• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಕರ್ನಾಟಕ ಐಡಲ್ ಅವಾರ್ಡ್ - 2026: ಜೀ ಕನ್ನಡ ನ್ಯೂಸ್‌ ನಡೆಗೆ ವ್ಯಾಪಕ ಮೆಚ್ಚುಗೆ

ಕರ್ನಾಟಕ ಐಡಲ್ ಅವಾರ್ಡ್ - 2026: ಜೀ ಕನ್ನಡ ನ್ಯೂಸ್‌ ನಡೆಗೆ ವ್ಯಾಪಕ ಮೆಚ್ಚುಗೆ

Written ByYashaswini V
Published: Sep 17, 2026, 08:33 AM IST|Updated: Sep 17, 2026, 08:36 AM IST
joinshare

ಕರ್ನಾಟಕ ಐಡಲ್ ಅವಾರ್ಡ್ - 2026:  ಈ ಮೂಲಕ ಬಿರುದು ಬಾವಲಿಗಳ ಬಯಕೆ ಇಲ್ಲದೆ ಎಲೆ ಮರೆ ಕಾಯಿಯಂತೆ ದುಡಿಯುತ್ತಾ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಸಾಧಕರನ್ನು ಹುಡುಕಿ ಗೌರವಿಸಿದ ಜೀ ಕನ್ನಡ ನ್ಯೂಸ್ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

Zee Karnataka Idol Award - 20261/6

ಗಿರೀಶ್ ಕಾಸರವಳ್ಳಿ

ಜೀ ಕನ್ನಡ ನ್ಯೂಸ್‌ ಕರ್ನಾಟಕ ಐಡಲ್ ಅವಾರ್ಡ್ - 2026 ಕಾರ್ಯಕ್ರಮದಲ್ಲಿ "ಜೀವಮಾನ ಸಾಧನೆ ಪ್ರಶಸ್ತಿ"ಗೆ ಪಾತ್ರರಾದ ಗಿರೀಶ್ ಕಾಸರವಳ್ಳಿ ಮಾತನಾಡಿ, ನಿರ್ದೇಶಕನಾಗಿ ಕನ್ನಡ ಭಾಷೆಯ‌ ಶಕ್ತಿಯನ್ನು ಸಿನಿಮಾದ ಮೂಲಕ ತೋರಿಸುವ ಸದವಕಾಶ ನನ್ನ ಪಾಲಿಗೆ ಒದಗಿದ್ದು ಸೌಭಾಗ್ಯ. ನಿಜವಾದ ಸಾಧಕರನ್ನು ಗುರುತಿಸುವ ಜೀ ಕನ್ನಡ ನ್ಯೂಸ್‌ ವಾಹಿನಿಯ ಕೆಲಸ ಮೆಚ್ಚತಕ್ಕದ್ದು, ಪುರಸ್ಕೃತರಿಗೆ ಅಭಿನಂದನೆ ಎಂದರು.
Zee Karnataka Idol Award - 20262/6

ಅಜ್ಜಯ್ಯ

ದಿವ್ಯ ಸಾನಿಧ್ಯ ವಹಿಸಿದ್ದ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಆಶಿರ್ವಚನ ನೀಡಿ, ಕಾಯಕವೇ ಕೈಲಾಸ ಎನ್ನುವುದು ಪ್ರತಿಯೊಬ್ಬರ ಬದುಕಿನ ಮೂಲಮಂತ್ರವಾಗಬೇಕು. ಕಾಯಕ ನಿಷ್ಠೆ ಉಳ್ಳವರನ್ನು ಗುರುತಿಸುವುದು ಶ್ರೇಷ್ಠ ಕೆಲಸ. ಅಂತಹ ಮಾದರಿ ಕಾರ್ಯವನ್ನು ಮಾಡುತ್ತಿರುವ ಜೀ ವಾಹಿನಿಯ ಕೆಲಸವೂ ಸಾಧನೆಯೇ. ಹೀಗಾಗಿ ಜೀ ಕನ್ನಡ ನ್ಯೂಸ್‌ ಹಾಗೂ ಪುರಸ್ಕೃತರಿಗೆ ಅಭಿನಂದನೆ ಸಲ್ಲಬೇಕು ಎಂದು ಹೇಳಿದರು.
Zee Karnataka Idol Award - 20263/6

ಸಚಿವ ಸಂತೋಷ್‌ ಲಾಡ್

ಸಂತೋಷ್ ಲಾಡ್, ಇಂತಹ ವಿಶೇಷ ಕಾರ್ಯಕ್ರಮಗಳೇ ಈಗ ಅಪರೂಪವಾಗಿವೆ. ಆದರೆ ಅಂತಹ ಅಪರೂಪದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಜೀ ವಾಹಿನಿ ಸದಾ ಮುಂಚೂಣಿ. ಸಾರ್ವಜನಿಕ ಜೀವನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪುರಸ್ಕಾರ ನೀಡಿರುವುದು ಸಂತಸದ ಸಂಗತಿ, ಎಲ್ಲಾ ಸಾಧಕರಿಗೂ ಅಭಿನಂದನೆ ಎಂದರು.
Zee Karnataka Idol Award - 20264/6

ಸಚಿವ ಯು ಟಿ ಖಾದರ್

ಯು ಟಿ ಖಾದರ್, ಪ್ರಶಸ್ತಿ ಪುರಸ್ಕೃತರ ಸಾಧನೆಯ ಹಿಂದೆ ನಿರಂತರ ಪರಿಶ್ರಮ, ಬದ್ಧತೆ, ಸಮಾಜಮುಖಿ ಕಳಕಳಿಯ ವ್ಯಕ್ತಿತ್ವ ಅಡಗಿದೆ. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸುವ ಮೂಲಕ ಜೀ ಸಂಸ್ಥೆ ಮಾದರಿ ಕಾರ್ಯ ಮಾಡುತ್ತಿದೆ. ಪ್ರಶಸ್ತಿ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ. ಪ್ರತೀ ಸಾಧಕರ ವ್ಯಕ್ತಿತ್ವ ದಾರಿದೀಪವಾಗಲಿ ಹಾಗೂ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ತಿಳಿಸಿದರು.
Zee Karnataka Idol Award - 20265/6

ಸಚಿವ ರಾಮಲಿಂಗಾ ರೆಡ್ಡಿ

ಸಚಿವ ರಾಮಲಿಂಗಾರೆಡ್ಡಿ, ಜೀ ವಾಹಿನಿಯು ನಿರಂತರವಾಗಿ ಸಾಧಕರನ್ನು ಸನ್ಮಾನಿಸುವ ಕೆಲಸವನ್ನು ಬಹಳ ಹತ್ತಿರದಿಂದ ನೋಡುತ್ತಾ ಬಂದಿದ್ದೇನೆ. ಸಾಧಕರನ್ನು ಹುರಿದುಂಬಿಸುವ ಈ ಪ್ರಯತ್ನ ಶ್ಲಾಘನೀಯ. ಇದೇ ಉತ್ಸಾಹದೊಂದಿಗೆ ಸಾಧಕರು ಮತ್ತಷ್ಟು ಸಾಧನೆಯ ಪ್ರಯತ್ನದಲ್ಲಿ ತೊಡಗಬೇಕು ಎಂದರು.
Zee Karnataka Idol Award - 20266/6

ಬಿ.ಸಿ. ಪಾಟೀಲ್

ಬಿ ಸಿ ಪಾಟೀಲ್, ನಮ್ಮ ಸಾಧನೆ ಪಥ ಭವಿಷ್ಯದಲ್ಲಿ ಮಾದರಿಯಾಗಬೇಕು, ಅಂತಹ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು. ಇಂದು ನಾವು ನೆನಪು ಮಾಡಿಕೊಳ್ಳುವ ಪ್ರತಿಯೊಬ್ಬ ಮಹನೀಯರು ಸಾಧಕರೇ, ಸಮಾಜಕ್ಕೆ ಕೊಡುಗೆ ಕೊಟ್ಟವರಷ್ಟೇ ಸ್ಮರಣೀಯರಾಗಿ ಉಳಿಯುತ್ತಾರೆ. ಅದೇ ರೀತಿ ಜೀ ವಾಹಿನಿಯು ಅಂತಹ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ತಮ್ಮ ಕೆಲಸಗಳನ್ನು ಗುರುತಿಸಿದಾಗ ಮಾತ್ರ ಸಾಧಕರಿಗೆ ಇನ್ನಷ್ಟು ಪ್ರೋತ್ಸಾಹ ದೊರೆಯುತ್ತದೆ. ಆ ಕೆಲಸವನ್ನು ವಾಹಿನಿ ನಿರಂತರವಾಗಿ ಮಾಡುತ್ತಾ ಬಂದಿರುವುದು ಅಭಿನಂದನಾರ್ಹ ಎಂದರು.
TAGS:
Kannada News

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.