SOCIAL MEDIA

Newsletter

PARTNER SITES
Select Language Select State

ಕ್ರಿಕೆಟ್‌ನಿಂದ ಎಷ್ಟೇ ಖ್ಯಾತಿ, ಶ್ರೀಮಂತಿಕೆ ಬಂದರೂ ಸ್ಟಾರ್‌ ಕ್ರಿಕೆಟರ್‌ಗೆ ಡಿವೋರ್ಸ್ ಕೊಟ್ಟ ಹೆಂಡತಿ.. ಕಾರಣವೇನು?

ಬ್ರೆಟ್‌ ಲೀ ಮತ್ತು ಇವರ ಹೆಂಡತಿ ಎಲಿಜಬೆತ್‌ ವಿಚ್ಛೇದನ ಕುರಿತು ಮಾಹಿತಿ ಹೊರ ಬಿದ್ದಾಗ ವದಂತಿಗಳು ಎದ್ದಿದ್ದವು. ಇದರಲ್ಲಿ ಬ್ರೆಟ್‌ ಲೀ ಹೆಂಡತಿ ಎಲಿಜಬೆತ್‌ ಅವರು ರಗ್ಬಿ ಆಟಗಾರನ ಜೊತೆ ಇದ್ದಾರೆ. ಅವರ ಜೊತೆ ತಿರುಗಾಡುತ್ತಾರೆ. ಇಬ್ಬರ ನಡುವೆ ಪ್ರೀತಿ, ಲವ್‌ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ನಿಜ ಜೀವನದಲ್ಲಿ ಆಗಿದ್ದೇ ಬೇರೆ.

Reported By Bhimappa Written By Bhimappa
Published: Sep 12, 2026, 04:01 PM IST | Updated: Sep 17, 2026, 04:06 PM IST
Image Credit: File Photo
Join

ಆಸ್ಟ್ರೇಲಿಯಾದ ಮಾಜಿ ವೇಗಿ, ಕ್ರಿಕೆಟ್‌ ದಂತಕಥೆ ಬ್ರೆಟ್ ಲೀ ಎಂದರೆ ಕ್ರಿಕೆಟ್ ಪ್ರೇಮಿಗಳಿಗೆ ತಕ್ಷಣ ನೆನಪಾಗುವುದು ಅವರ ಬೌಲಿಂಗ್‌. ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಮಾರಕ ಬೌಲಿಂಗ್ ಮಾಡುತ್ತಿದ್ದ ಬ್ರೆಟ್‌ ಲೀ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ಭಯವನ್ನು ಉಂಟು ಮಾಡುತ್ತಿದ್ದರು. ಮೈದಾನ ಯಾವುದೇ ಆಗಿರಲಿ, ಪಿಚ್ ಎಷ್ಟೇ ನಿಧಾನವಾಗಿರಲಿ, ಚೆಂಡು ಬ್ರೆಟ್ ಲೀ ಕೈಗೆ ಸಿಕ್ಕಿದರೆ ಸಾಕು ಬೆಂಕಿಯಂತಹ ಬೌಲಿಂಗ್‌ ಮಾಡುತ್ತಿದ್ದರು. ಜಗತ್ತಿನ ಘಟಾನುಘಟಿ ಬ್ಯಾಟರ್‌ಗಳನ್ನೇ ತಮ್ಮ ಬಿರುಸಿನ ಎಸೆತಗಳಿಂದ ನಡುಗಿಸಿದ್ದ ಈ ಆಸೀಸ್ ವೇಗಿ, ಮೈದಾನದ ಹೊರಗೆ, ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ನೋವುಗಳು, ಬದುಕಿನ ಏರಿಳಿತಗಳು ಎಷ್ಟೋ ಜನರಿಗೆ ಗೊತ್ತೇ ಇಲ್ಲ ಎನ್ನಬಹುದು.

ಬ್ರೆಟ್‌ ಲೀ ಅವರು ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದಾಗ ತಮ್ಮ ವೈವಾಹಿಕ ಜೀವನದಲ್ಲಿ ಅನುಭವಿಸಿದಂತಹ ಆಘಾತ ಮತ್ತು ವೈಫಲ್ಯ ಯೋಚನೆಗೆ ತಳ್ಳಿತ್ತು. ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದ ಬ್ರೆಟ್‌ ಲೀ ಅವರು ಅವರು ವೈಯಕ್ತಿಕ ಜೀವನದಲ್ಲಿ ಸಂಪೂರ್ಣವಾಗಿ ಕುಸಿದು ಬಿಟ್ಟಿದ್ದರು. ಕ್ರಿಕೆಟ್‌ನಿಂದಲೇ ಬ್ರೆಟ್‌ ಲೀ ಅವರ ವೈವಹಾಕಿ ಜೀವನ ಹದಗೆಟ್ಟಿತ್ತು. ಕ್ರಿಕೆಟ್‌ ಅವರ ದಾಂಪತ್ಯ ಬದುಕು ಮುರಿದು ಬೀಳಲು ಕಾರಣವಾಗಿತ್ತು ಎನ್ನಬಹುದು.

ಬ್ರೆಟ್ ಲೀ ಅವರು 2006 ರಲ್ಲಿ ಎಲಿಜಬೆತ್ ಕ್ಯಾಂಪ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆ ಸಂದರ್ಭದಲ್ಲಿ ಬ್ರೆಟ್‌ ಲೀ ಅವರು ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಉತ್ತುಂಗ ಹಂತದಲ್ಲಿ ಇದ್ದರು. ಆದರೆ, ಮದುವೆಯಾಗಿ ಕೇವಲ ಮೂರು ವರ್ಷ ಪೂರೈಸುವಷ್ಟರಲ್ಲೇ ಅಂದರೆ 2009ರಲ್ಲಿ ಈ ದಾಂಪತ್ಯ ಜೀವನ ಕೊನೆಗೊಂಡಿತು. ಕ್ರೀಡೆಯಿಂದ ಸಿಕ್ಕ ಅಪಾರ ಹಣ, ಗ್ಲಾಮರ್ ಮತ್ತು ಜಾಗತಿಕ ಖ್ಯಾತಿಯ ನಡುವೆ ಬ್ರೆಟ್‌ ಲೀ ಅವರು ಮೊದಲ ಹೆಂಡತಿಗೆ ಟಿವೋರ್ಸ್‌ ನೀಡಬೇಕಾಯಿತು.

ಟೀಮ್‌ನಲ್ಲಿದ್ದಾಗ ಬ್ರೆಟ್‌ಲೀ ಅವರು ಬಿಡುವಿಲ್ಲದೇ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಕ್ರಿಕೆಟ್‌ ಜೀವನದಲ್ಲಿ ನಿರಂತರವಾದ ಪ್ರವಾಸಗಳು, ಸರಣಿಗಳು, ಟೂರ್ನ್‌ಮೆಂಟ್‌ಗಳು ಇರುತ್ತಿದ್ದರಿಂದ ತಿಂಗಳು ಗಟ್ಟಲೇ ಬ್ರೆಟ್‌ ಲೀ ಅವರು ಮನೆಯಿಂದ ಹೊರಗೆ ಇರಬೇಕಾಗುತ್ತಿತ್ತು. ಇದರಿಂದ ಮನೆಯಲ್ಲಿ ಹೆಂಡತಿಗೆ ಸಮಸ್ಯೆ ಆಗುತ್ತಿತ್ತು. ಬ್ರೆಟ್‌ ಲೀ ಅವರ ಹೆಂಡತಿ ಎಲಿಜಬೆತ್‌ ಕ್ಯಾಂಪ್‌ ಅವರಿಗೆ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನವನ್ನು ಸಮತೋಲದಿಂದ ನೋಡಿಕೊಳ್ಳಲು ಆಗಲೇ ಇಲ್ಲ. ಇದು ಚಾಲೆಂಜ್‌ ಆಗಿ ದಂಪತಿ ಮಧ್ಯೆ ಬಿರುಕಿಗೆ ಕಾರಣವಾಯಿತು.

ಮದುವೆಯ ನಂತರ ಈ ದಂಪತಿಗೆ 'ಪ್ರೆಸ್ಟನ್ ಚಾರ್ಲೆಸ್' ಎಂಬ ಗಂಡು ಮಗು ಜನಿಸಿತು. ಆದಾಗ್ಯೂ, ಬ್ರೆಟ್ ಲೀ ಅವರು ತಿಂಗಳು ಗಟ್ಟಲೇ ಮನೆಯಿಂದ ಹೊರಗೆ ಇರುವ ಕಾರಣ ಹೆಂಡತಿ ಎಲಿಜಬೆತ್ ಒಂಟಿಯಾಗಿಯೇ ದಿನಗಳನ್ನು ಕಳೆಯಬೇಕಾಯಿತು. ಇದು ಅವರಿಗೆ ಸರಿ ಕಾಣಿಸಲೇ ಇಲ್ಲ. ಕ್ರಿಕೆಟ್‌ಗೆ ನೀಡುತ್ತಿದ್ದ ಸಮಯದಲ್ಲಿ ಹೆಂಡತಿ, ಮಗುವಿಗೆ ಬ್ರೆಟ್‌ ಲೀ ಅವರು ನೀಡಲು ಆಗಲೇ ಇಲ್ಲ. ಇದು ದಾಂಪತ್ಯದಲ್ಲಿ ಕೆಲವು ಬಿರುಕುಗಳನ್ನು ಉಂಟು ಮಾಡಲು ಕಾರಣವಾಯಿತು.

ಕ್ರಿಕೆಟರ್‌ ಬ್ರೆಟ್‌ ಲೀ ಮತ್ತು ಇವರ ಹೆಂಡತಿ ಎಲಿಜಬೆತ್‌ ವಿಚ್ಛೇದನ ಕುರಿತು ಮಾಹಿತಿ ಹೊರ ಬಿದ್ದಾಗ ವದಂತಿಗಳು ಎದ್ದಿದ್ದವು. ಇದರಲ್ಲಿ ಬ್ರೆಟ್‌ ಲೀ ಹೆಂಡತಿ ಎಲಿಜಬೆತ್‌ ಅವರು ರಗ್ಬಿ ಆಟಗಾರನ ಜೊತೆ ಇದ್ದಾರೆ. ಅವರ ಜೊತೆ ತಿರುಗಾಡುತ್ತಾರೆ. ಇಬ್ಬರ ನಡುವೆ ಪ್ರೀತಿ, ಲವ್‌ ಇದೆ ಎಂದು ವದಂತಿಗಳು ಹಬ್ಬಿದ್ದವು. ಇಬ್ಬರ ನಡುವಿನ ಈ ಸಂಬಂಧವೇ ಡಿವೋರ್ಸ್‌ಗೆ ಕಾರಣವಾಯಿತು ಎಂದು ಹೇಳಲಾಗಿತ್ತು. ಆದರೆ ಫ್ಯಾಮಿಯ ಒಳಗೆ ನಡೆದಂತಹ ಕೆಲ ಸಂಗತಿಗಳು ತಿಳಿದಿರಲಿಲ್ಲ.  

ಆದರೆ, ಡಿವೋರ್ಸ್‌ಗೆ ಕಾರಣ ಏನೇ ಇರಲಿ, ಬ್ರೆಟ್ ಲೀ ತಮ್ಮ ವೈಯಕ್ತಿಕ ನೋವುಗಳನ್ನು ಅಥವಾ ಮನೆಯೊಳಗಿನ ಕಹಿ ಘಟನೆಗಳನ್ನು ಎಂದಿಗೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಎಂದಿಗೂ ಶೇರ್‌ ಮಾಡಿಕೊಳ್ಳಲೇ ಇಲ್ಲ. ಡಿವೋರ್ಸ್‌ ಆದರೆ ಏನಂತೇ ತಮ್ಮ ಮಗ ಪ್ರೆಸ್ಟನ್‌ ಚಾರ್ಲಸ್‌ ಅವರನ್ನು ಒಟ್ಟಾಗಿ ಬೆಳೆಸಲು, ವಿದ್ಯಾಭ್ಯಾಸ ನೋಡಿಕೊಳ್ಳಲು ಇಬ್ಬರು ಒಟ್ಟಾಗಿ ನಿರ್ಧರಿಸಿದರು. ಇದರಿಂದ ಇಬ್ಬರ ನಡುವೆ ಒಳ್ಳೆಯ ಮಾತುಕತೆಗಳು ನಡೆದವು.

ಮೊದಲ ಮದುವೆ ಮುರಿದುಬಿದ್ದ ನಂತರ ಕ್ರಿಕೆಟರ್ ಬ್ರೆಟ್ ಲೀ ಅವರು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದರು. ಏನು ಮಾಡುವುದೆಂದು ಯೋಚನೆ ಮಾಡದಿದ್ದರೂ ಕ್ರಿಕೆಟ್‌ನಲ್ಲಿ ಹೆಚ್ಚು ಖ್ಯಾತಿ ಗಳಿಸಿದರು. ಸುಮಾರು ಐದು ವರ್ಷಗಳ ಕಾಲ ಯಾವುದೇ ಆತುರದ ನಿರ್ಧಾರ ಕೈಗೊಳ್ಳದೆ ಒಂಟಿಯಾಗಿಯೇ ಉಳಿದ ಬ್ರೆಟ್‌ ಲೀ ಅವರು ಸಂಪೂರ್ಣವಾಗಿ ಕ್ರಿಕೆಟ್ ಮತ್ತು ತಮ್ಮ ವೈಯಕ್ತಿಕ ಬೆಳವಣಿಗೆಗೆ ಹೆಚ್ಚು ಹೊತ್ತು ಕೊಟ್ಟರು.

ಬ್ರೆಟ್ ಲೀ ಅವರು 2014ರಲ್ಲಿ ತಮ್ಮ ವೈವಾಹಿಕ ಜೀವನದಲ್ಲಿ ಎರಡನೇ ಅಧ್ಯಾಯವನ್ನು ಆರಂಭಿಸಿದರು. ಬ್ರೆಟ್ ಲೀ ಅವರು ಲಾನಾ ಆಂಡರ್ಸನ್ ಎನ್ನುವರನ್ನು ವಿವಾಹವಾದರು. ಈ ಮೂಲಕ ತಮ್ಮ ಒಂಟಿ ಜೀವನಕ್ಕೆ ಫುಲಿಸ್ಟಾಪ್‌ ಇಟ್ಟರು. ಎರಡನೇ ಮದುವೆ ಬಳಿಕ ಬ್ರೆಟ್‌ ಲೀ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಪ್ರಾರಂಭಸಿದರು. ಮೈದಾನದಲ್ಲಿ ಎಷ್ಟೇ ದೊಡ್ಡ ಯಶಸ್ಸು ಸಿಕ್ಕರೂ, ವೈಯಕ್ತಿಕ ಜೀವನದಲ್ಲಿ ಎಂತಹ ಪರಿಣಾಮಗಳನ್ನು ಎದುರಿಸುತ್ತಾರೆ ಎನ್ನುವುದಕ್ಕೆ ವಿಶ್ವದ ವೇಗದ ಬೌಲರ್‌ ಬ್ರೆಟ್ ಲೀ ಅವರ ನಿಜ ಜೀವನವೇ ಉದಾಹರಣೆ ಎಂದುಕೊಳ್ಳಬಹುದು.

ಬ್ರೆಟ್‌ ಲೀ ಅವ ಅಂತರಾಷ್ಟ್ರೀಯ ಕ್ರಿಕೆಟ್‌ ಸಾಧನೆ

ಆಸ್ಟ್ರೇಲಿಯಾದ ದಂತಕಥೆ, ವೇಗದ ಬೌಲರ್‌ ಬ್ರೆಟ್‌ ಲೀ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಬ್ರೆಟ್‌ ಲೀ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 76 ಪಂದ್ಯಗಳನ್ನು ಆಡಿದ್ದು ಇವುಗಳಲ್ಲಿ ಒಟ್ಟು 310 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಅನೇಕ ಯಶಸ್ವಿ ಆಟಗಾರರಲ್ಲಿ ಬ್ರೆಟ್‌ ಲೀ ಕೂಡ ಒಬ್ಬರು ಆಗಿದ್ದಾರೆ. ಏಕದಿನ ಕ್ರಿಕೆಟ್‌ ಅಥವಾ ಒಡಿಐನಲ್ಲಿ 221 ಪಂದ್ಯಗಳನ್ನು ಆಡಿರುವ ಬ್ರೆಟ್‌ ಲೀ ಅವರು 380 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿಶೇಷ ಎಂದರೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಲಿಸ್ಟ್‌ನಲ್ಲಿ ಬ್ರೆಟ್‌ ಲೀ ಅವರು ಉನ್ನತ ಸ್ಥಾನವನ್ನು ಪಡೆದಿದ್ದಾರೆ.    

ಬ್ರೆಟ್‌ ಲೀ ಅವರ ಇನ್ನೊಂದು ವಿಶೇಷ ದಾಖಲೆ ಎಂದರೆ T20 ಅಂರತಾಷ್ಟ್ರೀಯ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ವಿಶ್ವದ ಮೊದಲ ಬೌಲರ್‌ ಎಂಬ ಖ್ಯಾತಿಯನ್ನು ಪಡೆದಿದ್ದಾರೆ. ಇದರ ಜೊತೆಗೆ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್‌ ಮಾಡುವುದು ಕೂಡ ದಾಖಲೆ. ಅದರಂತೆ ಬ್ರೆಟ್‌ ಲೀ ಕೂಡ ಅತ್ಯಂತ ವೇಗವಾಗಿ ಬೌಲಿಂಗ್‌ ಮಾಡಿದ ಬೌಲರ್‌ಗಳಲ್ಲಿ ಒಬ್ಬರು ಆಗಿದ್ದಾರೆ. ಬೌಲಿಂಗ್‌ ಮಾಡುವಾಗ ವಿಕೆಟ್‌ ಪಡೆಯುವುದಕ್ಕಿಂತ ಹೆಚ್ಚಾಗಿ ಅತ್ಯಂತ ವೇಗವಾಗಿ ಬೌಲಿಂಗ್‌ ಮಾಡುವುದು ಬ್ರೆಟ್‌ ಲೀ ಅವರಿಗೆ ಅತ್ಯಂತ ಮುಖ್ಯವಾಗಿತ್ತು ಎಂದು ಸ್ವತಹ ಅವರೇ ಒಮ್ಮೆ ಹೇಳಿಕೊಂಡಿದ್ದರು. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES