• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /CSK ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. 2027 IPL ಗೂ ಮೊದಲೇ ದೊಡ್ಡ ಘೋಷಣೆ ಮಾಡಿದ ಫ್ರಾಂಚೈಸಿ

CSK ಫ್ಯಾನ್ಸ್‌ಗೆ ಗುಡ್‌ನ್ಯೂಸ್‌.. 2027 IPL ಗೂ ಮೊದಲೇ ದೊಡ್ಡ ಘೋಷಣೆ ಮಾಡಿದ ಫ್ರಾಂಚೈಸಿ

Written ByBhimappa
Published: Sep 21, 2026, 08:35 PM IST|Updated: Sep 21, 2026, 08:44 PM IST
joinshare
ಐಪಿಎಲ್ 2019ಕ್ಕೆ ಮೊದಲೇ ಮುಂಬೈ ಇಂಡಿಯನ್ಸ್‌ನ Director of Cricket Operations ಆಗಿ ನೇಮಕ ಮಾಡಿತ್ತು. ಐಪಿಎಲ್ 2025ಗಾಗಿ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಗದರ್ಶಕರಾಗಿ ನೇಮಿಸಲಾಗಿತ್ತು.

Chennai Super Kings head coach: 2027ರ ಐಪಿಎಲ್ ಸೀಸನ್‌ಗೆ ಮೊದಲೇ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಹೊಸ ಘೋಷಣೆಯೊಂದು ಮಾಡಿದ್ದು ಜಹೀರ್ ಖಾನ್ ಅವರನ್ನು ತಂಡದ ಹೆಡ್‌ ಕೋಚ್ ಆಗಿ ನೇಮಕ ಮಾಡಿದೆ. ಮಾಜಿ ಹೆಡ್‌ ಕೋಚ್ ಸ್ಟಿಫನ್‌ ಪ್ಲೇಮಿಂಗ್‌ ಅವರ ಸ್ಥಾನಕ್ಕೆ ಭಾರತದ ಲೆಜೆಂಡ್ರಿ ಆಟಗಾರ‌ ಜಹೀರ್ ಖಾನ್ ಅವರನ್ನು ಆಯ್ಕೆ ಮಾಡಿದೆ. ಎಂ.ಎಸ್‌ ಧೋನಿ ತಂಡದ ಸಹ ಆಟಗಾರರಾಗಿದ್ದ ಜಹೀರ್ ಖಾನ್ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಜಹೀರ್ ಖಾನ್‌ ಅವರು ಕನಿಷ್ಠ ಎಂದರೂ 3 ಸೀಸನ್‌ಗಳವರೆಗೆ ಸಿಎಸ್‌ಕೆ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಬಹುದು. 
 

Zaheer Khan Dhoni 1/6

ಜಹೀರ್‌ ಖಾನ್‌ ಧೋನಿ

ಚೆನ್ನೈ ತಂಡದ ಹೆಡ್‌ ಕೋಚ್ ಆಗಿದ್ದ ಸ್ಟಿಫನ್‌ ಪ್ಲೇಮಿಂಗ್‌ ಅವರು ಕೆಲವು ತಿಂಗಳುಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಸಿಎಸ್‌ಕೆ ಹೆಡ್‌ಕೋಚ್‌ ಸ್ಥಾನ ಖಾಲಿ ಇತ್ತು. ಈ ಸ್ಥಾನಕ್ಕೆ ಹಲವಾರು ಆಟಗಾರರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಈಗ ಲೆಜೆಂಡ್ರಿ ಬೌಲರ್‌ ಆಗಿದ್ದಂತಹ ಜಹೀರ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ. ಎಂ.ಎಸ್‌ ಧೋನಿಯೇ ಜಹೀರ್ ಖಾನ್ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ.
Zaheer Khan Dhoni 2/6

ಜಹೀರ್‌ ಖಾನ್‌ ಧೋನಿ

ಎಂಎಸ್ ಧೋನಿ, ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಮಾಲಕಿ ರೂಪಾ ಗುರುನಾಥ್ ಅವರನ್ನೊಳಗೊಂಡ ಸಿಎಸ್‌ಕೆ ಕ್ರಿಕೆಟ್ ನಿರ್ವಹಣಾ ಸಮಿತಿಯು ಈ ಬಾರಿ ಭಾರತದ ಕೋಚ್‌ ಅನ್ನು ಬಯಸಿದೆ ಎಂದು ಹೇಳಲಾಗುತ್ತಿದೆ. ಫಿಟ್‌ನೆಸ್ ಕೊರತೆಯಿಂದ ಕಳೆದ ಋತುವಿನಲ್ಲಿ ಧೋನಿ ಆಡಲಿಲ್ಲ. ಧೋನಿ ಮತ್ತು ಜಹೀರ್ ದೀರ್ಘಕಾಲ ಟೀಮ್‌ ಇಂಡಿಯಾಕ್ಕೆ ಕೊಡುಗೆ ನೀಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 2011ರ ಏಕದಿನ ವಿಶ್ವಕಪ್ ಗೆದ್ದಾಗ ಜಹೀರ್ ಕೂಡ ತಂಡದ ಭಾಗವಾಗಿದ್ದರು.
Zaheer Khan Dhoni 3/6

ಜಹೀರ್‌ ಖಾನ್‌ ಧೋನಿ

ಜಹೀರ್ ಖಾನ್‌ ಅವರನ್ನು ತಂಡಕ್ಕೆ ಸ್ವಾಗತಿಸುತ್ತಾ ಸಿಎಸ್‌ಕೆ ತಂಡದ ಮಾಲಕಿ ರೂಪಾ ಗುರುನಾಥ್ ಅವರು, ಜಹೀರ್ ಖಾನ್ ಅವರು ಹೆಡ್‌ ಕೋಚ್‌ ಆಗಿ ನೇಮಿಸಲು ನಮಗೆ ಸಂತಸವಾಗಿದೆ. ಅವರು ಅದ್ಭುತ ಕ್ರಿಕೆಟ್‌ ವೃತ್ತಿಜೀವನ ಹೊಂದಿದ್ದಾರೆ. ಯುವ ಪ್ರತಿಭೆಗಳನ್ನು ಸಿದ್ಧ ಪಡಿಸುವ ಅವರ ಸಾಮರ್ಥ್ಯ ನಮ್ಮ ತಂಡಕ್ಕೆ ಅಮೂಲ್ಯ ಕೊಡುಗೆ ನೀಡುತ್ತದೆ. ಅವರ ಮಾರ್ಗದರ್ಶನದಲ್ಲಿ ಫ್ರಾಂಚೈಸಿಯ ತಂಡ ಇನ್ನಷ್ಟು ಪ್ರಬಲವಾಗುತ್ತದೆ ಎಂದು ಅವರು ಹೇಳಿದ್ದಾರೆ.
Zaheer Khan Dhoni 4/6

ಜಹೀರ್‌ ಖಾನ್‌ ಧೋನಿ

ಒಬ್ಬ ಆಟಗಾರನಾಗಿ ಜಹೀರ್ ಖಾನ್ 100 ಐಪಿಎಲ್ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. 27.27ರ ಸರಾಸರಿಯಲ್ಲಿ 102 ವಿಕೆಟ್‌ಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇದು ಜಹೀರ್‌ ಖಾನ್‌ ಅವರ ಭಾರತದ ಆಟಗಾರರ ಪೈಕಿ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ಆಗಿದೆ. ಇದರಲ್ಲಿ ಅವರು ಎಲ್ಲಾ ಸ್ವರೂಪಗಳಲ್ಲಿ ಒಟ್ಟು 610 ವಿಕೆಟ್‌ಗಳನ್ನು ಪಡೆದಿದ್ದರು.
Zaheer Khan Dhoni 5/6

ಜಹೀರ್‌ ಖಾನ್‌ ಧೋನಿ

2017ರಲ್ಲಿ ಐಪಿಎಲ್‌ನಿಂದ ನಿವೃತ್ತರಾದ ಬಳಿಕ ಜಹೀರ್ ಖಾನ್ ಅವರು ವಿವಿಧ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿಯಾಗಿದ್ದಾರೆ. 3 ತಂಡಗಳಿಗೆ RCB, MI ಮತ್ತು DC ತಂಡಗಳಲ್ಲಿ ಆಡಿದ ನಂತರ, ಅವರನ್ನು ಐಪಿಎಲ್ 2019ಕ್ಕೆ ಮೊದಲೇ ಮುಂಬೈ ಇಂಡಿಯನ್ಸ್‌ನ Director of Cricket Operations ಆಗಿ ನೇಮಕ ಮಾಡಿತ್ತು. ಐಪಿಎಲ್ 2025ಗಾಗಿ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಗದರ್ಶಕರಾಗಿ ನೇಮಿಸಲಾಗಿತ್ತು. ಆದರೆ ಸೀಸನ್‌ಗೆ ಮೊದಲೇ ಫ್ರಾಂಚೈಸಿಯಿಂದ ಹೊರ ಬಂದಿದ್ದರು.
Zaheer Khan Dhoni6/6

ಜಹೀರ್‌ ಖಾನ್‌ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಹೊಸ ಮುಖ್ಯ ಕೋಚ್ ಹೆಸರನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಮೂಲಕ ಘೋಷಣೆ ಮಾಡಿದೆ. ಸಿಎಸ್‌ಕೆ ಫ್ರಾಂಚೈಸಿ ಮಾಜಿ ಸ್ಟಾರ್ ಆಟಗಾರನನ್ನು ಸ್ವಾಗತಿಸುತ್ತಾ ಎಡಗೈ ಬೌಲರ್ ಆಗಿರುವ ಜಹೀರ್‌ ಖಾನ್‌ ಅವರನ್ನು ಹೆಡ್‌ ಕೋಚ್‌ ಆಗಿ ಅನೌನ್ಸ್‌ ಮಾಡಿದೆ. ಜಹೀರ್ ಖಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ನ ಮುಖ್ಯ ಕೋಚ್ ಆಗಿ ಸ್ವಾಗತಿಸುತ್ತೇವೆ ಎಂದು ಟ್ವಿಟರ್‌ ಅಕೌಂಟ್‌ನಲ್ಲಿ ಬರೆದುಕೊಂಡಿದೆ.
TAGS:
IPL

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.