SOCIAL MEDIA

Newsletter

PARTNER SITES
Select Language Select State

IPL 2027: 10 ತಂಡಗಳಿಂದ ಸ್ಟಾರ್ ಆಟಗಾರರಿಗೆ ಕೊಕ್‌? ರಿಲೀಸ್ ಆಗಲಿರುವವರ ಸಂಭಾವ್ಯ ಪಟ್ಟಿ ಇಲ್ಲಿದೆ!

ಐಪಿಎಲ್‌ 2027ರ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ಆಟಗಾರರ ರಿಟೆನ್ಷನ್‌ ಮತ್ತು ಬಿಡುಗಡೆ ಪ್ರಕ್ರಿಯೆಗೆ ಸಿದ್ಧತೆ ನಡೆಸಿವೆ. ಚೆನ್ನೈ, ಮುಂಬೈ, ಆರ್‌ಸಿಬಿ, ಕೆಕೆಆರ್‌ ಸೇರಿದಂತೆ ಹಲವು ತಂಡಗಳ ಪ್ರಮುಖ ಆಟಗಾರರು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂಬ ಸಂಭಾವ್ಯ ಪಟ್ಟಿ ಗಮನ ಸೆಳೆದಿದೆ. ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಸ್ಟಾರ್ ಆಟಗಾರರ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಿದೆ. ಆದರೆ ಅಂತಿಮ ನಿರ್ಧಾರ ತಂಡಗಳ ಅಧಿಕೃತ ಪ್ರಕಟಣೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.

Written By Puttaraj K Alur
Published: Nov 18, 2026, 11:00 IST | Updated: Nov 18, 2026, 13:04 IST
Image Credit: IPL Retention 2027
Join

IPL Retention 2027: ಇಂಡಿಯನ್ ಪ್ರೀಮಿಯರ್ ಲೀಗ್‌ (IPL)ನ 20ನೇ ಆವೃತ್ತಿಯ ಸಿದ್ಧತೆಗಳು ಆರಂಭವಾಗಿದ್ದು, 2027ರ ಐಪಿಎಲ್‌ ಮಿನಿ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಂಡಗಳ ಆಟಗಾರರ ಪಟ್ಟಿಯನ್ನ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿವೆ. ಈ ಬಾರಿ ತಂಡಗಳ ಆಟಗಾರರ ಆಯ್ಕೆ ಹಾಗೂ ಬಿಡುಗಡೆ ಪ್ರಕ್ರಿಯೆ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಪ್ರಮುಖ ಆಟಗಾರರ ಟ್ರೇಡ್ ಸುದ್ದಿಗಳು ಅಭಿಮಾನಿಗಳ ಗಮನ ಸೆಳೆದಿವೆ.

ನವೆಂಬರ್ 17 ಆಟಗಾರರ ರಿಟೆನ್ಷನ್ ಪಟ್ಟಿ ಸಲ್ಲಿಸಲು ಅಂತಿಮ ದಿನವಾಗಿದ್ದು, ಈ ದಿನ ಎಲ್ಲಾ 10 ತಂಡಗಳು ತಾವು ಉಳಿಸಿಕೊಳ್ಳುವ ಹಾಗೂ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನ ಪ್ರಕಟಿಸಬೇಕಿದೆ. ಈ ಹಿನ್ನೆಲೆಯಲ್ಲಿ ಯಾವ ತಂಡದಿಂದ ಯಾವ ಆಟಗಾರರು ಹೊರಬೀಳಬಹುದು ಎಂಬ ಚರ್ಚೆ ಜೋರಾಗಿದೆ. ಸಂಭಾವ್ಯ ಪಟ್ಟಿಯಲ್ಲಿ 10 ತಂಡಗಳ ಅನೇಕ ಪ್ರಮುಖ ಆಟಗಾರರ ಹೆಸರುಗಳಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಚೆನ್ನೈ ಸೂಪರ್ ಕಿಂಗ್ಸ್‌ (CSK)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದಿಂದ ಪ್ರಶಾಂತ್ ವೀರ್ (₹14.20 ಕೋಟಿ), ರಾಹುಲ್ ಚಹಾರ್ (₹5.20 ಕೋಟಿ), ಮ್ಯಾಟ್ ಹೆನ್ರಿ (₹2 ಕೋಟಿ), ಸ್ಪೆನ್ಸರ್ ಜಾನ್ಸನ್ (₹1.50 ಕೋಟಿ), ಜಾಕ್ ಫೌಲ್ಕ್ಸ್ (₹75 ಲಕ್ಷ) ಹಾಗೂ ಆಕಾಶ್ ಮಧ್ವಾಲ್ (₹30 ಲಕ್ಷ) ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಸಂಭಾವ್ಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ (DC)

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಮಿಚೆಲ್ ಸ್ಟಾರ್ಕ್ (₹11.75 ಕೋಟಿ), ಆಖಿಬ್ ನಬಿ (₹8.40 ಕೋಟಿ), ಅಭಿಷೇಕ್ ಪೊರೆಲ್ (₹4 ಕೋಟಿ), ಬೆನ್ ಡಕೆಟ್ (₹2 ಕೋಟಿ) ಹಾಗೂ ರೆಹಾನ್ ಅಹ್ಮದ್ (₹75 ಲಕ್ಷ) ಹೊರಬೀಳುವ ಸಾಧ್ಯತೆಯಿದೆ.

ಗುಜರಾತ್ ಟೈಟನ್ಸ್‌ (GT)

ಗುಜರಾತ್ ಟೈಟನ್ಸ್‌ ತಂಡದ ಸಂಭಾವ್ಯ ಬಿಡುಗಡೆ ಪಟ್ಟಿಯಲ್ಲಿ ಶಾರುಖ್ ಖಾನ್ (₹4 ಕೋಟಿ), ಟಾಮ್ ಬ್ಯಾಂಟನ್ (₹3 ಕೋಟಿ), ಗ್ಲೆನ್ ಫಿಲಿಪ್ಸ್ (₹2 ಕೋಟಿ), ಇಶಾಂತ್ ಶರ್ಮಾ (₹75 ಲಕ್ಷ), ಲ್ಯೂಕ್ ವುಡ್ (₹75 ಲಕ್ಷ), ರಾಹುಲ್ ತೆವಾಟಿಯಾ (₹4 ಕೋಟಿ) ಹಾಗೂ ಜಯಂತ್ ಯಾದವ್ (₹75 ಲಕ್ಷ) ಹೆಸರುಗಳಿವೆ.

ಕೋಲ್ಕತ್ತಾ ನೈಟ್ ರೈಡರ್ಸ್‌ (KKR)

ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದಿಂದ ದುಬಾರಿ ಆಟಗಾರರಾದ ಕ್ಯಾಮರೂನ್ ಗ್ರೀನ್ (₹25.20 ಕೋಟಿ) ಮತ್ತು ಮಥೀಶ ಪತಿರಾಣ (₹18 ಕೋಟಿ) ಸೇರಿದಂತೆ ರಚಿನ್ ರವೀಂದ್ರ (₹2 ಕೋಟಿ), ಬ್ಲೆಸಿಂಗ್ ಮುಝರಬಾನಿ (₹75 ಲಕ್ಷ) ಅವರನ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.

ಲಕ್ನೋ ಸೂಪರ್ ಜೈಂಟ್ಸ್‌ (LSG)

ಲಕ್ನೋ ತಂಡದಿಂದ ಅವೇಶ್ ಖಾನ್ (₹9.75 ಕೋಟಿ), ಅಕ್ಷತ್ ರಘುವಂಶಿ (₹2.20 ಕೋಟಿ), ವನಿಂದು ಹಸರಂಗ (₹2 ಕೋಟಿ), ನಮನ್ ತಿವಾರಿ (₹1 ಕೋಟಿ), ಅಬ್ದುಲ್ ಸಮದ್ (₹4.20 ಕೋಟಿ) ಹಾಗೂ ಅನ್ರಿಕ್ ನೋಕಿಯ (₹2 ಕೋಟಿ) ಹೆಸರುಗಳು ಸಂಭಾವ್ಯ ಬಿಡುಗಡೆ ಪಟ್ಟಿಯಲ್ಲಿವೆ.

ಮುಂಬೈ ಇಂಡಿಯನ್ಸ್‌ (MI)

ಮುಂಬೈ ಇಂಡಿಯನ್ಸ್‌ ತಂಡದಿಂದ ದೀಪಕ್ ಚಹರ್ (₹9.25 ಕೋಟಿ), ಶಾರ್ದೂಲ್ ಠಾಕೂರ್ (₹2 ಕೋಟಿ), ಕೇಶವ್ ಮಹಾರಾಜ್ (₹75 ಲಕ್ಷ), ಮಹಿಪಾಲ್ ಲೊಮ್ರೋರ್ (₹50 ಲಕ್ಷ) ಮತ್ತು ಮಯಾಂಕ್ ಮಾರ್ಕಂಡೆ (₹30 ಲಕ್ಷ) ಬಿಡುಗಡೆಯಾಗುವ ಸಾಧ್ಯತೆಯಿದೆ.

ಪಂಜಾಬ್ ಕಿಂಗ್ಸ್‌ (PBKS)

ಪಂಜಾಬ್ ಕಿಂಗ್ಸ್‌ ತಂಡದ ಸಂಭಾವ್ಯ ಬಿಡುಗಡೆ ಪಟ್ಟಿಯಲ್ಲಿ ಮಾರ್ಕಸ್ ಸ್ಟೊಯಿನಿಸ್ (₹11 ಕೋಟಿ), ಬೆನ್ ದ್ವಾರ್ಶುಯಿಸ್ (₹4.40 ಕೋಟಿ), ಮಿಚ್ ಓವನ್ (₹3 ಕೋಟಿ) ಹಾಗೂ ವಿಷ್ಣು ವಿನೋದ್ (₹95 ಲಕ್ಷ) ಹೆಸರುಗಳಿವೆ.

ರಾಜಸ್ಥಾನ್ ರಾಯಲ್ಸ್‌ (RR)

ರಾಜಸ್ಥಾನ್ ರಾಯಲ್ಸ್‌ ತಂಡದಿಂದ ರವಿ ಬಿಷ್ಣೋಯ್ (₹7.20 ಕೋಟಿ), ತುಷಾರ್ ದೇಶಪಾಂಡೆ (₹6.50 ಕೋಟಿ), ನಾಂಡ್ರೆ ಬರ್ಗರ್ (₹3.50 ಕೋಟಿ), ಆ್ಯಡಮ್ ಮಿಲ್ನೆ (₹2.40 ಕೋಟಿ) ಹಾಗೂ ಕ್ವೇನಾ ಮಫಕಾ (₹1.50 ಕೋಟಿ) ಹೊರಬೀಳುವ ಸಾಧ್ಯತೆಯಿದೆ.

ಸನ್‌ರೈಸರ್ಸ್ ಹೈದರಾಬಾದ್‌ (SRH)

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಸಂಭಾವ್ಯ ಬಿಡುಗಡೆ ಪಟ್ಟಿಯಲ್ಲಿ ಜೆರಾಲ್ಡ್ ಕೊಯೆಟ್ಜಿ (₹2 ಕೋಟಿ), ಜಯದೇವ್ ಉನಾದ್ಕಟ್ (₹1 ಕೋಟಿ), ಕಮಿಂದು ಮೆಂಡಿಸ್ (₹75 ಲಕ್ಷ), ಶಿವಂ ಮಾವಿ (₹75 ಲಕ್ಷ) ಹಾಗೂ ದಿಲ್ಶನ್ ಮಧುಶಂಕ (₹75 ಲಕ್ಷ) ಹೆಸರುಗಳಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)

ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡದಿಂದ ಮಂಗೇಶ್ ಯಾದವ್ (₹5.20 ಕೋಟಿ), ಯಶ್ ದಯಾಳ್ (₹5 ಕೋಟಿ), ರಿಚರ್ಡ್ ಗ್ಲೀಸನ್ (₹1.60 ಕೋಟಿ) ಹಾಗೂ ಅಭಿನಂದನ್ ಸಿಂಗ್ (₹30 ಲಕ್ಷ) ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಸಂಭಾವ್ಯ ಪಟ್ಟಿ ಸೂಚಿಸಿದೆ.

ಮಿನಿ ಹರಾಜಿಗೂ ಮುನ್ನ ಕುತೂಹಲ

ಈ ಎಲ್ಲಾ ಹೆಸರುಗಳು ಸಂಭಾವ್ಯ ಬಿಡುಗಡೆ ಪಟ್ಟಿಯಲ್ಲಿರುವ ಆಟಗಾರರ ವಿವರಗಳಾಗಿವೆ. ಯಾವ ಆಟಗಾರರನ್ನ ಉಳಿಸಿಕೊಳ್ಳಬೇಕು ಮತ್ತು ಯಾರನ್ನ ತಂಡದಿಂದ ಕೈಬಿಡಬೇಕು ಎಂಬ ಅಂತಿಮ ನಿರ್ಧಾರವನ್ನ ಫ್ರಾಂಚೈಸಿಗಳು ಪ್ರಕಟಿಸಬೇಕಿದೆ. ಪ್ರಮುಖ ಆಟಗಾರರ ಟ್ರೇಡ್‌ಗಳ ಬೆನ್ನಲ್ಲೇ ಈ ಬಾರಿಯ ರಿಟೆನ್ಷನ್ ಪ್ರಕ್ರಿಯೆಯೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ತಂಡಗಳ ಅಧಿಕೃತ ಪಟ್ಟಿಯ ಪ್ರಕಟಣೆಯ ಬಳಿಕವೇ ಯಾವ ಆಟಗಾರರು ಮುಂದಿನ ಹರಾಜಿನ ಕಣಕ್ಕೆ ಇಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES