SOCIAL MEDIA

Newsletter

PARTNER SITES
Select Language Select State

Ind vs Pak; ಪಾಕ್‌ ಪಕ್ಕೆಲುಬು ಮುರಿದ ಶ್ರೇಯಸ್‌ ಅಯ್ಯರ್‌ ಪಡೆ, Gold Medal.. ಅಭಿ, ತಿಲಕ್‌ ಮಿಂಚಿನ ಬ್ಯಾಟಿಂಗ್

ಶ್ರೇಯಸ್‌ ಅಯ್ಯರ್‌ ನೇತೃತ್ವದ ಟೀಮ್‌ ಇಂಡಿಯಾದ ಗೋಲ್ಡ್‌ ಮೆಡೆಲ್‌ಗೆ ಕೊರೊಳೊಡ್ಡಿದೆ. ಬಿಗ್‌ ಹಿಟ್ಟರ್‌ ಅಭಿಷೇಕ್‌ ಶರ್ಮಾ ಮತ್ತು ತಿಲಕ್‌ ವರ್ಮಾ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಟೀಮ್‌ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 211 ರನ್‌ ಗಳಿಸಿತ್ತು.

Written By Bhimappa
Published: Oct 03, 2026, 02:02 PM IST | Updated: Oct 03, 2026, 02:08 PM IST
Image Credit: Ind_vs_Pak_Gold_medal
Join

India defeated Pakistan by 19 runs in Asian Games 2026; 2026 ಏಷ್ಯನ್‌ ಗೇಮ್ಸ್‌ನ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಶ್ರೇಯಸ್‌ ಅಯ್ಯರ್‌ ನೇತೃತ್ವದ ಟೀಮ್‌ ಇಂಡಿಯಾದ ಗೋಲ್ಡ್‌ ಮೆಡೆಲ್‌ಗೆ ಕೊರೊಳೊಡ್ಡಿದೆ. ಬಿಗ್‌ ಹಿಟ್ಟರ್‌ ಅಭಿಷೇಕ್‌ ಶರ್ಮಾ ಮತ್ತು ತಿಲಕ್‌ ವರ್ಮಾ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಟೀಮ್‌ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 212 ರನ್‌ಗಳ ಟಾರ್ಗೆಟ್‌ ಅನ್ನು ಬದ್ಧವೈರಿ ಪಾಕಿಸ್ತಾನಕ್ಕೆ ನೀಡಿತ್ತು. ಪಾಕ್‌ ವಿರುದ್ಧ ಬಿಗ್‌ ಬ್ಯಾಟಿಂಗ್‌ ಮಾಡಿದ ಅಭಿಷೇಕ್‌ ಶರ್ಮಾ ಕೇವಲ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 6 ಸಿಕ್ಸರ್‌ಗಳಿಂದ ಹಾಫ್‌ ಸೆಂಚುರಿ ಬಾರಿಸಿದ್ರೆ, ತಿಲಕ್‌ ವರ್ಮಾ ಅವರು 22 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್‌ಗಳಿಂದ 51 ರನ್‌ ಗಳಿಸಿದ್ದರು.

ಜಪಾನ್‌ನಲ್ಲಿರುವ ನಿಸ್ಶಿನ್ ನಗರದ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ 2026 ಏಷ್ಯನ್‌ ಗೇಮ್ಸ್‌ನ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಟೀಮ್‌ ಇಂಡಿಯಾ ನಡುವೆ ದೊಡ್ಡ ಕಾಳಗವೇ ನಡೆಯಿತು. ಪಂದ್ಯದ ಆರಂಭದಲ್ಲಿ ಟಾಸ್‌ ಗೆದ್ದ ಟೀಮ್‌ ಇಂಡಿಯಾ ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ಮೊದಲ ಬ್ಯಾಟಿಂಗ್‌ ಆಯ್ಕೆ ಮಾಡಿದರು. ಅದರಂತೆ ಓಪನರ್ ಬ್ಯಾಟಿಂಗ್‌ಗೆ ಆಗಮಿಸಿದ ಅಭಿಷೇಕ್‌ ಶರ್ಮಾ ಮತ್ತು ವೈಭವ್‌ ಸೂರ್ಯವಂಶಿ ಕ್ರೀಸ್‌ಗೆ ಸೆಟ್‌ ಆಗುವಷ್ಟರಲ್ಲಿ ಮೊದಲ ವಿಕೆಟ್‌ ಹೋಯಿತು. ವೈಭವ್‌ ಸೂರ್ಯವಂಶಿ ಎರಡು ಸಿಕ್ಸರ್‌ ಸಿಡಿಸಿ 15 ರನ್‌ ಗಳಿಸಿ ಆಡುವಾಗ ಔಟಾದರು.

ವೈಭವ್‌ ಸೂರ್ಯವಂಶಿ ಬಳಿಕ ಬ್ಯಾಟಿಂಗ್‌ ಮಾಡಲು ಬಂದ ಸಂಜು ಸ್ಯಾಮ್ಸನ್‌ 2 ರನ್‌ಗೆ ತಮ್ಮ ಆಟ ಮುಗಿಸಿದರು. ಬಳಿಕ ಶ್ರೇಯಸ್‌ ಅಯ್ಯರ್‌ ಇನ್ನಿಂಗ್ಸ್‌ ಕಟ್ಟಲು ಹರಸಾಹಸ ಪಟ್ಟರು. ಆದರೆ 21 ರನ್‌ ಗಳಿಸಿ ಆಡುವಾಗ ಅಬ್ರಾರ್‌ ಅಹ್ಮದ್‌ ಬೌಲಿಂಗ್‌ನಲ್ಲಿ ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ಅವರು ಕ್ಯಾಚ್‌ ಕೊಟ್ಟು ನಿರ್ಗಮಿಸಿದರು. ಇಲ್ಲಿಗೆ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕಥೆ ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬಳಿಕ ಕ್ರೀಸ್‌ಗೆ ಬಂದ ಇಶಾನ್‌ ಕಿಶನ್‌ ಭಾರತಕ್ಕೆ ಹೊಸ ಭರವಸೆ ಮೂಡಿಸಿದ್ದರು. 18 ಎಸೆತಗಳಲ್ಲಿ 20 ರನ್‌ ಗಳಿಸಿದ್ದರು. ಇದೇ ವೇಳೆ ಇಶಾನ್‌ ಕ್ಲೀನ್‌ ಬೋಲ್ಡ್‌ ಆಗಿ ಪೆವಿಲಿಯನ್‌ಗೆ ಮರಳಿದರು.

ಕ್ರೀಸ್‌ಗೆ ಬಂದ ತಿಲಕ್‌ ವರ್ಮಾ ಅವರು ಪಾಕಿಸ್ತಾನಕ್ಕೆ ತಮ್ಮ ಬ್ಯಾಟಿಂಗ್‌ ಬಲವನ್ನು ಮತ್ತೆ ತೋರಿಸಿದರು. ತಿಲಕ್‌ ವರ್ಮಾ ಕ್ರೀಸ್‌ನಲ್ಲಿ ಇರುವವರೆಗೂ ಪಾಕಿಸ್ತಾನದ ಬೌಲರ್‌ಗಳು ಎಲ್ಲ ಕಕ್ಕಾಬಿಕ್ಕಿ ಆದರು. ಚಾಂಪಿಯನ್‌ ಟ್ರೋಫಿಯಲ್ಲಿ ಆಡಿದಂತೆ ಮತ್ತೆ ಪಾಕಿಸ್ತಾನಕ್ಕೆ ಹಗಲಿನಲ್ಲಿ ನಕ್ಷತ್ರಗಳನ್ನು ತೋರಿಸಿದರು. ಈ ಹೈವೋಲ್ಟೇಜ್‌ ಪಂದ್ಯದಲ್ಲಿ 22 ಎಸೆತಗಳನ್ನು ಆಡಿದ ತಿಲಕ್‌ ವರ್ಮಾ ಅವರು 3 ಬೌಂಡರಿ ಮತ್ತು 4 ಸೂಪರ್‌ ಸಿಕ್ಸರ್‌ಗಳ ಸಮೇತ 51 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಇದರಿಂದ ಟೀಮ್‌ ಇಂಡಿಯಾ ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 212 ರನ್‌ಗಳ ಟಾರ್ಗೆಟ್‌ ನೀಡಿತ್ತು.

ಈ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಆರಂಭದಲ್ಲಿ ದೊಡ್ಡ ಯಡವಟ್ಟು ಮಾಡಿಕೊಂಡಿತು. ತಂಡದ ಮೊತ್ತ 39 ಆಗುಷ್ಟರಲ್ಲಿ ಪ್ರಮುಖವಾದ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಬ್ಯಾಟಿಂಗ್‌ಗೆ ಬಂದ ಹಸನ್‌ ನವಾಜ್‌ ಪಾಕಿಸ್ತಾನ ತಂಡದ ಮಾನ ಮರ್ಯಾದೆ ಕಾಪಾಡಿದರು. ಕೊನೆವರೆಗೂ ಹೋರಾಡಿದ ಹಸನ್‌ 5 ಬೌಂಡರಿ ಮತ್ತು 7 ಅಮೋಘವಾದ ಸಿಕ್ಸರ್‌ಗಳಿಂದ 96 ರನ್‌ ಸಿಡಿಸಿ ಆಡುವಾಗ ಶಿವಂ ದುಬೆ ಬೌಲಿಂಗ್‌ನಲ್ಲಿ ಸಂಜು ಸ್ಯಾಮ್ಸನ್‌ಗೆ ಕ್ಯಾಚ್‌ ಕೊಟ್ಟು ನಿರಾಸೆ ಅನುಭವಿಸಿದರು.

ಸೈಮ್‌ ಅಯೂಬ್‌ ಅವರು 29 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಇವರನ್ನು ಬಿಟ್ಟರೇ ಯಾವೊಬ್ಬ ಕ್ರಿಕೆಟರ್‌ ಕೂಡ 29 ರನ್‌ ಗಡಿ ದಾಟಲಿಲ್ಲ ಇದರಿಂದ ಪಾಕಿಸ್ತಾನ ಅಂತಿಮವಾಗಿ 6 ವಿಕೆಟ್‌ಗಳಿಗೆ 192 ರನ್‌ ಮಾತ್ರ ಗಳಿಸಿತು. ಇದರಿಂದ ಟೀಮ್‌ ಇಂಡಿಯಾ 19 ರನ್‌ಗಳಿದ ಜಯಭೇರಿ ಬಾರಿಸಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿತು. ಸದ್ಯ ಟೀಮ್‌ ಇಂಡಿಯಾದ ಪುರುಷರು ಮತ್ತು ಮಹಿಳೆಯರು ಇಬ್ಬರು ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದು ಕೊಟ್ಟಿದ್ದಾರೆ. ಇದೊಂದು ಹೊಸ ಐತಿಹಾಸಿಕ ಮೈಲಿಗಲ್ಲು ಆಗಿದೆ. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES