SOCIAL MEDIA

Newsletter

PARTNER SITES
Select Language Select State

ಮೈದಾನದ ಸಿಬ್ಬಂದಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಕೆ.ಎಲ್. ರಾಹುಲ್!

KL Rahul gifts award: ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆಲ್ಲೋದು ಕಾಮನ್.. ಆದ್ರೆ ಮೈದಾನದ ಹೊರಗೂ ತನ್ನ ಒಳ್ಳೆಯ ಗುಣದಿಂದ ಅಭಿಮಾನಿಗಳ ಹೃದಯ ಗೆಲ್ಲೋದು ಗ್ರೇಟ್..ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಇದೀಗ ಇಂತಹದ್ದೇ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.

Written By Ramya. R. Gowda
Published: Nov 08, 2026, 11:17 IST | Updated: Nov 08, 2026, 11:28 IST
Join

KL Rahul gifts award: ಕ್ರಿಕೆಟ್ ಮೈದಾನದಲ್ಲಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆಲ್ಲೋದು ಕಾಮನ್.. ಆದ್ರೆ ಮೈದಾನದ ಹೊರಗೂ ತನ್ನ ಒಳ್ಳೆಯ ಗುಣದಿಂದ ಅಭಿಮಾನಿಗಳ ಹೃದಯ ಗೆಲ್ಲೋದು ಗ್ರೇಟ್..ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಇದೀಗ ಇಂತಹದ್ದೇ ಕೆಲಸ ಮಾಡಿ ಸುದ್ದಿಯಾಗಿದ್ದಾರೆ. ಪಂದ್ಯದಲ್ಲಿ ಸಿಕ್ಕ ದುಬಾರಿ ಸ್ಮಾರ್ಟ್‌ಫೋನ್ ಬಹುಮಾನವನ್ನೇ ಮೈದಾನದ ಸಿಬ್ಬಂದಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಾಹುಲ್ ಅವರ ಈ ಹೃದಯಸ್ಪರ್ಶಿ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 4 ರನ್‌ಗಳ ಜಯ ಸಿಕ್ಕಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದ ಮುನ್ನಡೆ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರ ಪ್ರದರ್ಶನಕ್ಕೆ ವಿಶೇಷ ಇಂಪ್ಯಾಕ್ಟ್ ಅವಾರ್ಡ್ ಲಭಿಸಿತ್ತು. ಪ್ರಶಸ್ತಿಯ ಭಾಗವಾಗಿ ನಗದು ಬಹುಮಾನದ ಜೊತೆಗೆ ಹೊಚ್ಚ ಹೊಸ ನೋವಾ ಪ್ಲಸ್ ಸ್ಮಾರ್ಟ್‌ಫೋನ್ ಕೂಡ ಸಿಕ್ಕಿತ್ತು. ಪ್ರಶಸ್ತಿ ಸ್ವೀಕರಿಸಿ ಖುಷಿಯಲ್ಲಿದ್ದ ರಾಹುಲ್, ಬಳಿಕ ಮಾಡಿದ ಕೆಲಸ ಮಾತ್ರ ಎಲ್ಲರ ಗಮನ ಸೆಳೆದಿದೆ.

 

 

 ಹೌದು..ತಮಗೆ ಸಿಕ್ಕಿದ್ದ ದುಬಾರಿ ಸ್ಮಾರ್ಟ್‌ಫೋನ್ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ, ಪಂದ್ಯದ ಆಯೋಜನೆಯಲ್ಲಿ ಶ್ರಮಿಸಿದ ಮೈದಾನದ ಅಧಿಕಾರಿಯೊಬ್ಬರಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಾಹುಲ್ ಅವರ ಈ ಅನಿರೀಕ್ಷಿತ ಗಿಫ್ಟ್ ನೋಡಿ ಅಧಿಕಾರಿಯ ಮುಖದಲ್ಲಿ ಸಂತಸ ಮನೆಮಾಡಿದೆ. ಈ ಅಪರೂಪದ ಕ್ಷಣದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ರಾಹುಲ್ ಇಂತಹ ಕೆಲಸ ಮಾಡುತ್ತಿರುವುದು ಇದೇ ಮೊದಲಲ್ಲ. 2018ರ ಐಪಿಎಲ್‌ನಲ್ಲಿ ತಮಗೆ ಸಿಕ್ಕಿದ್ದ ಸ್ಟೈಲಿಶ್ ಪ್ಲೇಯರ್ ಆಫ್ ದಿ ಮ್ಯಾಚ್ ಟ್ರೋಫಿಯನ್ನೇ ಗ್ಯಾಲರಿಯಲ್ಲಿದ್ದ ಅಭಿಮಾನಿಗೆ ಉಡುಗೊರೆಯಾಗಿ ನೀಡಿದ್ದರು. ಇತ್ತೀಚೆಗೆ ತಮ್ಮ ಮ್ಯಾಚ್ ಗ್ಲೌಸ್‌ಗಳನ್ನು ಪುಟ್ಟ ಅಭಿಮಾನಿಗೆ ನೀಡಿ ಖುಷಿಪಡಿಸಿದ್ದರು.

ಇದೀಗ ಸ್ಮಾರ್ಟ್‌ಫೋನ್ ಉಡುಗೊರೆ ನೀಡುವ ಮೂಲಕ ಮತ್ತೊಮ್ಮೆ ತಮ್ಮ ದೊಡ್ಡ ಮನಸ್ಸು ಪ್ರದರ್ಶಿಸಿದ್ದಾರೆ. ಮೈದಾನದ ಒಳಗೆ ಬ್ಯಾಟಿಂಗ್ ಮೂಲಕ ಮಿಂಚುವ ರಾಹುಲ್, ಮೈದಾನದ ಹೊರಗೂ ತಮ್ಮ ಸರಳತೆ ಮತ್ತು ಉದಾರ ಗುಣದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹೀಗಾಗಿಯೇ ನೆಟ್ಟಿಗರು ರಾಹುಲ್ ಅವರನ್ನು ರಿಯಲ್ ಹೀರೋ ಅಂತ ಕೊಂಡಾಡುತ್ತಿದ್ದಾರೆ. 

ಕೆ.ಎಲ್. ರಾಹುಲ್ (ಕನ್ನಡಿಗ ಕೆ.ಎಲ್. ರಾಹುಲ್) ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟರ್ ಹಾಗೂ ವಿಕೆಟ್ ಕೀಪರ್. ತಮ್ಮ ಬ್ಯಾಟಿಂಗ್ ತಂತ್ರ, ಶಾಂತ ಸ್ವಭಾವ ಮತ್ತು ಹಲವು ಕ್ರಮಾಂಕಗಳಲ್ಲಿ ಆಡುವ ಸಾಮರ್ಥ್ಯದಿಂದ ಗುರುತಿಸಿಕೊಂಡಿದ್ದಾರೆ

 

ಕೆ.ಎಲ್. ರಾಹುಲ್ ಅವರ ಪ್ರಮುಖ ಸಾಧನೆಗಳು

ಒಟ್ಟಿನಲ್ಲಿ ಕರ್ನಾಟಕದ ಮಂಗಳೂರಿನಿಂದ ಕ್ರಿಕೆಟ್ ಪಯಣ ಆರಂಭಿಸಿದ ಕೆ.ಎಲ್. ರಾಹುಲ್, ಟೆಸ್ಟ್, ಏಕದಿನ, ಟಿ20 ಹಾಗೂ ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕನ್ನಡಿಗ ಎಂದು ಗುರುತಿಸಿಕೊಂಡಿದ್ದಾರೆ. 

 


 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES