SOCIAL MEDIA

Newsletter

PARTNER SITES
Select Language Select State

ಏಷ್ಯನ್‌ ಕ್ರೀಡಾಕೂಟಕ್ಕೆ ಭಾರತದ ತಯಾರಿ ಹೇಗಿದೆ.. ಈಗಾಗಲೇ ಎಷ್ಟು ಕೋಟಿ ದುಡ್ಡು ಖರ್ಚು ಆಗಿದೆ, ಪೂರ್ಣ ವಿವರ ಇಲ್ಲಿದೆ

ಏಷ್ಯನ್‌ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಸಲಕರಣೆಗಳು, ತರಬೇತಿ, ತರಬೇತಿದಾರರ ನೇಮಕಾತಿ ಮತ್ತು ಇತರೆ ಸಿಬ್ಬಂದಿ, ಖರ್ಚು ವೆಚ್ಚಗಳು ಸೇರಿದಂತೆ ವೆಚ್ಚ ಬೃಹತ್‌ ಮಟ್ಟದಲ್ಲಿದೆ ಎಂದು ಭಾರತದ ಕ್ರೀಡಾ ಸಚಿವಾಲಯವು ಮಾಹಿತಿ ನೀಡಿದೆ.

Reported By Bhimappa Written By Bhimappa
Published: Sep 17, 2026, 08:23 AM IST | Updated: Sep 17, 2026, 02:19 PM IST
Image Credit: File Photo
Join

ಏಷ್ಯನ್‌ ಗೇಮ್ಸ್‌ ಅಥವಾ ಏಷ್ಯನ್‌ ಕ್ರೀಡಾಕೂಟದ ಶ್ರೀಮಂತ ಇತಿಹಾಸವು ಏಷ್ಯಾದಲ್ಲಿ ಕ್ರೀಡಾ ಸಂಸ್ಕೃತಿಯ ಅಭಿವೃದ್ಧಿಯನ್ನು ಚಿತ್ರಿಸುತ್ತದೆ. 2026ರ ಏಷ್ಯನ್ ಗೇಮ್ಸ್‌ ಕ್ರೀಡಾಕೂಟವೂ ಸೆಪ್ಟೆಂಬರ್‌ 19 ರಿಂದ ಅಕ್ಟೋಬರ್‌ 4ರ ವರೆಗೆ ಜಪಾನ್‌ ಐಚಿ- ನಗೋಯಾದಲ್ಲಿ ನಡೆಯಲಿದೆ. ಈಗಾಗಲೇ ಭಾರತ ಕೂಡ ಈ ಏಷ್ಯನ್ ಗೇಮ್ಸ್‌ಗಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದೆ. ಹಲವು ತಿಂಗಳುಗಳಿಂದ ಏಷ್ಯನ್ ಗೇಮ್ಸ್‌ಗಾಗಿ ಭಾರತದ ಕ್ರಿಡಾಪಟುಗಳು ಶ್ರಮಿಸುತ್ತಿದ್ದು ಅಖಾಡದಲ್ಲಿ ಪದಕಗಳನ್ನು ಗೆದ್ದುಕೊಂಡು ಬರುವ ನಿರೀಕ್ಷೆಯಲ್ಲಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಈ ಸಲ ಭಾರತದ ಕ್ರೀಡಾಪಟುಗಳ ಚಿನ್ನದ ಪದಕದ ಬೇಟೆಯಾಡಲಿದ್ದಾರೆ. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾರತಕ್ಕೆ ಈ ಸಲ ಪದಕಗಳು ಒಲಿದು ಬರುವ ನಿರೀಕ್ಷೆ ಇದೆ. ಜಪಾನ್‌ ಐಚಿ- ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ ಅನ್ನು ಏಷ್ಯಾ ಒಲಿಂಪಿಕ್‌ ಕೌನ್ಸಿಲ್‌ ಅಥವಾ ಒಸಿಎ ಆಯೋಜನೆ ಮಾಡುತ್ತಿದೆ. ಈ ಮಹತ್ವದ ಕ್ರೀಡಾಕೂಟಕ್ಕೆ ಭಾರತವು ಎಷ್ಟು ಕ್ರೀಡಾಪಟುಗಳನ್ನು ಕಳುಹಿಸುತ್ತಿದೆ, ಸ್ಥಳೀಯವಾಗಿ ತರಬೇತಿ ನೀಡಲು ಎಷ್ಟು ಹಣ ಖರ್ಚು ಆಗಿದೆ, ಸಲಕರಣೆಗಾಗಿ ಎಷ್ಟು ಹಣ ಖರ್ಚು ಆಗಿದೆ, ಎಷ್ಟು ವಿಭಾಗಗಳಲ್ಲಿ ಸ್ಪರ್ಧಿಗಳು ಭಾಗವಹಿಸಲಿದ್ದಾರೆ, ಸ್ಪರ್ಧಿಗಳಿಗೆ ಸಹಾಯಕರಾಗಿ ಎಷ್ಟು ಸಿಬ್ಬಂದಿ ತೆರಳಲಿದ್ದಾರೆ, ಒಟ್ಟು ಈ ಮಹತ್ವದ ಕ್ರೀಡಾಕೂಟಕ್ಕೆ ಎಷ್ಟು ಹಣ ವೆಚ್ಚ ಮಾಡಿದೆ ಎನ್ನುವ ಮಾಹಿತಿ ಎಲ್ಲ ಇಲ್ಲಿ ನೀಡಲಾಗಿದೆ.

ಒಲಿಂಪಿಕ್‌ ಚಳುವಳಿಯಿಂದಲೇ ಈ‌ ಏಷ್ಯನ್ ಕ್ರೀಡಾಕೂಟದ ಕಲ್ಪನೆ  ಪ್ರಾರಂಭವಾಯಿತು ಎನ್ನಬಹುದು. ಏಷ್ಯನ್‌ ಕ್ರೀಡಾಕೂಟ ಆರಂಭವಾಗುವ ಮೊದಲು 1913 ರಿಂದ 1934ರ ವರೆಗೆ ಫಾರ್‌ ಈಸ್ಟರ್ನ್‌ ಚಾಂಪಿಯನ್‌ಶಿಪ್‌ ಕ್ರೀಡಾಕೂಟ ಎಂದು ಆಯೋಜನೆ ಮಾಡಲಾಗುತ್ತಿತ್ತು. ಪಶ್ಚಿಮ ಏಷ್ಯಾ ಕ್ರೀಡಾಕೂಟವು 1930 ರ ದಶಕದಲ್ಲಿ ನಡೆಯಿತು. ಪ್ರಪಂಚದಲ್ಲಿ ಎರಡನೇ ಪಹಾಯುದ್ಧದ ನಂತರ ಶಾಂತಿಯನ್ನು ಸ್ಥಾಪನೆಯನ್ನು ಮಾಡುವ ಉದ್ದೇಶದಿಂದಲೇ ಈ ಏಷ್ಯನ್‌ ಕ್ರೀಡಾಕೂಟಕ್ಕೆ ಮುನ್ನುಡಿ ಬರೆದರು ಎಂದು ಹೇಳಬಹುದು. ಬರೀ ಯುದ್ಧಗಳಿಂದ ಕಂಗೆಟ್ಟು ಹೋಗಿದ್ದ ದೇಶಗಳಿಗೆ ಎಲ್ಲರೂ ಒಂದು ಕಡೆ ಸೇರಿ ಶಾಂತಿಯಿಂದ ಇರುವುದು ಮುಖ್ಯವಾಗಿತ್ತು.

ಭಾರತಕ್ಕೆ ಸ್ವತಂತ್ರ್ಯ ಸಿಕ್ಕ ಮೇಲೆ ಅಂದರೆ 1948ರ ಲಂಡನ್‌ ಒಲಿಂಪಿಕ್ಸ್‌ ಸಮಯದಲ್ಲಿ ಭಾರತೀಯ ಪ್ರತಿನಿಧಿ ಗುರುದತ್‌ ಸೋಂಧಿ ಅವರು ಏಷ್ಯನ್‌ ಗೇಮ್ಸ್‌ ಕಲ್ಪನೆಯ ಕುರಿತು ಮೊದಲು ಪ್ರಸ್ತಾಪ ಮಾಡಿದರು. ಇದನ್ನು ಮೊದಲು ಮಂಡಿಸಿದವರೇ ಗುರುದತ್‌ ಸೋಂಧಿ ಅವರು ಎನ್ನುವುದು ಭಾರತೀಯರಿಗೆ ಹೆಮ್ಮೆಯ ವಿಷಯ. ಗುರುದತ್‌ ಸೋಂಧಿ ಅವರ ಪ್ರಸ್ತಾಪವನ್ನು ಇತರೆ ಪ್ರತಿನಿಧಿಗಳು ಅಂಗೀಕರಿಸಿದ ನಂತರ 1949 ರಲ್ಲಿ ಏಷ್ಯನ್‌ ಅಥ್ಲೆಟಿಕ್‌ ಫೆಡರೇಶನ್‌ ಅನ್ನು ರಚನೆ ಮಾಡಲಾಯಿತು. ಏಷ್ಯನ್‌ ಕ್ರೀಡಾಕೂಟದ ಉದ್ಘಾಟನಾ ಆವೃತ್ತಿಯನ್ನು 1951 ರಲ್ಲಿ ಭಾರತದ ನವದೆಹಲಿಯಲ್ಲಿ ನಡೆಸಲಾಯಿತು. ಮೊದಲ ಆವೃತ್ತಿಯೇ ಭಾರತದಲ್ಲಿ ನಡೆದಿರುವುದು ವಿಶೇಷ ಎನ್ನಬಹುದು.

ಭಾರತದ ನವದೆಹಲಿಯಲ್ಲಿ ನಡೆದ ಮೊದಲ ಏಷ್ಯನ್‌ ಗೇಮ್ಸ್‌ನಲ್ಲಿ ಒಟ್ಟು 11 ದೇಶಗಳು ಭಾಗವಹಿಸಿದ್ದವು. ಆದರೆ ಈಗ ಕಾ ಬದಲಾಗಿದ್ದು 40ಕ್ಕೂ ಹೆಚ್ಚು ರಾಷ್ಟ್ರಗಳು ಈ ಸುಂದರ ಕ್ರೀಢಾಕೂಟದಲ್ಲಿ ಭಾಗಿಯಾಗುತ್ತಿವೆ. 12 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುತ್ತಿದ್ದು ತಮ್ಮ ಶಕ್ತಿ, ಸಾಮರ್ಥ್ಯವನ್ನು ತೋರಿಸಿ ಪದಕಗಳನ್ನು ಗೆಲ್ಲುವ ಕಡೆಗೆ  ಗಮನ ಹರಿಸುತ್ತಿದ್ದಾರೆ. 1978ರ ವರೆಗೆ ಏಷ್ಯನ್‌ ಗೇಮ್ಸ್‌ ಅನ್ನು ಏಷ್ಯನ್‌ ಗೇಮ್ಸ್‌ ಫೆಡರೇಶನ್‌ ನಿಯಂತ್ರಣ ಮಾಡುತ್ತಿತ್ತು. ಆದರೆ 1982 ರಿಂದ ಏಷ್ಯಾ ಒಲಿಂಪೊಕ್‌ ಕೌನ್ಸಿಲ್‌ ಏಷ್ಯನ್‌ ಗೇಮ್ಸ್‌ ಬಗ್ಗೆ ನೋಡಿಕೊಳ್ಳುತ್ತಿದೆ. 2023 ರಿಂದ ಈ ಏಷ್ಯನ್‌ ಕ್ರೀಡಾಕೂಟದಲ್ಲಿ ಒಟ್ಟು 40 ಕ್ರೀಡೆಗಳನ್ನು ಆಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ  ಕಬ್ಬಡ್ಡಿ, ಕ್ರಿಕೆಟ್‌ ಮತ್ತು ಇ-ಸ್ಪೋರ್ಟ್ಸ್‌ಗಳಂತಹ ಜನಪ್ರಿಯ ಪ್ರಾದೇಶಿಕ ಮತ್ತು ವಿಶ್ವದಲ್ಲಿ ಆಸಕ್ತಿ ಹೊಂದಿರುವ ಕ್ರೀಡೆಗಳನ್ನು ಕೂಡ ಈ ಏಷ್ಯನ್‌ ಗೇಮ್ಸ್‌ನಲ್ಲಿ ಸೇರಿಸಲಾಗಿದೆ.

ಜಪಾನ್‌ ಐಚಿ- ನಗೋಯಾದಲ್ಲಿ ನಡೆಯಲಿರುವ 2026 ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತವೂ ಭಾಗಿಯಾಗುತ್ತಿದ್ದರಿಂದ ಈಗಾಗಲೇ ಎಷ್ಟು ಹಣ ಖರ್ಚು ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಏಷ್ಯನ್‌ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಸಲಕರಣೆಗಳು, ತರಬೇತಿ, ತರಭೇತಿದಾರರ ನೇಮಕಾತಿ ಮತ್ತು ಇತರೆ ಸಿಬ್ಬಂದಿ, ಖರ್ಚು ವೆಚ್ಚಗಳು ಸೇರಿದಂತೆ ಇದುವರೆಗೆ 700 ಕೋಟಿ ರೂಪಾಯಿಗಳು ವೆಚ್ಚ ಮಾಡಲಾಗಿದೆ ಎಂದು ಭಾರತದ ಕ್ರೀಡಾ ಸಚಿವಾಲಯವು ಮಾಹಿತಿ ನೀಡಿದೆ. ಭಾರತದ ಕ್ರೀಡಾಪಟುಗಳು ಕಳೆದ ಮೂರು ವರ್ಷಗಳಿಂದ ಈ ಏಷ್ಯನ್‌ ಗೇಮ್ಸ್‌ಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದು ಅವರಿಗೆ ನೀಡಲಾದ ಸೌಕರ್ಯಗಳಿಗೆ ಇದುವರೆಗೆ ಇಷೊಂದು ದೊಡ್ಡ ಅಮೌಂಟ್‌ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ.  

ಭಾರತದಿಂದ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಒಟ್ಟು 501 ಕ್ರೀಡಾಪಟುಗಳು ಅಖಾಡಕ್ಕೆ ಇಳಿಯಲಿದ್ದಾರೆ. ಇದರಲ್ಲಿ 501 ಕ್ರೀಡಾಪಟುಗಳಲ್ಲಿ 267 ಪುರುಷ ಕ್ರೀಡಾಪಟುಗಳು, 234 ಮಹಿಳಾ ಕ್ರೀಡಾಪಟುಗಳು ಇದ್ದಾರೆ. 310 ಕ್ರೀಡಾಪಟುಗಳು ಇದೇ ಮೊದಲ ಬಾರಿಗೆ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇದರ ಜೊತೆಗೆ 265 ಸಹಾಯಕ ಸಿಬ್ಬಂದಿಗಳು ಜಪಾನ್‌ ಪ್ರವಾಸ ಮಾಡಲಿದ್ದಾರೆ. ಏಕೆಂದರೆ ಸ್ಪರ್ಧೆ ನಡೆಯುವಾಗ ಸ್ಪರ್ಧಿಗಳಿಗೆ ಸಹಾಯಕರಾಗಿ ಕೆಲಸ ಮಾಡಲಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಈ ಸ್ಪರ್ಧಿಗಳು ಭರ್ಜರಿ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಪದಕಗಳು ಭಾರತಕ್ಕೆ ಒಲಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಚೀನಾದ ಪ್ರಾಚೀನ ನಗರಗಳ ಪೈಕಿ ಹಾಂಗ್‌ಝೌ ಸಿಟಿಯಲ್ಲಿ ನಡೆದಿದ್ದ 2022ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಸರ್ವಕಾಲಿಕ ಸಾಧನೆ ಮಾಡಿದ್ದರು. ಅಂದರೆ 2022ರ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ಒಟ್ಟು 106 ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ 28 ಗೋಲ್ಡ್‌ ಮೆಡೆಲ್‌ಗಳು, 38 ಸಿಲ್ವರ್‌ ಪದಕಗಳು ಮತ್ತು 40 ಕಂಚಿನ ಪದಕಗಳಿಗೆ ಭಾರತೀಯ ಕ್ರೀಡಾಪಟುಗಳು ಕೊರೊಳೊಡ್ಡಿದ್ದರು. ಇಂತಹ ದೊಡ್ಡ ಸಾಧನೆ ಮಾಡಲು ಭಾರತೀಯ ಕ್ರೀಡಾಪಟುಗಳಿಗೆ ಸವಲತ್ತುಗಳು, ಸಲಕರಣೆಗಳು ಅವಶ್ಯಕತೆ ಇದೆ. ಹೀಗಾಗಿ 700 ಕೋಟಿ ರೂಪಾಯಿಗಳು ಖರ್ಚು ಆಗಿದೆ ಎಂದು ಹೇಳಲಾಗಿದೆ. 

ಏಷ್ಯನ್‌ ಕ್ರೀಡಾಕೂಟದ ಅಧಿಕೃತ ಲೋಗೋವೂ 16 ಕಿರಣಗಳನ್ನು ಹೊಂದಿರುವ ಪ್ರಕಾಶಮಾನವಾದ ಕೆಂಪು ಸೂರ್ಯನನ್ನು ಮತ್ತು ನಡುವೆ ವೈಟ್‌ ರೌಂಡ್‌ ಇದೆ. ಈ ಲೋಗೋ ಏಷ್ಯಾದ ರಾಷ್ಟ್ರಗಳ ನಡುವಿನ ಶಕ್ತಿ ಮತ್ತು ಏಕತೆಯನ್ನು ಎತ್ತಿ ತೋರಿಸುತ್ತದೆ. ಇನುನ ಏಷ್ಯನ್‌ ಗೇಮ್ಸ್‌ನ ಧ್ಯೇಯವಾಕ್ಯ ಎಂದರೆ ಎಂದಿಗೂ ಮುಂದುವರೆಯಲಿ ಎನ್ನುನುವುದು ಆಗಿದೆ. ಈ ಲೈನ್‌ ಕ್ರೀಡೆ ಮತ್ತು ದೇಶ ದೇಶಗಳ ನಡುವೆ ಸಹಕಾರದಲ್ಲಿ ನಿರಂತರ ಪ್ರಗತಿ ಮತ್ತು ಅಭಿವೃದ್ಧಿಯನ್ನು ಪ್ರತಿಬಿಂಬಿಸುತ್ತದೆ. 

 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES