮಟ್ಟದಲ್ಲಿಯೇ ಪದಕಗಳನ್ನ ಬೇಟಿಯಾಡಿದ್ದಾರೆ ಎನ್ನಬಹುದು. ಇದುವರೆಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಒಟ್ಟು 48 ಪದಕಗಳನ್ನು ಗೆದ್ದುಕೊಂಡಿದೆ. ಏಷ್ಯನ್ ಗೇಮ್ಸ್ ಇನ್ನು 4 ದಿನಗಳು ಬಾಕಿ ಉಳಿದಿದ್ದು ಅಷ್ಟೊತ್ತಿಗೆ ಭಾರತದ ಕ್ರೀಡಾಪಟುಗಳು ಇನ್ನಷ್ಟು ಪದಕಗಳನ್ನು ಗೆಲ್ಲುವ ಭರವಸೆ ಇದೆ. ಅತ್ಯುತ್ತಮವಾಗಿ ಆಡುತ್ತಿರುವ ಟೀಮ್ ಇಂಡಿಯಾದ ಆಟಗಾರರು ವೈಯಕ್ತಿಕ ಸ್ಪರ್ಧೆಯಲ್ಲಿ ಪದಕಗಳ ಮೇಲೆ ಕಣ್ಣಿಡುವುದು ಮುಖ್ಯವಾಗಿದೆ. ಏಕೆಂದರೆ,
ಇದುವರೆಗೆ ಭಾರತ ಕ್ರಿಕೆಟ್, ಕಬಡ್ಡಿ ಮತ್ತು ಶೂಟಿಂಗ್‌ನಲ್ಲಿ ಮಾತ್ರ ಗೋಲ್ಡ್ ಮೆಡೆಲ್ ಗೆದ್ದುಕೊಂಡಿದೆ. ಇದರಿಂದ ಭಾರತದ ಬಳಿ ಸದ್ಯ 6 ಬಂಗಾರದ ಪದಕ, 21 ಬೆಳ್ಳಿ ಪದಕಗಳು ಮತ್ತು 21 ಕಂಚಿನ ಪದಕಗಳಿದ್ದು ಒಟ್ಟು 48 ಪದಕಗಳು ಇವೆ. ಏಷ್ಯನ್ ಗೇಮ್ಸ್ ಇನ್ನು ಇರುವುದರಿಂದ ಇನ್ನಷ್ಟು ಸಾಧನೆ ಮಾಡುವ ಅವಕಾಶ ಇದೆ. ಅಂತಿಮ ದಿನದವರೆಗೆ ಭಾರತ ತಂಡ ಎಷ್ಟು ಪದಕಗಳನ್ನು ಮುಡಿಗೇರಿಸಿಕೊಳ್ಳುತ್ತದೆ ಎಂದು ಕಾದು ನೋಡಬೇಕು.
ಚೀನಾದ ಬಳಿ ಇವೆ ಭಾರೀ ಬಂಗಾರದ ಪದಕಗಳು;
ಏಷ್ಯನ್ ಗೇಮ್ಸ್‌ನ ಪದಕ ಪಟ್ಟಿಯಲ್ಲಿ ಪೀಪಲ್ ರಿಪಬ್ಲಿಕ್ ಆಫ್ ಚೀನಾ ಮೊಟ್ಟ ಮೊದಲ ಸ್ಥಾನದಲ್ಲಿ ಇದ್ದು ಒಟ್ಟು 237 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಬರೋಬ್ಬರಿ 135 ಪದಕಗಳು ಗೋಲ್ಡ್ ಮೆಡೆಲ್ ಆಗಿರುವುದು ಮತ್ತೊಂದು ವಿಶೇಷ ಎನ್ನಬಹುದು. ಇನ್ನೊಂದು ಸ್ಪೆಷಲ್ ಎಂದರೆ ಕೇವಲ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿಯೇ ಚೀನಾ ದೇಶವೂ 54 ಪದಕಗಳನ್ನು ಬಾಚಿಕೊಂಡಿದೆ. ಈ 54 ಪದಕಗಳಲ್ಲಿ 30 ಪದಕಗಳು ಗೋಲ್ಡ್ ಮೆಡೆಲ್ ಆಗಿವೆ. ಅಂದರೆ ಚೀನಾ ದೇಶವೂ ಕೇವಲ ಸ್ವಿಮ್ಮಿಂಗ್ ಮೇಲೆಯೇ ಹೆಚ್ಚು ಗಮನ ಹರಿಸಿ ದೊಡ್ಡ ಮಟ್ಟದ ಪದಕಗಳನ್ನು ಗೆದ್ದು ಸಾಧನೆ ಮಾಡಿದೆ ಎನ್ನಬಹುದು. ಅಥ್ಲಿಟಿಕ್ಸ್‌ನಲ್ಲಿ 14 ಚಿನ್ನ, ಕ್ಯಾನೊ ಸ್ಪ್ರಿಂಟ್‌ನಲ್ಲಿ 8 ಚಿನ್ನ, ಡಿವಿಂಗ್‌ನಲ್ಲಿ 6 ಚಿನ್ನ, ಜಿಮ್ನಾಸ್ಟಿಕ್‌ನಲ್ಲಿ 7, ಶೂಟಿಂಗ್‌ನಲ್ಲಿ 16, ಟೇಬಲ್ ಟೆನ್ನಿಸ್‌ನಲ್ಲಿ 6 ಚಿನ್ನ, ವೇಟ್ ಲಿಫ್ಟಿಂಗ್‌ನಲ್ಲಿ 4 ಚಿನ್ನ, Wushu ಸ್ಪರ್ಧೆಯಲ್ಲಿ 12 ಚಿನ್ನದ ಪದಕ ಸೇರಿ ಇನ್ನು ವಿವಿಧ ಕ್ರೀಡೆಗಳಲ್ಲಿ ಗೋಲ್ಡ್ ಮೆಡೆಲ್ ಬಾಚಿಕೊಂಡು ಅಗ್ರಸ್ಥಾನದಲ್ಲಿದೆ. ಭಾರತವೂ ಕೇವಲ 6 ಚಿನ್ನಗಳಿಂದ 11ನೇ ಸ್ಥಾನದಲ್ಲಿದೆ.