• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /Ind vs Wi; ಟೀಮ್‌ ಇಂಡಿಯಾ ವಿರುದ್ಧ ಮತ್ತೊಂದು ಶತಕ.. ವೇಗದ ಸೆಂಚುರಿ ಬಾರಿಸಿ, ಓಪನರ್‌ ದಾಖಲೆ

Ind vs Wi; ಟೀಮ್‌ ಇಂಡಿಯಾ ವಿರುದ್ಧ ಮತ್ತೊಂದು ಶತಕ.. ವೇಗದ ಸೆಂಚುರಿ ಬಾರಿಸಿ, ಓಪನರ್‌ ದಾಖಲೆ

ಭಾರತ ತಂಡದ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಜಾನ್‌ ಕ್ಯಾಂಪ್‌ಬೆಲ್‌ ಅವರು ಕೇವಲ 65 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

Written ByBhimappa
Published: Sep 30, 2026, 04:59 PM IST|Updated: Sep 30, 2026, 05:08 PM IST
joinshare
Ind vs Wi; ಟೀಮ್‌ ಇಂಡಿಯಾ ವಿರುದ್ಧ ಮತ್ತೊಂದು ಶತಕ.. ವೇಗದ ಸೆಂಚುರಿ ಬಾರಿಸಿ, ಓಪನರ್‌ ದಾಖಲೆ
Image Credit: virat_kohli_john_campbell

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

John Campbell scores century in 2nd ODI against Team India: ಟೀಮ್‌ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್‌ ನಡುವೆ ನಡೆವೆ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಓಪನರ್‌ ಜಾನ್‌ ಕ್ಯಾಂಪ್‌ಬೆಲ್‌ ಅಬ್ಬರದ ಶತಕ ಬಾರಿಸಿದ್ದಾರೆ. ಭಾರತ ತಂಡದ ಬೌಲರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಜಾನ್‌ ಕ್ಯಾಂಪ್‌ಬೆಲ್‌ ಅವರು ಕೇವಲ 65 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದು ವೆಸ್ಟ್‌ ಇಂಡೀಸ್‌ ಏಕದಿನ ಇತಿಹಾಸದಲ್ಲಿ ಐದನೇ ವೇಗದ ಸೆಂಚುರಿ ಮತ್ತು ಟೀಮ್‌ ಇಂಡಿಯಾ ವಿರುದ್ಧ ಕೆರಿಬಿಯನ್‌ ಪರ ಅತಿ ವೇಗದ ಸೆಂಚುರಿ ಇದಾಗಿದೆ. ಟೀಮ್‌ ಇಂಡಿಯಾ ಬೌಲರ್‌ಗಳಿಗೆ ಮನ ಬಂದಂತೆ ಚಚ್ಚಿದ ಓಪನರ್‌ ಜಾನ್‌ ಕ್ಯಾಂಪ್‌ಬೆಲ್‌ ವೆಸ್ಟ್‌ ಇಂಡೀಸ್‌ ತಂಡದ ಬೃಹತ್‌ ರನ್‌ಗೂ ಕಾರಣರಾಗಿದ್ದಾರೆ.  

ಪಂದ್ಯದಲ್ಲಿ ಓಪನರ್‌ ಆಗಿ ಕ್ರೀಸ್‌ಗೆ ಆಗಮಿಸಿದ ಜಾನ್‌ ಕ್ಯಾಂಪ್‌ಬೆಲ್‌ ಅವರು ಪವರ್‌ ಪ್ಲೇನಲ್ಲಿ ಹೊಡೆಬಡಿ ಬ್ಯಾಟಿಂಗ್‌ ಮಾಡಿ ರನ್‌ಗಳ ವೇಗ ಹೆಚ್ಚಿಸಿದರು. ಟೀಮ್‌ ಇಂಡಿಯಾದ ಪೇಸರ್‌ ಪ್ರಸಿದ್ಧ್‌ ಕೃಷ್ಣ ಮತ್ತು ಅಕಿಬ್‌ ನಬಿ ಅವರ ಬೌಲಿಂಗ್‌ ಅನ್ನು ಧೂಳೀಪಟ ಮಾಡಿದ ಜಾನ್‌ ಕ್ಯಾಂಪ್‌ಬೆಲ್‌ ಬೌಂರಿಗಳ ಮಳೆ ಸುರಿಸಿದರು. ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ ಎಂದರೆ ಜಾನ್‌ ಕ್ಯಾಂಪ್‌ಬೆಲ್‌ ಬ್ಯಾಟಿಂಗ್‌ ಆರ್ಭಟ ಹೇಗಿತ್ತು ಎಂಬುದು ನಿಮಗೆ ಅರ್ಥವಾಗಬೇಕು. ಏಕದಿನದಲ್ಲಿ ವೆಸ್ಟ್‌ ಇಂಡೀಸ್‌ ಪರವಾಗಿ ಅತಿ ವೇಗದ ಅರ್ಧಶತಕವಾಗಿದೆ. ಬಂದ ಬೌಲ್‌ಗಳನ್ನು ಬಂದಂತೆ ಬೌಂಡರಿಗೆ ಅಟ್ಟಿದರು.      

ಜಾನ್‌ ಕ್ಯಾಂಪ್‌ಬೆಲ್‌ ಕ್ರೀಸ್‌ನಿಂದ ಯಾವಾಗ ಹೊರ ಹೋಗುತ್ತಾರೆ ಎಂದು ಟೀಮ್‌ ಇಂಡಿಯಾದ ಬೌಲರ್‌ಗಳು ಕಾಯುತ್ತಿದ್ದರು. ಏಕೆಂದರೆ ವೇಗದ ಬ್ಯಾಟಿಂಗ್‌ಗೆ ಮುನ್ನುಡಿ ಬರೆದಿದ್ದ ಜಾನ್‌ ಕ್ಯಾಪ್ಬೆಲ್‌ ಔಟ್‌ ಮಾಡಿದರೆ ರನ್‌ಗೆ ಕಡಿವಾಣ ಹಾಕಬೇಕು ಎಂಬುದು ಭಾರತದ ಪ್ಲಾನ್‌ ಆಗಿತ್ತು. ಪಂದ್ಯದಲ್ಲಿ 68 ಎಸೆತಗಳನ್ನು ಎದುರಿಸಿದ ಜಾನ್‌ ಕ್ಯಾಂಪ್ಬೆಲ್‌ ಅವರು 9 ಬೌಂಡರಿಗಳನ್ನು ಮತ್ತು 5 ಅಮೋಘವಾದ ಬಿಗ್‌ ಸಿಕ್ಸರ್‌ಗಳಿಂದ 101 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.

ಭಾರತದ ಅನುಭವಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ಮತ್ತು ಸ್ಪಿನ್ನರ್‌ ಕುಲ್‌ದೀಪ್‌ ಯಾದವ್‌ ಅವರಿಗೂ ತಲಾ ಒಂದೊಂದು ಸಿಕ್ಸರ್‌ ಸಿಡಿಸಿದರು. ಕ್ಯಾಂಪ್ಬೆಲ್‌ ಬ್ಯಾಟಿಂಗ್‌ ಮುಂದೆ ಭಾರತದ ಬೌಲಿಂಗ್‌ ಸೈಲೆಂಟ್‌ ಆಗಿತ್ತು. ಇದರಿಂದ ತಂಡದ 18ನೇ ಓವರ್‌ನಲ್ಲಿ ಕ್ಯಾಂಪ್ಬೆಲ್‌ ಶತಕ ಸಿಡಿಸಿದರು. ಭಾರತದ ವಿರುದ್ಧ ವೆಸ್ಟ್‌ ಇಂಡೀಸ್‌ನ ವೇಗದ ಶತಕ್ಕಾಗಿ ರಿಕಾರ್ಡೊ ಪೊವೆಲ್‌ ಅವರ 26 ವರ್ಷಗಳ ಹಳೆಯ ದಾಖಲೆಯನ್ನು ಬ್ರೇಕ್‌ ಮಾಡಿದರು. ಅಂತಿಮವಾಗಿ ಗುರ್ನೂರ್‌ ಬ್ರಾರ್‌ ಬೌಲಿಂಗ್‌ನಲ್ಲಿ ಶಾಟ್‌ ಮಾಡಿದ ಜಾನ್‌ ಕ್ಯಾಂಪ್ಬೆಲ್‌ ಅವರು ನಮನ್‌ ಧೀರ್‌ಗೆ ಕ್ಯಾಚ್‌ ಕೊಟ್ಟು ಹೊರ ನಡೆದರು. ಇದರಿಂದ ಟೀಮ್‌ ಇಂಡಿಯಾ ಬೌಲರ್‌ಗಳು ದೊಡ್ಡ ನಿಟ್ಟುಸಿರುವ ಬಿಟ್ಟರು.  

ಜಾನ್‌ ಕ್ಯಾಂಪ್ಬೆಲ್‌ ಯಾರು ಎಂದು ಹೇಳುವುದಾರೆ.. ಜಾನ್‌ ಕ್ಯಾಂಪ್ಬೆಲ್‌ ಅವರು ಜಮೈಕಾದ ಸೇಂಟ್‌ ಜೇಮ್ಸ್‌ನಲ್ಲಿ ಜನಿಸಿದರು. ಕ್ರಿಕೆಟ್‌ ಎಂಬುದೇ ಏನು ಅಂತ ಜಾನ್‌ ಕ್ಯಾಂಪ್ಬೆಲ್‌ಗೆ ಗೊತ್ತಿರಲಿಲ್ಲ. ಮನೆಯಲ್ಲಿ ಅವರ ಅಜ್ಜನಿಗೆ ಕ್ರಿಕೆಟ್‌ ಚೆನ್ನಾಗಿ ಗೊತ್ತಿತ್ತು. ಕ್ರಿಕೆಟ್‌ ಬಗ್ಗೆ ಸಂಪೂರ್ಣವಾಗಿ ಅಜ್ಜ, ತನ್ನ ಮೊಮ್ಮಗ ಜಾನ್‌ ಕ್ಯಾಂಪ್ಬೆಲ್‌ಗೆ ಹೇಳಿದರು. ಅದರ ಮೇಲೆ ಪ್ರೀತಿ, ಅಭಿಮಾನ ಹುಟ್ಟುವಂತೆ ಮನದಟ್ಟು ಮಾಡಿದರು. ಅಂದಿನಿಂದ ಜಾನ್‌ ಕ್ಯಾಂಪ್ಬೆಲ್‌ ಕ್ರಿಕೆಟ್‌ ಮೇಲೆ ವಿಶೇಷವಾದ ಆಸಕ್ತಿ ಬೆಳೆಸಿಕೊಂಡರು. ಹಂತ ಹಂತವಾಗಿ ಕ್ರಿಕೆಟ್‌ನಲ್ಲಿ ತನ್ನ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ಮಾಡುತ್ತ ಬಂದರು. ಅದೇ ಬ್ಯಾಟಿಂಗ್‌ ಪರ್ಫಾಮೆನ್ಸ್‌ ಈಗ ದೊಡ್ಡ ಮರವಾಗಿ ಬೆಳೆದಿದ್ದು ಜಾನ್‌ ಕ್ಯಾಂಪ್ಬೆಲ್‌ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಜಾನ್‌ ಕ್ಯಾಂಪ್ಬೆಲ್‌ ಅವರು 2019ರ ಆರಂಭದಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ವೆಸ್ಟ್‌ ಇಂಡೀಸ್‌ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಇದಕ್ಕಿಂತ ಮೊದಲು ಜಾನ್‌ ಕ್ಯಾಂಪ್ಬೆಲ್‌ ಅವರು ಪ್ರಾದೇಶಿಕ ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ್ದರು. ಇದರಿಂದ ರಾಷ್ಟ್ರೀಯ ಕ್ರಿಕೆಟ್‌ಗೆ ಸೇರ್ಪಡೆಗೊಂಡರು. ಜಾನ್‌ ಕ್ಯಾಂಪ್ಬೆಲ್‌ ಅವರ ಬ್ಯಾಟಿಂಗ್‌ ನೋಡಿದ ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟರ್‌ ಕ್ರಿಸ್‌ ಗೇಲ್‌ ಅವರು ಮುಂದಿನ ಕ್ರಿಸ್‌ ಗೇಲ್‌, ಜಾನ್‌ ಕ್ಯಾಂಪ್ಬೆಲ್‌ ಎಂದು ಗುಣಗಾನ ಮಾಡಿದ್ದರು.

Add Zee News as a Preferred Source
TAGS:
Cricket