SOCIAL MEDIA

Newsletter

PARTNER SITES
Select Language Select State

ಭಾರತದ ವಿರುದ್ಧ ಶತಕ ಸಿಡಿಸಿ ಚೀಟಿ ತೋರಿಸಿದ ಪಾಕ್ ಆಟಗಾರ; ಮೊದಲೇ ಬರೆದಿದ್ದ ಭವಿಷ್ಯವಾಣಿ ವೈರಲ್!

ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ ಶತಕ ಸಿಡಿಸಿ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟ ಹಮ್ಜಾ ಜಹೂರ್ ಇದೀಗ ಸುದ್ದಿಯಲ್ಲಿದ್ದಾರೆ. ಪಂದ್ಯದ ಹಿಂದಿನ ದಿನ ಅರ್ಧಶತಕ ಗಳಿಸುವ ಗುರಿಯನ್ನ ಕಾಗದದಲ್ಲಿ ಬರೆದುಕೊಂಡಿದ್ದ ಅವರು, ಶತಕ ಸಿಡಿಸಿದ ಬಳಿಕ ಅದೇ ಚೀಟಿಯನ್ನ ತೋರಿಸಿ ಸಂಭ್ರಮಿಸಿದ್ದಾರೆ. ಹಮ್ಜಾ ಅವರ ಈ ಚೀಟಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Written By Puttaraj K Alur
Published: Nov 09, 2026, 08:35 IST | Updated: Nov 09, 2026, 08:46 IST
Image Credit: India vs Pakistan
Join

India vs Pakistan U19 Asia Cup 2026: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇರುತ್ತದೆ. ಅದು ಹಿರಿಯರ ತಂಡಗಳ ಪಂದ್ಯವಾಗಿರಲಿ ಅಥವಾ ಕಿರಿಯರ ವಿಭಾಗದ ಕಾದಾಟವಾಗಿರಲಿ, ಉಭಯ ತಂಡಗಳ ಮುಖಾಮುಖಿ ಯಾವಾಗಲೂ ಗಮನ ಸೆಳೆಯುತ್ತದೆ. ಇದೀಗ 2026ರ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ ಶತಕ ಸಿಡಿಸಿ ಪಾಕಿಸ್ತಾನ ತಂಡಕ್ಕೆ ಗೆಲುವು ತಂದುಕೊಟ್ಟ ಹಮ್ಜಾ ಜಹೂರ್ ಸುದ್ದಿಯಲ್ಲಿದ್ದಾರೆ. ಆದರೆ ಅವರ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಪಂದ್ಯ ಮುಗಿದ ಬಳಿಕ ತೋರಿಸಿದ ಒಂದು ಪುಟ್ಟ ಕಾಗದದ ಚೀಟಿಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ನವೆಂಬರ್ 8ರಂದು ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತವನ್ನ ಸೋಲಿಸಿತು. ಈ ಗೆಲುವಿನಲ್ಲಿ ಪಾಕ್ ಬ್ಯಾಟರ್ ಹಮ್ಜಾ ಜಹೂರ್ ಪ್ರಮುಖ ಪಾತ್ರ ವಹಿಸಿದರು. ಅವರು ಅಮೋಘ ಶತಕ ದಾಖಲಿಸುವ ಮೂಲಕ ತಂಡದ ಗೆಲುವಿನ ರೂವಾರಿಯಾದರು. ಪಂದ್ಯ ಮುಗಿದ ಬಳಿಕ ಅವರು ಮೈದಾನದಲ್ಲಿ ತೋರಿಸಿದ ಚೀಟಿಯಲ್ಲಿದ್ದ ಬರಹ ಅಭಿಮಾನಿಗಳ ಗಮನ ಸೆಳೆದಿದೆ.

ಪಂದ್ಯಕ್ಕೂ ಮುನ್ನವೇ ಗುರಿ ಬರೆದಿಟ್ಟಿದ್ದ ಹಮ್ಜಾ

ಭಾರತದ ವಿರುದ್ಧದ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಹಮ್ಜಾ ಜಹೂರ್ ತಮ್ಮದೇ ಆದ ಗುರಿಯೊಂದನ್ನ ನಿಗದಿಪಡಿಸಿಕೊಂಡಿದ್ದರು. ಅದನ್ನ ಕೇವಲ ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ಒಂದು ಕಾಗದದ ಮೇಲೆ ಬರೆದುಕೊಂಡಿದ್ದರು. ಭಾರತದ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಬೇಕು ಮತ್ತು ಪಾಕಿಸ್ತಾನ ತಂಡವನ್ನ ಗೆಲ್ಲಿಸಬೇಕು ಎಂಬುದು ಅವರ ಗುರಿಯಾಗಿತ್ತು. ಈ ಗುರಿಯನ್ನ ಬರೆದಿಟ್ಟಿದ್ದ ಚೀಟಿಯನ್ನ ಪಂದ್ಯ ಮುಗಿಯುವವರೆಗೂ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ವಿಶೇಷವೆಂದರೆ ಅವರು ಬಯಸಿದ್ದು ಅರ್ಧಶತಕವಾದರೂ ಮೈದಾನದಲ್ಲಿ ಅದಕ್ಕಿಂತ ದೊಡ್ಡ ಸಾಧನೆ ಮಾಡಿದರು. ಅರ್ಧಶತಕದ ಗುರಿಯನ್ನ ಮೀರಿ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಗೆಲುವಿನ ಬಳಿಕ ಚೀಟಿ ತೋರಿಸಿ ಸಂಭ್ರಮ

 

 ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ ಬಳಿಕ ಹಮ್ಜಾ ತಮ್ಮ ಜೇಬಿನಲ್ಲಿದ್ದ ಚೀಟಿಯನ್ನ ಹೊರತೆಗೆದರು. ಪಂದ್ಯಕ್ಕೂ ಮುನ್ನ ತಾವೇ ಬರೆದುಕೊಂಡಿದ್ದ ಗುರಿಯನ್ನ ಪ್ರೇಕ್ಷಕರಿಗೆ ಮತ್ತು ಕ್ಯಾಮೆರಾಗಳಿಗೆ ತೋರಿಸಿದರು. ಈ ಮೂಲಕ ತಮ್ಮ ಗುರಿ ಈಡೇರಿದ ಸಂತೋಷವನ್ನ ವಿಶೇಷ ರೀತಿಯಲ್ಲಿ ವ್ಯಕ್ತಪಡಿಸಿದರು. ಆ ಚೀಟಿಯಲ್ಲಿ, ʼನಾಳೆಯ ಪಂದ್ಯದಲ್ಲಿ 50 ರನ್‌ ಗಳಿಸುತ್ತೇನೆ. ನಾನೇ ಅತ್ಯುತ್ತಮ' ಎಂಬ ಬರಹವಿತ್ತು. 

 

ಆದರೆ ಮಹತ್ವದ ಪಂದ್ಯದಲ್ಲಿ 50 ರನ್‌ಗಳ ಬದಲು ಶತಕ ಗಳಿಸುವ ಮೂಲಕ ತಮ್ಮ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದರು. ಹಮ್ಜಾ ಚೀಟಿ ತೋರಿಸುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪಂದ್ಯಕ್ಕೂ ಮುನ್ನ ಗುರಿ ನಿಗದಿಪಡಿಸಿಕೊಂಡು ಅದನ್ನ ಕಾಗದದಲ್ಲಿ ಬರೆದಿಟ್ಟಿದ್ದ ಆಟಗಾರ, ಪಂದ್ಯ ಮುಗಿದ ಬಳಿಕ ಅದನ್ನೇ ತೋರಿಸಿ ಸಂಭ್ರಮಿಸಿರುವುದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

ದೀಪಾವಳಿ ದಿನ ಭಾರತಕ್ಕೆ ಸೋಲು

ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯ ಓಮನ್‌ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಕೊನೆಯ ಹಂತದವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಅಂತಿಮವಾಗಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿತು. ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಈ ಸೋಲು ನಿರಾಸೆ ಮೂಡಿಸಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಬಗ್ಗೆ ಅಭಿಮಾನಿಗಳಲ್ಲಿ ಸದಾ ವಿಶೇಷ ಆಸಕ್ತಿ ಇರುತ್ತದೆ. ಈ ಪಂದ್ಯದಲ್ಲಿಯೂ ಪಾಕಿಸ್ತಾನದ ಗೆಲುವು ಹಾಗೂ ಹಮ್ಜಾ ಜಹೂರ್ ಅವರ ಶತಕ ಪ್ರಮುಖ ಸುದ್ದಿಯಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಗೋಲ್ ನೋಟ್

ಹಮ್ಜಾ ಜಹೂರ್ ಅವರ ಚೀಟಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶತಕ ಸಿಡಿಸಿ ಪಂದ್ಯ ಗೆಲ್ಲಿಸಿದ ಬಳಿಕ ಅವರು ತಮ್ಮ ಗುರಿಯನ್ನ ಬಹಿರಂಗಪಡಿಸಿದ ರೀತಿ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅರ್ಧಶತಕದ ಗುರಿಯೊಂದಿಗೆ ಕಣಕ್ಕಿಳಿದಿದ್ದ ಅವರು ಶತಕ ಗಳಿಸಿರುವುದು ಈ ಚೀಟಿಯ ವಿಶೇಷತೆಯಾಗಿದೆ. ಒಟ್ನಲ್ಲಿ ಭಾರತ ವಿರುದ್ಧದ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ಹಮ್ಜಾ ಜಹೂರ್ ಶತಕ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟರೆ, ಪಂದ್ಯಕ್ಕೂ ಮುನ್ನ ಬರೆದಿಟ್ಟಿದ್ದ ಚೀಟಿಯು ಅವರ ಸಂಭ್ರಮಕ್ಕೆ ಮತ್ತೊಂದು ವಿಶೇಷ ಆಯಾಮ ನೀಡಿದೆ. ಇದೀಗ ಅವರ ಶತಕದಷ್ಟೇ ಆ ಚೀಟಿಯಲ್ಲಿದ್ದ ಬರಹವೂ ಕ್ರಿಕೆಟ್ ಅಭಿಮಾನಿಗಳ ನಡುವೆ ವೈರಲ್ ಆಗಿದೆ. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES