• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /IPL 2027: ಆರ್‌ಸಿಬಿ ತಂಡದಿಂದ ನಾಲ್ವರು ಔಟ್? ಮಿನಿ ಹರಾಜಿಗೂ ಮುನ್ನ ಮಹತ್ವದ ನಿರ್ಧಾರ!

IPL 2027: ಆರ್‌ಸಿಬಿ ತಂಡದಿಂದ ನಾಲ್ವರು ಔಟ್? ಮಿನಿ ಹರಾಜಿಗೂ ಮುನ್ನ ಮಹತ್ವದ ನಿರ್ಧಾರ!

ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡ ನಾಲ್ವರು ಆಟಗಾರರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮಂಗೇಶ್ ಯಾದವ್, ಯಶ್ ದಯಾಳ್, ರಿಚರ್ಡ್ ಗ್ಲೀಸನ್ ಮತ್ತು ಅಭಿನಂದನ್ ಸಿಂಗ್ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. ಹರಾಜಿನಲ್ಲಿ ಹೊಸ ಆಟಗಾರರನ್ನ ಖರೀದಿಸಲು ತಂಡದ ಪರ್ಸ್ ಮೊತ್ತ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಆದರೆ ಆಟಗಾರರ ಬಿಡುಗಡೆ ಕುರಿತು ಆರ್‌ಸಿಬಿ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.

Written ByPuttaraj K Alur
Published: Nov 17, 2026, 14:20 IST|Updated: Nov 17, 2026, 15:01 IST
joinshare
IPL 2027: ಆರ್‌ಸಿಬಿ ತಂಡದಿಂದ ನಾಲ್ವರು ಔಟ್? ಮಿನಿ ಹರಾಜಿಗೂ ಮುನ್ನ ಮಹತ್ವದ ನಿರ್ಧಾರ!
Image Credit: RCB Team

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

RCB 2027 Retention: ಐಪಿಎಲ್‌ನಲ್ಲಿ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ 2027ರ ಆವೃತ್ತಿಗೆ ಸಿದ್ಧತೆ ಆರಂಭಿಸಿದೆ. ಮುಂದಿನ ಸೀಸನ್‌ಗೂ ತನ್ನ ಯಶಸ್ಸಿನ ಲಯವನ್ನ ಮುಂದುವರಿಸಲು ಆರ್‌ಸಿಬಿ ಫ್ರಾಂಚೈಸಿ ಮುಂದಾಗುವ ಸಾಧ್ಯತೆಯಿದೆ. ಆದರೆ ಮಿನಿ ಹರಾಜಿನಲ್ಲಿ ಹೊಸ ಆಟಗಾರರನ್ನ ಖರೀದಿಸಲು ತಂಡದ ಪರ್ಸ್‌ನಲ್ಲಿ ಹಣದ ಅಗತ್ಯವಿರುವುದರಿಂದ ಕೆಲ ಆಟಗಾರರನ್ನ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡದಿಂದ ನಾಲ್ವರು ಆಟಗಾರರು ಹೊರಬೀಳುವ ಸಾಧ್ಯತೆಯಿದೆ ಎಂಬ ಚರ್ಚೆ ಶುರುವಾಗಿದೆ. 2026ರ ಹರಾಜಿನಲ್ಲಿ ದೊಡ್ಡ ಮೊತ್ತ ನೀಡಿ ಖರೀದಿಸಿದ ಆಟಗಾರರ ಪೈಕಿ ಕೆಲವರಿಗೆ ಆಡುವ ಅವಕಾಶವೇ ಸಿಕ್ಕಿಲ್ಲ. ಮತ್ತೊಂದೆಡೆ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ಆಟಗಾರರನ್ನೂ ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ವರದಿಯ ಪ್ರಕಾರ, ಬಿಡುಗಡೆ ಪಟ್ಟಿಯಲ್ಲಿ ಮಂಗೇಶ್ ಯಾದವ್, ಯಶ್ ದಯಾಳ್, ರಿಚರ್ಡ್ ಗ್ಲೀಸನ್ ಮತ್ತು ಅಭಿನಂದನ್ ಸಿಂಗ್ ಹೆಸರುಗಳಿವೆ.

1. ಮಂಗೇಶ್ ಯಾದವ್ – ₹5.20 ಕೋಟಿ

ಆರ್‌ಸಿಬಿ ತಂಡದಿಂದ ಬಿಡುಗಡೆಯಾಗುವ ಸಾಧ್ಯತೆಯಿರುವ ಆಟಗಾರರ ಪಟ್ಟಿಯಲ್ಲಿ ಮಂಗೇಶ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ. 2026ರ ಐಪಿಎಲ್ ಹರಾಜಿನಲ್ಲಿ ₹30 ಲಕ್ಷ ಮೂಲ ಬೆಲೆ ಹೊಂದಿದ್ದ ಮಧ್ಯಪ್ರದೇಶದ ಅನ್‌ಕ್ಯಾಪ್ಡ್ ಆಲ್‌ರೌಂಡರ್ ಅವರನ್ನ ಆರ್‌ಸಿಬಿ ಬರೋಬ್ಬರಿ ₹5.20 ಕೋಟಿ ನೀಡಿ ಖರೀದಿಸಿತ್ತು. ಆದರೆ ಇಡೀ 2026ರ ಆವೃತ್ತಿಯಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ತಂಡದಲ್ಲಿ ಸ್ಥಾನ ಪಡೆಯದೆ ಬೆಂಚ್‌ನಲ್ಲೇ ಉಳಿದಿದ್ದ ಮಂಗೇಶ್ ಯಾದವ್ ಅವರನ್ನ ಮುಂದಿನ ಸೀಸನ್‌ಗೆ ಉಳಿಸಿಕೊಳ್ಳುವ ಬದಲು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಮೂಲಕ ಹರಾಜಿಗಾಗಿ ತಂಡದ ಪರ್ಸ್ ಮೊತ್ತವನ್ನ ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ.

2. ಯಶ್ ದಯಾಳ್ – ₹5 ಕೋಟಿ

ಆರ್‌ಸಿಬಿ ತಂಡದಿಂದ ಹೊರಬೀಳಬಹುದು ಎಂದು ನಿರೀಕ್ಷಿಸಲಾಗುತ್ತಿರುವ ಮತ್ತೊಂದು ಹೆಸರು ವೇಗಿ ಯಶ್ ದಯಾಳ್. 2026ರ ಆವೃತ್ತಿಯಲ್ಲಿ ಆರ್‌ಸಿಬಿ ಅವರನ್ನ ₹5 ಕೋಟಿ ನೀಡಿ ಉಳಿಸಿಕೊಂಡಿತ್ತು. ಆದರೆ ಮೈದಾನದ ಹೊರಗಿನ ಕಾನೂನು ವಿವಾದಗಳು ಹಾಗೂ ಅಲಭ್ಯತೆಯ ಕಾರಣದಿಂದ ಅವರು ಕಳೆದ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯದಲ್ಲೂ ಆಡಿರಲಿಲ್ಲ. ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಅವರ ಲಭ್ಯತೆ ಕುರಿತು ಸ್ಪಷ್ಟತೆ ಇಲ್ಲದಿರುವುದರಿಂದ ಆರ್‌ಸಿಬಿ ಅವರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ₹5 ಕೋಟಿ ಮೌಲ್ಯದ ಆಟಗಾರನನ್ನ ಬಿಡುಗಡೆ ಮಾಡಿದರೆ ಹರಾಜಿನಲ್ಲಿ ಹೊಸ ಆಟಗಾರರನ್ನ ಖರೀದಿಸಲು ತಂಡಕ್ಕೆ ಅವಕಾಶ ಸಿಗಬಹುದು.

3. ರಿಚರ್ಡ್ ಗ್ಲೀಸನ್ – ₹1.60 ಕೋಟಿ

ಇಂಗ್ಲೆಂಡ್‌ನ ವೇಗಿ ರಿಚರ್ಡ್ ಗ್ಲೀಸನ್ ಕೂಡ ಆರ್‌ಸಿಬಿ ತಂಡದಿಂದ ಹೊರಬೀಳುವ ಸಾಧ್ಯತೆಯಿದೆ. ಶ್ರೀಲಂಕಾದ ನುವಾನ್ ತುಷಾರ ಅವರ ಬದಲಿಗೆ ಗ್ಲೀಸನ್ ಅವರನ್ನ ₹1.60 ಕೋಟಿ ನೀಡಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಆರ್‌ಸಿಬಿ ತಂಡದ ವಿದೇಶಿ ಆಟಗಾರರ ಆಯ್ಕೆಯಲ್ಲಿ ಫಿಲ್ ಸಾಲ್ಟ್, ಜೋಶ್ ಹೇಝಲ್‌ವುಡ್, ಟಿಮ್ ಡೇವಿಡ್ ಮತ್ತು ಜೇಕಬ್ ಬೆಥೆಲ್ ಅಥವಾ ಜೇಕಬ್ ಡಫಿ ಅವರಿಗೆ ಆದ್ಯತೆ ಸಿಗುವ ಸಾಧ್ಯತೆಯಿದೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಗ್ಲೀಸನ್‌ಗೆ ಅವಕಾಶ ಸಿಗುವುದು ಕಷ್ಟವಾಗಬಹುದು. ಈ ಕಾರಣದಿಂದ ಅವರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

4. ಅಭಿನಂದನ್ ಸಿಂಗ್ – ₹30 ಲಕ್ಷ

ಈ ಪಟ್ಟಿಯಲ್ಲಿರುವ ನಾಲ್ಕನೇ ಆಟಗಾರ ಅಭಿನಂದನ್ ಸಿಂಗ್. ₹30 ಲಕ್ಷ ಮೂಲ ಬೆಲೆಗೆ ಆರ್‌ಸಿಬಿ ತಂಡದಲ್ಲಿದ್ದ ಈ ವೇಗಿ 2026ರ ಆವೃತ್ತಿಯಲ್ಲಿ ಮೂರು ಪಂದ್ಯಗಳನ್ನ ಆಡಿದ್ದರು. ಈ ಪಂದ್ಯಗಳಲ್ಲಿ 12.62ರ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟು ಕೇವಲ ಮೂರು ವಿಕೆಟ್‌ಗಳನ್ನ ಪಡೆದಿದ್ದರು. ತಂಡದಲ್ಲಿ ಭುವನೇಶ್ವರ್ ಕುಮಾರ್ ಮತ್ತು ರಾಸಿಖ್ ಸಲಾಮ್ ಅವರಂತಹ ದೇಶೀಯ ವೇಗಿಗಳು ಇರುವುದರಿಂದ, ಅಭಿನಂದನ್ ಸಿಂಗ್ ಅವರನ್ನ ಬಿಡುಗಡೆ ಮಾಡಿ ತಂಡದ ಸ್ಕ್ವಾಡ್‌ನಲ್ಲಿ ಜಾಗ ಖಾಲಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಆರ್‌ಸಿಬಿ ಪ್ರಮುಖ ಆಟಗಾರರನ್ನ ಉಳಿಸಿಕೊಳ್ಳಲಿದೆಯೇ?

ಮುಂಬರುವ ಆವೃತ್ತಿಯಲ್ಲಿ ತನ್ನ ಗೆಲುವಿನ ಲಯವನ್ನ ಬದಲಿಸಲು ಆರ್‌ಸಿಬಿ ಬಯಸುವುದಿಲ್ಲವೆಂಬುದು ವರದಿಯ ಪ್ರಮುಖ ಅಂಶ. ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜೋಶ್ ಹೇಝಲ್‌ವುಡ್, ಭುವನೇಶ್ವರ್ ಕುಮಾರ್ ಸೇರಿದಂತೆ ಪ್ರಮುಖ ಆಟಗಾರರನ್ನ ತಂಡದಲ್ಲಿ ಮುಂದುವರಿಸುವ ನಿರೀಕ್ಷೆಯಿದೆ. ಒಟ್ನಲ್ಲಿ ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಆರ್‌ಸಿಬಿ ತಂಡದಲ್ಲಿ ದೊಡ್ಡ ಬದಲಾವಣೆಗಳ ಬದಲು ಕೆಲವೇ ಆಟಗಾರರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮಂಗೇಶ್ ಯಾದವ್, ಯಶ್ ದಯಾಳ್, ರಿಚರ್ಡ್ ಗ್ಲೀಸನ್ ಮತ್ತು ಅಭಿನಂದನ್ ಸಿಂಗ್ ಅವರ ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಆದರೆ ಆರ್‌ಸಿಬಿಯ ಅಧಿಕೃತ ರಿಟೆನ್ಷನ್ ಮತ್ತು ರಿಲೀಸ್ ಪಟ್ಟಿ ಪ್ರಕಟವಾದ ಬಳಿಕವಷ್ಟೇ ಅಂತಿಮ ಚಿತ್ರಣ ಸಿಗಲಿದೆ.

Add Zee News as a Preferred Source
TAGS:
Cricket
Sports
Kannada News