• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಧರ್ಮ
  • /ನರಕ ಚತುರ್ದಶಿಗೆ ಬ್ರಾಹ್ಮಣರ ಮನೆಯಲ್ಲಿ ಮೀನಿನೂಟದ ಸಂಪ್ರದಾಯ! ಎಣ್ಣೆ ಸ್ನಾನದ ಬಳಿಕ ಮೀನು ತಿನ್ನುವುದೇಕೆ?

ನರಕ ಚತುರ್ದಶಿಗೆ ಬ್ರಾಹ್ಮಣರ ಮನೆಯಲ್ಲಿ ಮೀನಿನೂಟದ ಸಂಪ್ರದಾಯ! ಎಣ್ಣೆ ಸ್ನಾನದ ಬಳಿಕ ಮೀನು ತಿನ್ನುವುದೇಕೆ?

ದೀಪಾವಳಿ ಅಂದ್ರೆ ಬೆಳಗ್ಗೆ ಎಣ್ಣೆ ಸ್ನಾನ.. ದೇವರ ಪೂಜೆ.. ಸಿಹಿ ತಿಂಡಿ.. ಎಳ್ಳು ಮಿಶ್ರಿತ ಅವಲಕ್ಕಿ ನೆನಪಾಗುತ್ತೆ. ಆದ್ರೆ ಕರಾವಳಿಯ ಸಾರಸ್ವತ ಬ್ರಾಹ್ಮಣ ಸಮುದಾಯದ ಕೆಲವು ಕುಟುಂಬಗಳಲ್ಲಿ ನರಕ ಚತುರ್ದಶಿಯಂದು ಮೀನಿನೂಟದ ಸಂಭ್ರಮವೂ ಇರುತ್ತೆ. ಎಣ್ಣೆ ಸ್ನಾನ ಮುಗಿದ ತಕ್ಷಣ ಮೀನಿನ ಖಾದ್ಯಗಳ ಸವಿಯುವ ಸಂಪ್ರದಾಯವಿದೆ. ಅಷ್ಟಕ್ಕೂ ದೀಪಾವಳಿಗೂ ಮೀನೂಟಕ್ಕೂ ಏನು ಸಂಬಂಧ? ಈ ವಿಶಿಷ್ಟ ಆಚರಣೆಯ ಹಿಂದೆ ಗೋವಾದಿಂದ ಕರಾವಳಿಗೆ ನಡೆದ ವಲಸೆಯ ಕಥೆಯಿದೆ. ಏನದು ಇಂಟರೆಸ್ಟಿಂಗ್ ಸ್ಟೋರಿ ಅಂತೀರಾ? ತೋರಿಸ್ತೀವಿ ನೋಡಿ..

Written ByRamya. R. Gowda
Published: Nov 08, 2026, 16:26 IST|Updated: Nov 08, 2026, 16:29 IST
joinshare
ನರಕ ಚತುರ್ದಶಿಗೆ ಬ್ರಾಹ್ಮಣರ ಮನೆಯಲ್ಲಿ ಮೀನಿನೂಟದ ಸಂಪ್ರದಾಯ! ಎಣ್ಣೆ ಸ್ನಾನದ ಬಳಿಕ ಮೀನು ತಿನ್ನುವುದೇಕೆ?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Deepavali: ದೀಪಾವಳಿ ಅಂದ್ರೆ ಬೆಳಗ್ಗೆ ಎಣ್ಣೆ ಸ್ನಾನ.. ದೇವರ ಪೂಜೆ.. ಸಿಹಿ ತಿಂಡಿ.. ಎಳ್ಳು ಮಿಶ್ರಿತ ಅವಲಕ್ಕಿ ನೆನಪಾಗುತ್ತೆ. ಆದ್ರೆ ಕರಾವಳಿಯ ಸಾರಸ್ವತ ಬ್ರಾಹ್ಮಣ ಸಮುದಾಯದ ಕೆಲವು ಕುಟುಂಬಗಳಲ್ಲಿ ನರಕ ಚತುರ್ದಶಿಯಂದು ಮೀನಿನೂಟದ ಸಂಭ್ರಮವೂ ಇರುತ್ತೆ. ಎಣ್ಣೆ ಸ್ನಾನ ಮುಗಿದ ತಕ್ಷಣ ಮೀನಿನ ಖಾದ್ಯಗಳ ಸವಿಯುವ ಸಂಪ್ರದಾಯವಿದೆ. ಅಷ್ಟಕ್ಕೂ ದೀಪಾವಳಿಗೂ ಮೀನೂಟಕ್ಕೂ ಏನು ಸಂಬಂಧ? ಈ ವಿಶಿಷ್ಟ ಆಚರಣೆಯ ಹಿಂದೆ ಗೋವಾದಿಂದ ಕರಾವಳಿಗೆ ನಡೆದ ವಲಸೆಯ ಕಥೆಯಿದೆ. ಏನದು ಇಂಟರೆಸ್ಟಿಂಗ್ ಸ್ಟೋರಿ ಅಂತೀರಾ? ತೋರಿಸ್ತೀವಿ ನೋಡಿ..


ದೀಪಾವಳಿ ಹಬ್ಬ.. ತುಳುನಾಡಿನಲ್ಲಂತೂ ಸಂಭ್ರಮಕ್ಕೆ ಪಾರವೇ ಇಲ್ಲ. ಅದರಲ್ಲೂ ನರಕ ಚತುರ್ದಶಿಯಂದು ಎಣ್ಣೆ ಸ್ನಾನಕ್ಕೆ ವಿಶೇಷ ಮಹತ್ವ. ತುಳುನಾಡಿನಲ್ಲಿ ಇದನ್ನೇ 'ಮೀಪುನ ಪರ್ಬ' ಅಂತ ಕರೆಯುತ್ತಾರೆ. ಸಾಮಾನ್ಯವಾಗಿ ಎಣ್ಣೆ ಸ್ನಾನದ ಬಳಿಕ ಎಳ್ಳು ಮಿಶ್ರಿತ ಅವಲಕ್ಕಿ ಸೇವಿಸುವುದು ವಾಡಿಕೆ. ಆದ್ರೆ ಸಾರಸ್ವತ ಬ್ರಾಹ್ಮಣ ಸಮುದಾಯದ ಕೆಲವು ಮನೆಗಳಲ್ಲಿ ಮಾತ್ರ ಈ ದಿನದ ಮೆನುವೇ ಡಿಫರೆಂಟ್. ಇಲ್ಲಿ ಎಣ್ಣೆ ಸ್ನಾನದ ಬಳಿಕ ಮೀನಿನೂಟದ ಘಮಲು ಹರಡುತ್ತೆ.


ಹೌದು.. ಸಾರಸ್ವತ ಬ್ರಾಹ್ಮಣ ಅಥವಾ ಕೊಂಕಣಿ ಸಮುದಾಯದಲ್ಲಿ ಆಹಾರ ಪದ್ಧತಿ ಒಂದೇ ರೀತಿ ಇಲ್ಲ. ಕೆಲವು ಕುಟುಂಬಗಳು ಸಂಪೂರ್ಣ ಸಸ್ಯಾಹಾರಿಗಳಾಗಿದ್ದರೆ, ಇನ್ನೂ ಕೆಲವು ಕುಟುಂಬಗಳು ಮೀನು ಮಾತ್ರ ಸೇವಿಸುತ್ತವೆ. ಕೋಳಿ ಸೇರಿದಂತೆ ಇತರ ಮಾಂಸಾಹಾರದಿಂದ ದೂರ ಉಳಿಯುತ್ತವೆ. ಇನ್ನು ಕೆಲವು ಕುಟುಂಬಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೂಢಿಯಲ್ಲಿದೆ. ಹೀಗೆ ವಿಭಿನ್ನ ಆಹಾರ ಪದ್ಧತಿ ಹೊಂದಿರುವ ಸಮುದಾಯದ ಕೆಲವು ಕುಟುಂಬಗಳಲ್ಲಿ ನರಕ ಚತುರ್ದಶಿಯಂದು ಮೀನೂಟ ಮಾಡುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ.

ಅಷ್ಟಕ್ಕೂ ಈ ಸಂಪ್ರದಾಯದ ಹಿಂದೊಂದು ಐತಿಹಾಸಿಕ ಹಿನ್ನೆಲೆಯಿದೆ. ಸಮುದಾಯದ ಹಿರಿಯರು ತಲೆಮಾರಿನಿಂದ ಹೇಳಿಕೊಂಡು ಬಂದಿರುವ ಮೌಖಿಕ ಪರಂಪರೆಯ ಪ್ರಕಾರ, ಸಾರಸ್ವತ ಬ್ರಾಹ್ಮಣರು ಹಿಂದಿನ ಕಾಲದಲ್ಲಿ ಸಸ್ಯಾಹಾರಿಗಳಾಗಿದ್ದರು. ಗೋವಾದಲ್ಲಿ ಪೋರ್ಚುಗೀಸ್ ಆಡಳಿತದ ಸಂದರ್ಭದಲ್ಲಿ ಧಾರ್ಮಿಕ ದಾಳಿಗಳು ನಡೆದಾಗ, ತಮ್ಮ ದೇವಾಲಯಗಳು, ಧಾರ್ಮಿಕ ಪರಂಪರೆ ಹಾಗೂ ಕುಲದೇವರನ್ನು ರಕ್ಷಿಸಿಕೊಳ್ಳಲು ಹಲವು ಕುಟುಂಬಗಳು ಅಲ್ಲಿಂದ ಕರಾವಳಿಯತ್ತ ವಲಸೆ ಬಂದವು ಎನ್ನಲಾಗುತ್ತದೆ.

ಹೀಗೆ ಗೋವಾದಿಂದ ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಕರಾವಳಿಯ ವಿವಿಧ ಭಾಗಗಳಿಗೆ ವಲಸೆ ಬಂದ ಕುಟುಂಬಗಳಿಗೆ ಆರಂಭದಲ್ಲಿ ಆಹಾರದ ಕೊರತೆ ಎದುರಾಗಿತ್ತು ಎನ್ನಲಾಗುತ್ತದೆ. ಆ ಸಂದರ್ಭದಲ್ಲಿ ನದಿ ಹಾಗೂ ಜಲಮೂಲಗಳಲ್ಲಿ ಸುಲಭವಾಗಿ ಸಿಗುತ್ತಿದ್ದ ಮೀನುಗಳೇ ಹಸಿವು ನೀಗಿಸುವ ಆಸರೆಯಾದವು. ಬದುಕುಳಿಯುವ ಅನಿವಾರ್ಯತೆಯಲ್ಲಿ ಆರಂಭವಾದ ಮೀನಿನ ಸೇವನೆ, ಕ್ರಮೇಣ ಕೆಲವು ಕುಟುಂಬಗಳ ಆಹಾರ ಪದ್ಧತಿಯ ಭಾಗವಾಯಿತು ಎಂಬುದು ಹಿರಿಯರು ಹೇಳುವ ಕಥೆ.

ಹೀಗೆ ತಮ್ಮ ಪೂರ್ವಜರು ಎದುರಿಸಿದ ಸಂಕಷ್ಟ ಹಾಗೂ ಬದುಕಿನ ಹೋರಾಟದ ನೆನಪನ್ನು ಉಳಿಸಿಕೊಳ್ಳುವ ಸಲುವಾಗಿ ನರಕ ಚತುರ್ದಶಿಯಂದು ಎಣ್ಣೆ ಸ್ನಾನದ ಬಳಿಕ ಮೀನಿನ ಖಾದ್ಯಗಳನ್ನು ತಯಾರಿಸಿ ಸೇವಿಸುವ ಪದ್ಧತಿ ಮುಂದುವರಿದಿದೆ ಎನ್ನಲಾಗುತ್ತದೆ. ವಿಶೇಷ ಅಂದ್ರೆ ವರ್ಷದ ಬಹುತೇಕ ದಿನ ಸಸ್ಯಾಹಾರ ಸೇವಿಸುವ ಕೆಲವು ಕುಟುಂಬಗಳಲ್ಲೂ ಈ ದಿನದ ಮೀನೂಟಕ್ಕೆ ವಿಶೇಷ ಸ್ಥಾನವಿದೆ.

ಆದ್ರೆ ಈ ಆಚರಣೆ ಸಾರಸ್ವತ ಬ್ರಾಹ್ಮಣ ಸಮುದಾಯದ ಎಲ್ಲ ಕುಟುಂಬಗಳಲ್ಲೂ ಇಲ್ಲ. ಕೆಲವು ಕುಟುಂಬಗಳು ಸಂಪೂರ್ಣ ಸಸ್ಯಾಹಾರಿಗಳಾಗಿಯೇ ಉಳಿದಿವೆ. ಇನ್ನು ಕೆಲವು ಕುಟುಂಬಗಳು ತಮ್ಮ ಹಿರಿಯರಿಂದ ಬಂದ ಆಹಾರ ಪದ್ಧತಿ ಮತ್ತು ಸಂಪ್ರದಾಯಗಳನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿವೆ. ಹೀಗಾಗಿ ಇದು ಸಮುದಾಯದ ಎಲ್ಲರಿಗೂ ಅನ್ವಯಿಸುವ ಆಚರಣೆಯಲ್ಲ; ಕೆಲವು ಕುಟುಂಬಗಳಲ್ಲಿ ಮಾತ್ರ ಉಳಿದುಕೊಂಡಿರುವ ವಿಶಿಷ್ಟ ಸಂಪ್ರದಾಯ.

ಒಟ್ಟಿನಲ್ಲಿ, ನರಕ ಚತುರ್ದಶಿಯ ಮೀನೂಟ ಕೇವಲ ಆಹಾರ ಸಂಪ್ರದಾಯವಲ್ಲ. ಅದರ ಹಿಂದೆ ವಲಸೆಯ ನೋವು, ಬದುಕಿನ ಹೋರಾಟ ಮತ್ತು ಪೂರ್ವಜರ ನೆನಪು ಅಡಗಿದೆ. ತಲೆಮಾರುಗಳು ಬದಲಾದರೂ ತಮ್ಮ ಹಿರಿಯರ ಕಥೆ ಹಾಗೂ ಸಂಸ್ಕೃತಿಯನ್ನು ಆಹಾರದ ಮೂಲಕ ಉಳಿಸಿಕೊಂಡು ಬರುತ್ತಿರುವ ಸಾರಸ್ವತ ಕುಟುಂಬಗಳ ಈ ಆಚರಣೆ ನಿಜಕ್ಕೂ ವಿಶೇಷ ಅಲ್ವಾ?

 

Add Zee News as a Preferred Source
TAGS:
Kannada News