ಸ್ಟಾರ್ ಕ್ರಿಕೆಟರ್ ಅರ್ಷದೀಪ್ ಸಿಂಗ್ ಹೃದಯ ಕದ್ದಚೆಲುವೆ ಇವರೇ ನೋಡಿ
Arshdeep Singh girl friend Samreen Kaur: ಅರ್ಷದೀಪ್ ಮತ್ತು ಸಮ್ರೀನ್ ಅವರ ನಿಶ್ಚಿತಾರ್ಥದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿವೆ.
Arshdeep Singh Proposes to Samreen Kaur Photo: ಟೀಂ ಇಂಡಿಯಾದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಗೆಳತಿ ಸಮ್ರೀನ್ ಕೌರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವೆಂಬರ್ 11, 2026ರಂದು ಈ ಜೋಡಿ ತಮ್ಮ ಜೀವನದ ಹೊಸ ಪಯಣಕ್ಕೆ ಮುನ್ನುಡಿ ಬರೆದಿದ್ದು, ಈ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ.
ಅರ್ಷದೀಪ್ ಮತ್ತು ಸಮ್ರೀನ್ ಅವರ ನಿಶ್ಚಿತಾರ್ಥದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿವೆ. ವಿಶೇಷವಾಗಿ ಅರ್ಷದೀಪ್ ಮೊಣಕಾಲೂರಿ ಕುಳಿತು ಸಮ್ರೀನ್‌ಗೆ ಉಂಗುರ ತೊಡಿಸುತ್ತಿರುವ ಕ್ಷಣ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ತಮ್ಮ ಜೀವನದ ಮಹತ್ವದ ಕ್ಷಣವನ್ನು ಸ್ಮರಣೀಯವಾಗಿಸಲು ಅರ್ಷದೀಪ್ ಸಿಂಗ್ ನ್ಯೂಜಿಲೆಂಡ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿ ಹಂಚಿಕೊಂಡಿರುವ ಫೋಟೋಗಳ ಜೊತೆಗೆ ಭಾವನಾತ್ಮಕ ಸಂದೇಶವನ್ನೂ ಪ್ರಕಟಿಸಿದೆ. ಜೀವನದಲ್ಲಿ ಸಿಗುವ ಅತ್ಯಂತ ದೊಡ್ಡ ಉಡುಗೊರೆ ಎಂದರೆ ಪರಸ್ಪರ ಒಬ್ಬರನ್ನೊಬ್ಬರು ಕಂಡುಕೊಂಡಿರುವುದು. ಇದೀಗ ಜೀವನಪೂರ್ತಿ ಜೊತೆಯಾಗಿರುವ ನಿರ್ಧಾರಕ್ಕೆ ಅಧಿಕೃತ ರೂಪ ನೀಡಿದ್ದೇವೆ ಎಂಬ ಅರ್ಥದ ಸಂದೇಶದೊಂದಿಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಅರ್ಷದೀಪ್ ಸಿಂಗ್ ಅವರ ಪ್ರೇಮ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿತ್ತು. ಈ ಹಿಂದೆ ಅವರು ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬರ ಕೈ ಹಿಡಿದಿರುವ ಫೋಟೋ ಹಂಚಿಕೊಂಡಿದ್ದರು. ಆದರೆ ಆ ಸಮಯದಲ್ಲಿ ಆಕೆಯ ಮುಖವನ್ನು ಬಹಿರಂಗಪಡಿಸಿರಲಿಲ್ಲ.
ನಂತರ ಧರ್ಮಶಾಲಾದಲ್ಲಿ ಅರ್ಷದೀಪ್ ಮತ್ತು ಸಮ್ರೀನ್ ಒಟ್ಟಿಗೆ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಇಬ್ಬರೂ ಕೈ ಹಿಡಿದುಕೊಂಡು ಓಡಾಡುತ್ತಿದ್ದ ದೃಶ್ಯಗಳು ಅವರ ಸಂಬಂಧದ ಬಗ್ಗೆ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದವು. ಆ ಬಳಿಕ ಜುಲೈ ತಿಂಗಳಲ್ಲಿ ಸಮ್ರೀನ್ ಕೌರ್ ಜೊತೆಗಿನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅರ್ಷದೀಪ್ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದರು. ಇದೀಗ ನಿಶ್ಚಿತಾರ್ಥದೊಂದಿಗೆ ಈ ಪ್ರೇಮಕಥೆಗೆ ಹೊಸ ತಿರುವು ಸಿಕ್ಕಿದೆ.
ಯಾರು ಈ ಸಮ್ರೀನ್ ಕೌರ್?
ಅರ್ಷದೀಪ್ ಸಿಂಗ್ ಅವರ ಮನಗೆದ್ದಿರುವ ಸಮ್ರೀನ್ ಕೌರ್ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಲಾವಿದೆ. ಪಂಜಾಬಿ ಮ್ಯೂಸಿಕ್ ವಿಡಿಯೋಗಳಲ್ಲಿ ಅಭಿನಯಿಸುವ ಮೂಲಕ ಅವರು ಜನಪ್ರಿಯತೆ ಗಳಿಸಿದ್ದಾರೆ. ಬಾಲಿವುಡ್‌ನ ಕ್ರಿಕೆಟ್ ಆಧಾರಿತ ‘83’ ಸಿನಿಮಾದಲ್ಲಿಯೂ ಸಮ್ರೀನ್ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ‘ನೇಲ್ ಪಾಲಿಷ್’ ಸೇರಿದಂತೆ ಕೆಲವು ಚಿತ್ರ ಹಾಗೂ ವೆಬ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಹಲವು ಪಂಜಾಬಿ ಹಾಡುಗಳ ಮ್ಯೂಸಿಕ್ ವಿಡಿಯೋಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಸಮ್ರೀನ್ ಕೌರ್ ಅವರು ‘ಮಿಸ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರ’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಷನ್ ಮತ್ತು ವಿಭಿನ್ನ ಸ್ಟೈಲಿಶ್ ಲುಕ್ ಮೂಲಕವೂ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಅರ್ಷದೀಪ್ ಸಿಂಗ್ ಮತ್ತು ಸಮ್ರೀನ್ ಕೌರ್ ಇದೀಗ ತಮ್ಮ ಸಂಬಂಧಕ್ಕೆ ನಿಶ್ಚಿತಾರ್ಥದ ಮೂಲಕ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಜೋಡಿಯ ಹೊಸ ಜೀವನಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.