SOCIAL MEDIA

Newsletter

PARTNER SITES
Select Language Select State

ಅಮಿತ್ ಶಾ ಪುತ್ರನಿಗೆ ವಿಶ್ವ ಕ್ರಿಕೆಟ್ ಸಾಮ್ರಾಟನ ಪಟ್ಟ! ಮತ್ತೆ ಐಸಿಸಿ ಗದ್ದುಗೆ ಏರಿದ ಜಯ್ ಶಾ

ICC Chairman Jay Shah Re-elected: ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಜಯ್ ಶಾ ಸತತ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Written By Ramya. R. Gowda
Published: Nov 16, 2026, 13:07 IST | Updated: Nov 16, 2026, 13:38 IST
Join

ICC Chairman Jay Shah Re-elected: ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಭಾರತದ ಜಯ್ ಶಾ ಸತತ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 38ನೇ ವಯಸ್ಸಿನಲ್ಲೇ ಜಾಗತಿಕ ಕ್ರಿಕೆಟ್‌ನ ಅತ್ಯುನ್ನತ ಹುದ್ದೆಗೇರಿರುವ ಜಯ್ ಶಾ, ಇದೀಗ 2028ರವರೆಗೂ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಮೊದಲ ಅವಧಿಯಲ್ಲಿ ಹಲವು ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದ್ದ ಶಾ ಅವರಿಗೆ, ಎರಡನೇ ಅವಧಿಯಲ್ಲಿ ಎರಡು ಐತಿಹಾಸಿಕ ಸವಾಲುಗಳು ಎದುರಾಗಿವೆ. ಹಾಗಾದ್ರೆ, ಜಯ್ ಶಾ ಮುಂದಿರುವ ಗುರಿಗಳೇನು? ಮೊದಲ ಅವಧಿಯಲ್ಲಿ ಕ್ರಿಕೆಟ್‌ಗೆ ಕೊಟ್ಟ ಕೊಡುಗೆಗಳೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ವಿಶ್ವ ಕ್ರಿಕೆಟ್‌ನಲ್ಲಿ ಭಾರತೀಯ ನಾಯಕತ್ವದ ಪಾರುಪತ್ಯ ಮುಂದುವರಿದಿದೆ. ಐಸಿಸಿ ಅಧ್ಯಕ್ಷರಾಗಿ ಭಾರತದ ಜಯ್ ಶಾ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಐಸಿಸಿ ಮಂಡಳಿ ಮತ್ತು ಸಮಿತಿಗಳ ಸಭೆಯಲ್ಲಿ ಈ ನಿರ್ಧಾರ ಪ್ರಕಟವಾಗಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಜಯ್ ಶಾ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಲಾಗಿತ್ತು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2024ರ ಡಿಸೆಂಬರ್ 1ರಂದು ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಅವರಿಂದ ಅಧಿಕಾರ ವಹಿಸಿಕೊಂಡಿದ್ದ ಜಯ್ ಶಾ, ಇದೀಗ 2028ರವರೆಗೂ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಜಯ್ ಶಾ ಎರಡನೇ ಅವಧಿ ಅತ್ಯಂತ ಮಹತ್ವದ್ದಾಗಿದೆ. ಯಾಕಂದ್ರೆ ಅವರ ಮುಂದಿರುವುದು ಎರಡು ದೊಡ್ಡ ಜಾಗತಿಕ ಕ್ರೀಡಾಕೂಟಗಳ ಸವಾಲು 2027ರ ಏಕದಿನ ವಿಶ್ವಕಪ್ ಆಯೋಜನೆ2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಲಾಗಿದೆ.

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಯಶಸ್ವಿಯಾಗಿ ಆಯೋಜಿಸುವ ಜವಾಬ್ದಾರಿ ಶಾ ಮೇಲಿದೆ. ಇನ್ನು 128 ವರ್ಷಗಳ ಸುದೀರ್ಘ ವಿರಾಮದ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುತ್ತಿರುವುದು ಮತ್ತೊಂದು ಐತಿಹಾಸಿಕ ಘಟ್ಟವಾಗಿದೆ.

ಇನ್ನು ಮೊದಲ ಅವಧಿಯಲ್ಲೇ ಜಯ್ ಶಾ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಲ್ಲಿನ ಭಾರತ-ಪಾಕಿಸ್ತಾನ ಬಿಕ್ಕಟ್ಟಿಗೆ ಹೈಬ್ರಿಡ್ ಮಾದರಿಯ ಮೂಲಕ ಪರಿಹಾರ. 2027ರ ಏಕದಿನ ವಿಶ್ವಕಪ್‌ಗೆ 14 ತಂಡಗಳ ಮಾದರಿಗೆ ಸಿದ್ಧತೆ. 2031ರವರೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಂದುವರಿಸುವ ನಿರ್ಧಾರ.
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಸಂಬಂಧಿಸಿದ ಸಿದ್ಧತೆ, ಅಸೋಸಿಯೇಟ್ ರಾಷ್ಟ್ರಗಳಿಗೆ ಹೆಚ್ಚಿನ ಅವಕಾಶ ಮತ್ತು ಬೆಂಬಲ ನೀಡಿದ್ದಾರೆ. ಈ ಮೂಲಕ ಕ್ರಿಕೆಟ್ ಅನ್ನು ಸಾಂಪ್ರದಾಯಿಕ ರಾಷ್ಟ್ರಗಳಾಚೆಗೂ ವಿಸ್ತರಿಸುವ ಪ್ರಯತ್ನಕ್ಕೆ ವೇಗ ನೀಡಿದ್ದಾರೆ.

ಒಟ್ಟಿನಲ್ಲಿ ಮೊದಲ ಅವಧಿಯಲ್ಲಿ ಜಾಗತಿಕ ಕ್ರಿಕೆಟ್ ಆಡಳಿತದಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ ಬರೆದಿರುವ ಜಯ್ ಶಾ, ಎರಡನೇ ಅವಧಿಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2027ರ ಏಕದಿನ ವಿಶ್ವಕಪ್, 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಸೇರಿದಂತೆ ಹಲವು ಮಹತ್ವದ ಜವಾಬ್ದಾರಿಗಳು ಅವರ ಮುಂದಿವೆ. ಸಾಂಪ್ರದಾಯಿಕ ಕ್ರಿಕೆಟ್ ರಾಷ್ಟ್ರಗಳಾಚೆಗೆ ಆಟವನ್ನು ವಿಸ್ತರಿಸುವುದರ ಜೊತೆಗೆ, ಮಹಿಳಾ ಕ್ರಿಕೆಟ್ ಮತ್ತು ಹೊಸ ಮಾರುಕಟ್ಟೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಶಾ ಅವರ ಮುಂದಿನ ಗುರಿಯಾಗಿದೆ.

ಮತ್ತೊಂದೆಡೆ ಮರು ಆಯ್ಕೆಯ ಬಳಿಕ ಮಾತನಾಡಿರುವ ಜಯ್ ಶಾ, ಐಸಿಸಿ ಅಧ್ಯಕ್ಷರಾಗಿ ಮುಂದುವರಿಯುವುದು ಗೌರವದ ಜೊತೆಗೆ ದೊಡ್ಡ ಜವಾಬ್ದಾರಿ ಎಂದಿದ್ದಾರೆ. 2028ರ ಒಲಿಂಪಿಕ್ಸ್ ಮೂಲಕ ಕ್ರಿಕೆಟ್ ಅನ್ನು ಹೊಸ ಪ್ರೇಕ್ಷಕರಿಗೆ ತಲುಪಿಸುವುದು, ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ನೀಡುವುದು ಮತ್ತು ಜಾಗತಿಕ ಮಟ್ಟದಲ್ಲಿ ಆಟದ ವಾಣಿಜ್ಯ ಮೌಲ್ಯ ಹೆಚ್ಚಿಸುವುದು ತಮ್ಮ ಪ್ರಮುಖ ಆದ್ಯತೆಗಳೆಂದು ತಿಳಿಸಿದ್ದಾರೆ.

ಜಯ್‌ ಅವರ ಹಿನ್ನಲೆ 

ಜಯ್‌ ಶಾ ಅವರ ಪೂರ್ಣ ಹೆಸರು ಜಯ್‌ ಅಮಿತ್‌ ಭಾಯ್‌ ಶಾ ಅವರು ಒಬ್ಬ ಪ್ರಮುಖ ಭಾರತೀಯ ಕ್ರಿಕೆಟ್‌ ಅಡಳಿತಗಾರ ಮತ್ತು ಉದ್ಯಮಿಯಾಗಿದ್ದು, ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.. ಇಂದು ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಅವರು ಎಡರನೇ ಬಾರಿಗೆ ಅವಿರೋಧವಾಗಿ ಮರುನೇಮಕಗೊಂಡಿದ್ದಾರೆ.

ಜಯ್‌ ಶಾ ಅವರು ಜನನ ಮತ್ತು ಕುಟುಂಬ ಜಯ್‌ ಶಾ ಅವರ 1988ರ ಸೆಪ್ಟೆಂಬರ್ 22ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಜನಿಸಿದರು. ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸೋನಾಲ್ ಶಾ ಅವರ ಪುತ್ರರಾಗಿದ್ದಾರೆ.. ಶಿಕ್ಷಣ. ಅವರು ಅಹಮದಾಬಾದ್‌ನ ನಿರ್ಮಾ ವಿಶ್ವವಿದ್ಯಾಲಯದಿಂದ ಬಿ.ಟೆಕ್ (B.Tech) ಪದವಿ ಪಡೆದಿದ್ದಾರೆ.
ಇನ್ನೂ 2015ರ ಫೆಬ್ರವರಿ 10ರಂದು ಅವರು ರಿಷಿತಾ ಪಟೇಲ್ ಅವರನ್ನು ವಿವಾಹವಾದರು. 
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES