SOCIAL MEDIA

Newsletter

PARTNER SITES
Select Language Select State

ವಿಶ್ವದ ಸ್ಟಾರ್‌ ಕ್ರಿಕೆಟರ್‌ ಮದುವೆನೇ ಆಗಿಲ್ಲ, ಆದರೂ 3 ಮಕ್ಕಳು.. ಆಸ್ಪತ್ರೆಯ ಲವ್‌ ಸ್ಟೋರಿ ಗೊತ್ತಾ ನಿಮಗೆ?

ಸಾರಾ ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದವರು ಆಗಿದ್ದಾರೆ. ಒಮ್ಮೆ ಕೇನ್‌ ವಿಲಿಯಮ್ಸನ್‌ ಅವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಕಾರಣ ಸಾರಾ ಅವರು ಕೆಲಸ ಮಾಡುವಂತಹ ಆಸ್ಪತ್ರೆಗೆ ದಾಖಲು ಆಗಿದ್ದರು. ಆಗ ಕೇನ್‌ ವಿಲಿಯಮ್ಸನ್‌ ಅವರನ್ನು ಸಾರಾ ಅವರೇ ನೋಡಿಕೊಳ್ಳುತ್ತಿದ್ದರು.

Reported By Bhimappa Written By Bhimappa
Published: Sep 13, 2026, 06:22 PM IST | Updated: Sep 17, 2026, 03:49 PM IST
Image Credit: File Photo
Join

ಪ್ರೀತಿ ಅಂದರೇನೇ ಹಾಗೇ, ಎಲ್ಲಿ, ಹೇಗೆ, ಯಾವಾಗ ಅರಳುತ್ತದೆ ಎಂದು ಗೊತ್ತಾಗುವುದಿಲ್ಲ. ಒಂದೇ ಒಂದು ನೋಟದಲ್ಲೇ ಕೆಲವೊಮ್ಮೆ ಲವ್‌ ಆಗಬಹುದು. ಇನ್ನು ಕೆಲವೊಬ್ಬರಿಗೆ ವರ್ಷಾನು ಗಟ್ಟಲೇ ಕಾಯ್ದು..ಕಾಯ್ದು ಆ ಮೇಲೆ ಪ್ರೀತಿ ಇಬ್ಬರ ನಡುವೆ ಅರಳಬಹುದು. ಪ್ರೀತಿ ಹುಟ್ಟುವ ಸಮಯವನ್ನು ಮಾತ್ರ ಯಾರು ನಿರ್ಧರಿಸಲು ಸಾಧ್ಯವಿಲ್ಲ. ಪ್ರೀತಿ ಕೇವಲ ಸಿನಿಮಾದ ಕಥೆಯಲ್ಲಿ ಮಾತ್ರ ಇಲ್ಲ. ವಿಶ್ವದ ಎಲ್ಲ ಕಡೆಗೂ, ಎಲ್ಲ ರಂಗದಲ್ಲೂ, ಪ್ರತಿ ಕ್ಷೇತ್ರದಲ್ಲೂ ಪ್ರೀತಿ ಇದ್ದೇ ಇದೆ. ಆದರೆ ಅದು ಹೊರಗಡೆ ಬರುವುದಕ್ಕೆ ಸಮಯ ತೆಗೆದುಕೊಳ್ಳಬಹುದು, ಇಲ್ಲವೇ ಕ್ಷಣ ಮಾತ್ರ ತೆಗೆದುಕೊಳ್ಳಬಹುದು. ಇದರಂತೆ ಇಲ್ಲೊಂದು ಬ್ಯೂಟಿಫುಲ್‌ ಆದ ಲವ್‌ ಸ್ಟೋರಿ ಇದ್ದ ವಿಶ್ವದ ಸ್ಟಾರ್‌ ಕ್ರಿಕೆಟರ್‌ ಆಸ್ಪತ್ರೆಗೆ ದಾಖಲಾಗಿದ್ದಾಗ ಲವ್‌ನಲ್ಲಿ ಬಿದ್ದರಂತೆ. ಆ ಮೇಲೆ ಸ್ಟಾರ್‌ ಕ್ರಿಕೆಟರ್‌ ಬದುಕಿನಲ್ಲಿ ಏನಾಯಿತು, ಲವ್‌ ಸ್ಟೋರಿ ಎಲ್ಲಿವರೆಗೆ ಸಾಗಿತೂ, ಕ್ರಿಕೆಟ್‌ ಏನಾಯಿತು?.

ವಿಶ್ವದ ಎಷ್ಟೋ ಕ್ರಿಕೆಟರ್‌ಗಳು ಕ್ರೀಡಾಂಗಣದಲ್ಲಿ ತಮ್ಮ ಬ್ಯಾಟ್‌ ಮೂಲಕ ಸದ್ದು ಮಾಡಿ ಅಪಾರ ಖ್ಯಾತಿ ಗಳಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್‌, ಮಾರಕ ಬೌಲಿಂಗ್‌ನಿಂದಲೂ ಹೊರ ಜಗತ್ತಿಗೆ ತಮ್ಮ ಸಾಮರ್ಥ್ಯ ಏನೆಂಬುದು ತಿಳಿಸಿಕೊಟ್ಟಿದ್ದಾರೆ. ಇನ್ನು ಕೆಲ ಕ್ರಿಕೆಟರ್‌ಗಳು ತಮ್ಮ ಅದ್ಭುತವಾದ, ಅಮೂಲ್ಯವಾದ, ಸುಂದರವಾದ ಪ್ರೀತಿಯಿಂದಲೂ ಎಲ್ಲ ಕಡೆಗೂ ಗೊತ್ತಾಗಿದ್ದಾರೆ. ಈಗ ಇಲ್ಲಿ ಹೇಳುತ್ತಿರುವ ಪ್ರೇಮಕಥೆ ಎಂದರೆ ಸ್ಟಾರ್‌ ಕ್ರಿಕೆಟ್‌ ಪ್ಲೇಯರ್‌ ಆಗಿದ್ದರೂ ಮೊದಲ ನೋಟದಲ್ಲೇ ನರ್ಸ್‌ವೊಬ್ಬರನ್ನು ಅನ್ನು ಪ್ರೀತಿಸಿದ ಅಂತಹ ಒಬ್ಬ ದಂತಕಥೆಯ ಬ್ಯಾಟ್ಸ್‌ಮನ್‌ನ ಸುಂದರವಾದ ಪ್ರೇಮಕಥೆ ಇಲ್ಲಿದೆ.    

ಸ್ಟಾರ್‌ ಕ್ರಿಕೆಟರ್‌, ಕ್ರೀಸ್‌ನಲ್ಲಿ ಇದ್ರೆ ರನ್‌ಗಳ ಹೊಳೆಯೇ ಹರಿಸುವ, ಕ್ಯಾಪ್ಟನ್‌ ಆಗಿ ತನ್ನ ಚಾಣಕ್ಷತೆಯಿಂದ ಪಂದ್ಯವನ್ನೇ ಟರ್ನ ಮಾಡುವಂತಹ ನ್ಯೂಜಿಲೆಂಡ್‌ ತಂಡದ ಮಾಜಿ ಕ್ರಿಕೆಟರ್‌ ಕೇನ್‌ ವಿಲಿಯಮ್ಸ್‌ನ ಅವರ ಪ್ರೀತಿ ಬಗ್ಗೆ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಕೇನ್‌ ವಿಲಿಯಮ್ಸನ್‌ ಕುರಿತು ಕ್ರಿಕೆಟ್‌ ಸಾಧನೆಗಳ ಬಗ್ಗೆ ಅಭಿಮಾನಿಗಳಿಗೆ ಗೊತ್ತು. ಆದರೆ ಕೇನ್‌ ವಿಲಿಯಮ್ಸನ್‌ ಅವರ ವೈಯಕ್ತಿಕ ಜೀವನದಲ್ಲಿ ನಡೆದಂತ ಪ್ರೀತಿ ಮಾತ್ರ ತುಂಬಾ ವಿಶೇಷವಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಾಗ ಕೇನ್‌ ವಿಲಿಯಮ್ಸನ್‌ ಲವ್‌ನಲ್ಲಿ ಬೀಳುತ್ತಾರೆ.

ಆಸ್ಪತ್ರೆಯ ನರ್ಸ್‌ ಆಗಿದ್ದಂತಹ ಸಾರಾ ರಹೀಮ್‌ ಅವರ ಜೊತೆ ಒಂದೇ ನೋಟದಲ್ಲಿ ಕೇನ್‌ ವಿಲಿಯಮ್ಸನ್‌ ಅವರು ಪ್ರೀತಿಯಲ್ಲಿ ಬೀಳುತ್ತಾರೆ. ಸಂದರ್ಶನದಲ್ಲಿ ತಮ್ಮ ಪ್ರೀತಿ ಹೇಗೆ ಅರಳಿತು ಎಂಬುದರ ಬಗ್ಗೆ ಸ್ವತಹ ಕೇನ್‌ ವಿಲಯಮ್ಸನ್‌ ಅವರೇ ಹಂಚಿಕೊಂಡಿದ್ದಾರೆ. ಕೇನ್‌ ವಿಲಿಯಮ್ಸನ್‌ ಅವರು 2015ರಲ್ಲಿ ಮೊದಲ ಬಾರಿಗೆ ಸಾರಾ ರಹೀಮ್‌ ಅವರನ್ನು ಮೀಟ್‌ ಮಾಡುತ್ತಾರೆ. ಇದಕ್ಕಿಂತ ಮೊದಲು ಒಬ್ಬರಿಗೊಬ್ಬರು ಯಾರು ಅಂತಾನೆ ಗೊತ್ತಿರಲ್ಲ. ಇಬ್ಬರು ಮೀಟ್‌ ಆಗಿರುವುದು ಕ್ರಿಕೆಟ್‌ ಗ್ರೌಂಡ್‌ ಅಲ್ಲ, ಹೋಟೆಲ್‌, ಪಬ್‌ ಕೂಡ ಅಲ್ಲ. ಆಸ್ಪತ್ರೆಯಲ್ಲಿ ಮೊದಲು ಇಬ್ಬರು ಮೀಟ್‌ ಆದರು.  

ವೃತ್ತಿಯಲ್ಲಿ ನರ್ಸ್‌ ಆಗಿದ್ದ ಸಾರಾ ಅವರು ರಹೀಮ್‌ ಅವರು ಆಸ್ಪತ್ರೆಯಲ್ಲಿ ಇರುತ್ತಿದ್ದರು. ಸಾರಾ ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದವರು ಆಗಿದ್ದಾರೆ. ಒಮ್ಮೆ ಕೇನ್‌ ವಿಲಿಯಮ್ಸನ್‌ ಅವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಕಾರಣ ಸಾರಾ ಅವರು ಕೆಲಸ ಮಾಡುವಂತಹ ಆಸ್ಪತ್ರೆಗೆ ದಾಖಲು ಆಗಿದ್ದರು. ಆಗ ಕೇನ್‌ ವಿಲಿಯಮ್ಸನ್‌ ಅವರನ್ನು ಸಾರಾ ಅವರೇ ನೋಡಿಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ಇಬ್ಬರು ಜೋಡಿಯಾಗಿ ಇದ್ದಿದ್ದೇ ಕೆಲವು ದಿನಗಳ ನಂತರ ಪ್ರೀತಿಯಾಗಿ ಮಾರ್ಪಟ್ಟಿತ್ತು. ಏಕೆಂದರೆ ಕೇನ್‌ ವಿಲಿಯಮ್ಸನ್‌ ಬಗ್ಗೆ ಸಾರಾ ತೆಗೆದುಕೊಳ್ಳುತ್ತಿದ್ದ ಕೇರ್‌ ನೋಡಿ ಅಚ್ಚರಿಯಾಗುತ್ತಿತ್ತು. ಅಷ್ಟೊಂದು ಪ್ರೀತಿಯಾಗಿ ನನ್ನನ್ನು ಯಾರು ನೋಡಿಯೇ ಇಲ್ಲ ಎನ್ನುವ ಭಾವನೆ ಕೇನ್‌ ವಿಲಿಯಮ್ಸನ್‌ ಮನ ಮತ್ತೆ ಮತ್ತೆ ಹೇಳುವಂತೆ ಆಗಿತ್ತು.

ಸ್ಟಾರ್‌ ಕ್ರಿಕೆಟರ್‌ ಕೇನ್‌ ವಿಲಿಯಮ್ಸನ್‌ ಮತ್ತು ಸಾರಾ ಹೃದಯಗಳು ಹೊರ ಜಗತ್ತಿಗೆ ಗೊತ್ತಿಲ್ಲದಂತೆ ಪರಸ್ಪರ ಮಾತುಗಳು ಆಡಲಾರಂಭಿಸಿದವು. ಈ ಹೃದಯಗಳ ಮಾತು ಕೇನ್‌ ಮತ್ತು ಸಾರಾಗೂ ಗೊತ್ತೇ ಆಗದ ರೀತಿ ನಡೆದಿತ್ತು. ಹೃದಯದಿಂದ ಮನದಾಳಕ್ಕೆ ಬಂದಾಗ ಇಬ್ಬರ ಮನಸು ಒಟ್ಟುಗೂಡಿದ್ದವು. ತುಟಿಗಳು ಮಾತು ಹೇಳಲು ಪ್ರಾರಂಭಿಸುತ್ತಿದ್ದಂತೆ ಇಬ್ಬರು ಪರಸ್ಪರ ಫೋನ್‌ ನಂಬರ್‌ಗಳನ್ನು ಶೇರ್‌ ಮಾಡಿಕೊಂಡರು. ಈ ಫೋನ್‌ ನಂಬರ್‌ ಶೇರ್‌ ಮಾಡಿಕೊಂಡಿರುವುದು ಮುಂದೆ ಇಬ್ಬರ ನಡುವಿನ ಪ್ರೀತಿಯ ಸೇತುವೆಯನ್ನು ಬಲಿಷ್ಠಗೊಳಿದವು.  

1990ರಲ್ಲಿ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ಜನಿಸಿದ ಸಾರಾ ಅವರು ಬಿಸ್ಟಲ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದುಕೊಂಡಿದ್ದರು. ಕೇನ್‌ ವಿಲಿಯಮ್ಸನ್‌ ಅವರ ಜೊತೆಗೆ ಹೆಚ್ಚಾಗಿ ಸುತ್ತಾಡಲು ಪ್ರಾರಂಭಿಸಿದಾಗ ಕ್ರಿಕೆಟ್‌ ನೋಡಲು ಸಾರಾ ಶುರು ಮಾಡಿದರು. ಕೇನ್‌ ವಿಲಿಯಮ್ಸನ್‌ ಅವರನ್ನು ನೋಡಲು ಎಂದೇ ಹಲವಾರು ಕ್ರಿಕೆಟ್‌ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. 2016 ರಲ್ಲಿ ನ್ಯೂಜಿಲೆಂಡ್‌ ತಂಡದ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಕೇನ್‌ ವಿಲಿಯಮ್ಸನ್‌ ಅವರು ಪಡೆದಾಗ ಮೊಟ್ಟ ಮೊದಲ ಬಾರಿಗೆ ಸಾರಾ ರಹೀಮ್‌ ಅವರು ಸಾರ್ವಜನಿಕರಾಗಿ ಕಾಣಿಸಿಕೊಂಡರು. ಹುಟ್ಟಿ ಬೆಳೆದಿದ್ದೂ ಇಂಗ್ಲೆಂಡ್‌ನಲ್ಲಿಯೇ ಆದರೂ ಕೇನ್‌ ಪರಿಚಯ, ಪ್ರೀತಿ ಆದ ಮೇಲೆ ಇಂಗ್ಲೆಂಡ್‌ ಬಿಟ್ಟು ನ್ಯೂಜಿಲೆಂಡ್‌ಗೆ ಹೋಗುತ್ತಾರೆ. ಕೇನ್‌ ವಿಲಿಯಮ್ಸನ್‌ ಜೊತೆ ಡೇಟಿಂಗ್‌ ಮಾಡುತ್ತಿದ್ದರೂ ಸಾರಾ ಮಾತ್ರ ತಮ್ಮಿಬ್ಬರ ನಡುವಿನ ವೈಯಕ್ತಿಕ ಜೀವನವನ್ನು ಖಾಸಗಿ ಆಗಿಯೇ ಇಟ್ಟಿದ್ದರು.    

ಕೇನ್‌ ವಿಲಿಯಮ್ಸನ್‌ ಮತ್ತು ಸಾರಾ ಇಬ್ಬರು ಅಧಿಕೃತವಾಗಿ ಮದುವೆಯಾಗಿಲ್ಲ. ಕಳೆದ 10- 12 ವರ್ಷಗಳಿಂದ ಇಬ್ಬರೂ ಕೂಡಿ ಇದ್ದರೂ ಕಾನೂನು ಬದ್ಧವಾಗಿಯೂ ಕೂಡ ವಿವಾಹವಾಗಿಲ್ಲ. ಆದರೂ ಹಲವು ವರ್ಷಗಳಿಂದ ಕೇನ್‌ ಮತ್ತು ಸಾರಾ ಇಬ್ಬರು ಜೋಡಿಯಾಗಿದ್ದು ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ಈ ಸುಂದರ ಜೋಡಿಯ ಇನ್ನೊಂದು ವಿಶೇಷ ಏನು ಗೊತ್ತಾ ಮದುವೆಯಾಗಿಲ್ಲ ಎಂದರೂ 2020ರಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡರು. ಇದಾದ ಮೇಲೆ 2022ರಲ್ಲಿ ಇನ್ನೊಂದು ಮಗು ಜನಿಸಿತು. ಇಷ್ಟಕ್ಕೆ ಇವರು ನಿಲ್ಲಲಿಲ್ಲ, 2024ರಲ್ಲಿ ಮೂರನೇ ಮಗುವನ್ನು ಪಡೆದುಕೊಂಡರು. ಸದ್ಯ ಈ ಸ್ಟಾರ್‌ ಜೋಡಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗು ಇದೆ. ವಿಲಿಯಮ್ಸನ್‌ ಅವರ ಯಶಸ್ವಿ ಕ್ರಿಕೆಟ್‌ ವೃತ್ತಿಜೀವನದಲ್ಲಿ ಸಾರಾ ಅವರ ಮಹತ್ವದ ಪಾತ್ರವಹಿಸಿದ್ದಾರೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES