• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಸಂಜು ಸ್ಯಾಮ್ಸನ್‌ಗೆ ಬಿಗ್‌ ಶಾಕ್‌.. ಓಪನರ್‌ ಸ್ಲಾಟ್‌ಗೆ ಕೋಟಿ ಕೋಟಿ ಹಣ ಸುರಿಯಲು ಮುಂದಾದ CSK

ಸಂಜು ಸ್ಯಾಮ್ಸನ್‌ಗೆ ಬಿಗ್‌ ಶಾಕ್‌.. ಓಪನರ್‌ ಸ್ಲಾಟ್‌ಗೆ ಕೋಟಿ ಕೋಟಿ ಹಣ ಸುರಿಯಲು ಮುಂದಾದ CSK

ಸಿಎಸ್‌ಕೆ ಫ್ರಾಂಚೈಸಿಯ ಮುಂದಿನ ಪ್ಲಾನ್‌, ಯೋಜನೆಗಳು ಬೇರೆಯೇ ಇದೆ ಎಂದು ಎನ್ನಲಾಗಿದೆ. ನಾಯಕತ್ವದ ಇಲ್ಲದೇ ಸಂಜು ಸ್ಯಾಮ್ಸನ್‌ ಅವರ ಮುಂದಿನ ನಿರ್ಧಾರ ಏನು, ಫ್ರಾಂಚೈಸಿಯೂ ಏನು ನಿರ್ಧಾರ ತೆಗೆದುಕೊಳ್ಳುತ್ತದೆ?

Reported ByBhimappaEdited ByBhimappa
Published: Sep 16, 2026, 03:08 PM IST|Updated: Sep 16, 2026, 03:12 PM IST
joinshare
ಸಂಜು ಸ್ಯಾಮ್ಸನ್‌ಗೆ ಬಿಗ್‌ ಶಾಕ್‌.. ಓಪನರ್‌ ಸ್ಲಾಟ್‌ಗೆ ಕೋಟಿ ಕೋಟಿ ಹಣ ಸುರಿಯಲು ಮುಂದಾದ CSK
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟ್ಸ್‌ಮನ್‌ ಮತ್ತು 2026ರ ವಿಶ್ವಕಪ್‌ ಗೆಲುವಿಗೆ ಪ್ರಮುಖ ಕಾರಣರಾದ ಸಂಜು ಸ್ಯಾಮ್ಸನ್‌ ಅವರು ಸದ್ಯ ಅತ್ಯುತ್ತಮ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ನಲ್ಲಿಯೂ ಸಂಜು ಸ್ಯಾಮ್ಸನ್‌ ಬೆಸ್ಟ್‌ ಪರ್ಫಾಮೆನ್ಸ್‌ ನೀಡಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ ಪರವಾಗಿ ಅತ್ಯುತ್ತಮ ಬ್ಯಾಟ್‌ ಬೀಸಿದ್ದ ಸಂಜು ಕೆಲವು ಪಂದ್ಯಗಳನ್ನು ಒನ್‌ಮ್ಯಾನ್‌ ಶೋ ಎನ್ನುವಂತೆ ಗೆಲ್ಲಿಸಿಕೊಟ್ಟಿದ್ದರು. ಆದರೆ ಉಳಿದ ಆಟಗಾರರು ವೈಫಲ್ಯಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌, ಸಿಎಸ್‌ಕೆ ಮುಂದಿನ ಹಂತಕ್ಕೆ ತಲುಪಲು ಆಗಲಿಲ್ಲ. 2026ರ ಐಪಿಎಲ್‌ ಸೀಸನ್‌ನಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದರೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಕೇರಳ ಹುಡುಗ ಸಂಜು ಸ್ಯಾಮ್ಸನ್‌ ಅವರನ್ನು ಕೈಬಿಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣವೇನು, ಬಲಿಷ್ಠ ಬ್ಯಾಟರ್‌ನನ್ನು ಸಿಎಸ್‌ಕೆ ಬಿಟ್ಟು ಕೊಡುತ್ತಾ, ಓಪನರ್‌ನನ್ನು ಬೇರೆ ತಂಡಕ್ಕೆ ಕಳುಹಿಸಿಕೊಡುತ್ತಾ, ಸಂಜು ಸ್ಯಾಮ್ಸನ್‌ ಅವರು ಸಿಎಸ್‌ಕೆ ಫ್ರಾಂಚೈಸಿ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರಾ?.

ಇತ್ತೀಚಿನ ವರದಿಗಳು ಸಿಎಸ್‌ಕೆ ಮತ್ತು ಸಂಜು ಸ್ಯಾಮ್ಸನ್ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುವ ಭವಿಷ್ಯದ ಬಗ್ಗೆ ಹೊಸ ಪ್ರಶ್ನೆಗಳು ಹುಟ್ಟಿಕೊಂಡಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, 2027ರ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವವವೂ ಕೆಲವು ಗೊಂದಲಗಳಿಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ. 2026ರ ಐಪಿಎಲ್ ಸೀಸನ್‌ಗೆ ಮೊದಲೇ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿದ್ದ ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ವಿನಿಮಯ ಮಾಡಿಕೊಳ್ಳಲಾಗಿತ್ತು. ಸಿಎಸ್‌ಕೆ ಜೊತೆಗಿನ ಮೊದಲ ಸೀಸನ್‌ನಲ್ಲಿ ಅವರು ತಮ್ಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು.

2026ರ‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ತಂಡದ ಓಪನರ್ ಸಂಜು ಸ್ಯಾಮ್ಸನ್‌ ಅವರು 14 ಪಂದ್ಯಗಳಲ್ಲಿ 477 ರನ್ ಗಳಿಸಿದರು. 34.07 ಬ್ಯಾಟಿಂಗ್ ಸರಾಸರಿ ಮತ್ತು 165.62 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್‌ ಬೀಸಿದ್ದರು. ಮುಂಬರುವ ಸೀಸನ್‌ ಅಂದರೆ 2027ರ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ಸಿಎಸ್‌ಕೆ ಪರ ಹೊಸ ಭರವಸೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದರ ನಡುವೆ ಸಂಜು ಸ್ಯಾಮ್ಸನ್‌ ಬಗ್ಗೆ ಬೇರೆ ಮಾಡುಗಳು ಕೇಳಿ ಬರುತ್ತಿವೆ. ಮುಂದಿನ ಸೀಸನ್‌ನಲ್ಲಿ ಸಂಜು ಸ್ಯಾಮ್ಸನ್‌ ಅವರು ಯಾವ ತಂಡದಲ್ಲಿ ಆಡಲಿದ್ದಾರೆ, ಸಿಎಸ್‌ಕೆಯಲ್ಲಿಯೇ ಇರುತ್ತಾರಾ?.  

ಸಂಜು ಸ್ಯಾಮ್ಸನ್‌ಗೆ ನಾಯಕತ್ವ ಬೇಕಾ?
ಕಳೆದ ಮೂರು ಸೀಸನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕರಾಗಿ ರುತುರಾಜ್ ಗಾಯಕ್ವಾಡ್ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕಳೆದ ಮೂರು ಸೀಸನ್‌ಗಳಲ್ಲೂ ಚೆನ್ನೈ ತಂಡ ಪ್ಲೇಆಫ್‌ ಹಂತಕ್ಕೂ ತಲುಪಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಕಳೆದ ಸೀಸನ್‌ಗಳಲ್ಲಿ ರುತುರಾಜ್ ಗಾಯಕ್ವಾಡ್ ಅವರ ಬ್ಯಾಟಿಂಗ್ ಪ್ರದರ್ಶನವೂ ನಿರೀಕ್ಷೆಗಳಿಗೆ ತಕ್ಕಂತೆ ಇರಲಿಲ್ಲ. ರುತುರಾಜ್ ಗಾಯಕ್ವಾಡ್ ಅವರ ಸ್ಟ್ರೈಕ್ ರೇಟ್ ಕೇವಲ 123 ಆಗಿತ್ತು ಎಂದರೆ, ಅವರ ಬ್ಯಾಟಿಂಗ್‌ ಪರ್ಫಾಮೆನ್ಸ್‌ ಹೇಗಿದೆ ಎಂಬುದು ನೀವು ಊಹಿಸಬಹುದು.  

ಈ ಹಿನ್ನೆಲೆಯಲ್ಲಿ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೀಸನ್‌ನಲ್ಲಿ ಸಂಜು ಸ್ಯಾಮ್ಸನ್ ಅವರು ನಾಯಕತ್ವವನ್ನು ಪಡೆಯುವ ಬಯಕೆಯನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಮುಂದೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಿಎಸ್‌ಕೆ ಫ್ರಾಂಚೈಸಿಯ ಮುಂದಿನ ಪ್ಲಾನ್‌, ಯೋಜನೆಗಳು ಬೇರೆಯೇ ಇದೆ ಎಂದು ಎನ್ನಲಾಗಿದೆ. ನಾಯಕತ್ವದ ಇಲ್ಲದೇ ಸಂಜು ಸ್ಯಾಮ್ಸನ್‌ ಅವರ ಮುಂದಿನ ನಿರ್ಧಾರ ಏನು, ಫ್ರಾಂಚೈಸಿಯೂ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಸಂಜುಗೆ ಕ್ಯಾಪ್ಟನ್‌ ಕೊಡದಿದ್ರೆ ಸಿಎಸ್‌ಕೆ ನಾಯಕ ಯಾರು? 
ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯೂ ತಂಡದ ನಾಯಕರಾಗಿರುವ ರುತುರಾಜ್ ಗಾಯಕ್ವಾಡ್ ಅವರ ಬದಲಿಗೆ 19 ವರ್ಷದ ಆಯುಷ್ ಮ್ಹಾತ್ರೆ ಅವರನ್ನು ತಂಡದ ಮುಂದಿನ ನಾಯಕರನ್ನಾಗಿ ಮಾಡಲು ಬಿಗ್‌ ಪ್ಲಾನ್‌ ಮಾಡಲಾಗುತ್ತಿದೆ ಎನ್ನಲಾಗಿದೆ. ಆಯುಷ್ ಮ್ಹಾತ್ರೆ ಅವರು ಇನ್ನೂ ಸಣ್ಣವರಿದ್ದು ಈಗಾಗಲೇ ತಮ್ಮ ಬ್ಯಾಟಿಂಗ್‌ ಪ್ರದರ್ಶನ ಮೂಲಕ ಅತ್ಯಮೂಲ್ಯ ಕೊಡುಗೆ ತಂಡಕ್ಕೆ ನೀಡಿದ್ದಾರೆ. ಆಯುಷ್ ಮ್ಹಾತ್ರೆಗೆ ಕ್ಯಾಪ್ಟನ್ಸಿ ಕೊಟ್ಟರೇ ಚೆನ್ನೈ ತಂಡಕ್ಕೆ ದೀರ್ಘಕಾಲದ ನಾಯಕರೊಬ್ಬರು ಸಿಗುತ್ತಾರೆ ಎನ್ನುವುದು ಸಿಎಸ್‌ಕೆಯ ಬಿಗ್‌ ಪ್ಲಾನ್‌ ಆಗಿದೆ. ಆದರೆ ನಾಯಕತ್ವದ ಬಗ್ಗೆ ಸಂಜು ಸ್ಯಾಮ್ಸನ್ ಅವರು ಇಟ್ಟಿರುವ ಬೇಡಿಕೆಯು ಸಿಎಸ್‌ಕೆ ಫ್ರಾಂಚೈಸಿಯಲ್ಲಿ ಅಸಮಾಧಾನವನ್ನು ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ. 

ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಸಿಎಸ್‌ಕೆ ಫ್ರಾಂಚೈಸಿಯು ಹೊಸ ಓಪನರ್‌ ಬ್ಯಾಟ್ಸ್‌ಮನ್‌ ಅನ್ನು ಹುಡುಕುತ್ತಿದೆ ಎಂದು ಹೇಳಲಾಗುತ್ತಿದೆ. ಸಿಎಸ್‌ಕೆ 2027 ರ ಐಪಿಎಲ್ ಸೀಸನ್‌ಗಾಗಿ ಆರಂಭಿಕ ಆಕ್ರಮಣಕಾರಿ ಓಪನರ್‌ನನ್ನು ಫ್ರಾಂಚೈಸಿಯೂ ಹುಡುಕುತ್ತಿದೆ ಅಂತೆ. ವಿಶೇಷವಾಗಿ ಅದರಲ್ಲಿ ತಂಡದ ಪವರ್‌ಪ್ಲೇ ಓವರ್‌ಗಳಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಬಲ್ಲ ವಿದೇಶಿ ಬ್ಯಾಟ್ಸ್‌ಮನ್‌ನನ್ನು ಕರೆತರಲು ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲಾನ್‌ಗಳನ್ನು ಮಾಡುತ್ತಿದೆ ಎನ್ನಲಾಗುತ್ತಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯು ಇಂಗ್ಲೆಂಡ್‌ನ ಬಲಿಷ್ಠ ಬ್ಯಾಟರ್‌ ಹ್ಯಾರಿ ಬ್ರೂಕ್‌ ಅವರನ್ನು ಹರಾಜಿನಲ್ಲಿ ಖರೀದಿಸಲು ಆಸಕ್ತಿ ಹೊಂದಿದೆ. ಹ್ಯಾರಿ ಬ್ರೂಕ್‌ ಅವರಿಗಾಗಿ ಫ್ರಾಂಚೈಸಿಯೂ ತನ್ನ ಪರ್ಸ್‌ನಿಂದ 25 ಕೋಟಿ ರೂಪಾಯಿಗಳವರೆಗೆ ಖರ್ಚು ಮಾಡಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ಋತುಗಳಲ್ಲಿ ಸಿಎಸ್‌ಕೆ ತಂಡವು ಚೇಸಿಂಗ್‌ನಲ್ಲಿ ದೊಡ್ಡ ಸ್ಕೋರ್‌ಗಳನ್ನು ಸಾಧಿಸುವಲ್ಲಿ ತೊಂದರೆಗೆ ಒಳಗಾಗಿದೆ. ಪವರ್ ಪ್ಲೇನಲ್ಲಿ ಆಕ್ರಮಣಕಾರಿಯಾಗಿ ರನ್ ಗಳಿಸಬಲ್ಲ ಬ್ಯಾಟ್ಸ್‌ಮನ್‌ ತಂಡಕ್ಕೆ ಅಗತ್ಯವಿದೆ ಎಂದು ಮ್ಯಾನೇಜ್‌ಮೆಂಟ್ ಭಾವಿಸಿದೆ ಎನ್ನಲಾಗಿದೆ. ಒಂದು ವೇಳೆ ಸಿಎಸ್‌ಕೆ ಹ್ಯಾರಿ ಬ್ರೂಕ್‌ ಅವರನ್ನು ಖರೀದಿಸಿದರೆ, ಆಯುಷ್ ಮ್ಹಾತ್ರೆ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಸದ್ಯ ಹ್ಯಾರಿ ಬ್ರೂಕ್ ಅವರಿಗೆ ಪ್ರಸ್ತುತ 27 ವರ್ಷ ಆಗಿದ್ದು ಮುಂದಿನ ಕೆಲ ವರ್ಷಗಳ ಕಾಲ ತಂಡದ ಶಾಶ್ವತ ಓಪನರ್‌ ಆಗಲಿದ್ದಾರೆ ಎನ್ನುವುದು ಸಿಎಸ್‌ಕೆಯ ಪ್ಲಾನ್‌ ಆಗಿದೆ. 

Add Zee News as a Preferred Source