• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /AFG vs IND: ಅಫ್ಘಾನಿಸ್ತಾನ ವಿರುದ್ಧ ಅಭಿಷೇಕ್‌ ಶರ್ಮಾ ಅಬ್ಬರ: ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳು ಉಡೀಸ್!‌

AFG vs IND: ಅಫ್ಘಾನಿಸ್ತಾನ ವಿರುದ್ಧ ಅಭಿಷೇಕ್‌ ಶರ್ಮಾ ಅಬ್ಬರ: ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳು ಉಡೀಸ್!‌

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಭಾರತ–ಅಫ್ಘಾನಿಸ್ತಾನ ನಡುವಿನ ಕೊನೆಯ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಅಫ್ಘಾನಿಸ್ತಾನ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾಗೆ ಆರಂಭಿಕರಾದ ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಭರ್ಜರಿ ಆರಂಭ ನೀಡಿದರು. ಮೊದಲ ಓವರ್‌ನಿಂದಲೇ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗರೆದ ಈ ಜೋಡಿ, ಭಾರತವನ್ನ ಕೇವಲ 4 ಓವರ್‌ಗಳಲ್ಲಿ 50 ರನ್‌ಗಳ ಗಡಿ ದಾಟಿಸಿತು. ಅಲ್ಲದೆ ಕೇವಲ 21 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವನ್ನೂ ಪೂರ್ಣಗೊಳಿಸಿತು.

Reported ByPuttaraj K AlurEdited ByPuttaraj K Alur
Published: Sep 17, 2026, 08:38 PM IST|Updated: Sep 17, 2026, 08:57 PM IST
joinshare
AFG vs IND: ಅಫ್ಘಾನಿಸ್ತಾನ ವಿರುದ್ಧ ಅಭಿಷೇಕ್‌ ಶರ್ಮಾ ಅಬ್ಬರ: ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳು ಉಡೀಸ್!‌
Image Credit: Abhishek Sharma Records

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Abhishek Sharma Record Breaking T20i Knock: ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್‌ ಅಭಿಷೇಕ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧದ 3ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದಾರೆ. ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಕೇವಲ 34 ಎಸೆತಗಳಲ್ಲಿ 108 ರನ್‌ ಸಿಡಿಸುವ ಮೂಲಕ ಹಲವು ವೈಯಕ್ತಿಕ ಹಾಗೂ ಅಂತಾರಾಷ್ಟ್ರೀಯ ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

1⃣0⃣8⃣ runs
3⃣4⃣ balls 
3⃣1⃣7⃣.6⃣5⃣ strike rate 
9⃣ fours & 1⃣1⃣ sixes

Abhishek Sharma walks back after a fabulous knock 💥💥

Updates ▶️ https://t.co/Zixki4RhPt#TeamIndia | #AFGvIND pic.twitter.com/tMPK8itRXT

— BCCI (@BCCI) September 17, 2026

 ಅಭಿಷೇಕ್‌ ಶರ್ಮಾ ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಅವರ ಸ್ಟ್ರೈಕ್‌ ರೇಟ್‌ ಬರೋಬ್ಬರಿ 317.65 ಆಗಿತ್ತು. ಆರಂಭದಿಂದಲೇ ಅಫ್ಘಾನಿಸ್ತಾನದ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಅವರು, ಮೈದಾನದ ಎಲ್ಲಾ ದಿಕ್ಕುಗಳಲ್ಲೂ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. ಸಂಜು ಸ್ಯಾಮ್ಸನ್‌ ಜೊತೆಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ ಅವರು ರಶೀದ್‌ ಖಾನ್‌ ಎಸೆದ 10ನೇ ಓವರ್‌ನ 5ನೇ ಎಸೆತದಲ್ಲಿ ರಹ್ಮಾನುಲ್ಲಾ ಗುರ್ಬಾಜ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ಆದರೆ ಅದಕ್ಕೂ ಮುನ್ನವೇ ಅವರು ತಂಡದ ಮೊತ್ತವನ್ನ ವೇಗವಾಗಿ ಹೆಚ್ಚಿಸುವುದರ ಜೊತೆಗೆ ದಾಖಲೆಗಳ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನ ಗಟ್ಟಿಗೊಳಿಸಿದ್ದರು.

20 ಎಸೆತಗಳೊಳಗೆ ಅರ್ಧಶತಕಗಳ ದಾಖಲೆ

ಅಭಿಷೇಕ್‌ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನ ಪ್ರಮುಖ ಅಂಶವೆಂದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಎಸೆತಗಳೊಳಗೆ ಅರ್ಧಶತಕ ಸಿಡಿಸಿದ ದಾಖಲೆ. ಈ ಸಾಧನೆಯನ್ನ ಅವರು ಈಗಾಗಲೇ ಹಲವು ಬಾರಿ ಮಾಡಿದ್ದಾರೆ. ಇದೀಗ 20 ಎಸೆತಗಳೊಳಗೆ ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಭಿಷೇಕ್‌ ಶರ್ಮಾ ಒಟ್ಟು 6 ಬಾರಿ ಈ ಸಾಧನೆ ಮಾಡಿದವರಾಗಿ ಅಗ್ರಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಯುವರಾಜ್‌ ಸಿಂಗ್‌, ಕಾಲಿನ್‌ ಮನ್ರೋ, ಆದಿಲ್‌ ಬಟ್‌, ಫಿನ್‌ ಅಲೆನ್‌ ಮತ್ತು ದಸುನ್‌ ಶನಕಾ ತಲಾ 3 ಬಾರಿ 20 ಎಸೆತಗಳೊಳಗೆ ಅರ್ಧಶತಕ ಗಳಿಸಿದ್ದಾರೆ. ಇದರಿಂದ ಅಭಿಷೇಕ್‌ ಶರ್ಮಾರ ಆಕ್ರಮಣಕಾರಿ ಬ್ಯಾಟಿಂಗ್‌ ಸಾಮರ್ಥ್ಯ ಎಷ್ಟರ ಮಟ್ಟಿಗೆ ಇದೆ ಎಂಬುದು ಸ್ಪಷ್ಟವಾಗುತ್ತದೆ.

ವೇಗದ ಅರ್ಧಶತಕಗಳ ಪಟ್ಟಿಯಲ್ಲೂ ಅಭಿಷೇಕ್‌ ಹೆಸರು

ಭಾರತದ ಪರ ವೇಗವಾಗಿ ಟಿ20 ಅಂತಾರಾಷ್ಟ್ರೀಯ ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಅಭಿಷೇಕ್‌ ಶರ್ಮಾ ಪ್ರಮುಖ ಸ್ಥಾನದಲ್ಲಿದ್ದಾರೆ. ಯುವರಾಜ್‌ ಸಿಂಗ್‌ 2007ರಲ್ಲಿ ಇಂಗ್ಲೆಂಡ್‌ ವಿರುದ್ಧ ಡರ್ಬನ್‌ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿರುವುದು ಭಾರತದ ಪರ ದಾಖಲೆಯಾಗಿದೆ. ಇದಾದ ಬಳಿಕ ಅಭಿಷೇಕ್‌ ಶರ್ಮಾ ನ್ಯೂಜಿಲೆಂಡ್‌ ವಿರುದ್ಧ ಗುವಾಹಟಿಯಲ್ಲಿ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಶಿವಂ ದುಬೆ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರೆ, ಹಾರ್ದಿಕ್‌ ಪಾಂಡ್ಯ 16 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಇಂದು ಅಭಿಷೇಕ್‌ ಶರ್ಮಾ ಮತ್ತೊಮ್ಮೆ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿರುವುದೂ ದಾಖಲೆಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.

ಮೊದಲ 6 ಓವರ್‌ಗಳಲ್ಲೇ ಐತಿಹಾಸಿಕ ಬ್ಯಾಟಿಂಗ್‌

ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಂದ್ಯ ಆರಂಭದ ಮೊದಲ 6 ಓವರ್‌ಗಳಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಅಭಿಷೇಕ್‌ ಶರ್ಮಾ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ದೆಹಲಿ ಪಂದ್ಯದಲ್ಲಿ ಅವರು ಮೊದಲ 6 ಓವರ್‌ಗಳ ಪವರ್‌ಪ್ಲೇ ಅವಧಿಯಲ್ಲೇ 22 ಎಸೆತಗಳಲ್ಲಿ ಅಜೇಯ 76 ರನ್‌ ಗಳಿಸಿದ್ದರು. ಈ ಸಾಧನೆಯೊಂದಿಗೆ ಅವರು ಪವರ್‌ಪ್ಲೇಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಪೋರ್ಚುಗಲ್‌ನ ಕುಲದೀಪ್‌ ಘೋಲಿಯಾ 25 ಎಸೆತಗಳಲ್ಲಿ 74 ರನ್‌ ಗಳಿಸಿದ ಸಾಧನೆ ಹೊಂದಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌ ಸ್ಕಾಟ್ಲೆಂಡ್‌ ವಿರುದ್ಧ 22 ಎಸೆತಗಳಲ್ಲಿ 73 ರನ್‌ ಗಳಿಸಿದ್ದರು.

ಪವರ್‌ಪ್ಲೇಯಲ್ಲಿ 100 ರನ್‌ಗಳ ಗಡಿ ದಾಟಿದ ಭಾರತ

ಅಭಿಷೇಕ್‌ ಶರ್ಮಾ ಅವರ ಅಬ್ಬರದ ಪರಿಣಾಮ ಭಾರತ ತಂಡವು ಮೊದಲ 6 ಓವರ್‌ಗಳಲ್ಲೇ 100 ರನ್‌ಗಳ ಗಡಿ ದಾಟಿತು. ಪುರುಷರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪವರ್‌ಪ್ಲೇ ಅವಧಿಯಲ್ಲಿ 100ಕ್ಕೂ ಹೆಚ್ಚು ರನ್‌ ಗಳಿಸಿದ ತಂಡಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿದೆ. ಇದಕ್ಕೂ ಮೊದಲು ಟೀಂ ಇಂಡಿಯಾ 2025ರಲ್ಲಿ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 1 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿದ್ದು ಈವರೆಗಿನ ದಾಖಲೆಯಾಗಿತ್ತು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 6 ಓವರ್‌ಗಳಲ್ಲಿ 100/0 ಮೊತ್ತ ದಾಖಲಿಸಿತು. ಈ ಪಟ್ಟಿಯಲ್ಲಿ ರೊಮೇನಿಯಾ 116/0, ಆಸ್ಟ್ರೇಲಿಯಾ 113/1, ಜಿಂಬಾಬ್ವೆ 103/1, ದಕ್ಷಿಣ ಆಫ್ರಿಕಾ 102/0 ಮತ್ತು ಇಂಗ್ಲೆಂಡ್‌ 100/0 ರನ್‌ಗಳ ಸಾಧನೆ ಮಾಡಿವೆ.

ವೇಗದ ಟಿ20 ಶತಕಗಳ ಪಟ್ಟಿಯಲ್ಲೂ ಸ್ಥಾನ

ಅಭಿಷೇಕ್‌ ಶರ್ಮಾ ಅವರ 108 ರನ್‌ಗಳ ಇನ್ನಿಂಗ್ಸ್‌ ಮತ್ತೊಂದು ಮಹತ್ವದ ದಾಖಲೆಗೆ ಕಾರಣವಾಗಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅವರು 30 ಎಸೆತಗಳಲ್ಲಿ ಶತಕ ಸಿಡಿಸಿರುವ ದಾಖಲೆ ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಎಸ್ಟೋನಿಯಾದ ಸಾಹಿಲ್‌ ಚೌಹಾಣ್‌ 27 ಎಸೆತಗಳಲ್ಲಿ ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಟರ್ಕಿಯ ಮುಹಮ್ಮದ್‌ ಫಹಾದ್‌ 29 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ. ಅಭಿಷೇಕ್‌ ಶರ್ಮಾ 30 ಎಸೆತಗಳಲ್ಲಿ ಶತಕ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಪೂರ್ಣ ಸದಸ್ಯ ರಾಷ್ಟ್ರಗಳ ಆಟಗಾರರನ್ನ ಪರಿಗಣಿಸಿದಾಗಲೂ ಅಭಿಷೇಕ್‌ ಶರ್ಮಾ ಅವರ ಸಾಧನೆ ವಿಶೇಷವಾಗಿದೆ. ಈ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದು, ಜಿಂಬಾಬ್ವೆಯ ಸಿಕಂದರ್‌ ರಾಜಾ ಮತ್ತು ದಕ್ಷಿಣ ಆಫ್ರಿಕಾದ ಫಿನ್‌ ಅಲೆನ್‌ 33 ಎಸೆತಗಳಲ್ಲಿ ಶತಕ ಗಳಿಸಿದ ಸಾಧನೆ ಹೊಂದಿದ್ದಾರೆ. ಡೇವಿಡ್‌ ಮಿಲ್ಲರ್‌ ಮತ್ತು ರೋಹಿತ್‌ ಶರ್ಮಾ ತಲಾ 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ವೇಗದ ಟಿ20 ಶತಕ ಬಾರಿಸಿದ ಆಟಗಾರರು (ಪೂರ್ಣ ಸದಸ್ಯ ರಾಷ್ಟ್ರ)

30 ಎಸೆತಗಳು: ಅಭಿಷೇಕ್ ಶರ್ಮಾ (ಭಾರತ) vs ಅಫ್ಘಾನಿಸ್ತಾನ; 2026
33 ಎಸೆತಗಳು: ಸಿಕಂದರ್ ರಜಾ (ಜಿಂಬಾಬ್ವೆ) vs ಗ್ಯಾಂಬಿಯಾ; 2024
33 ಎಸೆತಗಳು: ಫಿನ್ ಅಲೆನ್ (ನ್ಯೂಜಿಲೆಂಡ್) vs ದಕ್ಷಿಣ ಆಫ್ರಿಕಾ; 2026
35 ಎಸೆತಗಳು: ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) vs ಬಾಂಗ್ಲಾದೇಶ; 2017
35 ಎಸೆತಗಳು: ರೋಹಿತ್ ಶರ್ಮಾ (ಭಾರತ) vs ಶ್ರೀಲಂಕಾ; 2017

ಒಟ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಕೇವಲ 108 ರನ್‌ ಗಳಿಸಿಲ್ಲ. ಬದಲಾಗಿ ವೇಗದ ಬ್ಯಾಟಿಂಗ್‌, ಪವರ್‌ಪ್ಲೇ ದಾಖಲೆಗಳು, ಅರ್ಧಶತಕಗಳ ಸಾಧನೆ ಹಾಗೂ ವೇಗದ ಶತಕಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಯುವ ಬ್ಯಾಟರ್‌ ಆಗಿ ಟೀಂ ಇಂಡಿಯಾದ ಭವಿಷ್ಯದ ಪ್ರಮುಖ ಆಟಗಾರನಾಗುವ ಸಾಮರ್ಥ್ಯವನ್ನ ಅವರು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.

Add Zee News as a Preferred Source
TAGS:
Cricket