SOCIAL MEDIA

Newsletter

PARTNER SITES
Select Language Select State

ಸ್ಟಾರ್‌ ಕ್ರಿಕೆಟ್‌ ಜೊತೆ ಫುಲ್‌ ಲವ್..‌ ಕೊನೆಗೆ ಅಣ್ಣ ಅಂತಾ ಕರೆದು ಡವ್‌ ಮಾಡಿ ಬಿಟ್ಟ ಬ್ಯೂಟಿ

ಭಾರತದಲ್ಲೂ ಕ್ರಿಕೆಟ್‌ಗೂ ಸಿನಿಮಾಗೂ ಸಂಬಂಧ ಈ ಮೊದಲಿನಿಂದಲೂ ಇದೆ. ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಲವ್‌ಮ್ಯಾರೇಜ್‌ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಇದೇ ಮಾದರಿಯಲ್ಲಿ ಪಾಕಿಸ್ತಾನದಲ್ಲೂ ಒಬ್ಬ ನಂಬರ್‌ 1 ಕ್ರಿಕೆಟರ್‌ ಮತ್ತು ಪ್ರಸಿದ್ಧ ನಟಿ

Reported By Bhimappa Written By Bhimappa
Published: Sep 13, 2026, 05:33 PM IST | Updated: Sep 17, 2026, 03:49 PM IST
Image Credit: File Photo
Join

ಸಿನಿಮಾ ಮತ್ತು ಕ್ರಿಕೆಟ್‌ಗೆ ವಿಶ್ವದ ವಿವಿಧ ದೇಶಗಳಲ್ಲಿ ವಿಶೇಷವಾದ ಸಂಬಂಧ ಇದೆ. ಒಂದನ್ನು ಬಿಟ್ಟು ಒಂದು ಇರಲ್ಲ ಎಂದೂ ಈಗಾಗಲೇ ಭಾರತದಲ್ಲಿ ಅರಳಿದ ಪ್ರೇಮಕಾವ್ಯಗಳು ಹೇಳುತ್ತವೆ. ದೋಣಿ ಹೇಗೆ ನೀರು ಬಿಟ್ಟು ಸಾಗಲ್ಲವೋ ಅದರಂತೆ ಕ್ರಿಕೆಟ್‌ ಮತ್ತು ಸಿನಿಮಾ ಎರಡು ಕ್ಷೇತ್ರಗಳು ಕೂಡ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಕ್ರಿಕೆಟ್‌ ಮತ್ತು ಸಿನಿಮಾಗೆ ಒಂದೊಕ್ಕೊಂದು ಪ್ರೀತಿ ಬೆಸೆದುಕೊಂಡಿವೆ. ಪಾಕಿಸ್ತಾನದ ಕ್ರಿಕೆಟರ್‌ ಬೇರೆ ಯಾರೂ ಅಲ್ಲ, ಬಾಬರ್‌ ಅಜಮ್‌. ಪಾಕಿಸ್ತಾನದ ಸ್ಟಾರ್‌ ಕ್ರಿಕೆಟರ್‌ ಆಗಿರುವ ಬಾಬರ್‌ ಅಜಮ್‌ ಅವರ ಲವ್‌ ಸ್ಟೋರಿ ಎಲ್ಲರ ಗಮನ ಸೆಳೆದಿತ್ತು. ಆದರೆ ಬಾಬರ್‌ ಅಜಮ್‌ ಜೊತೆ ತಗಲಾಕಿಕೊಂಡಿದ್ದ ಆ ಮಾಡೆಲ್‌, ಸಿನಿಮಾ ಹೀರೋಯಿನ್‌, ಆ ಬ್ಯೂಟಿ ಯಾರು, ಇಬ್ಬರ ನಡುವೆ ಏನೆಲ್ಲ ನಡೆಯಿತು, ಈ ಲವ್‌ ಸ್ಟೋರಿ ಹಿಂದೆ ಇರುವ ಸತ್ಯಾಸತ್ಯತೆ ಏನೇನು ಎಂಬುದು ಇಲ್ಲಿ ವಿವರಿಸಲಾಗಿದೆ.

ಪಾಕಿಸ್ತಾನದ ಸ್ಟಾರ್‌ ಕ್ರಿಕೆಟರ್‌ ಆಗಿರುವ ಬಾಬರ್‌ ಅಜಮ್‌ ಮತ್ತು ಪಾಕಿಸ್ತಾನ ಸಿನಿಮಾ ಕ್ಷೇತ್ರದ ಬ್ಯೂಟಿ, ಮಾಡೆಲ್‌ ಹನಿಯಾ ಆಮಿರ್‌ ನಡುವೆ ಗಾಡವಾದ ಪ್ರೇಮವಿದೆ. ಇಬ್ಬರು ಮದುವೆಯಾಗಲಿದ್ದಾರೆ ಎನ್ನುವುದು ಎಲ್ಲೆಡೆ ಹಬ್ಬಿತ್ತು. ಕ್ರಿಕೆಟ್‌ ಮತ್ತು ಸಿನಿ ರಂಗದ ಇಬ್ಬರು ಸೂಪರ್‌ ಸ್ಟಾರ್‌ಗಳು ಜೋಡಿಯಾಗಲಿದ್ದಾರೆ ಎನ್ನುವುದು ಅಲ್ಲಿನ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇವರ ಲವ್‌ಸ್ಟೋರಿ ಕೇವಲ ಪಾಕಿಸ್ತಾನದಲ್ಲಿ ಮಾತ್ರವಲ್ಲ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಸಿನಿಮಾ ಮತ್ತು ಕ್ರಿಕೆಟ್‌ ಪ್ರಿಯರಲ್ಲಿ ಕೌತುಕ ಮೂಡಿಸಿತ್ತು. ಈ ಗಾಸಿಪ್‌ಗಳ ಹಿಂದೆ ಇರುವ ನಿಜವೇ ಬೇರೆ ಇತ್ತಾ?.

ಬಾಬರ್‌ ಅಜಮ್‌ ಮತ್ತು ಹನಿಯಾ ಆಮಿರ್‌ ಇಬ್ಬರ ನಡುವೆ ಡೇಟಿಂಗ್‌ ನಡೆಯುತ್ತಿದೆ ಎಂಬ ಊಹಾಪೋಹಗಳಿಗೆ ಮೂಲ ಕಾರಣ ಈ ಹಿಂದೆ ಇಬ್ಬರೂ ಬೇರೆ ಬೇರೆ ಸಂದರ್ಶನಗಳಲ್ಲಿ ಹೇಳಿದಂತಹ ಮಾತುಗಳು. ಇವುಗಳನ್ನು ಅಭಿಮಾನಿಗಳು ಕ್ಯಾಚ್‌ ಮಾಡಿ ಎಡಿಟ್‌ ಮಾಡಿ ಫೋಟೋ, ವಿಡಿಯೋ ಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು. ನಟಿ ಹನಿಯಾ ಆಮಿರ್‌ ಅವರಿಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಗಿತ್ತು. ನಿಮಗಿಂತ ಕ್ಯೂಟ್‌ ಆಗಿರುವಂತಹ ಕ್ರಿಕೆಟರ್‌ ಯಾರು ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ್ದ ನಟಿ ಹನಿಯಾ ಆಮಿರ್‌, ಏನನ್ನು ಯೋಚನೆ ಮಾಡದೇ ಬಾಬರ್‌ ಅಜಮ್‌ ಎಂದು ಉತ್ತರ ಕೊಟ್ಟಿದ್ದರು.  

ಬ್ಯೂಟಿ ಹನಿಯಾ ಸಂದರ್ಶನ ನೀಡುವುದಕ್ಕೂ ಹಿಂದೆಯೇ ಬಾಬರ್‌ ಅಜಮ್‌ ಅವರಿಗೆ ಸಂದರ್ಶನವೊಂದರಲ್ಲಿ ಸಿನಿಮಾದಲ್ಲಿ ಅವಕಾಶ ಸಿಕ್ಕರೇ ನೀವು ಯಾವ ಹೀರೋಯಿನ್‌ ಜೊತೆ ನಟನೆ ಮಾಡಲು ಇಷ್ಟ ಪಡುತ್ತೀರಿ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ನಾಚಿಕೆಯಿಂದಲೇ ಉತ್ತರ ಕೊಟ್ಟಿದ್ದ ಪಾಕಿಸ್ತಾನ ತಂಡದ ಕ್ಯಾಪ್ಟನ್‌ ಬಾಬರ್‌ ಅಜಮ್‌ ಅವರು ಹನಿಯಾ ಆಮಿರ್‌ ಎಂದು ಹೇಳಿದ್ದರು. ಇದೇ ವಿಡಿಯೋಗಳನ್ನು ಅಭಿಮಾನಿಗಳು ಎಡಿಟ್‌ ಮಾಡಿ..ಎಡಿಟ್‌ ಮಾಡಿ..ಎಡಿಟ್‌ ಮಾಡಿ ಟ್ವಿಟರ್‌, ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ನಲ್ಲಿ ವೈರಲ್‌ ಮಾಡಿದ್ದರು. ಈ ವಿಡಿಯೋಗಳನ್ನು ನೋಡಿದ್ದ ಸಾರ್ವಜನಿಕರು ಬಾಬರ್‌ ಅಜಮ್‌ ಮತ್ತು ಬ್ಯೂಟಿ, ಮಾಡೆಲ್‌ ಹನಿಯಾ ಆಮಿರ್‌ ಏನೋ ನಡೆಯುತ್ತದೆ ಎಂದು ಊಹಿಸಿಯೇ ಬಿಟ್ಟಿದ್ದರು. ಸಂದರ್ಶನದಲ್ಲಿ ಮಾತನಾಡಿದ್ದ ಮಾತುಗಳೇ ಅವರ ಲವ್‌ಸ್ಟೋರಿ ಹೇಳಲು ಪ್ರಾರಂಭಿಸಿದ್ದವು.

ಟೀಮ್‌ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ಬ್ಯೂಟಿ ಅನುಷ್ಕಾ ಶರ್ಮಾ ಈ ಇಬ್ಬರ ನಡುವಿನ ಲವ್‌..ಪ್ರೀತಿ ಇಡೀ ವಿಶ್ವದ್ಯಾಂತ ಪಸರಿಸಿತ್ತು. ವಿದೇಶಗಳಲ್ಲಿ ಈ ಜೋಡಿ ಓಡಾಡು ಒಂದೊಂದು ಫೋಟೋ ಕೂಡ ಎಲ್ಲ ಕಡೆ ಸಾಕಷ್ಟು ಕ್ರೇಜ್‌ ಗಳಿಸಿತ್ತು. ಭಾರತದಲ್ಲೂ ಕ್ರಿಕೆಟ್‌ಗೂ ಸಿನಿಮಾಗೂ ಸಂಬಂಧ ಈ ಮೊದಲಿನಿಂದಲೂ ಇದೆ. ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಲವ್‌ಮ್ಯಾರೇಜ್‌ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಇದೇ ಮಾದರಿಯಲ್ಲಿ ಪಾಕಿಸ್ತಾನದಲ್ಲೂ ಒಬ್ಬ ನಂಬರ್‌ 1 ಕ್ರಿಕೆಟರ್‌ ಮತ್ತು ಪ್ರಸಿದ್ಧ ನಟಿ ವಿವಾಹವಾಗಲಿ ಎಂದು ಪಾಕಿಸ್ತಾನಿಯರು ಭಾವಿಸಿದ್ದರು ಎನ್ನಲಾಗಿದೆ.  

ವಿಚಿತ್ರ ಎಂದರೆ ಹನಿಯಾ ಆಮಿರ್‌ ಅವರು ನಟನೆ ಮಾಡಿದಂತ ಸಿನಿಮಾ ಅಥವಾ ಧಾರಾವಾಹಿಗಳ ವಿಡಿಯೋಗಳಲ್ಲಿ ಬಾಬರ್‌ ಅಜಮ್‌ ಅವರ ಮುಖವನ್ನು ಎಡಿಟ್‌ ಮಾಡುತ್ತಿದ್ದರು. ಬಾಬರ್‌ ಅಜಮ್‌ ಮತ್ತು ಮಾಡೆಲ್‌ ಹನಿಯಾ ಆಮಿರ್‌ ಅವರು ಯಾವುದೇ ಫೋಟೋ, ವಿಡಿಯೋವನ್ನು ತಮ್ಮ ಅಧಿಕೃತ ಸಾಮಾಜಿಕ ಖಾತೆಗೆ ಅಪ್‌ಲೋಡ್‌ ಮಾಡಿದರೆ ಸಾಕು ಅಭಿಮಾನಿಗಳು ಅದಕ್ಕೆ ಈ ರೀತಿ ಕಾಮೆಂಟ್‌ ಹಾಕುತ್ತಿದ್ದರು. ಬಾಬರ್‌ ಅಜಮ್‌ ಪೋಸ್ಟ್‌ಗೆ ಹನಿಯಾ ಆಮಿರ್‌ ಹೆಸರನ್ನು ಹಾಕಿ ಅತ್ತಿಗೆ ಎಂದು ಕರಯಲು ಪ್ರಾರಂಭಿಸಿದ್ದರು. ಇತ್ತ ಹನಿಯಾ ಆಮಿರ್‌ ಪೋಸ್ಟ್‌ಗಳಿಗೆ ಬಾಬರ್‌ ಅಜಮ್‌ ಎಂದು ಕಾಮೆಂಟ್‌ ಮಾಡಲು ಶುರು ಮಾಡಿದ್ದರು.  

ಬಾಬರ್‌ ಅಜಮ್‌ ಅವರು 2023ರ ವಿಶ್ವಕಪ್‌ ಟೂರ್ನಮೆಂಟ್‌ ಸಮಯದಲ್ಲಿ ಮದುವೆಗೆ ಭಾರತೀಯ ಡಿಸೈನರ್‌ ಸಬ್ಯಾಸಾಚಿ ಬಟ್ಟೆಗಳನ್ನು ಖದೀರಿ ಮಾಡಿದ್ದಾರೆ ಎಂಬ ವದಂತಿಗಳನ್ನು ಹರಡಿದ್ದರು. ಆಗಲೂ ಬಾಬರ್‌, ಸುಂದರಿ ಹನಿಯಾ ಆಮಿರ್‌ ಅವರನ್ನೇ ಮದುವೆ ಆಗ್ತಾರೆ ಎಂದು ಅಲ್ಲಿನ ಅಭಿಮಾನಿಗಳು ಭಾವಿಸಿದ್ದರು. ಆದರೆ ಸಂದರ್ಶನದಲ್ಲಿ ಮಾತನಾಡುವಾಗ ಹನಿಯಾ ಆಮಿರ್‌ ಅವರಿಗೆ ಬಾಬರ್‌ ಹೆಸರನ್ನು ನೇರವಾಗಿ ಹೇಳಲಾಯಿತು. ಇದರಿಂದ ತುಸು ಬೇಸರ ಆಗಿದ್ದ ಹನಿಯಾ ಆಮಿರ್‌ ಮಾತಿನಲ್ಲಿ ಸ್ಪಷ್ಟನೆ ಕೊಟ್ಟೇ ಬಿಟ್ಟರು.

ಸಂದರ್ಶನದಲ್ಲಿ ನೇರವಾಗಿ ಮಾತುಗಳನ್ನಾಡಿದ ಹನಿಯಾ ಆಮಿರ್‌ ಅವರು, ಬಾಬರ್‌ ಭಾಯಿ ಹೈ ಬ್ರೋ ಎಂದು ಹೇಳಿದ್ದರು. ಅಂದರೆ ಬಾಬರ್‌ ಅಜಮ್‌ ನನಗೆ ಸಹೋದರ ಇದ್ದಂತೆ ಎಂದಿದ್ದರು. ಇಲ್ಲಿಗೆ ಬಾಬರ್‌ ಮತ್ತು ಹನಿಯಾ ಆಮಿರ್‌ ನಡುವೆ ಇದ್ದಂತಹ ಎಲ್ಲ ಊಹಾಪೋಹಗಳು ಮುಕ್ತಿ ಹೊಂದಿದವು. ವದಂತಿಗಳಿಗೆ ಹನಿಯಾ ಆಮಿರ್‌ ಅವರೇ ತೆರೆ ಎಳೆದುಬಿಟ್ಟರು. ಈ ಮೂಲಕ ಇಬ್ಬರ ನಡುವೆ ಯಾವುದೇ ಪ್ರೀತಿ, ಲವ್‌ ಎಲ್ಲ ಎಂಬುದು ಸ್ಪಷ್ಟವಾಯಿತು. ಕೇವಲ ಒಬ್ಬರೊಬ್ಬರು ಕಲಾವಿದ ಮತ್ತು ಕ್ರಿಕೆಟರ್‌ ಆಗಿ ಗೌರವಿಸುತ್ತಾರೆ ಎಂಬುದು ಎಲ್ಲೆಡೆ ಹರಡಿತು. ಬಾಬರ್‌ ಅಜಮ್‌ ಅವರು ಎಂದಿಗೂ ಅವರ ವೈಯಕ್ತಿಕ ಜೀವನ ಮತ್ತು ಕ್ರಿಕೆಟ್‌ ಜೀವನದ ಕೆಲವೊಂದು ಸಂಗತಿಗಳನ್ನ ರಹಸ್ಯವಾಗಿ ಇಡಲು ಇಷ್ಟಪಡುತ್ತಾರೆ.

ಸದ್ಯ ಹನಿಯಾ ಆಮಿರ್‌ ಅವರು ಮತ್ತು ಬಾಬರ್‌ ಅಜಮ್‌ ಅವರು ತಮ್ಮ ತಮ್ಮ ವೃತ್ತಿ ಜೀವನದಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ. ಇಂಗ್ಲೆಂಡ್‌ ಪ್ರವಾಸದಲ್ಲಿರುವ ಬಾಬರ್‌ ಅಜಮ್‌ ಅವರು ಈಗಾಗಲೇ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಹೀನಾಯವಾಗಿ ಸೋತು ಹೋಗಿದ್ದಾರೆ. ಪಾಕಿಸ್ತಾನ ತಂಡದ ನಾಯಕರಾಗಿ ಬಾಬರ್‌ ಅಜಮ್‌ ಅವರು ಜವಾಬ್ದಾರಿ ತೆಗೆದುಕೊಂಡು ಇರುವಾಗಲೇ ಸಾಲು ಸಾಲು ಸೋಲುಗಳನ್ನು ಕಾಣುತ್ತಿದ್ದಾರೆ.

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES