• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ICC Cricket World Cup 2027: ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ವೈರಿಗಳ ಕದನ?

ICC Cricket World Cup 2027: ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ವೈರಿಗಳ ಕದನ?

2027ರ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನ ಐಸಿಸಿ ಪ್ರಕಟಿಸಿದ್ದು, ಭಾರತ ‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಜಿಂಬಾಬ್ವೆ ಹಾಗೂ ಅರ್ಹತಾ ತಂಡದೊಂದಿಗೆ ಸ್ಥಾನ ಪಡೆದಿದೆ. ಅಕ್ಟೋಬರ್‌ 7ರಂದು ಕೇಪ್‌ಟೌನ್‌ನಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ನಡೆಯಲಿದ್ದು, ಅಕ್ಟೋಬರ್‌ 10ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ–ಪಾಕಿಸ್ತಾನ ಕದನ ನಡೆಯಲಿದೆ. ಟೂರ್ನಿಯ ಫೈನಲ್‌ ನವೆಂಬರ್‌ 21ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.

Written ByPuttaraj K Alur
Published: Oct 02, 2026, 05:12 PM IST|Updated: Oct 02, 2026, 05:21 PM IST
joinshare
ICC Cricket World Cup 2027: ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ವೈರಿಗಳ ಕದನ?
Image Credit: ICC World Cup 2027

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಗದಗ ಜೆಡಿಎಸ್ ಉಸ್ತುವಾರಿಯಾಗಿ ವೆಂಕನಗೌಡ ನೇಮಕ; ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಜವಾಬ್ದಾರಿ

ಗದಗ ಜೆಡಿಎಸ್ ಉಸ್ತುವಾರಿಯಾಗಿ ವೆಂಕನಗೌಡ ನೇಮಕ; ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಜವಾಬ್ದಾರಿ

2

ICC Cricket World Cup 2027: ಅ.7ರಿಂದ ಭಾರತದ ಅಭಿಯಾನ ಆರಂಭ, 3 ಬಾರಿ ಬದ್ಧ ವೈರಿಗಳ ಕದನ?

3

ಭಾರತದ ಸ್ಟಾರ್ ಬೌಲರ್ ಯುಜ್ವೇಂದ್ರ ಚಾಹಲ್ ನಿವೃತ್ತಿ ಘೋಷಣೆ

4

ಮಾಂಜಾದಾರಕ್ಕೆ ಬೆಳಗಾವಿಯಲ್ಲಿ ಮತ್ತೊಂದು ಬ*ಲಿ

5

ಊಟದ ಬಳಿಕ ಎದೆಯಲ್ಲಿ ಉರಿ ಕಾಡುತ್ತಿದೆಯಾ? ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ICC Mens Cricket World Cup 2027: 2027ರ ಏಕದಿನ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಗುರುವಾರ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಆರಂಭಿಕ ಗುಂಪು ಹಂತದಲ್ಲೇ ಮುಖಾಮುಖಿಯಾಗಲಿವೆ. ಅಕ್ಟೋಬರ್‌ 7ರಂದು ಕೇಪ್‌ಟೌನ್‌ನಲ್ಲಿ ಈ ಪಂದ್ಯ ನಡೆಯಲಿದೆ. ಇದು 2023ರ ವಿಶ್ವಕಪ್ ಫೈನಲ್‌ನ ಮರುಪಂದ್ಯವಾಗಿರುವುದು ವಿಶೇಷ.  

2027ರ ವಿಶ್ವಕಪ್‌ನ ಆರಂಭಿಕ ಗುಂಪುಗಳನ್ನೂ ಐಸಿಸಿ ಪ್ರಕಟಿಸಿದೆ. ಭಾರತ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಸಹ ಆತಿಥೇಯ ಜಿಂಬಾಬ್ವೆ ಹಾಗೂ ಒಂದು ಅರ್ಹತಾ ತಂಡ ಇರಲಿವೆ. ಇನ್ನು ‘ಬಿ’ ಗುಂಪಿನಲ್ಲಿ ಸಹ ಆತಿಥೇಯ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಮತ್ತೊಂದು ಅರ್ಹತಾ ತಂಡ ಸ್ಥಾನ ಪಡೆದಿವೆ. ಒಟ್ಟು 14 ತಂಡಗಳು ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿವೆ.

ಭಾರತ vs ಪಾಕಿಸ್ತಾನ ಕದನ

𝙈𝘼𝙍𝙆 𝙔𝙊𝙐𝙍 𝘾𝘼𝙇𝙀𝙉𝘿𝘼𝙍𝙎 🗓️

The ICC Men’s #CWC27 fixtures have been unveiled 🏆

Access the ticket ballot 🎫 https://t.co/MSLEQzcObb pic.twitter.com/dpTE4TEjO7

— ICC (@ICC) October 1, 2026

 ಭಾರತ ತನ್ನ ವಿಶ್ವಕಪ್ ಅಭಿಯಾನವನ್ನ ಅಕ್ಟೋಬರ್‌ 7ರಂದು ಆಸ್ಟ್ರೇಲಿಯಾ ವಿರುದ್ಧ ಆರಂಭಿಸಲಿದ್ದು, ಕೇವಲ ಮೂರು ದಿನಗಳ ಬಳಿಕ ಪಾಕಿಸ್ತಾನವನ್ನ ಎದುರಿಸಲಿದೆ. ಅಕ್ಟೋಬರ್‌ 10ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಭಾರತ vs ಪಾಕಿಸ್ತಾನ ಪಂದ್ಯ ನಡೆಯಲಿದೆ. ಭಾರತ vs ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿರುವುದರಿಂದ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿದೆ. ವಿಶ್ವಕಪ್‌ನ ಗುಂಪು ಹಂತದಲ್ಲೇ ನಡೆಯಲಿರುವ ಈ ಪಂದ್ಯ ಟೂರ್ನಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

3 ಬಾರಿ ಮುಖಾಮುಖಿಯಾಗುವ ಅವಕಾಶ?

ಭಾರತ vs ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವುದರಿಂದ ಟೂರ್ನಿಯಲ್ಲಿ ಉಭಯ ತಂಡಗಳು ಗರಿಷ್ಠ ಮೂರು ಬಾರಿ ಮುಖಾಮುಖಿಯಾಗುವ ಅವಕಾಶವಿದೆ. ಆರಂಭಿಕ ಗುಂಪು ಹಂತದ ಬಳಿಕ ಎರಡೂ ತಂಡಗಳು ‘ಸೂಪರ್‌ 7’ ಹಂತಕ್ಕೆ ಅರ್ಹತೆ ಪಡೆದರೆ ಮತ್ತೊಮ್ಮೆ ಎದುರಾಗಬಹುದು. ಅದರ ನಂತರ ಎರಡೂ ತಂಡಗಳು ಸೆಮಿಫೈನಲ್‌ ಅಥವಾ ಫೈನಲ್‌ಗೆ ತಲುಪಿದರೆ ಮತ್ತೊಂದು ಮುಖಾಮುಖಿಯ ಸಾಧ್ಯತೆಯೂ ಇದೆ. ಆದರೆ ಈ ಪಂದ್ಯಗಳೆಲ್ಲವೂ ತಂಡಗಳ ಅರ್ಹತೆಯ ಮೇಲೆ ಅವಲಂಬಿತವಾಗಿರಲಿವೆ.

2003ರ ನೆನಪು, 2023ರ ರಿವೇಂಜ್‌ಗೆ ಅವಕಾಶ

ದಕ್ಷಿಣ ಆಫ್ರಿಕಾದಲ್ಲಿ ಕೊನೆಯ ಬಾರಿ 2003ರಲ್ಲಿ ಏಕದಿನ ವಿಶ್ವಕಪ್ ನಡೆದಾಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಇದೀಗ 2027ರ ವಿಶ್ವಕಪ್‌ನ ಗುಂಪು ಹಂತದಲ್ಲೇ ಭಾರತ-ಆಸ್ಟ್ರೇಲಿಯಾ ಪಂದ್ಯ ನಡೆಯುತ್ತಿರುವುದು ವಿಶೇಷವಾಗಿದೆ. 2023ರ ವಿಶ್ವಕಪ್ ಫೈನಲ್‌ನಲ್ಲೂ ಆಸ್ಟ್ರೇಲಿಯಾ ಭಾರತವನ್ನ ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ 2027ರ ಟೂರ್ನಿಯ ಆರಂಭಿಕ ಗುಂಪು ಹಂತದ ಭಾರತ-ಆಸ್ಟ್ರೇಲಿಯಾ ಪಂದ್ಯವು ಹಿಂದಿನ ವಿಶ್ವಕಪ್ ಫೈನಲ್‌ನ ಮರುಪಂದ್ಯವಾಗಿ ಗಮನ ಸೆಳೆಯಲಿದೆ.  

‘ಸೂಪರ್‌ 7’ಗೆ ಏಳು ತಂಡಗಳು

2027ರ ವಿಶ್ವಕಪ್‌ನಲ್ಲಿ ಹೊಸ ಮಾದರಿಯ ‘ಸೂಪರ್‌ 7’ ಹಂತವನ್ನ ಪರಿಚಯಿಸಲಾಗಿದೆ. ಎರಡು ಆರಂಭಿಕ ಗುಂಪುಗಳಲ್ಲಿನ ಅಗ್ರ ಮೂರು ತಂಡಗಳು ಹಾಗೂ ಎರಡೂ ಗುಂಪುಗಳಲ್ಲಿನ ನಾಲ್ಕನೇ ಸ್ಥಾನ ಪಡೆದ ತಂಡಗಳ ಪೈಕಿ ಉತ್ತಮ ಪ್ರದರ್ಶನ ನೀಡಿದ ಒಂದು ತಂಡ ಸೇರಿದಂತೆ ಒಟ್ಟು ಏಳು ತಂಡಗಳು ಈ ಹಂತಕ್ಕೆ ಅರ್ಹತೆ ಪಡೆಯಲಿವೆ. ‘ಸೂಪರ್‌ 7’ ಹಂತದಲ್ಲಿ ಪ್ರತಿ ತಂಡವು ತಲಾ ಆರು ಪಂದ್ಯಗಳನ್ನ ಆಡಲಿದೆ. ಈ ಹಂತದ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ.  

2027ರ ವಿಶ್ವಕಪ್‌ನ ಅಧಿಕೃತ ಟೂರ್ನಿ ಚಟುವಟಿಕೆ ಅಕ್ಟೋಬರ್‌ 2ರಂದು ನಮೀಬಿಯಾದ ವಿಂಡ್‌ಹೋಕ್‌ನಲ್ಲಿ ನಡೆಯುವ ಮೂರು ತಂಡಗಳ ‘ಸೂಪರ್‌ ಸೀರೀಸ್‌’ ಮೂಲಕ ಆರಂಭವಾಗಲಿದೆ. ಈ ಹಂತದಲ್ಲಿ ಅಕ್ಟೋಬರ್‌ 2, 4 ಮತ್ತು 6ರಂದು ಪಂದ್ಯಗಳು ನಡೆಯಲಿದ್ದು, ಅಗ್ರಸ್ಥಾನ ಪಡೆಯುವ ತಂಡ ಗುಂಪು ಹಂತಕ್ಕೆ ಪ್ರವೇಶಿಸಲಿದೆ. ನಂತರ ಅಕ್ಟೋಬರ್‌ 7ರಂದು ಭಾರತ-ಆಸ್ಟ್ರೇಲಿಯಾ ಪಂದ್ಯದೊಂದಿಗೆ ಮುಖ್ಯ ಗುಂಪು ಹಂತಕ್ಕೆ ಚಾಲನೆ ಸಿಗಲಿದೆ. 2027ರ ವಿಶ್ವಕಪ್‌ನ ಫೈನಲ್‌ ಪಂದ್ಯ ನವೆಂಬರ್‌ 21ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. ಸೆಮಿಫೈನಲ್‌ ಪಂದ್ಯಗಳು ನವೆಂಬರ್‌ 17ರಂದು ಕೇಪ್‌ಟೌನ್‌ನಲ್ಲಿ ಹಾಗೂ ನವೆಂಬರ್‌ 18ರಂದು ತ್ಶ್ವಾನೆನಲ್ಲಿ ನಡೆಯಲಿವೆ.  

ಗುಂಪು ‘ಎ’:

ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಜಿಂಬಾಬ್ವೆ, ಅರ್ಹತಾ ತಂಡ ‘ಎ’.

ಗುಂಪು ‘ಬಿ’:

ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಇಂಗ್ಲೆಂಡ್, ಬಾಂಗ್ಲಾದೇಶ, ಅರ್ಹತಾ ತಂಡ ‘ಬಿ’. 

Add Zee News as a Preferred Source
TAGS:
Cricket
Kannada News