• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ಟೆನ್‌ಪಿನ್ ಬೌಲಿಂಗ್ ಪಂದ್ಯಾವಳಿ : ಹ್ಯಾಟ್ರಿಕ್ ಸಾಧನೆಗೈದ ಆಕಾಶ್ ಅಶೋಕ್ ಕುಮಾರ್

ಟೆನ್‌ಪಿನ್ ಬೌಲಿಂಗ್ ಪಂದ್ಯಾವಳಿ : ಹ್ಯಾಟ್ರಿಕ್ ಸಾಧನೆಗೈದ ಆಕಾಶ್ ಅಶೋಕ್ ಕುಮಾರ್

ಸಿಲಿಕಾನ್‌ ಸಿಟಿಯಲ್ಲಿ ಮತ್ತೊಮ್ಮೆ ಕ್ರೀಡಾ ಸಂಭ್ರಮ ಮನೆ ಮಾಡಿದ್ದು, ಜಯನಗರದ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ನಡೆದ 3ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್ ಅಶೋಕ್ ಕುಮಾರ್ ಸತತ ಮೂರನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸಾಮರ್ಥ್ಯ ಪ್ರದರ್ಶಿಸಿದರು.. ರೋಚಕ ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ..

Written ByKrishna NK
Published: Nov 18, 2026, 21:37 IST|Updated: Nov 18, 2026, 21:38 IST
joinshare
ಟೆನ್‌ಪಿನ್ ಬೌಲಿಂಗ್ ಪಂದ್ಯಾವಳಿ : ಹ್ಯಾಟ್ರಿಕ್ ಸಾಧನೆಗೈದ ಆಕಾಶ್ ಅಶೋಕ್ ಕುಮಾರ್
Image Credit: Bowling

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ನಗರದ ಜಯನಗರದಲ್ಲಿರುವ ಕಾಸ್ಮೋಪಾಲಿಟನ್ ಕ್ಲಬ್‌ನ ಅಮೀಬಾ ಬೌಲಿಂಗ್ ಸೆಂಟರ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ 3ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಮೆಂಟ್‌ನಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್ ಅಶೋಕ್ ಕುಮಾರ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿಕೊಂಡರು. ಸತತ ಮೂರನೇ ಬಾರಿಗೆ ರಾಜ್ಯ ರ‍್ಯಾಂಕಿಂಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಬೌಲಿಂಗ್ ಅಂಗಳದಲ್ಲಿ ತಮ್ಮ ಅಧಿಪತ್ಯವನ್ನು ಗಟ್ಟಿಗೊಳಿಸಿದ್ದಾರೆ.

ಹೌದು.. ಟೂರ್ನಿಯುದ್ದಕ್ಕೂ ಭರ್ಜರಿ ಫಾರ್ಮ್‌ನಲ್ಲಿದ್ದ ಆಕಾಶ್, ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಕಿಶನ್ ಆರ್ ವಿರುದ್ಧ ಸೆಣಸಾಡಿದರು. ಆರಂಭದಿಂದಲೇ ಎದುರಾಳಿಯ ಮೇಲೆ ತೀವ್ರ ಒತ್ತಡ ಹೇರಿದ ಆಕಾಶ್, ಕೊನೆಯವರೆಗೂ ತಮ್ಮ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಕಾಯ್ದುಕೊಂಡರು. ಎರಡು ಗೇಮ್‌ಗಳ ಒಟ್ಟು ಮೊತ್ತದಲ್ಲಿ 409 ಅಂಕಗಳನ್ನು ಕಲೆಹಾಕಿದ ಆಕಾಶ್, ಕಿಶನ್ ಆರ್ ಅವರನ್ನು 42 ಪಿನ್‌ಗಳ ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದರು. ಹೋರಾಟ ನಡೆಸಿದ ಕಿಶನ್ 367 ಅಂಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು ಮತ್ತು ರನ್ನರ್ ಅಪ್ ಸ್ಥಾನಕ್ಕೆ ಸೀಮಿತರಾದರು.

ಫೈನಲ್ ಮಹಾಪಂದ್ಯದ ಮೊದಲ ಗೇಮ್‌ನಲ್ಲಿ ಆಕಾಶ್ ಅಕ್ಷರಶಃ ಅಬ್ಬರಿಸಿದರು. ಸತತ ಐದು ಸ್ಟ್ರೈಕ್‌ಗಳನ್ನು ದಾಖಲಿಸುವ ಮೂಲಕ ಪ್ರೇಕ್ಷಕರ ಹುಬ್ಬೇರಿಸಿದ ಅವರು, ಮೊದಲ ಗೇಮ್‌ನಲ್ಲಿ 205 ಅಂಕಗಳನ್ನು ಗಳಿಸಿದರು. ಮತ್ತೊಂದೆಡೆ ಕಿಶನ್ 181 ಅಂಕಗಳನ್ನು ಗಳಿಸಿ ಹಿಂದೇಟುಹಾಕಿದರು. ಇದರಿಂದ ಆಕಾಶ್ ಮಹತ್ವದ ಮುನ್ನಡೆ ಪಡೆದರು. ಇನ್ನು ಎರಡನೇ ಗೇಮ್‌ನಲ್ಲಿ ಕಿಶನ್ ತಿರುಗೇಟು ನೀಡಲು ಯತ್ನಿಸಿದರೂ, ಆಕಾಶ್ ಅವರ ಅನುಭವಿ ಆಟದ ಮುಂದೆ ಅದು ಸಾಲಲಿಲ್ಲ. ಎರಡನೇ ಗೇಮ್‌ನಲ್ಲಿ ಆಕಾಶ್ 193 ಅಂಕಗಳನ್ನು ಗಳಿಸಿದರೆ, ಕಿಶನ್ 186 ಅಂಕಗಳನ್ನು ದಾಖಲಿಸಿದರು.

ಇದಕ್ಕೂ ಮುನ್ನ ನಡೆದ ನಾಕೌಟ್ ಹಂತದ ಪಂದ್ಯಗಳೂ ಸಹ ತೀವ್ರ ಕುತೂಹಲ ಮೂಡಿಸಿದ್ದವು. ಮೊದಲ ನಾಕೌಟ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್, ನಾಲ್ಕನೇ ಶ್ರೇಯಾಂಕಿತ ಸತೀಶ್ ಎ.ವಿ. ಅವರನ್ನು ಬಲಾಢ್ಯ ಆಟದಿಂದ ಹಿಂದಿಕ್ಕಿ 70 ಪಿನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದರು. ಈ ಪಂದ್ಯದಲ್ಲಿ ಆಕಾಶ್ 441 ಅಂಕಗಳನ್ನು ಗಳಿಸಿದರೆ, ಸತೀಶ್ 371 ಅಂಕಗಳನ್ನು ಪಡೆದರು.

ಇನ್ನು ಎರಡನೇ ನಾಕೌಟ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಕಿಶನ್ ಆರ್ ಹಾಗೂ ವಿಜಯ್ ಪಂಜಾಬಿ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ 439 ಅಂಕಗಳನ್ನು ಗಳಿಸಿದ ಕಿಶನ್, ವಿಜಯ್ (366 ಅಂಕ) ಅವರನ್ನು 73 ಪಿನ್‌ಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು.

ವಿಶೇಷ ಪ್ರಶಸ್ತಿಗಳ ವಿವರ
ಈ ಟೂರ್ನಮೆಂಟ್‌ನಲ್ಲಿ ಇಡೀ ಅಂಗಳದ ಗಮನ ಸೆಳೆದ ಆಕಾಶ್ ಅಶೋಕ್ ಕುಮಾರ್, ತಮ್ಮ ಹೆಸರಿಗೆ ಹಲವು ಪ್ರಮುಖ ವಿಶೇಷ ಪ್ರಶಸ್ತಿಗಳನ್ನು ಸೇರಿಸಿಕೊಂಡರು. 6 ಗೇಮ್‌ಗಳ ಬ್ಲಾಕ್‌ನಲ್ಲಿ 215.19 ರ ಅತ್ಯಧಿಕ ಸರಾಸರಿ, 18 ಗೇಮ್‌ಗಳಲ್ಲಿ 204.67 ರ ಅತ್ಯಧಿಕ ಸರಾಸರಿ ಹಾಗೂ 225ಕ್ಕಿಂತ ಹೆಚ್ಚಿನ ಅಂಕಗಳ ದಾಖಲೆಯನ್ನು ಮೂರು ಬಾರಿ ಬರೆಯುವ ಮೂಲಕ ಸಂಪೂರ್ಣ ಟೂರ್ನಿಯಲ್ಲಿ ಶ್ರೇಷ್ಠ ಆಟಗಾರ ಎನಿಸಿಕೊಂಡರು. ಹಾಗೆಯೇ, ಮಹಿಳಾ ವಿಭಾಗದಲ್ಲಿ ಹಿತಾಶಾ ಸಿಸೋಡಿಯಾ ಅವರು 12 ಗೇಮ್‌ಗಳಲ್ಲಿ 169.67 ರ ಅತ್ಯಧಿಕ ಸರಾಸರಿ ದಾಖಲಿಸಿ ಗಮನ ಸೆಳೆದರು.

ಅಂತಿಮ ಫಲಿತಾಂಶಗಳ ಪಟ್ಟಿ
ಪ್ರಥಮ ಸ್ಥಾನ (ವಿಜೇತ): ಆಕಾಶ್ ಅಶೋಕ್ ಕುಮಾರ್
ದ್ವಿತೀಯ ಸ್ಥಾನ (ರನ್ನರ್ ಅಪ್): ಕಿಶನ್ ಆರ್
ತೃತೀಯ ಸ್ಥಾನ: ಸತೀಶ್ ಎ.ವಿ.
ನಾಲ್ಕನೇ ಸ್ಥಾನ: ವಿಜಯ್ ಪಂಜಾಬಿ

Add Zee News as a Preferred Source
TAGS:
Sports