SOCIAL MEDIA

Newsletter

PARTNER SITES
Select Language Select State

IPL 2027 Auction: ಡಿಸೆಂಬರ್‌ನಲ್ಲೇ ಐಪಿಎಲ್ ಮಿನಿ ಹರಾಜು? ಭಾರತಕ್ಕೆ ಮರಳಲಿದೆ ಮೆಗಾ ಕ್ರಿಕೆಟ್‌ ಈವೆಂಟ್!

IPL 2027ರ ಮಿನಿ ಹರಾಜು ಡಿಸೆಂಬರ್ 7ರಿಂದ 13ರ ನಡುವೆ ಭಾರತದಲ್ಲಿ ನಡೆಯುವ ಸಾಧ್ಯತೆ ಇದೆ. ಮೂರು ವರ್ಷಗಳ ಬಳಿಕ ಹರಾಜು ಭಾರತಕ್ಕೆ ಮರಳುತ್ತಿದೆ. ಮದುವೆ ಸೀಸನ್‌ನಿಂದ ಹೋಟೆಲ್‌ಗಳ ಲಭ್ಯತೆ ಸವಾಲಾಗಿದ್ದು, ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಇದು ಕೊನೆಯ ಮಿನಿ ಹರಾಜಾಗಿರುವುದರಿಂದ ಅಭಿಮಾನಿಗಳ ಕುತೂಹಲ ಹೆಚ್ಚಿದೆ.

Written By Puttaraj K Alur
Published: Sep 19, 2026, 09:44 PM IST | Updated: Sep 19, 2026, 09:52 PM IST
Image Credit: IPL 2027 Mini Auction
Join

IPL 2027 Mini Auction: ಐಪಿಎಲ್ 2027ರ ಸೀಸನ್‌ಗೆ ಇನ್ನೂ ಹಲವು ತಿಂಗಳು ಬಾಕಿ ಇದ್ದರೂ, ಫ್ರಾಂಚೈಸಿಗಳು ಈಗಾಗಲೇ ಮುಂದಿನ ಸೀಸನ್‌ಗಾಗಿ ಸಿದ್ಧತೆ ಆರಂಭಿಸಿವೆ. ಈ ನಡುವೆ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಹೆಚ್ಚಿಸುವ ಮಹತ್ವದ ಅಪ್‌ಡೇಟ್‌ ಹೊರಬಿದ್ದಿದೆ. IPL 2027ರ ಆಟಗಾರರ ಮಿನಿ ಹರಾಜು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ. ಆದರೆ ಬಿಸಿಸಿಐ ಇನ್ನೂ ನಿಖರ ದಿನಾಂಕ ಮತ್ತು ಹರಾಜಿನ ಸ್ಥಳವನ್ನ ಅಧಿಕೃತವಾಗಿ ಘೋಷಿಸಿಲ್ಲ. ಪ್ರಸ್ತುತ ಲಭ್ಯವಿರುವ ವರದಿಗಳ ಪ್ರಕಾರ ಡಿಸೆಂಬರ್ ಮಧ್ಯಭಾಗದಲ್ಲಿ ಹರಾಜು ನಡೆಸಲು ಮಂಡಳಿ ಯೋಜಿಸುತ್ತಿದೆ.  

ಮೂರು ವರ್ಷಗಳ ಬಳಿಕ ಭಾರತಕ್ಕೆ IPL Auction

IPL 2027ರ ಮಿನಿ ಹರಾಜಿನ ಮತ್ತೊಂದು ವಿಶೇಷತೆ ಎಂದರೆ, ಈ ಬಾರಿ ಹರಾಜು ಭಾರತದಲ್ಲೇ ನಡೆಯಲಿದೆ. ಕಳೆದ ಮೂರು ಹರಾಜುಗಳು ವಿದೇಶದಲ್ಲಿ ನಡೆದಿದ್ದವು. ದುಬೈ, ಜೆಡ್ಡಾ ಮತ್ತು ಅಬುಧಾಬಿ ಹರಾಜಿಗೆ ಆತಿಥ್ಯ ವಹಿಸಿದ್ದವು. ಇದೀಗ ಮೂರು ಆವೃತ್ತಿಗಳ ಬಳಿಕ IPL Auction ಮತ್ತೆ ಭಾರತಕ್ಕೆ ಮರಳುತ್ತಿದೆ. ಸೆಪ್ಟೆಂಬರ್ 15ರಂದು ನಡೆದ IPL Governing Council ಸಭೆಯಲ್ಲಿ ಹರಾಜನ್ನ ಭಾರತದಲ್ಲಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. IPL ಅಧ್ಯಕ್ಷ ಅರುಣ್ ಧುಮಾಲ್ ಕೂಡ ಹರಾಜನ್ನ ಭಾರತದಲ್ಲೇ ನಡೆಸುವ ಉದ್ದೇಶವನ್ನ ಸ್ಪಷ್ಟಪಡಿಸಿದ್ದಾರೆ. ಆದರೆ ಡಿಸೆಂಬರ್‌ನಲ್ಲಿ ದೇಶದಾದ್ಯಂತ ಮದುವೆ ಸೀಸನ್ ಇರುವುದರಿಂದ ದೊಡ್ಡ ಹೋಟೆಲ್‌ಗಳು ಮತ್ತು ಸೂಕ್ತ ಸ್ಥಳಗಳ ಲಭ್ಯತೆ ಪ್ರಮುಖ ಸವಾಲಾಗಿದೆ. ಹೀಗಾಗಿ ಆತಿಥ್ಯ ನಗರವನ್ನ ಹೋಟೆಲ್‌ ಸೌಲಭ್ಯ, ವಸತಿ ವ್ಯವಸ್ಥೆ ಹಾಗೂ ಇತರ ಲಾಜಿಸ್ಟಿಕ್ಸ್‌ಗಳನ್ನ ಪರಿಶೀಲಿಸಿದ ಬಳಿಕ ಅಂತಿಮಗೊಳಿಸುವ ಸಾಧ್ಯತೆಯಿದೆ.

ಡಿಸೆಂಬರ್‌ನಲ್ಲಿ ಯಾವ ದಿನ?

ಸದ್ಯಕ್ಕೆ ನಿಖರ ದಿನಾಂಕವನ್ನ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಇತ್ತೀಚಿನ ವರದಿಗಳ ಪ್ರಕಾರ ಮಿನಿ ಹರಾಜು ಡಿಸೆಂಬರ್ ಎರಡನೇ ವಾರದಲ್ಲಿ ನಡೆಯುವ ನಿರೀಕ್ಷೆಯಿದೆ. ಕೆಲವು ವರದಿಗಳಲ್ಲಿ ಡಿಸೆಂಬರ್ 7ರಿಂದ 13ರ ನಡುವಿನ ದಿನಾಂಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಅಂತಿಮ ದಿನಾಂಕ ಮತ್ತು ಸ್ಥಳವನ್ನ ಬಿಸಿಸಿಐ ಅಧಿಕೃತವಾಗಿ ಘೋಷಿಸಿದ ನಂತರವೇ ಖಚಿತ ಮಾಹಿತಿ ಲಭ್ಯವಾಗಲಿದೆ. 

ಈ ಬಾರಿ ಏಕೆ ಮಿನಿ ಹರಾಜು?

IPL 2027ರ ಹರಾಜು ದೊಡ್ಡ ಪ್ರಮಾಣದ ಮೆಗಾ ಹರಾಜು ಅಲ್ಲ. ಇದು ಮಿನಿ ಹರಾಜು ಆಗಿರುವುದರಿಂದ ಫ್ರಾಂಚೈಸಿಗಳ ತಂಡಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳಾಗುವ ಸಾಧ್ಯತೆ ಕಡಿಮೆ. ತಂಡಗಳು ಈಗಾಗಲೇ ಹೊಂದಿರುವ ಆಟಗಾರರ ಪೈಕಿ ಯಾರನ್ನ ಉಳಿಸಿಕೊಳ್ಳುತ್ತವೆ, ಯಾರನ್ನ ಬಿಡುಗಡೆ ಮಾಡುತ್ತವೆ ಎಂಬುದರ ಆಧಾರದ ಮೇಲೆ ಹರಾಜಿನಲ್ಲಿ ಖಾಲಿಯಾಗುವ ಸ್ಥಾನಗಳು ನಿರ್ಧಾರವಾಗಲಿವೆ. ಅದೇ ರೀತಿ ಪ್ರತಿ ಫ್ರಾಂಚೈಸಿಯ ಪರ್ಸ್‌ನಲ್ಲಿ ಉಳಿಯುವ ಮೊತ್ತವೂ ಹರಾಜಿನ ಮೇಲೆ ಪರಿಣಾಮ ಬೀರುತ್ತದೆ. ರಿಟೆನ್ಷನ್‌ ಮತ್ತು ಟ್ರೇಡಿಂಗ್‌ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಯಾವ ತಂಡದ ಬಳಿ ಎಷ್ಟು ಹಣವಿದೆ ಮತ್ತು ಎಷ್ಟು ಆಟಗಾರರ ಸ್ಥಾನಗಳು ಖಾಲಿ ಇವೆ ಎಂಬುದು ಸ್ಪಷ್ಟವಾಗಲಿದೆ.

ಫ್ರಾಂಚೈಸಿಗಳ ಲೆಕ್ಕಾಚಾರ ಹೇಗಿರಲಿದೆ?

ಮಿನಿ ಹರಾಜಿನಲ್ಲಿ ತಂಡಗಳು ಸಾಮಾನ್ಯವಾಗಿ ತಮ್ಮ ಅಗತ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಸ್ಥಾನಗಳನ್ನ ತುಂಬಿಕೊಳ್ಳಲು ಪ್ರಯತ್ನಿಸುತ್ತವೆ. ಬ್ಯಾಕಪ್ ಆಟಗಾರರು, ವೇಗದ ಬೌಲರ್‌ಗಳು, ವಿದೇಶಿ ಆಟಗಾರರು, ಆಲ್‌ರೌಂಡರ್‌ಗಳು ಅಥವಾ ನಿರ್ದಿಷ್ಟ ಪಾತ್ರ ನಿರ್ವಹಿಸಬಲ್ಲ ಆಟಗಾರರಿಗೆ ಬೇಡಿಕೆ ಹೆಚ್ಚಾಗಬಹುದು. ಆದರೆ ಪ್ರತಿ ತಂಡದ ಬಜೆಟ್ ಮತ್ತು ಖಾಲಿ ಸ್ಥಾನಗಳು ವಿಭಿನ್ನವಾಗಿರುವುದರಿಂದ ಹರಾಜಿನ ತಂತ್ರವೂ ತಂಡದಿಂದ ತಂಡಕ್ಕೆ ಬದಲಾಗಲಿದೆ. ಹರಾಜಿನ ಮುನ್ನ ಆಟಗಾರರ ಬಿಡುಗಡೆ, ರಿಟೆನ್ಷನ್ ಮತ್ತು ಟ್ರೇಡಿಂಗ್‌ ವಿಂಡೋ ಪ್ರಮುಖ ಪಾತ್ರ ವಹಿಸಲಿದೆ.

Impact Player Rule ಬಗ್ಗೆ ಇನ್ನೂ ಗೊಂದಲ

IPL 2027ಕ್ಕೂ ಮುನ್ನ ಮತ್ತೊಂದು ಪ್ರಮುಖ ಚರ್ಚೆ Impact Player Rule ಕುರಿತು ನಡೆಯುತ್ತಿದೆ. ಈ ನಿಯಮವನ್ನ ಮುಂದುವರಿಸಬೇಕೇ, ಬದಲಾವಣೆ ಮಾಡಬೇಕೇ ಅಥವಾ ಕೈಬಿಡಬೇಕೇ ಎಂಬ ಕುರಿತು BCCI ಫ್ರಾಂಚೈಸಿಗಳು ಮತ್ತು ಇತರ ಸ್ಟೇಕ್‌ಹೋಲ್ಡರ್‌ಗಳಿಂದ ಪ್ರತಿಕ್ರಿಯೆ ಪಡೆಯುತ್ತಿದೆ. ಸದ್ಯಕ್ಕೆ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. Impact Player Rule ಮುಂದುವರಿದರೆ ತಂಡಗಳ ಆಟಗಾರರ ಆಯ್ಕೆ ಮತ್ತು ಪಂದ್ಯದ ತಂತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಫ್ರಾಂಚೈಸಿಗಳು ಈ ನಿಯಮದ ಭವಿಷ್ಯದ ನಿರ್ಧಾರವನ್ನೂ ಕುತೂಹಲದಿಂದ ಎದುರು ನೋಡುತ್ತಿವೆ.

IPL 2027 ಹರಾಜು ಏಕೆ ವಿಶೇಷ?

IPL 2027 ಲೀಗ್‌ನ 20ನೇ ಸೀಸನ್ ಆಗಿರುವುದರಿಂದ ಈ ಆವೃತ್ತಿಗೆ ವಿಶೇಷ ಮಹತ್ವವಿದೆ. ಅದಕ್ಕೂ ಮುನ್ನ ನಡೆಯುವ ಮಿನಿ ಹರಾಜು ತಂಡಗಳಿಗೆ ತಮ್ಮ ಸ್ಕ್ವಾಡ್‌ಗಳನ್ನ ಮತ್ತಷ್ಟು ಬಲಪಡಿಸಿಕೊಳ್ಳಲು ಅವಕಾಶ ನೀಡಲಿದೆ. ಹರಾಜಿನ ದಿನಾಂಕ, ಸ್ಥಳ, ಆಟಗಾರರ ಪಟ್ಟಿ ಮತ್ತು ಪ್ರತಿ ತಂಡದ ಪರ್ಸ್‌ ಸೇರಿದಂತೆ ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿವೆ. ಹೀಗಾಗಿ ಕ್ರಿಕೆಟ್‌ ಅಭಿಮಾನಿಗಳ ಗಮನ ಇದೀಗ ಡಿಸೆಂಬರ್‌ನಲ್ಲಿ ನಡೆಯಲಿರುವ IPL 2027 Mini Auctionನತ್ತ ನೆಟ್ಟಿದೆ. ದಿನಾಂಕ ಇನ್ನೂ ಅಧಿಕೃತವಾಗಿಲ್ಲವಾದರೂ, ಡಿಸೆಂಬರ್ ಎರಡನೇ ವಾರದಲ್ಲಿ ಭಾರತದಲ್ಲೇ ಹರಾಜು ನಡೆಯುವ ಸಾಧ್ಯತೆ ಸದ್ಯದ ಪ್ರಮುಖ ಅಪ್‌ಡೇಟ್‌ ಆಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES